ಮಳ್ಳೋ ಮಬ್ಬೋ…: ಗೋಪಾಲ ವಾಜಪೇಯಿ

  ಬಟ್ಟ ಬಯಲ ನಟ್ಟ ನಡವ ಒಂದು ಬೇಲಿಯು… ಬೇಲಿ ಮ್ಯಾಲೆ ನಗುವ ಹೂವು ಬೇಲಿ ಒಳಗ ಚಿಣಿಗಿ ಹಾವು – ಬೇಲಿ ಆಚಿ ನನ್ನ ಕರೆಯೋ ಚೆಲುವಿ ಬಾಲಿಯು                           II೧II   ಬಾಲಿ ಹಿಂದ ಬಲಿತು ನಿಂತ ಕೆಟ್ಟ ರಾಕ್ಷಸ ಹಲ್ಲುಹಲ್ಲು ಮಸಿಯುತಾನ ಕಲ್ಲಿ ಮೀಸಿ ತಿರುವುತಾನ – ಕೊಲ್ಲತೀನಿ ಅಂತ ಅಟ್ಟಹಾಸ ಮೆರೆಯುತ     … Read more

ಅತ್ತು ಹಗುರಾಗುವ ಭಯ : ರಘುಚರಣ್

ಎದುರಾದ ಕಣ್ಣುಗಳೆಲ್ಲ ಬತ್ತಿದ ಕೊಳಗಳು.. ನೀರಿಲ್ಲವೆಂದಲ್ಲ.. ಪ್ರತಿ ಹನಿಯೂ ಅಂತರ್ಗಾಮಿ..   ನೋವು ದುಃಖದ ಹೊಳೆಗಳಬ್ಬರಿಸುತಿದ್ದರೂ ಅಹಮಿಕೆಯ ಪರದೆಯಡಿ ಮಡುಗಟ್ಟಿ ನಿಂತಿವೆ..   ಪರದೆ ಹರಿಯುವ ತವಕ ಪ್ರತಿಯೊಂದು ಹನಿಗೆ.. ಸೋತ ಭಾವದ ನಡುಕ ಗರ್ವಗಳ ದನಿಗೆ..   ಒಳಗೊಳಗೆ ಕುಸಿದಿಹುದು ಆಂತರ್ಯ ಸೌಧ ಮುಖದ ನಗುವಿಗೆ ತಪ್ತ  ಮನಸೇ ವಿರೋಧ   ಇನ್ನಾದರೂ ಕಳಚಿ ಬೀಳಲಿ ಬಿಗುಮಾನದ ಬೆರಗು ಕಣ್ಣ ಹನಿಯೇ ಹೊರಬಂದು ಕಪೋಲದಲಿ ಕರಗು….     -ರಘುಚರಣ್

ಇಬ್ಬರ ಕವಿತೆಗಳು : ಎಂ.ಎಂಸ್. ಕೃಷ್ಣಮೂರ್ತಿ, ಮೋಹನ್. ಡಿ.

ಇರಲಿರಲಿ ಈ ಗರ್ಭ ಪ್ರಸವಕ್ಕಿನ್ನೂ ಒಂಬತ್ತು ದಿನ ಒಂಬತ್ತು ನಿಮಿಷ ಒಂಬತ್ತು ಘಳಿಗೆಗಳಿವೆಯಂತೆ ಏದುಸಿರು ನಿಟ್ಟಿಸುರಿನೊಂದಿಗೆ ಮಿಳಿತವಾಗಿದೆ ಗರ್ಭ ಕಟ್ಟುವುದು ಒಂದು ಅಮೃತ ಘಳಿಗೆಯಂತೆ ಸತ್ತ ವೀರ್ಯದ ಜೋತೆಗೆ ಒಂದೇ ಒಂದು ಗೆದ್ದ ವೀರ್ಯ ಕಾದು ಕುಳಿತ ಅಂಡಾಣು ಕೂಡುವಿಕೆಗೆ ಮಹೂರ್ತವಿಟ್ಟುಕೊಂಡಿರಬೇಕಂತೆ ಮನಸ್ಸು ಮನಸ್ಸು ಒಂದಾಗಿ ಆದರೆ ನನ್ನದು ಕೊಳಕು ಮನಸ್ಸಿನ, ಅವನ ದೇಹ ಮುಗಿಬಿದ್ದು ತೆವಲು ತಿರಿಸಿಕೊಳ್ಳಲು ತೊಟ್ಟಿಯೊಳಗೆ ಸುರಿವ ಕೊಳಕಿನಂತೆ ಸ್ರವಿಸಿ ಬಿಟ್ಟ ವೀರ್ಯಧಾರೆ ಮನಸ್ಸು, ದೇಹವನ್ನು ಕಿತ್ತು ತಿಂದು ಅತ್ಯಾಚಾರ ಮಾಡಿಟ್ಟುಬಿಟ್ಟ ಆ … Read more

ಪ್ರೀತಿಯೆಂದರೆ…

ಪ್ರೀತಿ ಪ್ರೀತಿಯೆಂಬುದು ಬರಿಯ ಭಾವಗಳೆಂಬ ಅಪ್ಪಳಿಸುವ ಅಲೆಗಳ ಭೋರ್ಗರೆವ ಸಮುದ್ರವಲ್ಲ, ಎಂದೋ ಪೌರ್ಣಿಮೆ-ಅಮಾವಸ್ಯೆಗಳಲಿ ಮಾತ್ರವೇ ಚಂದಿರನಿಗಾಗಿ ಹಾತೊರೆವ ಮೋಹವಲ್ಲ, ಒಡಲಲಿ ಸಾವಿರ ಗುಟ್ಟುಗಳನಿಟ್ಟ, ಒಮ್ಮೆ ಈಜಲೇ ಬೇಕೆಂಬ ಕುತೂಹಲವಲ್ಲ, ಶಾಂತತೆಯ ತೋರಿಕೆಯಲಿ ಒತ್ತಡವ ತನ್ನೂಳಗೆ ಬಚ್ಚಿಟ್ಟು, ಕಡೆಗೆ ಸುನಾಮಿಯೆಬ್ಬಿಸುವ ಭಯಂಕರತೆಯಲ್ಲ, ಸಿಹಿನದಿಗಳ, ಕರಗುವ ಹಿಮವನೆಲ್ಲವ ಕಬಳಿಸಿ ವಿಸ್ತಾರವಾಗುತಲಿ, ತೀರವ ಕೊರೆವ ಸ್ವಾರ್ಥವಲ್ಲ, ಎಂದಿಗೂ ಉಪ್ಪೇ ಆಗಿರುವ, ಕುಡಿಯಲೇ ಆಗದ ಜಲವಲ್ಲ, ದಿನವೂ ರವಿಯೊಡನೆ ಸರಸವಾಡುತಲಿ, ರೂಪ-ನೋಟಗಳಲಿ ಕಣ್ಸೆಳೆಯುವ ಆಕರ್ಷಣೆಯಲ್ಲ, ದಡದ ಮರಳಿನ ಮೇಲೆ ಗಿಚಿ ಮರೆಯಾದ ಹೆಸರಲ್ಲ, … Read more

ಮೂರು ಕವನಗಳು

ಬತ್ತಿಹುದು ಕಾಲುವೆ- (ಕಂಬನಿ)   ಕಾಲುವೆಯ ಮೇಲೆ ಕುಳಿತು ಕಲ್ಚಾಚಿ ಒಂದೊಂದೇ ಕಲ್ಲು ಎಸೆದು ತಿಳಿ ನೀರಲ್ಲಿ ಸಣ್ಣ ಸಣ್ಣ ಅಲೆ ಎಬ್ಬಿಸಿ ಕಂಡ ಕನಸುಗಳು ಸವಿ ಅಂದು   ಯಾವುದೊ ದೂರದೂರ ಜನ ಸಾಗರವಿದು ಕಲ್ಮಶವಿಲ್ಲದ ಪುಟ್ಟ ಪುಟ್ಟ ಕಂಗಳು ತಿಳಿ ಮನದ ಸರೋವರ ಶಾಂತ ಚಿತ್ತ, ಬರಿ ಕನಸುಗಳ ನನಸಾಗಿಸೋ ಗುರಿ ಮಾತ್ರ   ಕಣ್ಣ ಅಳತೆಗೂ ಮೀರಿದ ಬೇಲಿ ಇತ್ತು  ಸುತ್ತ ಕಣ್ಣ ತಪ್ಪಿಸಿ ಅದಾರು ಬಂದವರು ತಿಳಿಗೊಳವ ಕಲಕಿ ಮೌನದ ಮುಸುಕೊದ್ದು … Read more

ಮೂರು ಕಾವ್ಯಗಳು

ಮನಸ್ಸೆಂಬ ಚಿಟ್ಟೆ ************* ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ  ನೋಡಲು ಕಣ್ಣುಗಳು ಸಾಲದು ಮೈಯ ಮೇಲೆಲ್ಲಾ ಕಪ್ಪು ಕಂಗಳು ನೋಡುಗರ ಕಣ್ಮನ ಸೆಳೆಯುವುದು    ಅಲ್ಲಿಂದಿಲ್ಲಿಗೆ ಹಾರುವೆ  ಹಿಡಿಯಲು ಹೋದರೆ ಓಡುವೆ  ಜಗದ ಸೃಷ್ಟಿಯ ಮೆಚ್ಚಲೇ ಬೇಕು  ನಿನಗೆ ನೀನೆ ಸಾಟಿಯಿರಬೇಕು    ಒಮ್ಮೆ ಇಲ್ಲಿ ಒಮ್ಮೆ ಇನ್ನೆಲ್ಲೋ  ಹಾರುವ ನಿನ್ನನು ನೋಡಿದರೆ  ಮನಸು ಕೂಡ ನಿನ್ನೊಡನೆಯೇ  ಕುಣಿಯುತ ಹೊರಡುವುದು ಬೇರೆಡೆಗೆ !! -ಅರ್ಪಿತಾ ರಾವ್  ನವಮಾಸ  ********* ನವಮಾಸ ಬಂದಿದೆ ಆಹ್ಲಾದವ ತಂದಿದೆ ಎನ್ನ ಬಾಳಿನಲ್ಲಿ … Read more

ಚಂಚಲ

ನಾ ಬರೆವ ಮುನ್ನ ಎದೆಯಲಿ ಕವಿತೆಯಾಗಿ ಹೊಮ್ಮಿದೆ ನೀನು, ಅದನು ಹಾಳೆಗಿಳಿಸುವ ಮುನ್ನ ನನಗೇ ಅರಿವಿರಲಿಲ್ಲ, ನನ್ನೊಳಗಿನ ನೀನು..!          ನನ್ನ-ನಿನ್ನ ಆಂತರಿಕ ಸಂಘರ್ಷದ        ಚಂಚಲತೆಯ ಭಯದಲಿ ಕರಗುತಿರುವೆ ನಾನು,        ಕಾಣದೇ ಅಂತರ್ಮುಖಿಯಾಗಿ ಕಾಡುವ        ನಿನಗೆ ನಾ ತಿಳಿಸಲಿ ಏನನು..?   ಬರೆಯುವುದೇನನು? ಪದಗಳೇ ಇರದ ಭಾವನೆಗಳ, ಕಾಗದದಿ ಬಣ್ಣದ ಶಾಹಿಯಲಿ.. ಬರಿಯ ವರ್ಣ ಮಿಶ್ರಿತ ಅಸ್ಪಷ್ಟ ಮನದ ಪುಟದಲಿ … Read more

ಪೂರ್ಣತೆಯ ಕಡೆಗೆ

  ಬುಡಸೋರುವ ಕೊಡದಲ್ಲಿ, ಹಿಡಿದಿಡುವ ಆಸೆಯಲಿ ತುದಿಕಾಣದ ಪಯಣವಿದು ತೀರಬಹುದೇ ದಾರಿ||ಪ||   ಬಗೆಹರಿಯದ ಮೌಲ್ಯವದು ’ಪೈ’ ಎಂದು ಪರಿಧಿ ವ್ಯಾಸದ ಸರಳ ಅನುಪಾತವದು ನಿಜಪೂರ್ಣಬೆಲೆಯ ಕಂಡುಹಿಡಿಯಲಾಗದೆ ಎಷ್ಟು ಯುಗಗಳೋ ಅದರ ಹಿಂದೆ ಹಿಂದೆ ಆದಿ ಗೂತ್ತಿಲ್ಲ ಈ ಪಯಣಕೆ, ಅಂತ್ಯ ಮೊದಲಿಲ್ಲ ಮಸುಕು ಗಮ್ಯದ ಕಡೆಗೆ ಹುಡುಕಾಟವೇ ಎಲ್ಲ ಸನಿಹವಾದರೂ ಎಂದೂ ನಿಖರವಲ್ಲ ಪೂರ್ಣತೆಯ ಸುಳಿವಿಲ್ಲ, ಪ್ರಯತ್ನ ಬಿಟ್ಟಿಲ್ಲ ತೀರದ ಹಠಕೆ ಅರ್ಪಣೆಯೇನು ಕಡಿಮೆಯ ಹೋದೇವ ಹತ್ತಿರ, ಮುಟ್ಟೇವ ಗುರಿಯ?||೧|   ಅನಿಲ ಖನಿಜಗಳಷ್ಟೇ ಅವನಿಯಲಿದ್ದವಂತೆ … Read more