1. ಉಕ್ಕಿ ಹರಿಯುತ್ತಿದ್ದ ಉತ್ಸಾಹ ಅವರ ಬೆನ್ನಾರೆ ಹೊರಟೇಹೋಯಿತೇನೋ ಅನ್ನುವ ಹಾಗೆ… ಅವರ ನೆನಕೆಯ ನೂಲಿನಲಿ ಕಥೆಯೆಷ್ಟೋ ನೇಯ್ದುಬಿಡುವವರು ನಾವು ದೂರದಲಿದ್ದುಕೊಂಡೇ ಅವರೆಂದರೆ, ಎದೆಯೊಳಗಿನ ಪ್ರಾಣಕೆದುರಾಗುವವರು ಬಳಿಯಿದ್ದುಬಿಡು ಸದಾ ಎನ್ನಲೇಕೆ; ಜೊತೆಗಿರುವುದು ಸಾಲದೇನು? ಪ್ರೀತಿಯೆದುರು ಅದರ ಸಂಕಟದ್ದೇನು ನಡೆದೀತು; ಬೆರೆತ ಮನಸುಗಳೆದುರು ಈ ದೂರವೇನು ಮಾಡೀತು? ಹಾರಲು ಕಲಿಯುವ ಹಕ್ಕಿಯದು ನೆಲದ ನೆಲೆಯ ತೊರೆಯಲೇಬೇಕು ಚೂರುಚೂರೇ ತಮ್ಮೆದೆಯನಿಬ್ಬರೂ ಚೂರುಚೂರಾಗಿಸಲೇಬೇಕು ಮನಸಿನಪ್ಪಣೆಯಿದ್ದಮೇಲಿನ್ನು ಒಪ್ಪುವ ಯಾ ಒಪ್ಪದ ಲೋಕವೇನು ಮಾಡೀತು? ಪ್ರೀತಿಯೆದುರು ಅದರ ಸಂಕಟದ್ದೇನು ನಡೆದೀತು; ಬೆರೆತ ಮನಸುಗಳೆದುರು ಈ […]
ಅನುರಾಧ ಪಿ. ಸಾಮಗ ಅಂಕಣ
ಬಾನಂಗಳದಲೊಮ್ಮೆ….: ಅನುರಾಧ ಪಿ. ಸಾಮಗ
ಚಂದ್ರನಿಗೆ ರೋಹಿಣಿಯೂ, ಉಳಿದ ಇಪ್ಪತ್ತಾರು ಪತ್ನಿಯರೂ, ಸುತ್ತಮುತ್ತ ರಾರಾಜಿಸುವ ಇನ್ನುಳಿದ ತಾರೆಯರೂ, ಜಲದ ನೈದಿಲೆಯೂ, ಮರದ ಆಕಾಶಮಲ್ಲಿಗೆಯೂ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪ್ರೀತ್ಯರ್ಹರೇ. ಅಲ್ಲದೆ ಅವನು ಅವರೊಬ್ಬೊಬ್ಬರ ಜೊತೆಗೂ ಹೆಣೆದುಕೊಂಡ ಅನುಬಂಧದ ಪರಿಗೆ ಸರಿಯಾಗಿ ಒಬ್ಬೊಬ್ಬರೂ ಅವರವರದೇ ರೀತಿಯಲ್ಲಿ ಅವನ ಸಂತೋಷವನ್ನು ಪರಿಪೂರ್ಣವಾಗಿಸುತಿದ್ದರು. ಅವರಲ್ಲೊಬ್ಬರ ಕೊಡುಗೆಯ ವಿನಃವೂ ಅವನ ಸಂತೋಷ ಅಪರಿಪೂರ್ಣ. ಮತ್ತಾಗ ಚಂದ್ರ ಹುಣ್ಣಿಮೆ ಬಂದರೂ ತನ್ನ ತಾನು ಪೂರ್ಣವಾಗಿ ಕಂಡುಕೊಳ್ಳಲಾರ. ಇದು ಅವನ ಬಲಹೀನತೆಯೆಂದರೂ ಸರಿಯೇ, ಮತ್ತೆ ಮತ್ತೆ ಅಳಿಯುತ್ತ ಬೆಳೆಯುತ್ತ ಅದೆಷ್ಟೋ […]
ಮೆರಾ ಕುಚ್ ಸಾಮಾನ್ ತುಮ್ಹಾರೇ ಪಾಸ್ ಪಡಾ ಹೈ: ಅನುರಾಧ ಪಿ. ಸಾಮಗ
ನಿನ್ನೂರಿಂದ ನನ್ನೂರ ನಡುವೆ ಹೊತ್ತಿಗೆ ಅವನೂರಲೆರಡು ಹೆಜ್ಜೆಯೂರುವ ಮನಸಾದಾಗ ಮುಸ್ಸಂಜೆಯಿನ್ನೂ ಹುಟ್ಟುತ್ತಿತ್ತು. ಹಸಿರುದಿಬ್ಬ ಬಳಸಿ ಮೇಲೇರುತಿದ್ದ ಕೆಮ್ಮಣ್ಣ ಸಣ್ಣ ಕಾಲ್ದಾರಿಯೊಂದು ಹೊಂಬಣ್ಣದಲಿ ಮುಳುಗೆದ್ದು ಥೇಟ್ ಅವನ ಮುಳುಮುಳು ನಗುವಲಿ ಮಿಂದ ಪರಮದ ಚರಮಕೊಯ್ಯುವ ಕಾಲದೊಂದು ಮಾಯಕದ ತುಂಡಿನಂತೆ ಕಾಣಿಸುತಿತ್ತು.ಆವರೆಗೆ ಪಚ್ಚೆಯೆಂಬುದು ಗೊತ್ತಿತ್ತು; ಸುಮ್ಮನೆ ತೃಪ್ತಿಯುತ್ತುಂಗದಲಿ ಮೈ ಚಾಚಿದವಳ ಹಾಗಿನ, ಎಂಥವರನ್ನೂ ಸೆಳೆದು ಆಮಿಷವೊಡ್ಡುವ ಸುಖದ ಹಸಿಚಿತ್ರದ ಹಾಗಿನ ಅಚ್ಚಪಚ್ಚೆ ಅಲ್ಲೇ ಹಾದಿಯಿಕ್ಕೆಲದಲ್ಲಿ ಕಂಡದ್ದು. ಹೇಳಿಕೇಳಿ ಬೆಟ್ಟಕಣಿವೆಗಳ ಊರದು, ಅದೇ ಹಾದಿ ತುದಿಯಲಿದ್ದಿರಬಹದಾದ ಗುಡಿಯ ಗಂಟೆ ನುಡಿಯುತಿತ್ತು. ಸಾವದೇವನಿಗೊಂದು […]
ಹಾಗೇ ಸುಮ್ಮನೆ ಅವನಿಗೊಂದಷ್ಟು ಅವಳ ಮಾತುಗಳು: ಅನುರಾಧ ಪಿ. ಸಾಮಗ
ಬಿರುಸಾದ ಗಾಳಿ. ಹಿತವೂ ಅಲ್ಲದ ಅಹಿತವೂ ಅಲ್ಲದ ಶೈತ್ಯ. ಬಿಸಿಲ ಸುಳಿವೇ ಇಲ್ಲದೊಂದು ಹಗಲು. ಸುತ್ತಲಿನ ಸಂಬಂಧಗಳ ಸಂತೆಯಲ್ಲಿ ನನ್ನ ಇರುವಿಕೆ ಮತ್ತದರ ಮೌನ, ಆಪ್ತತೆಯೆಡೆ ನನದೊಂದು ವಿಚಿತ್ರ ಉದಾಸೀನ ಇವೆಲ್ಲವೂ ನಿಜವಾಗಲೂ ಜಾಡ್ಯಕ್ಕೋ, ಮಂಪರಿಗೋ ಎಡೆ ಮಾಡಿಕೊಡಬೇಕಾಗಿತ್ತು. ಆದರೆ ಇಂದು ಮನದಲ್ಲಿ ಹುಡುಕಿದರೂ ಅಸಹನೀಯವಾದದ್ದಕ್ಕೆ ಒಂದಿಷ್ಟೂ ಜಾಗವಿಲ್ಲ. ಯಾಕಿರಬಹುದು?! ಕ್ಷಣಕ್ಕೊಂದಷ್ಟರಂತೆ ಹಲವು ವಿಷಯಗಳು ಮನಃಪಟಲದಲ್ಲಿ ಹಾದುಹೋದವು. ಆದರೆ ಮುಚ್ಚಿದ ಕಣ್ಣ ಮುಂದಿದ್ದುದೊಂದೇ ಅಸ್ಪಷ್ಟ ಬಿಂಬ, ಅದು ನಿನ್ನದು. ಸುಂದರಸ್ವಪ್ನವಾಗಬಹುದಾದದ್ದು ಎಷ್ಟು ಹೊತ್ತಿಗೆ ಮುಗಿದೀತೋ ಅನ್ನುವ ಭಯಂಕರ […]
ಹೀಗೆ ಒದಗಿದೊಂದು ಓದು: ಅನುರಾಧ ಪಿ. ಸಾಮಗ
ಉತ್ತರಕಾಂಡ ಓದಿ ಮುಗಿಸಿದ್ದಾಗಿತ್ತು. ಕತೆಯೊಂದಕ್ಕೆ ಎದುರಾದಾಗಲೆಲ್ಲ ಪಾತ್ರಗಳಿಂದ, ಅವುಗಳ ಪಾಡುಗಳಿಂದ ಅಂತರ ಕಾಯ್ದುಕೊಂಡು ಸಾಗುವುದು ಇಲ್ಲಿಯವರೆಗೂ ಸಾಧ್ಯವಾಗಿಲ್ಲದೆ, ಒಮ್ಮೊಮ್ಮೆ ಆ ಮನಸುಗಳ ಒಳಹೊಕ್ಕು, ಇನ್ನೊಮ್ಮೆ ಅವುಗಳನ್ನು ಒಳಗಿಳಿಸಿಕೊಂಡು ಅಂತೂ ಕೊನೆಯ ಪುಟಗಳ ಕಡೆಗೆ ಬರುತ್ತಾ ಪಾತ್ರಗಳು ನಡಕೊಂಡ ರೀತಿಯನ್ನು ಸಾಮಾನ್ಯ ಮನುಷ್ಯರ ಬಾಳ್ವೆಯಂತೆಯೇ ಬಿಂಬಿಸಿದ್ದರ ಪರಿಣಾಮವಾಗಿ ಉಮ್ಮಳಿಸಿ ಬಂದು ಢಾಳಾಗಿ ಉಳಕೊಂಡದ್ದೆಂದರೆ ಎಲ್ಲೆಡೆ ಮುಖ ಮಾಡಿದ ಜೀವಪ್ರೀತಿ! ಬಹುಶಃ ಕತೆಗಾರನೊಬ್ಬನಿಗೆ ತನ್ನ ಬರವಣಿಗೆಯ ಮೂಲಕ ಕತೆಗೆದುರಾದ ಮನಸಿನಲ್ಲಿ ಜೀವನಪ್ರೀತಿ, ಜೀವಪ್ರೀತಿಗಳನ್ನು ಫಳ್ಳಂತ ಮಿನುಗಿಸುವುದು ಸಾಧ್ಯವಾದರೆ ಅದು ಬರವಣಿಗೆಯ […]
ತಳಿರು-ತಿಲ್ಲಾನ: ಅನುರಾಧ ಪಿ. ಸಾಮಗ
“ನೋಡಮ್ಮಾ ಆ ಕರು ಅಷ್ಟು ಹೊತ್ತಿಂದ ಅಲ್ಲಿ ಅಂಬೇ ಅಂತ ಕರೆಯುತ್ತಾ ಇತ್ತು. ನಾನು ಗಿಡಕ್ಕೆ ನೀರು ಹಾಕಲಿಕ್ಕೆ ಹೊರಗೆ ಹೋಗಿದ್ದೆನಲ್ಲಾ, ಬಡಬಡಾಂತ ನಮ್ಮ ಗೇಟಿನ ಹತ್ತಿರ ಬಂತು, “ಏನೂ ಇಲ್ಲ ಮುದ್ದೂ” ಅಂದೆ, ತನ್ನಷ್ಟಕ್ಕೆ ಹೋಯ್ತು. ಎಷ್ಟು ಅರ್ಥ ಆಗುತ್ತೆ ನೋಡಮ್ಮಾ. ಅದೇ ಆ ಕೆಂಪು ಕಣ್ಣಿನ ದನ ಬಂದಿದ್ದರೆ ಮೊಂಡಾಟ ಮಾಡಿಕೊಂಡು ಇನ್ನೂ ಇಲ್ಲೇ ನಿಂತಿರುತ್ತಿತ್ತು ಅಲ್ವಾ?” ಅಂದಳು ಮಗಳು. ಹೌದಲ್ಲವೇ ಅನ್ನಿಸಿತು. ನಮ್ಮ ಏರಿಯಾದಲ್ಲಿ ಒಂದಷ್ಟು ದನ ಕಟ್ಟಿಕೊಂಡು ಹಾಲು ಪೂರೈಸುವವನೊಬ್ಬನಿದ್ದಾನೆ. ಪ್ರತಿದಿನ […]
ನಿಲ್ಲಿಸದಿರು ವನಮಾಲಿ ಕೊಳಲಗಾನವ..: ಅನುರಾಧ ಪಿ. ಸಾಮಗ
ಎಂದಿನಂಥದೇ ಒಂದು ಬೆಳಗು, ಸುಂದರ ಬೆಳಗು. ನಿನ್ನೆಯೊಡಲಿನೆಲ್ಲ ನೋವಿಗೂ ಮುಲಾಮಾಗಬಲ್ಲ ಮುದ್ದಿಸಿ ಎದ್ದೇಳಿಸುವ ಅಮ್ಮನ ನಗುಮುಖದಂಥ, ಅಪ್ಪನ ಮುಖದ ಆಶ್ವಾಸನೆಯಂಥ ಬೆಳ್ಳಂಬೆಳಗು. ಯಮುನೆ ಹರಿಯುತ್ತಿದ್ದಾಳೆ ಮಂಜುಳಗಮನೆಯಾಗಿ; ಒಡಲಲ್ಲಿ ಮಾತ್ರ ಅತ್ಯುತ್ಸುಕತೆಯ ಉಬ್ಬರ, ಅದೇ ಪರಿಚಿತ ಸುಖದ ಭಾವ. ಎಂದಾಗಿತ್ತೋ ಈ ಅನುಭವ! ತಕ್ಷಣಕ್ಕೆ ನೆನಪಾಗದು, ಹೆಣ್ಣೊಡಲಿನ ಭರತವಿಳಿತಗಳೆಲ್ಲವನ್ನೂ ಸುಮ್ಮಸುಮ್ಮನೆ ಹೊರಗೆಡಹಿ ಉಕ್ಕಿ ಹರಿಯಬಿಡಲಾದೀತೇ, ಜನ ಏನಂದಾರು? ಹಾಗಾಗಿ ತೋರಗೊಡದೆ ಹೊರಗವಳದು ಅದೇ ಗಂಭೀರ ಹರಿವು, ಆದರೂ ಒಳಗಿನ ಅಲೆಗಳ ಏರಿಳಿತವದೆಷ್ಟು ಹೊತ್ತು ಬಚ್ಚಿಡಬಲ್ಲಳೋ ಆಕೆಗೇ ಗೊತ್ತಿಲ್ಲ. ದಡದ […]
ಒಳಗೊಂದು ಆರದ ಹಣತೆ ಹಚ್ಚಿಡುವವಳು: ಅನುರಾಧ ಪಿ. ಸಾಮಗ
ಮೊನ್ನೆ ಅಮ್ಮಂದಿರ ದಿನದಂದು ನನ್ನ ಕಂದಮ್ಮ ನನಗೊಂದು ಕಾರ್ಡ್ ಮಾಡಿ ತಂದುಕೊಟ್ಟಾಗ ಕಣ್ಣಲ್ಲಿ ನೀರಾಡಿತ್ತು. ಅವಳಿಗೆ ತೋರಿಸಬಾರದೆಂದು ಕಣ್ತಪ್ಪಿಸಿದರೂ ಬಾಗಿ ಕಣ್ಣೊಳಗಿಣುಕಿ ಖಾತ್ರಿ ಪಡಿಸಿಕೊಂಡವಳೇ, ಇನ್ನೊಂದು ಮುತ್ತಿಕ್ಕಿ "ಐ ಮೀನ್ ಇಟ್ ಅಮ್ಮಾ.." ಅಂದಳು. "ಅಮ್ಮಾ, ನೀನು ಜಗತ್ತಿನ ಎಲ್ಲ ಅಮ್ಮಂದಿರಿಗಿಂತ ಶ್ರೇಷ್ಠ, ನಾನು ನಿನ್ನನ್ನು ತುಂಬಾ ಅಂದರೆ ತುಂಬಾ, ಜಗತ್ತಿನ ಎಲ್ಲದಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ.. " ಇದೇ ಆ ಹಾಳೆಯ ಮೇಲಿದ್ದುದರ ಸಾರಾಂಶ. ಎಲ್ಲ ಮಕ್ಕಳೂ ಬರೆಯುವಂಥದ್ದೇ. ಆದರೆ ಆ ಇನ್ನೊಂದು ಸಾಲು ಓದಿ, ಒಮ್ಮೆ […]
ಜಾತಿವ್ಯವಸ್ಥೆಯ ಕಪ್ಪುಕನ್ನಡಕ: ಅನುರಾಧ ಪಿ. ಸಾಮಗ
ಹಲ ದಿನಗಳ ಹಿಂದೆ ಪ್ರಸಿದ್ಧ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಲೇಖನ ಕಣ್ಸೆಳೆದಿತ್ತು. ಅದು ಪುರಂದರದಾಸರನ್ನು ಕರ್ಣಾಟಕ ಸಂಗೀತದ ಪಿತಾಮಹನೆಂದು ಕರೆಯುವುದರ ವಿರುದ್ಧ ಎತ್ತಿದ ದನಿಯಾಗಿತ್ತು. ಅಲ್ಲಿ ಸಂಗೀತಕ್ಕವರ ಕೊಡುಗೆಯ ಪ್ರಮಾಣವಾಗಲಿ, ಕರ್ಣಾಟಕ ಸಂಗೀತದ ಆ ತಲೆಮಾರುಗಳಿಂದ ಈ ತಲೆಮಾರಿನವರೆಗಿನ ಸಂವಹನದಲ್ಲಿ ಅವರ ಕೆಲಸದ ಪಾತ್ರವೇನು ಎಂಬುದಾಗಲಿ ಲೇಖಕರಿಗೆ ಪ್ರಸ್ತುತವೆನಿಸದೆ, ಪುರಂದರರು ಕೀಳ್ಜಾತಿಯೆನುವ ವ್ಯವಸ್ಥೆಯ ಸದಸ್ಯರಾಗಿರದೆ ಇದ್ದು, ಒಂದು ಸಂಸ್ಕೃತಿಯ ಪಿತಾಮಹನೆನಿಸಿಕೊಂಡದ್ದು ಅವರನ್ನು ಕಾಡಿದಂತಿತ್ತು. ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾದ ಪುರಂದರರಿಗೊಲಿಯದೆ ಕೃಷ್ಣ ಕನಕನಿಗೊಲಿದಿದ್ದ ಎಂಬ ಪದಗಳೇಕೋ ಬಹಳ ಕಾಡುತ್ತಲೇ […]