ಅವಲಕ್ಕಿ ಎಂಬ ಮಹಾ ಪುರಾಣ: ಡಾ. ವೃಂದಾ ಸಂಗಮ್

ಅವಲಕ್ಕಿಗೆ ಒಂದು ಪುರಾಣ ಅದ. ಅದು ಭವಿಷ್ಯೋತ್ತರ ಪುರಾಣದೊಳಗ ಬರತದ. ನಾವೆಲ್ಲ, ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ ಎಂಬ ಹಾಡನ್ನ ಮಕ್ಕಳಿದ್ದಾಗಲೇ ಹಾಡತಿದ್ವಿ. ಈಗೀಗ, ಅದಕ್ಕೂ ರಾಮಾಯಣಕ್ಕೂ ನಂಟು ಜೋಡಿಸಿದ್ದೂ ಕೇಳತೇವಿ. ಆದರ, ಅವಲಕ್ಕಿ ಪ್ರಾಚೀನತೆ ಬರೋದು ಮಹಾಭಾರತದಾಗ. ಮತ್ತ ಮುಂದ ಭಾಗವತ ಪುರಾಣದಾಗ, ಅಲ್ಲದ ಹರಿವಂಶದಾಗ. ಊಟಂದ್ರ ಊಟ ಅಲ್ಲ, ತಿಂಡಿ ಅಂದ್ರ ತಿಂಡಿ ಅಲ್ಲ, ಊಟನೂ ಹೌದು, ತಿಂಡಿನೂ ಹೌದು, ಬಹುರೂಪಿ, ನಾನ್ಯಾರು. ಅಂತ ಯಾರರೇ ಕೇಳಿದರ ಅದು ಅವಲಕ್ಕಿ ಅಂತ ಎಲ್ಲಾರಿಗೂ ಗೊತ್ತು. … Read more

ಮೈಸೂರು ಸ್ಯಾಂಡಲ್‌ ಸೋಪ್‌ ರಾಯಭಾರಿ: ಡಾ.ವೃಂದಾ. ಸಂಗಮ್‌

ಮೊನ್ನೆ ನಮ್‌ ಪದ್ದಕ್ಕಜ್ಜಿ ಮುಂಜಾನೆದ್ದು, ಧಡಾ ಭಡಾ ಧಡಾ ಭಡಾ ಮಾಡಲಿಕ್ಕೆ ಹತ್ತಿದ್ದರು. ನಮ್‌ ರಾಯರು ಹಾಸಿಗಿ ಮ್ಯಾಲ ಮಲಕೊಂಡವರು ಒಂಚೂರು ಚೂರೇ ಕಣ್ಣು ಬಿಟ್ಟು ಚಹಾ ಆಗೇದ ಎಳತೀರ್ಯಾ ಅನ್ನೂ ಶಬ್ದಕ್ಕ ಕಾಯತಿದ್ದರು. ಆದರ, ಈ ಬೆಳಕು ಕಣ್ಣು ಚುಚ್ಚಿದರೂ ಪದ್ದಕ್ಕಜ್ಜಿ ಧಡಾಭಡಾ ಮುಗೀಲಿಲ್ಲ. “ಹಂಗಾರ, ಚಹಾ ಇನ್ನೂ ತಡಾ ಅನೂ” ಅಂದರು. “ಇನ್ಯಾಕ, ತಡಾ, ನೀವು ಎದ್ದು, ಇಲ್ಲೆ, ವಾರ್ಡರೋಬ್‌ ಮ್ಯಾಲಿರೋ ಮೈಸೂರು ಪೇಟಾ ತಗದ ಕೊಟ್ಟರೆ, ಚಹಾ ಮಾಡೇಬಿಡತೀನಿ” ಅಂದರು. ರಾಯರಿಗೆ ಆಶ್ಚರ್ಯ, … Read more

ರಗಳೆ!: ರೂಪ ಮಂಜುನಾಥ, ಹೊಳೆನರಸೀಪುರ

ಸ್ನೇಹಿತರೆ, ನಾನು ಪ್ರೌಢಶಾಲೆ ಓದುವಂಥ ಕಾಲದಲ್ಲಿ ನಮಗೆ ಕನ್ನಡ ಭಾಷೆಯನ್ನ ಕಲಿಸೋಕಿದ್ದ ಮಾಸ್ತರರು ಎಂ.ರಂಗಯ್ಯನವರು ಅರ್ಥಾತ್ ಎಂಆರ್ ಸರ್. ಎಂದಿನಂತೆ ಕನ್ನಡ ಪೀರಿಯಡ್ನಲ್ಲಿ ಮಾಡೋ ಪಾಠವೆಲ್ಲಾ ಮಾಡಿ ಮುಗಿಸಿ, ಆಚೆ ಹೋಗುವಾಗ, “ನಾನು ನಾಳೆ ರಗಳೆ ಮಾಡ್ತೀನಿ”, ಅಂದು ಕ್ಲಾಸಿಂದ ಆಚೆಗೆ ಹೊರಟುಬಿಟ್ರು. ನಾನು ಸರ್ ಹೇಳಿದ ಮಾತು ಕೇಳಿ ಗೊಂದಲದ ಗೂಡಾಗಿಬಿಟ್ಟು ನನ್ನ ಪಕ್ಕದಲ್ಲಿ ಕುಳಿತಿದ್ದ ಗೆಳತಿ ಕವಿತಳಿಗೆ,”ಲೇ ಏನೇ ಇದೂ? ಸರ್ ಏನ್ ರಗಳೆ ಮಾಡ್ತಾರೋ! ಮನೇಲಿ ಏನಾದ್ರೂ ರಗಳೆ ಮಾಡಿದಾಗ ನಮ್ಮಮ್ಮನ ಹತ್ರ … Read more

“ಕಲರ್ ಕಲರ್” ಮಾತುಗಳು ಮತ್ತು ಮಂಗರಾಯ: ಡಾ. ಅಮೂಲ್ಯ ಭಾರದ್ವಾಜ್

ಹುಟ್ಟಿದ ಕೂಡಲೇ ಬಿಳಿಯ ಜಗತ್ತು ಕಂಡಿದ್ದರೇ ಹೀಗಾಗುತ್ತಿರಲಿಲ್ಲವೇನೋ! ಆದರೆ ಕಂಡದ್ದು ಗಡಸು ಬ್ರೌನ್. ನಾವು ಹುಟ್ಟಿದಾಗಿನಿಂದ ಜನರು ನಮ್ಮ ಕಲರ್ಗಳ ನಡುವೆ ನಾವು ಎಷ್ಟು ಬಿಳಿ ಎಂದದ್ದೇ ಹೆಚ್ಚು ಕೇಳಿದ್ದು. ಆದರೆ ದೇಶ ಬಿಟ್ಟು ದೇಶಕ್ಕೆ ಬಂದ ನಂತರ ಆ ವೈಭವೀಕೃತ ಜಗತ್ತು ಹರಿದು ಬಹಳ ತಿಂಗಳುಗಳೇ ಆಗಿಹೋಗಿವೆ. ಅಂದು ನಾನು ಆಫೀಸಿನಲ್ಲಿದ್ದೆ. ಮಧ್ಯಾಹ್ನ ಊಟ ಮುಗಿಸಿ ಕುಳಿತಿದ್ದೆ. ದಿಢೀರನೆ ಮಗಳ ಸ್ಕೂಲಿನಿಂದ ಒಂದು ಕರೆ ಬಂತು.“ಹಲೋ!” ಎಂದ ಕೂಡಲೆ ಆ ಬದಿಯಿಂದ ಶಾಲೆಯ ಪ್ರಾಂಶುಪಾಲರು. ವಿಷಯ … Read more

ಪದ್ದಕ್ಕಜ್ಜಿ ಭಜನಾ ಮಂಡಳಿಯ ವಿಮಾನ ಯಾನ: ಡಾ. ವೃಂದಾ ಸಂಗಮ್

ಇವತ್ತ ನಮ್ಮ ಪದ್ದಕ್ಕಜ್ಜಿ ಹನುಮದ್ ವ್ರತ ಅಂತ ಶ್ರೀ ತಿಪ್ಪಣ್ಣಾರ್ಯರ ಹನುಮದ್ವಿಲಾಸದ ಭಜನಿಗೆ ಹೋಗಿದ್ದರ, ಅವರಿಗೆ ಈಗ ಮೊದಲಿನಂಗ ಒಂದೇ ದಿನ ಮೂರು ತಾಸು ಹನುದ್ವಿಲಾಸ ಹಾಡಿ, ಅದರ ಅರ್ಥದ ಸೊಗಸು ಹೇಳಲಿಕ್ಕಾಗುದಿಲ್ಲ ಅಂತ, ಮೂರು ದಿನದ ಭಜನಿ ಕಾರ್ಯಕ್ರಮ ಇತ್ತು. ಮೊದಲನೇ ದಿನಾನೇ, ಹನುಮಂತ ದೇವರ ವರ್ಣನಾ ಮಾಡಿ, ಸೀತಾ ಮಾತಾ, ಲಂಕಾದಾಗ ಇದ್ದಾಳ ಅನ್ನೂ ತನಾ ಬಂದ ಕೂಡಲೇ ನಿಲ್ಲಿಸಿದ್ದರು.ಎಲ್ಲಾರಿಗೂ ಕುಂಕುಮಾ ಕೊಡೂವಾಗ, ರುಕ್ಮಣೀ ಬಾಯಾರ ಕೈಯಾಗ, ಕುಂಕುಮದ ಭರಣಿ ತಂದಿದ್ದ ಹಾಳಿ ಚೀಲ, … Read more

ಗುಟಖಾ ಅವಾಂತರ: ನಾಗರಾಜನಾಯಕ ಡಿ ಡೊಳ್ಳಿನ

ಗುಟಖಾ . . ಗುಟಖಾ . . ಗುಟಖಾ . . ಎಲ್ಲೆಲ್ಲೂ ನೀನೆ ಎಲ್ಲೆಲ್ಲೂ ನೀನೆ ಅನ್ನುವಂಗ ಈ ಗುಟಖಾದ ಅವಾಂತರದಿಂದ ಸಾಕಾಗಿಹೋಗೇತಿ ನೋಡರಿ. ಗುಟಖಾ ಬಗ್ಗೆ ಹೆಂಗ ಪ್ರಾರಂಭಿಸಬೇಕು ಅನ್ನೋ ಮಾತೇ ಇಲ್ಲ, ಯಾಕಂದ್ರ ಗುಟಖಾ ಬೆಳಿಗ್ಗೆ ಎದ್ದು ಅಂಗಳ ಕಸ ಹೊಡೆಯುವಾಗ, ವಿಧ ವಿಧದ ವರ್ಣದ ಗುಟಖಾ ಚೀಟಗಳು ಮನೆ ಮುಂದಿನ ರಸ್ತೆಯಲ್ಲಿ ಬಿದ್ದಿರುತ್ತವೆ. ಕೆಲ ಪ್ಯಾಕೆಟುಗಳು ಕಡ್ಡಿಬಾರಿಗೆಲೆ ಎಷ್ಟು ಅಂದ್ರು ಹೋಗಲಾರದೆ ಕಿರಿಕಿರಿಮಾಡಿದಾಗ, ಕೊನೆಗೆ ಕೈಯಿಂದ ಗುಡಿಸಿ ರಸ್ತೆಯ ಒಂದು ಬದಿಯ … Read more

ಪದ್ದಕ್ಕಜ್ಜಿ ಮದುವಿ: ಡಾ.ವೃಂದಾ ಸಂಗಮ್

ಅಂದರ ಇದು ನಮ್ಮ ಪದ್ದಕ್ಕಜ್ಜಿ ಮದುವಿ ಅಲ್ಲ, ಅಕೀ ಮದುವ್ಯಾಗಿ ಐವತ್ತ ಅರವತ್ತ ವರ್ಷಾಗೇದ. ಅಕೀ ಮೊನ್ನೆ ಮೊನ್ನೆ ಮಾಡಿದ ಮೊಮ್ಮಗನ ಮದುವೀ ಕತಿಯಿದು. ಅಷ್ಟ. ಮೊನ್ನೆ ನಮ್ಮ ಪದ್ದಕ್ಕಜ್ಜಿ ಬಂದಿದ್ದಳು. ಪದ್ದಕ್ಕಜ್ಜಿ ಅಂದರ ಅಕೀ ಏನೂ ಸಾಮಾನ್ಯದಾಕಿ ಅಲ್ಲ. ಒಂದು ಕಾಲದಾಗ, ನಮ್ಮ ಇಡೀ ಬಾಳಂಬೀಡವನ್ನು ಆಳಿದಾಕಿ. ಅಂದರ, ನಿಮ್ಮ ಬಾಳಂಬೀಡ ಅಂದರ ಒಂದು ದೊಡ್ಡ ಸಾಮ್ರಾಜ್ಯವೇನು ಅಂತಲೋ ಅಥವಾ ಪದ್ದಕ್ಕಜ್ಜಿ ತಾಲೂಕು ಮತ್ತ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೋ ಅಂತ ಪ್ರಶ್ನೆ ಕೇಳ ಬ್ಯಾಡರೀ. ಉತ್ತರಾ … Read more

ಮರಕುಟಿಗ ನೀಲಣ್ಣ: ಮಂಜಯ್ಯ ದೇವರಮನಿ, ಸಂಗಾಪುರ

ನಮ್ಮ ಊರಿನಲ್ಲಿ ಯಾರಾದರೂ ಬಲಶಾಲಿ ಇರುವನೋ ಎಂದು ಕೇಳಿದರೆ ನೀಲಣ್ಣನನ್ನು ತೋರಿಸಬೇಕು. ಆರು ಅಡಿ ಎತ್ತರದ ಗಟ್ಟಿಮುಟ್ಟಾದ ಶರೀರ, ಕಡುಕಪ್ಪ ಮೈಬಣ್ಣ, ತೆಲತುಂಬ ಕೂದಲು, ಗಡ್ಡ ಮೀಸೆ ಪೊಗರ್ದಸ್ತಾಗಿ ಬೆಳೆದಿವೆ. ಬಲಿಷ್ಠವಾದ ತೋಳುಗಳು, ಬಲತೊಳಿಗೆ ಅಜ್ಜಯ್ಯನ ತಾಯತ ಕಟ್ಟಿದ್ದಾನೆ. ಮೈಮೇಲೆ ಅಂಗಿ ಹಾಕಿದ್ದನ್ನು ನಾನೆಂದು ನೋಡಿಲ್ಲ. ಉಡಲಿಕ್ಕೆ ದಪ್ಪ ದಟ್ಟಿನ ಪಂಚೆ, ಹೆಗಲ ಮೇಲೆ ಅರಿತವಾದ ಕೊಡಲಿ ಇದು ನಮ್ಮೂರ ಮರಕುಟಿಗ ನೀಲಣ್ಣನ ಚಿತ್ರ. ನೀಲಣ್ಣ ವರಟನಾದರೂ ನಡೆನುಡಿಯಲ್ಲಿ ಅತ್ಯಂತ ವಿನಯಶಾಲಿ. ಮಗುವಿನಂತ ಮನಸ್ಸು. ಮಕ್ಕಳ ಅಂದರೆ … Read more

ಮುಷಾಯಿರಾದಲ್ಲಿ ಕಾವ್ಯವಾಚನ: ಹೆಚ್. ಶೌಕತ್ ಆಲಿ ಮದ್ದೂರು

ಚನ್ನಪಟ್ಟಣ ಗೊತ್ತಲ್ಲ, ಗೊಂಬೆಗಳ ನಾಡು ಎಂದು ಅದಕ್ಕೆ ಸರ್ಕಾರ ನೀಡುವ ಬಿರುದು. ಹಿಂದೂ ಮುಸ್ಲಿಂ ಭಾವೈಕ್ಯದ ನಾಡು ಎಂದು ಜನಸಾಮಾನ್ಯರ ನುಡಿ. ಕನ್ನಡ ವೇದಿಕೆಗಳು ಕನ್ನಡ ಸಂಘಟನೆಗಳು ಕನ್ನಡ ಸಂಘ ಸಂಸ್ಥೆಗಳು ಹತ್ತಾರು ಇವೆ. ಜನರ ಬದುಕು ಅವರ ವ್ಯಾಪಾರ ವಹಿವಾಟು ಬದುಕು ಬವಣೆಯೊಂದಿಗೆ ಅಪರೂಪಕ್ಕಾದರೂ ಒಂದೊಂದು ಸಾಹಿತಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದುಂಟು.ಆದರೆ ಇಲ್ಲಿ ಮುಸ್ಲಿಂ ಸಮುದಾಯದ ಉರ್ದು ಭಾಷೆಯಲ್ಲಿ ಪಾಂಡಿತ್ಯ ಹೊಂದಿರುವುದು, ಒಳ್ಳೊಳ್ಳೆ ಕೆಲಸ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವರ ಆಶಯದಂತೆ ಉರ್ದು ಕವಿಗೋಷ್ಠಿ, ಉರ್ದು … Read more

ಮುಖಗಳು ಬೇಕಾಗಿವೆ: ವೃಂದಾ ಸಂಗಮ್

ಮುಖಗಳು ಬೇಕಾಗಿವೆ ಅಂತ ಮುಖಪುಟದಾಗ ಓದಿದ ಮಂದಿಗೆ ಸ್ವಲ್ಪ ಆಶ್ಚರ್ಯನಏ ಆತು. “ಇದೇನೋ ಮಾರಾಯ, ಕಣ್ಣುಗಳು ಬೇಕಾಗಿವೆ, ಕಿಡ್ನಿಗಳು ಬೇಕಾಗಿವೆ ಅಂತ ಡಾಕ್ಟರು ಹೇಳೋದು ಕೇಳಿದ್ದಿವಿ. ಇದೇನಿದು ಹೊಸಾ ವಿಷಯ. ಯಾರಿಗೆ ಏನು, ಯಾಕ, ಏನೇನೂ ಬರೆದಿಲ್ಲಪಾ, ಮುಖಗಳು ಅಂದರ ಈ ಸಿನಿಮಾದವರು ಹೇಳತಾರಲಾ ಹಂಗೇನರ ಹೊಸಾ ಮುಖಗಳು ಬೇಕಾಗಿವೆ ಅಂತೇನರೆ ಅದನೋ ಏನೋ, ಆದರ ಎಂತಾ ಮುಖಗಳು ಬೇಕಾಗ್ಯಾವ ಅಂತನೂ ಹೇಳಿಲ್ಲ ನೋಡ ಮತ್ತ”. ಅಂತ ರಾಮ್ಯಾ ಮುಂಜ ಮುಂಜಾನೆ ಮೊಬೈಲು, ಟೀವಿ ಬಿಟ್ಟು ಓಡಿಕೋತ … Read more

ಊರ ತೇರ ಹಬ್ಬ: ಡಾ. ವೃಂದಾ ಸಂಗಮ್

ಭಾರತ ಹುಣ್ಣಿಮೆಯಾದ ಒಂಬತ್ತು ದಿನಕ್ಕೆ ಊರಾಗ ಲಕ್ಷ್ಮವ್ವನ ತೇರು. ಅಂದರ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಜಾತ್ರೆ. ತೇರಬ್ಬ (ತೇರು-ಹಬ್ಬ) ಅಂದ ಕೂಡಲೇ ಮಕ್ಕಳಾದ ನಮಗೆಲ್ಲಾ ಖುಷಿ ಆಗಬೇಕಾದ್ದು ಸಹಜನ. ಈಗ ಐವತ್ತು ವರ್ಷದ ಹಿಂದೆ, ನಮಗೆಲ್ಲಾ ಜಾತ್ರೆ ತೇರುಗಳೇ ಊರ ಜನರನ್ನು ಒಗ್ಗೂಡಿಸುವ ಹಬ್ಬಗಳು ವಿಶೇಷ ಮನರಂಜನೆಗಳು. ಮಕ್ಕಳಾದ ನಮಗೆ, ಹೋದ ವರ್ಷ ಜಾತ್ರೆಯಲ್ಲಿ ನಾನು ಪುಟ್ಟ ಮಣ್ಣಿನ ಕುಡಿಕೆ ಕೊಂಡಿದ್ದೆ. ಕಟ್ಟಿಗೆಯ ಆಟದ ಸಾಮಾನಿನ ಡಬ್ಬಿ ಕೊಂಡಿದ್ದೆ. ಅವತ್ತು ಕೊಂಡಿದ್ದ ಪುಗ್ಗ (ಬಲೂನು), ಗಿರಿಗಿಟ್ಲೆ ಮನೆಗೆ … Read more

ಬೆಂಗಳೂರಿನ ಬಸ್ಸಿನ ಸ್ವಗತಗಳು: ಶ್ರೀಕೊಯ

ಪ್ರಾರಂಭ. ನಾನು ಎಂದರೆ ? ಯಾರು ? ಇಗೋ ಈಗ ಹೇಳುತ್ತೇನೆ ಕೇಳಿ. ನಿಮ್ಮನ್ನು ಈ ಮಹಾ ನಗರಿಯಲ್ಲಿ ನಿಮಗೆ ಬೇಕಾದ ಸ್ಥಳಕ್ಕೆ ಹೊತ್ತೊಯ್ಯುವ ಬಸ್ಸು “ನಾನು” . ನನ್ನನ್ನು ನೀವು ’ ಬಸ್ಸಪ್ಪ’, ’ ಬಸ್ಸಣ್ಣ’ , ’ಬಂಧು’ ಎಂದೇ ಕರೆಯಬಹುದು. ನೀವು ಯಾವುದೇ ರೀತಿಯಲ್ಲಿ ಕರೆದರೊ ನನಗೆ ಬೇಸರವಿಲ್ಲ, ಏಕೆಂದರೆ ನೀವೆಲ್ಲರೊ ನನ್ನನ್ನು ದಿನವೂ ನಡೆಸಿಕೊಳ್ಳುವುದಕ್ಕಿಂತ ಅದೇ ವಾಸಿ ಎನಿಸುತ್ತದೆ. ನಾನು ಸಾಮಾನ್ಯನಲ್ಲ ಎಂಬುದು ನಿಮಗೆ ಈ ಬರಹದ ಕೊನೆಗೆ ತಿಳಿಯುತ್ತದೆ. ಬೆಂದಕಾಳೂರೆಂಬ ಒಂದು … Read more

ಹಾಸ್ಟೆಲ್ ಎಳೆಗಳನ್ನು ಬಿಡಿಸುತ್ತ..!: ಶೀಲಾ ಗೌಡರ.

“ಅಪ್ಪಾಜಿ ನನ್ನ ಹಾಸ್ಟೆಲ್ ಗೆ ಸೇರ್ಸು. ನನ್ನ ಗೆಳೆಯರು ಬಹಳಾ ಮಂದಿ ಹಾಸ್ಟೆಲ್ ನಿಂದ ಶಾಲೆಗೆ ಬರ್ತಾರಾ..“ ಇದು ಎರಡು ವರ್ಷದಿಂದ ನನ್ನ ಮಗನ ಗೋಳು. ಹಾಗಂತ ಆತನೇನು ದೊಡ್ಡ ತರಗತಿಯಲ್ಲಿ ಓದುತ್ತಿಲ್ಲ. ಈ ಸಾರಿ ನಾಲ್ಕನೇ ತರಗತಿ. ಅಜ್ಜಿಯ ಊರಿಗೆ ಹೋದಾಗಲೆಲ್ಲ ಅವಳ ಸಂದಕವನ್ನು ತೆಗೆದು “ಅಜ್ಜಿ ನಾ ಮುಂದಿನ ವರ್ಷ ಹಾಸ್ಟೆಲ್ ಹೋಗ್ತೇನಿ. ನೀ ನನಗ ಈ ಸಂದಕ ಕೊಡಬೇಕು ನೋಡು. ಕಿಲಿ ಹಾಕಾಕ ಬರ್ತೇತಿ ಹೌದಿಲ್ಲ. ನಾ ಕಿಲಿಹಾಕಿ ನನ್ನ ಉಡದಾರಕ್ಕ ಹಾಕ್ಕೊಂತೆನಿ. … Read more

ಪಾಲಿಗೆ ಬಂದದ್ದು ಪಂಚಾಮೃತ……: ನಳಿನಿ. ಟಿ. ಭೀಮಪ್ಪ.

ರಾಜುವಿಗೆ ಏನೋ ಕುತೂಹಲ. ತಾನು ಮನೆಯಲಿಲ್ಲದ ಸಮಯದಲ್ಲಿ ಅಪ್ಪ, ಅಮ್ಮ, ಅಣ್ಣ, ಅತ್ತಿಗೆ ತನ್ನ ಮದುವೆಯ ಬಗ್ಗೆ ಏನೋ ಗಂಭೀರವಾಗಿ ಚರ್ಚಿಸುತ್ತಿದ್ದುದನ್ನು ಅಣ್ಣನ ಮಕ್ಕಳು ಆಟವಾಡುತ್ತಾ ಗಮನಿಸಿ ವಿಷಯ ತಿಳಿಸಿದ್ದರು. ಮದುವೆ, ರಾಜು ಹೆಸರು ಆಗಾಗ ಹೇಳುತ್ತಿದ್ದರು ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಹೇಳಿ ಆಡಲು ಓಡಿದವು. ಆಟದ ಬಗ್ಗೆ ಲಕ್ಷ್ಯವಿದ್ದ ಮಕ್ಕಳಿಗೆ ದೊಡ್ಡವರ ಮಾತುಗಳಲ್ಲಿ ಆಸಕ್ತಿಯೇನೂ ಇರಲಿಲ್ಲ. ಸ್ವಲ್ಪ ದಿನದಲ್ಲಿ ರಾಜುವಿನ ಮದುವೆಯ ಬಗ್ಗೆ ಚರ್ಚೆ ಕಾವೇರತೊಡಗಿತ್ತು. ಮಕ್ಕಳಿಗೆ ವಿಷಯವೆಲ್ಲಾ ಸರಿಯಾಗಿ ಕೇಳಿಸಿಕೊಳ್ಳಲು ಚಾಕೊಲೇಟಿನ … Read more

ಪದ್ದಕ್ಕಜ್ಜಿಯ ಅಂತಾಕ್ಷರಿ: ವೃಂದಾ. ಸಂಗಮ

ನಮ್ಮ ಪದ್ದಕ್ಕಜ್ಜಿ ನಿಮಗೆಲ್ಲಾ ಗೊತ್ತೇ ಇದೆಯಲ್ವಾ ? ಗೊತ್ತಿದ್ದೇ ಇರತ್ತೆ. ಅವರು ಇಡೀ ಊರಲ್ಲೇ ವರ್ಲ್ಡ ಫೇಮಸ್ಸು. ಅವರು ಇವತ್ತು ತಿಂಡಿಗೆ ಒತ್ತು ಶಾವಿಗೆ ಮಾಡಿದ್ದರು. ಅಲ್ಲರೀ, ಅದೇನೋ ಅಂತಾಕ್ಷರಿ ಅಂದು ಬಿಟ್ಟು, ಇದೇನು ತಿಂಡಿ ಬಗ್ಗೆ ಹೇಳ್ತಿದೀರಲ್ಲ, ಅಂತಿದೀರಾ ? ಪೂರ್ತಿ ಕೇಳಿಸಕೊಳ್ಳಿ. ಅಲ್ಲೇ ಇರೋದು ಮಜಾ, ಒತ್ತು ಶಾವಿಗೆಯ ಖಾರದ ತಿಂಡಿ ಹಾಗೂ ಅದಕ್ಕೆ ಸಿಹಿಯಾಗಿ ಗಸಗಸೆ ಪಾಯ್ಸ. ನಮ್ಮ ರಾಯರು, ಅದೇ ನಮ್ಮ ಪದ್ದಕ್ಕಜ್ಜಿ ಗಂಡ, ನಿಮಗೆ ಗೊತ್ತೇ ಇದೆಯಲ್ಲ, ನಾನು ಬೇರೆ … Read more

ಬಾಡಿಗೆ ಮನೆ: ಗುಂಡುರಾವ್ ದೇಸಾಯಿ

                                                     ಒಂದು ಕಾಲ ಇತ್ತು. ನೌಕರದಾರರಿಗೆ ಅಂದ್ರ ಭಾರಿ ಮರ್ಯಾದೆ. ಅದರಲ್ಲಿ ಶಿಕ್ಷಕರಿಗಂತೂ ಮನೆ-ಗಿನೆನ ಪ್ರತಿಫಲಾಕ್ಷೆ ಇಲ್ಲದೆ  ಕೊಡೋರು. ಊರಾಗ ಹೊಸದಾಗಿ ನೌಕರದಾರರು ವರ್ಗವಾಗಿ ಬಂದರ ಅಂದ್ರ ಸಾಕು ಎಷ್ಟು ಇಂತಿಜಾಮ್ ಮಾಡೋರು. `ನಮ್ಮ ಮನಿಗೆ ಬರ್ರೀ, ಇಲ್ಲ ನಮ್ಮನಿಗೆ ಬರ್ರೀ’ … Read more

ಮದುವೆಗೆ ಬರತೆನಲೇ ತಮ್ಮಾ….: ಗುಂಡುರಾವ್ ದೇಸಾಯಿ

  `ಮದುವಿಗೆ ಬರತೆನಲೇ ತಮ್ಮಾ'ಅಂದ್ರ ಸಾಕು ಚಡ್ಡಿಯನ್ನ ತೊಯ್ಸಿಕೊಳ್ಳುವಂತಹ ದಿನಗಳು ನನ್ನ ಪಾಲಿಗೆ ಎದುರಾಗಿದ್ದವು. ಒಮ್ಮೆ ಸಿನ್ನೂರಿಗೆ ನೆಂಟರ ಮದುವಿಗೆ ಅಂತ ಹೋದಾಗ ಕಿತ್ತಲಿ ತುಂಬ ಇಟ್ಟಿದ್ದ ಚಹಾ ರುಚಿಯಾಗಿತ್ತು,ಅಲ್ಲದೆ ಅಂತಹ ಚಹವನ್ನ ಎಂದೂ ಕುಡಿದಿಲ್ಲವಾದರಿಂದ,ಆಸೆ ಎಂಬುದು ಕೆಟ್ಟ ಖೋಡಿ ನೋಡಿ, ಬರೊಬ್ಬರಿ ಒಂದೊಂದ ಗ್ಲಾಸಿನಂಗ  ತಂಬಿಗಿಕಿನ ಜಾಸ್ತಿ  ಕುಡಿದೆ ಅನಸ್ತೆ, ಮನೆಯಲ್ಲಿ ಇಷ್ಟು ಸಿಗಲ್ಲಂತ,ಆಗೆನು ಆಗಲಿಲ್ಲವಾದರೂ ರಾತ್ರಿ ಸವ ಹೊತ್ತಿನಲ್ಲಿ ಹೊಟ್ಟಿಯಲ್ಲಿ ನಾನಾ ನಮುನಿ ಚಡಪಡಿಕೆ ಆರಂಭ ಆತು. ಅವ್ವನ್ನ ಎಬ್ಬಿಸಿ ಹೊರ ಬಂದ್ರೆ ತಿಪ್ಪೆ … Read more

ಏಕಾದಶಿ: ಗುಂಡುರಾವ್ ದೇಸಾಯಿ

‘ಲೇ ರಂಡೆಗಂಡಾ, ಎಂತಾ ಅನಾಹುತ ಮಾಡಿಬಿಟ್ಟಿ, ನನ್ನ ಜೀವಮಾನದ ಸಾಧನೆಯಲ್ಲಾ ಇವತ್ತು ವ್ಯರ್ಥ ಮಾಡತಿದ್ದೆಲ್ಲೋ    , ಕೃಷ್ಣ ಕೃಷ್ಣ ನೀನ ಕಾಪಾಡಬೇಕ¥!À’ ಅಂತ ಬಯ್ಯಕೋತ ಗುಡಿಯಿಂದ ಬಂದ್ಲು. ‘ಏನಾಯ್ತವ್ವ ಒಮ್ಮಿದೊಮ್ಮೆಲೆ, ಯಾಕ ಸಿಟ್ಟಿಗೆದ್ದು ದಾರ್ಯಾಗಿನಿಂದ ಕೂಗಿಕೊಂತ ಬರಕತಿದಿ, ಮೆಲ್ಲಕ ಬಾರವ್ವ, ಮೆಲ್ಲಕ ಮಾತಾಡು ’ ‘ನನ್ನ ಸುದ್ದಿ ಬಿಡು, ಎಂತ ಮೋಸ ಮಾಡಿಬಿಟ್ಟೆಲ್ಲೋ, ನೀನು ಬಾಳ ಶ್ಯಾಣೆ ಅಂತ ಮಾಡಿದ್ದೇ, ನಿನಗಿಂತ ನಿಮ್ಮಕ್ಕನ ವಾಸಿ. ನಿಮ್ಮಪ್ಪ ಹೋದ ಮ್ಯಾಲೆ ಪಂಚಾಂಗ ನೋಡಿ ತಿಥಿ ಲೆಕ್ಕ ಎಷ್ಟು ಕರೆಕ್ಟಾಗಿ … Read more

ಒಲೆ: ಗುಂಡುರಾವ್ ದೇಸಾಯಿ

ಇತ್ತೀಚಿಗೆ ನಮ್ಮ ದೇವಸ್ಥಾನಕ್ಕೆ ದರ್ಶನಾರ್ಥವಾಗಿ ಬೆಂಗಳೂರಿನಿಂದ ಬಂದಿದ್ದ ದಂಪತಿಗಳಿಗಾಗಿ ನಮ್ಮ ಸಮಿತಿಯ ಹಿರಿಯರೊಬ್ಬರು ರಾತ್ರಿ ಅಡುಗೆ ಸಿದ್ಧ ಮಾಡುತ್ತಿದ್ದರು. ಆ ದಂಪತಿಗಳ ಪುತ್ರಿ ಅನ್ನ ಮಾಡುವುದನ್ನು ಗಾಬರಿಯಿಂದ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದಳು. ಅದನ್ನು ಗಮನಿಸಿದ ಹಿರಿಯರು ‘ಯಾಕಮ್ಮ ಹಾಗೆ ನೋಡ್ತಾ ಇದ್ದಿಯಾ ಅಡುಗೆ ಮಾಡೋದು ನೋಡಿಲ್ವೆ? ಅಥವಾ ಹಸಿವೆಯಾಗಿದೆಯಾ?’ ಎಂದು ಕೇಳಿದರು. ‘ಅಂಕಲ್ ಅಡಿಗೆ ಈ ರೀತಿ ಮಾಡ್ತಿರಾ? ಅನ್ನ ಅದ್ಹೇಗೆ ಮಾಡ್ತೀರಿ? ವಿಜಲ್ ಕೇಳ್ತಾ ಇಲ್ಲ ಹಿಂಗೂ ಮಾಡಬಹುದಾ?’ ಎಂದು ಪ್ರಶ್ನೆ ಹಾಕಿದಳು ಹೀಗೂ ಉಂಟೆ … Read more

ಭೃಂಗದ ಬೆನ್ನೇರಿ…!: ಎಸ್.ಜಿ.ಶಿವಶಂಕರ್

ಎಲ್ಲ ಸರಿಯಾಗಿ ಜೋಡಿಸಿದ್ದೇನೆಯೇ ಎಂದು ಮನು ಮತ್ತೊಮ್ಮೆ ಖಚಿತಪಡಿಸಿಕೊಂಡ. ಸಮಾಧಾನವಾಯಿತು. ಎಲ್ಲ ಸರಿಯಾದರೆ ಇನ್ನು ಹತ್ತು ನಿಮಿಷಗಳಲ್ಲಿ ತನ್ನ ಮುಂದೆ ರೂಪಸಿಯೊಬ್ಬಳು ಜೀವ ತಳೆಯುತ್ತಾಳೆ. ಅದೂ ಎಂತಹ ರೂಪಸಿ ? ತಾನು ಬಯಸಿದಂತವಳು! ತಾನೇ ಹೇಳಿದಂತೆ ರೂಪುಗೊಂಡವಳು!! ಇದನ್ನು ನಂಬುವುದು ಕಷ್ಟ!! ಆದರೆ ಇದು ನಿಜ. ಎಲ್ಲಾ ತನ್ನ ಕಣ್ಣೆದುರೇ ನಡೆದಿದೆ. ಸ್ವತಃ ತಾನೇ ತನ್ನ ಕೈಯಾರೆ ರೂಪಿಸಿದವಳು! ಅವಳಿಗೆ ಜೀವ ಕೊಡುವ ಮುನ್ನ ಒಮ್ಮೆ ಮುಟ್ಟಿ ನೋಡಿದ. ನಿಜಕ್ಕೂ ಅದು ರೋಬೋ ಎಂದು ಹೇಳಲು ಯಾರಿಗೂ … Read more