ಸಮಯ ಪ್ರಜ್ಞೆ ಇಲ್ಲದ ಕಾಲಭಕ್ಷಕರು: ಎಂ. ಆರ್, ವೆಂಕಟರಾಮಯ್ಯ

‘ಕಾಲ’ ಎಂಬ ಪದಕ್ಕೆ ಸಮಯ, ವೇಳೆ, ಅವಧಿ, ಯುಗ, ಪ್ರಹರ, ಎಂಬ ವಿವಿಧಾರ್ಥಗಳುಂಟು. ಸಮಯವೆಂಬುದು ಬಹು ಅಮೂಲ್ಯವಾದ ಸಂಪತ್ತು. ಮತ್ಯಾವುದೇ ವಸ್ತುವನ್ನು ಕಳೆದುಕೊಂಡರೂ ನಾವು ಅದನ್ನು ಸಂಪಾದಿಸಬಹುದು. ಆದರೆ ಒಮ್ಮೆ ಕಳೆದುಹೋದ ಕಾಲ, ಸಮಯವನ್ನು ಸಂಪಾದಿಸಲಾರೆವು. ಕಳೆದುಹೋದ ಕಾಲ ಮತ್ತೆಂದೂ ಹಿಂತಿರುಗುವುದಿಲ್ಲ. ‘ಟೈಮ್ ಅಂಡ್ ಟೈಡ್ ವೈಟ್ಸ್ ಫಾರ್ ನನ್, ಟೈಮ್ ಈಸ್ ಪ್ರೆಶಸ್’ ಮೊದಲಾದ ಅನುಭವೀ ಹಿರಿಯರ ವಾಕ್ಯಗಳೆಲ್ಲವೂ ನಮಗೆ ಚಿರಪರಿಚಿತ ವಾದದ್ದೇ. ಆದರೂ, ಸಮಯ ಪಾಲನೆಯಲ್ಲಿ, ಸಮಯವನ್ನು ಸದುಪ ಯೋಗಪಡಿಸಿಕೊಳ್ಳುವುದರಲ್ಲಿ ಬಹಳಷ್ಟು ಜನರು ಬಹು … Read more

ದೇಶಪ್ರೇಮವೆನ್ನುವುದು ಪ್ರತಿಯೊಬ್ಬ ಪ್ರಜೆಗೂ ಆತ್ಮಾಭಿಮಾನದ ಸಂಕೇತ: ಶಿವಲೀಲಾ ಹುಣಸಗಿ ಯಲ್ಲಾಪುರ

“ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ನಿಜ ತಾನೆ? ಎದೆಯ ಸೀಳಿ ಹುಡುಕದಿರಿಮದ್ದು ಗುಂಡುಗಳ ಬಳಸದಿರಿಬಂದೂಕಿನ ಎದೆಗೂಡಲಿಪ್ರೀತಿ, ಅನುರಾಗ, ಅನುಬಂಧ ಚಿಗುರಿದೇಶವೆಂಬ ಆತ್ಮಾಭಿಮಾನ ಹೊಮ್ಮಿನರನಾಡಿಗಳಲಿ ಚೈತನ್ಯ ತುಂಬಲಿ. . . ದೇಶಪ್ರೇಮವೆನ್ನುವುದು ಪ್ರತಿಯೊಬ್ಬ ಪ್ರಜೆಗೂ ಆತ್ಮಾಭಿಮಾನದ ಸಂಕೇತ. ದೇಶ ರಕ್ಷಣೆಯಲ್ಲಿ ಇದರ ಪಾತ್ರ ಪ್ರಮುಖವಾದದ್ದು. ಕೇವಲ ದೇಶ ರಕ್ಷಣೆಯಷ್ಟೇ ಅಲ್ಲ ಸಮಾಜದ ರಕ್ಷಣೆಯಲ್ಲೂ ಮುಖ್ಯವಾದುದು. ಹಾಗಿದ್ದ ಮೇಲೆ ದೇಶಪ್ರೇಮ ಎಂದರೇನು? ಯಾಕಾಗಿ ದೇಶವನ್ನು ಪ್ರೀತಿಸಬೇಕು? ದೇಶ ಪ್ರೀತಿಸುವುದರ ಪ್ರತಿಫಲವೇನು? ವಿಶ್ವದಾದ್ಯಂತ ಅನೇಕ ದಾರ್ಶನಿಕರು ತಮ್ಮದೇ ಆದ ರೀತಿಯಲ್ಲಿ ದೇಶ … Read more

ಪ್ರೀತಿಯು ನೀಡಿದ ಕಣ್ಣು: ಮನು ಗುರುಸ್ವಾಮಿ

ರಾಧಾ ಕೃಷ್ಣರ ಪ್ರೇಮವೆಂದರೆ ಅದೊಂದು ಅಪೂರ್ವ ಕಾವ್ಯಾ; ಭಾಗಶಃ ಹೊಸಗನ್ನಡ ಸಾಹಿತ್ಯದಲ್ಲಿ ಈ ಪ್ರೇಮ ಕಾವ್ಯದ ಬಗ್ಗೆ ಹಾಡಿ ಹೊಗಳದ ಕವಿಗಳಿಲ್ಲ. ಈ ಪ್ರೇಮಕಥೆಯನ್ನು ಕೇಳಿ ತಣಿಯದ ಕನ್ನಡ ಮನಗಳಿಲ್ಲ. ರಾಧೆ ಕೃಷ್ಣನೇ ಆಗಿ ಕೃಷ್ಣನನ್ನು ಆರಾಧಿಸುತ್ತಾ, ಪ್ರೇಮಿಸುತ್ತಾ, ಸಂಭ್ರಮಿಸುತ್ತಾ ಬಂದ ಕಥೆಯೇ ಈ ರಾಧಾಕೃಷ್ಣ ಪ್ರೇಮ. ಕುವೆಂಪು, ಪು.ತಿ.ನ, ಕೆಎಸ್ ನರಸಿಂಹಸ್ವಾಮಿ, ಜಿ ಎಸ್ ಶಿವರುದ್ರಪ್ಪ , ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ, ವೆಂಕಟೇಶಮೂರ್ತಿ ಮೊದಲಾದ ಹಲವಾರು ಕವಿಗಳು ತಮ್ಮ ಕಾವ್ಯಗಳಲ್ಲಿ ರಾಧಾಕೃಷ್ಣ ಪ್ರೇಮವನ್ನು ಬಹಳ … Read more

ಕಳೆದುಕೊಂಡಾಗಲೇ ಪಡೆದುಕೊಳ್ಳುವುದು !: ಡಾ. ಹೆಚ್ ಎನ್ ಮಂಜುರಾಜ್,

ಸಾಧನೆ ಎಂದರೆ ಗಳಿಸಿಕೊಳ್ಳುವುದಲ್ಲ; ಕಳೆದುಕೊಳ್ಳುವುದು ಎಂದರು ಗುರುಗಳು. ನನಗೆ ಅಚ್ಚರಿಯಾಯಿತು. ಲೌಕಿಕಾರ್ಥದಲ್ಲಿ ಇದನ್ನು ಹೇಳುತ್ತಿಲ್ಲ ಎಂದೂ ಮನದಟ್ಟಾಯಿತು! ಮಗುವೊಂದು ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತ ಅಲ್ಪಮಾನವ ಆಗುತ್ತದೆ; ಮತ್ತೆ ಏನೆಲ್ಲ ಸಂಕೋಲೆಗಳನ್ನು ಕಳಚಿಕೊಂಡು ವಿಶ್ವಮಾನವರಾಗಬೇಕು ಎಂದು ಕುವೆಂಪು ಅವರು ಹೇಳುತ್ತಿದ್ದುದು ಈ ಅರ್ಥದಲ್ಲೇ ಎಂದುಕೊಂಡೆ!! ಆಗವರು ಹೇಳಿದರು. ಸರಿಯಾಗಿ ಗುರುತಿಸಿದೆ. ಹಾಗೆ ನೋಡಿದರೆ ಇರುವುದು ಒಂದೇ ಲೋಕ. ಲೌಕಿಕ, ಅಲೌಕಿಕ, ಪಾರಲೌಕಿಕ ಅಂತೆಲ್ಲ ಇರುವುದಿಲ್ಲ. ಇದು ನಮ್ಮ ಮಾನಸಿಕ ಭ್ರಮೆ. ಹೇಗೆ ನೋಡುವುದೆಲ್ಲ ಮತ್ತು ಕೇಳುವುದೆಲ್ಲ ಸತ್ಯವಲ್ಲವೋ ಹಾಗೆ. … Read more

ಕಡಲ ಕಿನಾರೆಯಲಿ ನಿಂತು ನೀಲಾಕಾಶವ ಕಂಡಾಗ !: ಡಾ. ಹೆಚ್ ಎನ್ ಮಂಜುರಾಜ್

‘ಕಷ್ಟಕಾಲದಲಿ ಯಾರು ನಮ್ಮ ಜೊತೆ ಬಂದಾರು? ಕತ್ತಲಲಿ ನೆರಳು ಕೂಡ ನಮ್ಮನ್ನು ಬಿಟ್ಟು ಹೋಗುತ್ತದೆ!’ ಎಂಬ ಮಾತು ಸತ್ಯ. ಆದರೆ ಹಲವೊಮ್ಮೆ ನೆರಳು ಕೈ ಬಿಟ್ಟರೂ ಯಾರದೋ ಬೆರಳು ನಮ್ಮನ್ನು ಕಾಪಾಡುವಂಥ ಪವಾಡ ಈ ಜಗತ್ತಿನಲ್ಲಿ ಸದ್ದಿಲ್ಲದೆ ನಡೆಯುತ್ತಲೇ ಇರುತ್ತದೆ. ನಮ್ಮ ಜೀವಿತಾವಧಿಯಲ್ಲಿ ಇಂಥ ಅದೆಷ್ಟೋ ಅಪರಿಚಿತರು ಆಪದ್ಬಾಂಧವರಾಗಿ ಬಂದು ನಮ್ಮನ್ನು ನಿರಾಳಗೊಳಿಸಿರುತ್ತಾರೆ. ಆಪದ್ಬಾಂಧವ ಎಂದರೆ ಆಪತ್ತಿಗೆ ಆದವರೇ ನೆಂಟರು ಎಂದು. ಆಪತ್ತು ಎಂದರೆ ದಿಢೀರನೆ ಎದುರಾಗುವ ಕಷ್ಟಕಾಲ. ಇದು ಯಾರಿಗೆ ಬರುವುದಿಲ್ಲ? ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನಿಗೂ … Read more

ಆಡಿ ಬಾ ನನ ಕಂದ ; ಅಂಗಾಲ ತೊಳೆದೇನು!: ಡಾ. ಹೆಚ್ ಎನ್ ಮಂಜುರಾಜ್,

ಮಕ್ಕಳನ್ನು ಕುರಿತು ನಮ್ಮ ಜನಪದರು ಇನ್ನಿಲ್ಲದಂತೆ ಹಾಡಿ ಹರಸಿದ್ದಾರೆ. ಜನವಾಣಿ ಬೇರು; ಕವಿವಾಣಿ ಹೂವು ಎಂದು ಆಚಾರ್ಯ ಬಿಎಂಶ್ರೀಯವರು ಹೇಳಿದಂತೆ, ಜನಪದ ಹಾಡು, ಗೀತ ಮೊದಲಾದ ಸಾಹಿತ್ಯದ ಸೃಷ್ಟಿಕರ್ತರು ಬಹುತೇಕ ಹೆಣ್ಣುಮಕ್ಕಳೇ. ಅದರಲ್ಲೂ ತವರು, ದಾಂಪತ್ಯ, ಬಡತನ, ದೇವರು, ಸೋದರರು, ಗಂಡ, ಗಂಡನಮನೆ ಹೀಗೆ ಜನಪದ ತ್ರಿಪದಿಗಳನ್ನು ಗಮನಿಸಿದರೆ ಸಾಕು, ನಮಗೆ ಅರ್ಥವಾಗುತ್ತದೆ. ಏಕೆಂದರೆ ಭಾರತೀಯ ಕುಟುಂಬ ವ್ಯವಸ್ಥೆ ಹಾಗಿತ್ತು. ಈಗಿನದೆಲ್ಲ ಮೈಕ್ರೋ ಫ್ಯಾಮಿಲಿ ಯುಗ. ಕೂಡು ಕುಟುಂಬ ಮತ್ತು ಹಿರಿಯರ ಯಾಜಮಾನ್ಯಗಳು ನಮ್ಮ ಕೌಟುಂಬಿಕ ಪದ್ಧತಿಯನ್ನು … Read more

ಗಾಡಿ ಹೋಟೆಲ್: ಎಸ್.ಗಣೇಶ್

ಸದಾಶಿವನಿಗೆ ಒಂದು ದೊಡ್ಡ ಚಟವಿತ್ತು. ತಿನ್ನೋ ಚಟ. ಯಾವಾಗಲೂ ಬಾಯಿ ಆಡ್ತಾನೇ ಇರಬೇಕು. ಅವರು, “ಗಾಡಿ ಹೋಟೆಲ್” ತಿಂಡಿ ಚಪಲ. ಮನೆಯಲ್ಲಿನ ಮೇವು ಹಿಡಿಸುತ್ತಿರಲಿಲ್ಲ. ಹೊರಗಡೆಯ ಯಾವುದೇ ತಿನಿಸು ಬಿಡುತ್ತಿರಲಿಲ್ಲ. ಬೇರೆ ಊರಿಗೆ ಹೋದರೂ.. ರಸ್ತೆ ಬದಿ ಕಾಣುತ್ತಿದ್ದ ಗಾಡಿ ಹೋಟೆಲ್ ಕಡೆಯೇ ಗಮನ. ಊಟದ ವಿಷಯಕ್ಕೆ ಎಷ್ಟೋ ಸಲ, ಮಡದಿ ಗಂಗಾಂಬ ಜೊತೆ ಜಗಳವಾಡಿಕೊಂಡು ಕಳೆದ ವರ್ಷ 12 ಬಾರಿ “ಗಾಡಿ ಹೋಟೆಲ್” ಜೊತೆ 1 ಬಾರಿಗೆ 1 ವಾರದಂತೆ ಸಂಸಾರ ಮಾಡಿದ ರೆಕಾರ್ಡ ಇದೆ. … Read more

ಹೊಟ್ಟೆಪಾಡಾ..? ಸಾಧನೆಯಾ..?: ಮಧುಕರ್ ಬಳ್ಕೂರು

“ಯಾಕೋ ನನ್ ಟೈಮೇ ಚೆನ್ನಾಗಿಲ್ಲ. ಹಾಳಾದ್ದು ಈ ಟೈಮಲ್ಲೆ ಒಳ್ಳೊಳ್ಳೆ ಯೋಚನೆಗಳು ಬರ್ತವೆ. ಆದರೂ ಏನು ಮಾಡೋಕೆ ಆಗ್ತಾ ಇಲ್ಲ. ಥತ್…” ಹೀಗೆ ನಿಮಗೆನೆ ಗೊತ್ತಿಲ್ಲದಂತೆ ದಿಢೀರ್ ಅಂತ ಒಂದು ಅಸಹನೆ ಸ್ಪೋಟಗೊಳ್ಳುತ್ತೆ. ಖಂಡಿತ ನಿಮ್ಮ ಸಮಸ್ಯೆ ಇರೋದು ಟೈಮ್ ಚೆನ್ನಾಗಿಲ್ಲ ಅಂತಲ್ಲ. ನಿಜ ಹೇಳಬೇಕಂದ್ರೆ ಟೈಮು ಚೆನ್ನಾಗಿರೋದಕ್ಕೆನೆ ನಿಮ್ಮಲ್ಲಿ ಒಳ್ಳೆಯ ಯೋಚನೆಗಳು ಬರ್ತಿರೋದು. ಇನ್ನು ಹೇಳಬೇಕಂದ್ರೆ ನಿಮ್ಮಲ್ಲಿ ಒಳ್ಳೆಯ ವಿಚಾರಗಳು ಮೂಡುತ್ತಿವೆ ಅಂದ್ರೆ ಅದನ್ನ ಕಾರ್ಯರೂಪಕ್ಕೆ ಇಳಿಸುವುದಕ್ಕೆ ಇದಕ್ಕಿಂತ ಒಳ್ಳೆ ಟೈಮ್ ಮತ್ತೊಂದಿಲ್ಲ. ಆದರೂ ನಿಮಗೆ … Read more

ಶ್ರಾವಣ ಮಾಸದ ಗೌರೀ ಹಬ್ಬದ ನೆನಪುಗಳು: ಡಾ. ವೃಂದಾ ಸಂಗಮ್

ಶ್ರಾವಣ ಮಾಸ ಅಂದರ ಹಬ್ಬಗಳ ಮಾಸ. ಅದು ಶುರುವಾಗೋದೇ, “ಈ ಸಲಾ ಐದು ಶುಕ್ರವಾರ ಬಂದಿಲ್ಲ, ನಾಲ್ಕೇ ವಾರ ಬರತಾವ. ಅದರಾಗೂ ಮೊದಲನೇ ವಾರ ನಾಗರ ಚೌತಿ, ಹಂಗಾದರ, ಎರಡನೇ ವಾರ, ಅಂದರ, ವರ ಮಹಾಲಕ್ಷ್ಮಿ ಏಕಾದಶೀನೋ, ದ್ವಾದಶೀನೋ, ಇರತದ, ಈ ಸಲಾ ಈ ಗೌರವ್ವನೂ ನಮಗ ಖರ್ಚು ಕಡಿಮೀ ಮಾಡ್ಯಾಳ.” ಅನ್ನುವ ಲೆಕ್ಕಾಚಾರದಿಂದ. ಯಾಕೆಂದರೆ, ಶ್ರಾವಣ ಮಾಸದ ಗೌರಿದೇವಿ ಅಂದರ ಭಕ್ತಿ ಎಷ್ಟೋ, ಮಡಿನೂ ಅಷ್ಟೇ, ಅಲ್ಲದೇ ಖರ್ಚೂ ಅಷ್ಟೇ ಹೆಚ್ಚು. ಶ್ರಾವಣ ಮಾಸದ ಖರ್ಚು … Read more

ಕೊಡಲಿಲ್ವೇ ! ಕೊಡಲಿಲ್ವೇ ! ?: ಎಂ ಆರ್ ವೆಂಕಟರಾಮಯ್ಯ

ಏನು ಕೊಡಲಿಲ್ಲಾ ! ಯಾರು ಕೊಡಲಿಲ್ಲಾ ? ಯಾತಕ್ಕೆ ಕೊಡಲಿಲ್ಲಾ ! ಏನೂ ಅರ್ಥವಾಗದೇ ! ಯಾರದೀ ಆಲಾಪ, ಪ್ರಲಾಪ, ಎಂದಿರಾ ! ಇದೆಲ್ಲಾ ನಮ್ಮವರದೇ, ನಮ್ಮ ಜನರದೇ, ಈ ಸಮಾಜದಲ್ಲಿರುವ ಹಲವರದೇ ಎಂದರೆ, ಉಹೂಂ, ಇದರಿಂದಲೂ ಏನೂ ಅರ್ಥವಾಗಲಿಲ್ಲಾ. ಎಲ್ಲಾ ಒಗಟು, ಗೊಂದಲಮಯವಾಗಿದೆ ಎನ್ನಬಹುದು ಕೆಲವು ಓದುಗರು. ಕೆಲ ಕೆಲವರ ಆಲಾಪ ಅವರವರದೇ ಆದ ಕಾರಣಗಳಿಗಾಗಿರುತ್ತದೆ, ಇವುಗಳ ಜಲಕ್ ಹೀಗಿದೆ : ಪ್ರತಿ ದಿನವೂ ನಿಮ್ಮ ವ್ಯಾಪಾರ, ವ್ಯವಹಾರ, ಕಸುಬಿನ ಸಂಬಂಧವಾಗಿ ನೀವು ಭೇಟಿ ಮಾಡುವ … Read more

ಅನುಭವದ ಅನಾವರಣ: ಸಂಕಲ್ಪ (ಸದಾಶಿವ ಡಿ ಓ)

ಬರಹವು ಆದಿ ಅನಾದಿ ಕಾಲದಿಂದ ತನ್ನದೇ ಆದ ಗಟ್ಟಿತನವನ್ನು ಉಳಿಸಿಕೊಂಡು ಬಂದಿದೆ. ಇದರಲ್ಲಿನ ತಮ್ಮ ಆದಿ ಗ್ರಂಥಗಳು ಮಾತಿನ ರೂಪದಲ್ಲಿರದೆ ಇಂದು ಓದುಗನ ಕೈಯಲ್ಲಿ ನಲಿದಾಡುತ್ತಿವೆ. ಈ ಬರಹಗಳನ್ನು ಎರಡು ರೀತಿಯಾಗಿ ನಾವು ಕಾಣಬಹುದು. ಮೊದಲನೆಯದು ಕಲ್ಪನೆ ಎರಡನೆಯದು ವಾಸ್ತವತೆ. ಹಾಗೂ ಅಲ್ಲಿ ಇಲ್ಲಿ ಎಲ್ಲೋ ಒಬ್ಬರಿಂದ ಮತ್ತೊಬ್ಬರ ಬಾಯಿ ಮಾತುಗಳಿಂದ ರವಾನೆಯಾದ ವಿಷಯಗಳು ಇಂದು ಪ್ರಸ್ತುತದಲ್ಲಿವೆ ಆದರೆ ಇದರ ಪ್ರಮಾಣ ಅತ್ಯಲ್ಪ. ಆದ್ದರಿಂದ ಒಬ್ಬೇ ಒಬ್ಬ ಆ ಭಾಷೆ ತಿಳಿದಿರುವ ಕೊನೆಯ ವ್ಯಕ್ತಿ ಇರುವುವವರೆಗೂ ಶಾಶ್ವತವಾಗಿರುತ್ತವೇ … Read more

ನಿಸರ್ಗದೊಡೆಯನ ನಿತ್ಯದರ್ಶನದ ವಿಶ್ವರೂಪ: ಜಹಾನ್ ಆರಾ ಕೋಳೂರು, ಕುಷ್ಟಗಿ

“ಪ್ರಯತ್ನಂ ಸರ್ವಸಿದ್ದಿ ಸಾಧನಂ ದೈರ್ಯಂ ಸರ್ವೇಕ್ಷಣ ಆಯುಧ “ಎಂಬ ಭಗವದ್ಗೀತೆಯ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಸೂರ್ಯನನ್ನೇ ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ಬೆಳಗು ಕವಿತೆಗಳನ್ನು ಬರೆದ ಕವಿಗೆ ಅಭಿನಂದನೆಗಳು. ದಿನನಿತ್ಯ ಫೇಸ್ಬುಕ್ನಲ್ಲಿ ವಾಟ್ಸಪ್ ನಲ್ಲಿ ಬರುತ್ತಿದ್ದಂತಹ ಬೆಳಗು ಕವಿತೆಗಳು ಇಂದು ಸಂಕಲನವಾಗಿ ‘ವಿಶ್ವಾಸದ ಹೆಜ್ಜೆಗಳು’ ಎಂಬ ಶಿರೋನಾಮೆಯಲ್ಲಿ ಬಿಡುಗಡೆಗೊಂಡಿದೆ. ಅಂತಹ ಸುಂದರ ಕವಿತೆಗಳನ್ನು ಓದುವುದೇ ಒಂದು ಹರ್ಷ. ಹಾಗೂ ಅವುಗಳ ಬಗ್ಗೆ ಹೇಳುವುದು ಅಥವಾ ನಾಲ್ಕು ಜನರ ಮುಂದೆ ತೆರೆದಿಡುವುದು ನಿಜಕ್ಕೂ ಒಂದು ಖುಷಿಯೇ ಹೌದು. ಸೂರ್ಯನ ಹೃದಯಸ್ಪರ್ಶಿ ಬೆಳಗು, ಮಿಹಿರನ … Read more

ಸಾವಿತ್ರಿಬಾಯಿ ಫುಲೆಯವರ ಬದುಕು – ಬರಹ: ತೇಜಾವತಿ ಎಚ್. ಡಿ.

ನಡೆ! ಶಿಕ್ಷಣ ಪಡೆ!ನಿಲ್ಲು! ನಿನ್ನ ಕಾಲ ಮೇಲೆ ನೀನು ನಿಲ್ಲು!ಪಡೆ ವಿವೇಕ! ಪಡೆ ಸಂಪತ್ತು!ಇದಕಾಗಲಿ ನಿನ್ನಯ ದುಡಿಮೆ ಈ ಸಾಲುಗಳು ಸಾವಿತ್ರಿಬಾಯಿ ಫುಲೆಯವರಲ್ಲಿನ ಶಿಕ್ಷಣದೆಡೆಗಿನ ಒಲವನ್ನು ಸಾರುತ್ತವೆ. ಇವರು ಸ್ವತಂತ್ರಪೂರ್ವ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಮಾತ್ರವಲ್ಲ. ಶಿಕ್ಷಣ, ಸೇವೆ, ವೈಚಾರಿಕತೆ, ಸ್ತ್ರೀವಾದಿ ಹೋರಾಟಗಾರ್ತಿ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಸಾವಿತ್ರಿ ಬಾಯಿ ಫುಲೆಯವರು ಹುಟ್ಟಿದ್ದು ಮಹಾರಾಷ್ಟ್ರ ಜಿಲ್ಲೆಯ ಖಂಡಾಲ ತಾಲ್ಲೋಕಿನ ನಯಗಾಂವ್ ಎಂಬ ಪುಟ್ಟ ಹಳ್ಳಿಯಲ್ಲಿ. 1831 ಜನವರಿ 3 ರಂದು … Read more

ಹಸಿವಿನಿಂದ ಹೊಟ್ಟೆ ತುಂಬುವವರೆಗೆ ಒಂದು ಕಿರು ನೋಟ: ಸುಮ ಉಮೇಶ್

ಮೊದಲ ತುತ್ತು: ಅನ್ನಪೂರ್ಣೇ ಸದಾಪೂರ್ಣೆ ಹಸಿವು ಎನ್ನುವುದು ಎಷ್ಟು ಘೋರ. ಹೊಟ್ಟೆ ತುಂಬಿದ ನಮಗೆಲ್ಲ ಹಸಿವಿಂದ ಬಳಲುವವರ ಸಂಕಟ ಊಹೆಗೂ ನಿಲುಕದ್ದು. ದಿನಕ್ಕೆ ಮೂರು ನಾಲ್ಕು ಬಾರಿ ತಿಂದರೂ ತೃಪ್ತಿಯಿಲ್ಲದ ಈ ಜೀವಕ್ಕೆ ದಿನಕ್ಕೆ ಒಂದು ಹೊತ್ತಿನ ಊಟಕ್ಕೂ ಪರದಾಡಿ, ಕೊನೆಗೆ ಸಿಕ್ಕ ಅಲ್ಪಾಹಾರವನ್ನೇ ಸಂತೋಷದಿಂದ ತಿಂದು ಈ ದಿನ ಇಷ್ಟಾದರೂ ಸಿಕ್ಕಿತಲ್ಲ ಅನ್ನೋ ತೃಪ್ತಿಯ ಕಲ್ಪನೆ ನಮಗೆ ಇಲ್ಲ. ಅದೊಂದು ಕಾಲವಿತ್ತಂತೆ. ಬೆಳಿಗ್ಗೆ ಶಾಲೆಗೆ ಹೊರಟ ಮಕ್ಕಳು ಜೋಳದ ಮುದ್ದೆಗೆ ಉಪ್ಪಿನಕಾಯಿ ನೆಂಚಿಕೊಂಡು ತಿಂದು ಮತ್ತೆ … Read more

ಸೀಗೀ ಹುಣ್ಣಿವಿ: ಡಾ. ವೃಂದಾ ಸಂಗಮ್

“ಆದಿತ್ಯವಾರ ಸಂತೀ ಮಾಡಿ, ಸೋಮವಾರ ಕಡುಬು ಕಟ್ಟಿ, ಮಂಗಳವಾರ ಹೊಲಾ ಹೋಗೋದೋ” ಅಂತ ಊರಾಗ ವಾಲೀಕಾರ ಡಂಗರಾ ಸಾರಲಿಕ್ಕೇಂತ ಬಂದರ, ನಮ್ಮಂತಹಾ ಸಣ್ಣ ಹುಡುಗರ ಗುಂಪು ಅವನ ಹಿಂದ ಗುಂಪು ಕಟ್ಟಿಕೊಂಡು ಓಡುತಿತ್ತು. ಊರೇನೂ ಅಂತಾ ಪರೀ ದೊಡ್ಡದಲ್ಲ. ಅಲ್ಲದ, ಇಂತಾ ವಿಷಯಗಳು ಎಲ್ಲಾರಿಗೂ ಗೊತ್ತಾಗೇ ಇರತಿದ್ದವು. ಆದರೂ ವಾಲೀಕಾರ ಡಂಗುರ ಸಾರತಿದ್ದಾ, ನಾವೂ ಅವನ ಹಿಂದಿಂದ ಓಡತಿದ್ದವಿ ಅಷ್ಟ. ಆಮ್ಯಾಲೆ, ಮನೀಗೆ ಬಂದು ಅವನ ಹಂಗನ ಒಂದ ಹತ್ತ ಸಲಾ ಒದರತಿದ್ದವಿ. ಈ ಡಂಗುರಾ ಸಾರೋ … Read more

‘ಐ ಡೊಂಟ್ ಕೇರ್ ಅನ್ನೋದಕ್ಕೂ ಮೊದಲು’: ಮಧುಕರ್ ಬಳ್ಕೂರ್

“ಐ ಡೊಂಟ್ ಕೇರ್, ನನ್ನ ಲೈಪು ನನ್ನ ಇಷ್ಟ, ನಾನು ಯಾರನ್ನು ಕೇರ್ ಮಾಡೋಲ್ಲ” ಹಾಗಂತ ಬೆಳಿಗ್ಗೆ ಜೋಶ್ ನಲ್ಲಿ ಎದೆ ಉಬ್ಬಿಸಿ ಹೊರಟು ಸಂಜೆ ಆಗೋ ಹೊತ್ತಿಗೆ “ನನ್ನನ್ನ ಯಾರೂ ಅರ್ಥಾನೆ ಮಾಡ್ಕೊತಾ ಇಲ್ಲವಲ್ಲ” ಅಂತಾ ಅನಿಸೋಕೆ ಶುರುವಾದ್ರೆ ಅವರದು ಮೊಸ್ಟ್ ಕನ್ಪ್ಯೂಶಿಯಸ್ ಸ್ಟೇಜ್. ಮೀಸೆ ಮೂಡುವಾಗ ದೇಶ ಕಾಣೊದಿಲ್ಲ. ಬೇಕೆಂದಾಗ ಕಡ್ಲೆಕಾಯಿ ಸಿಗೋದಿಲ್ಲ ಅನ್ನೋ ಹಾಗೆ ಮೀಸೆ ಮೂಡೊ ಪ್ರಾಯದಲ್ಲಿ ಈ ತರಹದ ತಲ್ಲಣಗಳು ಎದುರಾದರೆ ಅದು ಸಹಜವೆನ್ನಬಹುದು. ಅದರಂತೆ ರೆಕ್ಕೆ ಬಲಿತ ಹಕ್ಕಿ … Read more

ಗಂಡಸಿಗ್ಯಾಕೆ ಗೌರಿ ದುಃಖ: ಡಾ. ವೃಂದಾ ಸಂಗಮ್

ಅಷ್ಟಲ್ಲದೇ ಹೇಳ್ತಾರಾ, ಗಂಡಸಿಗ್ಯಾಕೆ ಗೌರಿ ದುಃಖ. ಇಂತಹದೊಂದು ಗಾದೆ ಮಾತು, ಹೆಣ್ಣು ಮಕ್ಕಳು ಬಸಿರು, ಬಾಣಂತನದಲ್ಲಿ ಮತ್ತೆ ಪ್ರತೀ ವರ್ಷ ಗೌರೀ ಹಬ್ಬದ ಪೂಜೆಯ ಸಮಯದಲ್ಲಿ ಹೇಳೇ ಹೇಳ್ತಾರೆ. ಯಾಕೆಂದರೆ, ಬಸಿರು – ಬಾಣಂತನ ಎನ್ನುವದು ಹೆಣ್ಣಿನ ಮರು ಜನ್ಮವೇ. ಆ ನೋವು ಗಂಡಸಿಗೇನೂ ತಿಳಿಯದು ಅಥವಾ ತಿಳೀಬಾರದು ಅಂತ ಹೇಳ್ತಾರೇನೋ. ಆದರೆ ಗೌರಿ ಹಬ್ಬ ಅಂದರೆ, ಸಡಗರ ಸಂಭ್ರಮ. ಅದ್ಯಾಕೆ ಗೌರೀ ದುಃಖ ಆಗಿ ಹೋಗಿದೆ ಅಂತ ನಮ್ಮ ಪದ್ದಕ್ಕಜ್ಜಿಗೇನೂ ತಿಳಿದಿರಲಿಲ್ಲ. ಬಹುಶಃ, ಹಿಂದಿನ ಕಾಲದಲ್ಲಿ … Read more

ಚಿಟ್ಟೆ ಕ್ಲಾಸ್ ಎಂಬ ಮಾಯಾ ಲೋಕ: ಡಾ. ದೋ. ನಾ. ಲೋಕೇಶ್

ಅದೊಂದು ದಿನ 1994 ರ ಮೇ ತಿಂಗಳ ಅಂತ್ಯದಲ್ಲಿ ನಮ್ಮಜ್ಜಿ ಊರು ಚಲುವಯ್ಯನಪಾಳ್ಯದಲ್ಲಿ ಆಟವಾಡುತ್ತಾ ನಮ್ಮಜ್ಜಿ ಮನೆಯ ಮುಂದಿನ ರಸ್ತೆಗೆ ಇಳಿದೆ. ದೂರದಲ್ಲಿ ಅರಳಿ ಮರದ ಹತ್ತಿರ ನಮ್ಮಮ್ಮ ಬರುತ್ತಿರುವುದು ಕಂಡು ಕುಣಿಯುತ್ತಾ ಮನೆಗೆ ಹೋಗಿ ನಮ್ಮಜ್ಜಿಗೆ ವಿಷಯ ಮುಟ್ಟಿಸಿದೆ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಬೆಳಗುಂಬದಿಂದ ಸುಮಾರು ಎರಡು ಮೂರು ಕಿಲೋಮೀಟರ್ ನಡೆದು ಬಂದ ಅಮ್ಮ ತಣ್ಣನೆಯ ನೀರು ಕುಡಿದು ಸುಧಾರಿಸಿಕೊಂಡರು. ನಂತರ ಬಂದ ವಿಷಯವೇನು? ಎಂದು ಅಜ್ಜಿ ಕೇಳಿತು. ಅಮ್ಮನ ಉತ್ತರ ಕೇಳಿ ನನಗಂತೂ ಭಾರಿ … Read more

ಹೆಸರು ಹೇಡಿ ಎಂದು ಬರೆದು ಬಿಡಿ (ಗಜಲ್ ಹಿಂದಿನ ಕಥನ): ಅಶ್ಫಾಕ್ ಪೀರಜಾದೆ.

ಮೊದಲು ನನ್ನ ರಚನೆಯ ಗಜಲ್ ಒಮ್ಮೆ ಓದಿ ಬಿಡಿ. ನಂತರ ನಾನು ಈ ಗಜಲ್ ಹುಟ್ಟಿನ ಹಿಂದಿನ ಕಥನವನ್ನು ವಿವರಿಸುವೆ. ಗಜಲ್; ನಗುನಗುತ್ತಲೇ ಉರುಳಿಗೆ ಕೊರಳ ನೀಡಿದೆವು ನಾವು/ನಗುನಗುತ್ತಲೇ ಮಣ್ಣಲ್ಲಿ ಮಣ್ಣಾಗಿ ಬೆರತೆವು ನಾವು// ದುರಂತ ಪ್ಯಾರ ಕಹಾನಿಗಳಿಗೆ ಆಸ್ತಿ ಅಂತಸ್ತಗಳೇ ಕಾರಣ/ನಸುನಗುತ್ತಲೇ ನಮ್ಮ ಪ್ರೇಮ ತ್ಯಾಗ ಮಾಡಿದೆವು ನಾವು// ಪ್ರೀತಿಗೆ ಗೋಡೆ ಬೇರೆಯಾಗಿದ್ದರೆ ಒದ್ದು ಕೆಡವ ಬಹುದಿತ್ತು/ಹಾಲೇ ಹಾಲಾಹಲವಾದಾಗ ಅಸಹಾಯಕರಾದೆವು ನಾವು// ಅವರು ಕೊಟ್ಟ ಹೂಗುಚ್ಚಕ್ಕೆ ಅದೆಂಥ ಮೊನಚಿತ್ತೋ ಕಾಣೆ/ಮುಳ್ಳಾಗಿ ನೆಟ್ಟಿದ್ದರೂ ಪ್ರೀತಿಯಿಂದ ಸ್ವೀಕರಿಸಿದೆವು ನಾವು// … Read more

ಕೃಷ್ಣೆಗೊಂದು ಪ್ರಶ್ನೆ: ಡಾ. ಗೀತಾ ಪಾಟೀಲ, ಕಲಬುರಗಿ

ನಮ್ಮ ಹಿಂದೂ ಧರ್ಮದ ಶ್ರೇಷ್ಠ ಮಹಾಕಾವ್ಯ ಮಹಾಭಾರತ! ಕೌರವ ಮತ್ತು ಪಾಂಡವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದ ಫಲಿತಾಂಶವನ್ನು ವಿಸ್ತಾರವಾಗಿ ವಿವರಿಸುವ ಈ ಮಹಾಕಾವ್ಯದಲ್ಲಿ ನಾವು ಓದಿದ, ಕೇಳಿದ ಕೆಲವು ಪಾತ್ರಗಳು ವಿಶಿಷ್ಟ ಹಾಗೂ ಇಂದಿಗೂ ನಿಗೂಢವಾಗಿವೆ. ಅಂತಹ ಪಾತ್ರಗಳಲ್ಲಿ ದ್ರೌಪದಿಯ ಪಾತ್ರವೂ ಒಂದು!! ದ್ರೌಪದಿ ದ್ರುಪದ ಮಹಾರಾಜನ ಮಗಳು, ದ್ರುಷ್ಟದ್ಯುಮ್ನನ ತಂಗಿ, ಪಾಂಡುರಾಜನ ಸೊಸೆ! ರಾಜಾಧಿರಾಜರನ್ನು ಗೆದ್ದು ರಾಜಸೂಯ ಯಾಗ ಮಾಡಿದ ವೀರರೈವರ ಪಟ್ಟದ ರಾಣಿ,, ಚಕ್ರವರ್ತಿನಿ! ಸೌಂದರ್ಯದಲ್ಲಿ, ವೈಭವದಲ್ಲಿ ಅವಳಿಗೆ ಸಮನಾದವರೇ ಇಲ್ಲ ಎನ್ನಿಸಿಕೊಂಡವಳು!! … Read more