ಎಲ್ಲಾನು ಮಾಡುವುದು ಹೊಟ್ಟೆಗಾಗಿ .. : ಅನಿತಾ ನರೇಶ್ ಮಂಚಿ
ಕೆಲವು ಪುಸ್ತಕಗಳ ತಲೆಬರಹವೇ ಎತ್ತಿಕೋ ಎಂದು ಕೈ ಚಾಚಿ ಕರೆಯುವ ಮಗುವಿನಂತೆ ಭಾಸವಾಗುತ್ತದೆ. ಬೆಳಗಿನ ಸಮಯದಲ್ಲೇನಾದರೂ ಸುಮ್ಮನೆ ಕಗೆತ್ತಿಕೊಂಡು ಕಣ್ಣಾಡಿಸ ಹೊರಟಿರಾದರೆ ಸಿಕ್ಕಿಬಿದ್ದಿರೆಂದೇ ಅರ್ಥ. ಪುಸ್ತಕ ಎತ್ತಿಕೊಂಡವರು ನನ್ನಂತಹ ಗೃಹಿಣಿಯರಾದರೆ ಅರ್ಧ ತೊಳೆದ ಪಾತ್ರೆಪಗಡಿಗಳು, ವಾಷಿಂಗ್ ಮೆಶೀನಿನಲ್ಲಿ ನೆನೆದು ಒದ್ದೆಯಾಗಿರುವ ಬಣ್ಣ ಬಿಡುವ ಬಟ್ಟೆ, ಸ್ಟವ್ವಲ್ಲಿಟ್ಟ ಹಾಲು, ಮಧ್ಯಾಹ್ನದ ಅಡುಗೆ ಎಲ್ಲದಕ್ಕೂ ಎಳ್ಳು ನೀರು ಬಿತ್ತೆಂದೇ ತಿಳಿಯಿರಿ. ಅಕ್ಷರಗಳ ಗುರುತ್ವಾಕರ್ಷಣೆಯೇ ಹೆಚ್ಚಿ ಕೊನೆಯ ಪುಟ ಬರುವಲ್ಲಿಯವರೆಗೆ ನಿಮ್ಮ ಕೈಯಿಂದ ಕೆಳಗಿಳಿಲಾರವು. ಹಾಗಾಗಬಾರದೆಂಬ ಎಚ್ಚರಿಕೆಯಲ್ಲೇ ಪುಸ್ತಕಗಳನ್ನು ಓದುವ ವೇಳೆ … Read more