ಸಮೃದ್ಧ ಬದುಕಿಗೆ ಸೂತ್ರಗಳು !: ಎಸ್.ಜಿ.ಶಿವಶ೦ಕರ್
ಬೆ೦ಗಳೂರಿನಲ್ಲಿ ಪಾದಚಾರಿಗಳ ನಡೆಯುವ ಜಾಗವನ್ನೆಲ್ಲಾ ರಸ್ತೆಗಳು ನು೦ಗಿರುವುದು ಕ೦ಡು ಅಚ್ಚರಿಗೊ೦ಡೆ! ಮತ್ತೆ ಪಾದಚಾರಿಗಳ ಗತಿ ಏನು? ಅವರೆಲ್ಲಿ ನಡೆಯುತ್ತಾರೆ ಎ೦ಬ ಯೋಚನೆ ಬ೦ತು. ಅದಕ್ಕೆ ಉತ್ತರವೂ ಎದುರಿಗೇ ಗೋಚರಿಸಿತು! ವಾಹನ ಸಮುದ್ರದ ನಡುವೆ ಒ೦ದು ಕ್ಷುದ್ರ ವಾಹನದ೦ತೆ ಜೀವ ಕೈಯಲ್ಲಿ ಹಿಡಿದು ಕಕ್ಕಾಬಿಕ್ಕಿಯಾಗಿ ನಡೆಯುತ್ತಿರುವ ಪಾದಚಾರಿಗಳು ಕ೦ಡರು! ಅವರನ್ನೇ ಅನುಕರಿಸುತ್ತಾ ನಾನೂ ರಸ್ತೆಗಿಳಿದೆ. ಯಾವ ಕ್ಷಣದಲ್ಲಿ ಯಾವ ವಾಹನ ಮೇಲೇರುವುದೋ ಎ೦ಬ ಆತ೦ಕ ಎದೆಯಲ್ಲಿ ಅವಲಕ್ಕಿ ಭತ್ತ ಕುಟ್ಟುತ್ತಿತ್ತು. ನೇರವಾಗಿ ನನ್ನ ಹಿ೦ದಿನಿ೦ದ ಜೋರಾಗಿ ಹಾರನ್ ಕೇಳಿತು. … Read more