ನೀನಿಲ್ಲದೇ ಖಾಲಿಯಾಗಿದೆ ಬದುಕು: ಪೂಜಾ ಗುಜರನ್, ಮಂಗಳೂರು.
ಮೊದಲು ನಿನ್ನನ್ನು ಸರಿಯಾಗಿ ಬೈದು ಬಿಡಬೇಕು ಅನ್ನುವಷ್ಟು ಕೋಪ ಉಕ್ಕಿ ಬಂದರೂ ನನ್ನನ್ನು ನಾನು ನಿಯಂತ್ರಿಸಿಕೊಳ್ಳುತ್ತೇನೆ. ಅದೆಷ್ಟು ಬೈದರೂ ಅದು ನನ್ನ ಮೂಕವೇದನೆಗಷ್ಟೆ ಸಮಾ.ಈ ಮೌನಕ್ಕೂ ನಿನ್ನದೇ ಗುರುತು. ಅದಕ್ಕೆ ಸುಮ್ಮನಿದ್ದು ಬಿಡುತ್ತೇನೆ. ನಿನ್ನ ನೆನಪುಗಳನ್ನು ಮೂಟೆಕಟ್ಟಿ ಮೂಲೆಗೆಸದರೂ ನೀನು ಕಾಡುವುದನ್ನು ನಿಲ್ಲಿಸುವುದಿಲ್ಲ. ಅದೆಂತಹ ಹಠಮಾರಿ ನಿನ್ನ ನೆನಪುಗಳು. ಕಾಡಿಸಿ ಪೀಡಿಸಿ ಗೊಂದಲವಾಗಿಸುತ್ತದೆ. ನೀನು ಮತ್ತೆ ಬರಲಾರೆ ಅನ್ನುವ ಸತ್ಯವನ್ನು ಯಾವುದೇ ಕಾರಣಕ್ಕೂ ಈ ಮನಸ್ಸು ಒಪ್ಪುತ್ತಿಲ್ಲ. ನಿನ್ನ ತಲುಪುವ ಎಲ್ಲ ಮಾರ್ಗಗಳು ಮುಚ್ಚಿ ಹೋಗಿವೆ. ಆದರೂ … Read more