ಅನಿ ಹನಿ

ಭಾಷಣದ ಗಮ್ಮತ್ತು: ಅನಿತಾ ನರೇಶ್ ಮಂಚಿ

 ಭಾಷಣ ಎಂಬುದೊಂದು ಕಲೆ. ಕೆಲವರಿಗೆ ಭಾಷಣ ಮಾಡುವುದು ಎಂದರೆ ನೀರು ಕುಡಿದಂತೆ. ಮೈಕ್ ಕಂಡರೆ ಅದೇನೋ ಪ್ರೀತಿ. ಬಹು ಜನ್ಮದಾ ಅನುಬಂಧವೇನೋ ಎಂಬಂತೆ ಹಿಡಿದುಕೊಂಡದ್ದನ್ನು  ಬಿಡಲೇ ಒಲ್ಲರು. ಸಾಧಾರಣವಾಗಿ ರಾಜಕಾರಿಣಿಗಳಿಗೆ ಈ ರೋಗ ಇರುವುದು. ಯಾಕೆಂದರೆ ಅವರು ತಮ್ಮ ಕಾರ್ಯಗಳಿಂದ ಹೆಚ್ಚಾಗಿ ಮಾತಿನ ಬಲದಲ್ಲೇ ಮಂತ್ರಿಗಳಾಗುವಂತಹವರು. ಯಾವುದೇ ಮಾನದಂಡದ ಮುಲಾಜಿಗೂ ಸಿಕ್ಕದೇ ಪದವಿಯನ್ನಾಗಲೀ, ಪದಕಗಳನ್ನಾಗಲೀ,ಪ್ರಶಸ್ತಿಗಳನ್ನಾಗಲೀ ಮಾತಿನ ಬಲದಲ್ಲೇ ಪಡೆಯುವಂತಹವರು. ಅಂತವರು ಮಾತು ನಿಲ್ಲಿಸುವುದಾದರೂ ಹೇಗೆ ಅಲ್ಲವೇ?   ಇವರಷ್ಟೇ ಮೈಕ್ ಪ್ರೀತಿಸುವ ಇನ್ನೊಂದು ಪಂಗಡದ ಜನ ಯಾರೆಂದರೆ  ಕಾರ್ಯಕ್ರಮವನ್ನು […]

ಅನಿ ಹನಿ

ಹೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆವವಳೂ: ಅನಿತಾ ನರೇಶ್ ಮಂಚಿ

ಹೆಸರು ಕೇಳಿ ಮಾರ್ಚ್ ಎಂಟು ಬಂದೇ ಬಿಡ್ತಲ್ಲಾ ಅಂದುಕೊಳ್ಳಬೇಡಿ. ನಾನಂತೂ ಮಹಿಳೆಯರ ದಿನಾಚರಣೆಯನ್ನು ಒಂದು ದಿನಕ್ಕೆ ಆಚರಿಸುವವಳಲ್ಲ. ಎಲ್ಲಾ ದಿನವೂ ನಮ್ಮದೇ ಅಂದ ಮೇಲೆ ಆಚರಣೆಯ ಮಾತೇಕೆ?  ಸಮಯವೇ ಇಲ್ಲದಷ್ಟು ಗಡಿಬಿಡಿಯಲ್ಲಿರುವಾಗ  ಪ್ರೀತಿ ತುಂಬಿದ ಮಾತುಗಳನ್ನು ಕೇಳಿ ಯಾವಾಗೆಲ್ಲ ಮನಸ್ಸು ಉಲ್ಲಾಸವಾಗುತ್ತೋ ಆ ಎಲ್ಲಾ ದಿನಗಳು ನನ್ನವೇ ಅಂದುಕೊಂಡಿದ್ದೇನೆ. ಈಗ ಮೈನ್ ಮುದ್ದಾ ಕ್ಕೆ ಬರೋಣ. ಸುಮ್ಮನೆ ಅಲ್ಲಿಲ್ಲಿ ಅಲೆಯುವಾಟ ಯಾಕೆ ಬೇಕು?  ತಿಂಡಿಗೆ ಏನು ಮಾಡೋದು?  ಇದೊಂದು ಎಲ್ಲಾ ಮನೆಯ ಗೃಹಿಣಿಯರಿಗೆ ಕಾಡುವ ಮಿಲಿಯನ್ ಡಾಲರ್ […]

ಅನಿ ಹನಿ

ಕನ್ನ: ಅನಿತಾ ನರೇಶ್ ಮಂಚಿ

ಇದೊಂದು ವಿದ್ಯೆ ಮನುಷ್ಯರು ಸ್ವತಃ ಕಲಿತದ್ದಾಗಿರಲಿಕ್ಕಿಲ್ಲ. ಯಾಕೆಂದರೆ ಹೆಚ್ಚಾಗಿ ಇಂತಹ ಕೆಲಸಗಳ ಕ್ರೆಡಿಟ್ಟನ್ನು ಇಲಿಗಳೋ, ಹೆಗ್ಗಣಗಳೋ, ಏಡಿಗಳೋ ತೆಗೆದುಕೊಂಡು ಮನುಷ್ಯರ ಗುರುಗಳು ನಾವೇ ಎಂದು ಫೋಸ್ ಕೊಡುತ್ತವೆ. ಅಂತಹ ಅತ್ಯುತ್ತಮ ವಿದ್ಯೆ  ಯಾವುದೆಂದರೆ ’ಕನ್ನ ಹಾಕುವುದು ಅಥವಾ ಕೊರೆಯುವುದು’… ಹಾಗೆ ನೋಡಿದರೆ ಯಾವ ವಿದ್ಯೆಯೂ ಮನುಷ್ಯನ ಸ್ವಂತದ್ದಲ್ಲವೇ ಅಲ್ಲ ಬಿಡಿ. ’ಎಲ್ಲವಂ ಬಲ್ಲಿದರಿಂದ ಕೇಳಿ, ನೋಡಿ, ಮಾಡಿ’ಯೇ ಕಲಿತದ್ದು. ಆದರೆ ಆ ವಿದ್ಯೆಗಳಲ್ಲಿ ಮನುಷ್ಯ ಎಷ್ಟು ಪಳಗಿಬಿಡುತ್ತಾನೆ ಎಂದರೆ ಕಲಿಸಿದ ಗುರುವೇ ತಲೆಬಾಗಿ ಪ್ರಣಾಮ ಮಾಡುವಷ್ಟು. ಇರಲಿ […]

ಅನಿ ಹನಿ

ಗೆಳೆತನದ ಸುವಿಶಾಲ ಆಲದಡಿ..:ಅನಿತಾ ನರೇಶ್ ಮಂಚಿ.

  ಜೀವನದಲ್ಲಿ  ನನ್ನರಿವಿಗೆ ಬಂದಂತೆ ಮೊಟ್ಟ ಮೊದಲಿಗೆ ನನಗೊಂದು ಪ್ರಮೋಶನ್ ಸಿಕ್ಕಿತ್ತು. ಅದೂ ನಾವು ಅ ಊರಿಗೆ ಕಾಲಿಟ್ಟ ಕೆಲವೇ ಸಮಯದಲ್ಲಿ.. ಅಂಗನವಾಡಿಗೆ ಹೋಗಲಿಕ್ಕೆ ಶುರು ಮಾಡಿ ತಿಂಗಳಾಗಬೇಕಾದರೆ  ಡೈರೆಕ್ಟ್ ಆಗಿ ಒಂದನೇ ತರಗತಿಗೆ..  ಒಂದನೇ ತರಗತಿಗೆ  ವಯಸ್ಸು ಇಷ್ಟೇ ಆಗಿರಬೇಕೆಂಬ ಸರ್ಕಾರಿ ನಿಯಮವೇನೋ ಇದ್ದರೂ ಮಕ್ಕಳು ಮನೆಯಲ್ಲಿದ್ದರೆ ಅಪ್ಪ ಅಮ್ಮನಿಗೆ ಬೇಗನೇ ವಯಸ್ಸಿಗೆ ಬಂದಂತೆ ಕಾಣಿಸಲು ಶುರು ಆಗ್ತಾರಲ್ಲ ಅದಕ್ಕೇನು ಮಾಡೋದು.. ಹಾಗೆ ನಾನೂ ನನ್ನ ಅವಳಿ ಅಣ್ಣನೂ ಒಂದನೇ ತರಗತಿಯೊಳಗೆ ಉದ್ದದ ಒಂದೇ ಕೈ […]

ಅನಿ ಹನಿ

ಭಯದ ಬೆನ್ನೇರಿ ಬಂತು: ಅನಿತಾ ನರೇಶ್ ಮಂಚಿ

’ಹತ್ತು ಗಂಟೆಗೆ ರೆಡಿಯಾಗಬೇಕು ದಾರಿಯಲ್ಲಿ ಹೋಗ್ತಾ ಕೇಶು ಮಾಮಾನನ್ನು ಕರೆದುಕೊಂಡು  ಮದುವೆ ಮನೆಗೆ ಹೋಗೋದು.. ನೀನಿನ್ನು ನಿಧಾನ ಮಾಡ್ಬೇಡ’ ಅನ್ನುವ ಮಾತನ್ನು ನೂರು ಸಲ ಕೇಳಿ ಆಗಿತ್ತು ಇವರ  ಬಾಯಲ್ಲಿ. ಸರಿ ಇನ್ನು ನನ್ನಿಂದ ತಡ ಆಯ್ತು ಅನ್ನೋದು ಬೇಡ ಅನ್ನುವ ಸಿಟ್ಟಿನಲ್ಲಿ ಸ್ವಲ್ಪ ಬೇಗವೇ ಹೊರಟು ಬಿಟ್ಟಿದ್ದೆ.  ’ಹೇಗೂ ಹೊರಟಾಗಿದೆಯಲ್ಲ.. ಇನ್ನು ಮನೆಯೊಳಗೆ ಕೂತೇನು ಮಾಡುವುದು. ಹೋಗಿ ಕೇಶು ಮಾಮ ಬರ್ತೇನೆ ಅಂತ ಹೇಳಿದ ಜಾಗದಲ್ಲೊ ಕಾಯೋಣ’ ಅಂದರಿವರು. ನನಗೂ ಅದೇ ಸರಿ ಅನ್ನಿಸಿ ಕಾರೇರಿದೆ.  […]

ಅನಿ ಹನಿ

ಕೊಲೆ: ಅನಿತಾ ನರೇಶ್ ಮಂಚಿ

ಇಲ್ಲಾ ಸಾರ್ ಅಲ್ಲಿಂದ್ಲೇ  ಕೇಳಿದ್ದು ಹೆಣ್ಣು ಮಗಳ  ಕಿರುಚಾಟ..  ಬೇಗ ಹೋಗೋಣ ನಡೀರಿ ಸಾರ್..  ಸರಿಯಾಗಿ ಕೇಳಿಸಿಕೊಂಡ್ರೇನ್ರೀ? ದಿನ ಬೆಳಗಾದ್ರೆ ಕೇಳ್ಸೋ ಗಂಡ ಹೆಂಡ್ತಿ ಜಗಳ ಅಲ್ಲ ತಾನೇ?  ಸಾರ್.. ಇದು ನಾನು ಯಾವತ್ತೂ ಕೆಲ್ಸ ಮುಗ್ಸಿ ಮನೆ ಕಡೆ ಹೋಗೋ ಶಾರ್‍ಟ್ ಕಟ್. ಯಾವತ್ತೂ ಇಂತಹ ಕಿರುಚಾಟ ಕೇಳೇ ಇಲ್ಲ ಸಾರ್.. ಅದೂ ಅಲ್ಲದೇ ಇದು ತುಂಬಾ ಪಾಶ್ ಅಪಾರ್ಟ್ ಮೆಂಟ್..ಇನ್ನೂ ಹೆಚ್ಚು ಫ್ಯಾಮಿಲಿ ಬಂದಿಲ್ಲಾ ಸಾರ್ ಇಲ್ಲಿ.. ಹೊಸಾದು.  ಇಲ್ಲಿ ಮಾತಾಡೋದೇ ಕೇಳ್ಸಲ್ಲ ಅಂದ್ಮೇಲೆ […]

ಅನಿ ಹನಿ

ಊಟಕ್ಕೇನು?: ಅನಿತಾ ನರೇಶ್ ಮಂಚಿ

’ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?’ ಅನ್ನೋ ಪದ್ಯ ಎಲ್ಲರಿಗೂ ತಿಳಿದಿದೆ. ಅದರಲ್ಲಿ ನಾಯಿ ಮರಿಯನ್ನು ’ನಾಯಿ ಮರಿ ನಿನಗೆ ತಿಂಡಿ ಏಕೆ ಬೇಕು’  ಎಂದು ಕೇಳಿದಾಗ ಅದು ’ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು’ ಎಂಬ ಉತ್ತರ ನೀಡುತ್ತದೆ ಅಲ್ವಾ..! ಅಂದರೆ ನಾಯಿ ಮರಿಗೂ ಆಹಾರ ಎಂದರೆ  ಹೊಟ್ಟೆ ತುಂಬಲು, ಶರೀರವನ್ನು ಪೋಷಿಸಲು ಇರುವಂತಹುದು ಎಂದು ತಿಳಿದಿದೆ ಎಂದಾಯಿತಲ್ಲ.  ಆದರೆ ನನ್ನಂತ ಹುಲು ಮಾನವಳ ದೃಷ್ಟಿಯಲ್ಲಿ ತಿಂಡಿ ಎಂಬುದು ’ಪ್ರೆಸ್ಟಿಜ್’ ಪ್ರಶ್ನೆಯಾಗಿದ್ದ ಕಾಲವೊಂದಿತ್ತು.  ಆಗಷ್ಟೇ ಹೈಸ್ಕೂಲಿಗೆ […]

ಅನಿ ಹನಿ

ಸಂತೆಯೊಳಗೊಂದು ಸುತ್ತು: ಅನಿತಾ ನರೇಶ್ ಮಂಚಿ

ಸಂತೆ ಅಂದರೆ ಅದೇನೋ ಆಕರ್ಷಣೆ. ನಮಗೆ ಬೇಕಿರಲಿ ಬೇಡದೇ ಇರಲಿ ಸುಮ್ಮನೆ ಸಂತೆ ಸುತ್ತುವುದಿದೆಯಲ್ಲಾ ಅದರಷ್ಟು ಆನಂದ ನೀಡುವ ಕೆಲಸ ಇನ್ನೊಂದಿಲ್ಲ. ಅದೂ ಊರಲ್ಲೇ ನಡೆಯುವ ಉತ್ಸವಕ್ಕೆ ಸೇರುವ ಅಪಾರ ಜನಸ್ತೋಮದ ನಡುವೆ ಕಣ್ಮನ ಸೆಳೆಯುವ ವಸ್ತು ತಿನಿಸುಗಳನ್ನು ಮಾರುವ ಸಂತೆಯ ಅಂಗಡಿಗಳು ಅಂದ ಮೇಲೆ ದೇಹವು ಮನೇಯೊಳಗೇ ನಿಲ್ಲಲು ಅದೇನೂ ಕೊರಡಲ್ಲ ತಾನೆ?! ಚಪ್ಪಲಿ ಮೆಟ್ಟಿಕೊಂಡು ಹೊರಟೇ ಬಿಡುತ್ತದೆ.  ಸಂತೆಯ ಗಮ್ಮತ್ತು ಏನಿದ್ದರೂ ಹಗಲು ಸರಿದು ಇರುಳಿನ ಅಧಿಪತ್ಯ ತೊಡಗಿದಾಗಲೇ  ಚೆಂದ.  ಬಗೆ ಬಗೆಯ ದೀಪಾಲಂಕಾರದಲ್ಲಿ […]

ಅನಿ ಹನಿ

ಅಪ್ಪಾ ಐ ಲವ್ ಯೂ ..: ಅನಿತಾ ನರೇಶ್ ಮಂಚಿ

ಟಿ ವಿಯಲ್ಲಿ ಒಂದು ಇಂಟರ್ ವ್ಯೂ ನೋಡುತ್ತಿದ್ದೆ. ಅದರಲ್ಲಿ ಅಪ್ಪ ಮತ್ತು ಮಗಳ ಸಂದರ್ಶನ ಪ್ರಸಾರವಾಗುತ್ತಿತ್ತು. ಸಂದರ್ಶಕರು ಮಗಳೊಡನೆ ನೇರವಾಗಿ ’ನೀವು ಎಂದಾದರೂ ಅಪ್ಪನಿಗೆ ತಿಳಿಯದಂತೆ ಏನಾದರೂ ತರಲೆ ಮಾಡಿದ್ದು ಇದೆಯೇ? ಅದನ್ನಿಲ್ಲಿ ಹಂಚಿಕೊಳ್ಳಲು ಇಷ್ಟ ಪಡ್ತೀರಾ’ ಎಂದು ಕೇಳಿದರು. ಆಕೆ ನಗುತ್ತಾ ’ ಇಲ್ಲ ಅನ್ಸುತ್ತೆ.. ನನ್ನೆಲ್ಲಾ ತಂಟೆ ತರಲೆಗಳಿಗೆ ನಮ್ಮಪ್ಪನೇ ಸಾಥ್..  ನಾವಿಬ್ಬರೂ ಅಪ್ಪ ಮಗಳು ಎನ್ನುವುದಕ್ಕಿಂತ ಫ್ರೆಂಡ್ಸ್ ಹೆಚ್ಚು’ ಎಂದಳು. ಕಾಲ ಎಲ್ಲಿಂದ ಎಲ್ಲಿಗೆ ತಲುಪಿತು ಎಂದು ಒಂದು ಕ್ಷಣ ಯೋಚಿಸಿದೆ.  ಅಪ್ಪ […]

ಅನಿ ಹನಿ

ಹೋಳಿಗೆಯೂ … ಹಳೇ ಪೇಪರ್ರೂ ..: ಅನಿತಾ ನರೇಶ್ ಮಂಚಿ

ಚಿಕ್ಕಮ್ಮ ಬಂದು ಗುಟ್ಟಿನಲ್ಲಿ ಎಂಬಂತೆ ನನ್ನನ್ನು ಕರೆದು ಹೋಳಿಗೆ ಕಟ್ಟು ಕಟ್ಟಿಡ್ತೀಯಾ.. ಎಂದಳು. ಚಿಕ್ಕಪ್ಪನ ಕಡೆಗೆ ನೋಡಿದೆ. ಐವತ್ತು, ಮತ್ತೊಂದು ಹತ್ತು  ಎಂಬಂತೆ ಸನ್ನೆ ಮಾಡಿದರು.  ಸರಿ .. ನಮ್ಮ ಬಳಗ ಸಿದ್ದವಾಯ್ತು. ಈ ರಹಸ್ಯ ಕಾರ್ಯಕ್ಕೆಂದೇ ಒಂದು ಪುಟ್ಟ ಕೋಣೆಯಿತ್ತು. ನಾವಲ್ಲಿಗೆ ಸೇರಿ  ಕಾಲು ಚಾಚಿ ಕುಳಿತುಕೊಂಡೆವು.  ಅಲ್ಲೇ ಇದ್ದ ಚಿಕ್ಕಪ್ಪನ ಮಗ ನಮ್ಮ ಸಹಾಯಕ್ಕೆ ಸಿದ್ಧನಾದ.  ಪೇಪರ್ , ಪ್ಲಾಸ್ಟಿಕ್ ಕವರ್, ಹೋಳಿಗೆಯ ಗೆರಸೆ ತಂದಿಡು ಎಂದೆವು.  ಎಲ್ಲವೂ ಒಂದೊಂದಾಗಿ ನಮ್ಮೆದುರು ಪ್ರತ್ಯಕ್ಷವಾಯಿತು.   […]

ಅನಿ ಹನಿ

ಒಂದು ಬಸ್ಸಿನ ಕಥೆ: ಅನಿತಾ ನರೇಶ್ ಮಂಚಿ ಅಂಕಣ

ಆಗಷ್ಟೇ ಕಣ್ಣಿಗೆ ನಿದ್ದೆ ಹಿಡಿಯುತ್ತಿತ್ತು.  ಹತ್ತಿರದ ಮಂಚದಲ್ಲಿ ಮಲಗಿದ್ದ ಗೆಳತಿ ’ಗಂಟೆ ಎಷ್ಟಾಯಿತೇ’ ಎಂದಳು. ಪಕ್ಕದಲ್ಲಿದ್ದ ಟಾರ್ಚನ್ನು ಹೊತ್ತಿಸಿ ’ಹತ್ತೂವರೆ’ ಎಂದೆ.  ’ನಾಳೆ ಬೇಗ ಎದ್ದು ಬಸ್ಸಿಗೆ ಹೋಗ್ಬೇಕಲ್ಲ .. ಬೇಗ ಮಲಗು’ ಎಂದಳು.  ಸಿಟ್ಟು ಒದ್ದುಕೊಂಡು ಬಂತು. ಮಲಗಿದ್ದವಳನ್ನೇ ಏಳಿಸಿ ಬೇಗ ಮಲಗು ಅನ್ನುತ್ತಾಳಲ್ಲಾ ಇವಳು ಅಂತ. ಮಾತಿಗೆ ಮಾತು ಬೆಳೆಸಿದರೆ ಇನ್ನೂ ಬರಬೇಕಿದ್ದ ನಿದ್ದೆಯೂ ಹಾರಿ ಹೋದರೆ ಎಂದು ಹೆದರಿ ಮತ್ತೆ ಕಣ್ಣಿಗೆ ಕಣ್ಣು ಕೂಡಿಸಿದೆ.  ಬೇಕಾದ ಕೂಡಲೇ ಓಡಿ ಬಂದು ಆಲಂಗಿಸಲು ಅದೇನು […]

ಅನಿ ಹನಿ

ಹುಡುಕಾಟ: ಅನಿತಾ ನರೇಶ್ ಮಂಚಿ ಅಂಕಣ

ನೈಲ್ ಕಟ್ಟರ್ ಎಲ್ಲಿದೇ ..ಎಂದು  ಮೂರನೇ ಸಾರಿ ನಮ್ಮ ಮನೆಯ ಲಾಯರ್ ಸಾಹೇಬ್ರ ಕಂಠ ಮೊಳಗಿತು. ಈ ಸಲವೂ ಹುಡುಕಿ ಕೊಡದಿದ್ರೆ ಹೊಂಬಣ್ಣದ ಮೈಯ ನವಿಲು ಬಣ್ಣದ ಬಾರ್ಡರಿನ ಸೀರೆಯ ಅಹವಾಲು ಡಿಸ್ ಮಿಸ್ ಆಗುವ ಭಯದಲ್ಲಿ ನಿಲ್ಲೀ ಹುಡುಕಿ ಕೊಡ್ತೀನಿ ಅಂದೆ.. ಸತ್ಯ ಹರಿಶ್ಚಂದ್ರನ ಆಣೆಯಾಗಿಯೂ ಅದು ಎಲ್ಲಿದೆ ಅಂತ ನನಗೆ ತಿಳಿದಿರಲಿಲ್ಲ. ನಮ್ಮ ಮನೆಯಲ್ಲಿರುವ ಸ್ಥಿರ ವಸ್ತುಗಳಿಗೂ ಕೈ ಕಾಲು ಬಂದು ಅವು ಚರ ವಸ್ತುಗಳಾಗಿ ಸಿಕ್ಕ ಸಿಕ್ಕ ಕಡೆ ಹೋಗಿ ಸಿಗಬೇಕಾದಾಗ ಸಿಗದೇ […]

ಅನಿ ಹನಿ

ಮೂಕಪ್ರೇಮ:ಅನಿತಾ ನರೇಶ್ ಮಂಚಿ ಅಂಕಣ

ಮನುಷ್ಯ ಕೂಡಾ ಪ್ರಾಣಿಗಳ ಕೆಟಗರಿಗೆ ಸೇರುತ್ತಾನಾದರೂ ತಾನು ಅವರಿಂದ ಮೇಲೆ ಎಂಬ ಗರಿಯನ್ನು ತಲೆಯ ಮೇಲೆ ಇಟ್ಟುಕೊಂಡೇ ಹುಟ್ಟಿ ಬರುತ್ತಾನೆ. ತಾನು ಎಲ್ಲಾ ಪ್ರಾಣಿಗಳನ್ನು ನನ್ನ ತಾಳಕ್ಕೆ ಕುಣಿಸಬಲ್ಲೆ ಎಂಬ ಹಮ್ಮು ಅವನದ್ದು. ಹಲವು ಬಾರಿ ಇದು ಸತ್ಯ ಎನ್ನಿಸಿದರೂ ಅವುಗಳೂ ಕೂಡಾ  ಬುದ್ಧಿವಂತಿಕೆಯಲ್ಲಿ ನಮ್ಮಿಂದ ಕಡಿಮೆಯಿಲ್ಲ ಎಂಬುದೇ ಪರಮಸತ್ಯ. ಇದಕ್ಕೆ ಹಲವು ನಿದರ್ಶನಗಳು ಅವುಗಳ ಒಡನಾಟವನ್ನಿಟ್ಟುಕೊಂಡವರ ನಿತ್ಯದ ಬದುಕಿನಲ್ಲಿ ಸಿಕ್ಕೇ ಸಿಗುತ್ತವೆ. ಇದರಲ್ಲಿ ಕೆಲವೊಂದು ನಗು ತರಿಸಿದರೆ ಇನ್ನು ಕೆಲವು ಪೇಚಿಗೆ ಸಿಕ್ಕಿಸುತ್ತವೆ.  ನಮ್ಮ ಮನೆಯ […]

ಅನಿ ಹನಿ

ದಂತಕತೆ: ಅನಿತಾ ನರೇಶ್ ಮಂಚಿ

ಈಗೊಂದೆರಡು ದಿನಗಳಿಂದ ಯಾರನ್ನು ಕಂಡರೂ ಕೆಂಡದಂತಹ ಕೋಪ. ಅದರಲ್ಲೂ ಸುಮ್ಮನೆ ಹಲ್ಲು ಕಿಸಿದುಕೊಂಡು ನಗ್ತಾ ಇರ್ತಾರಲ್ಲ ಅಂತವರನ್ನು ಕಂಡರೆ ಅವರ ಅಷ್ಟೂ ಹಲ್ಲುಗಳನ್ನು ಕೆಳಗುದುರಿಸಿ ಅವರ ಬೊಚ್ಚು ಬಾಯಿ ಪೆಚ್ಚಾಗುವಂತೆ ಮಾಡಬೇಕೆಂಬಾಸೆ.. ಇದ್ಯಾಕೋ  ’ಏ ಹಾತ್ ಮುಜೆ ದೇದೋ ಠಾಕುರ್’ ಎಂದು ಅಬ್ಬರಿಸುವ ಗಬ್ಬರ್ ಸಿಂಗನನ್ನು ನಿಮಗೆ ನೆನಪಿಸಿದರೆ ಅದಕ್ಕೆ ನಾನಲ್ಲ ಹೊಣೆ. ನನ್ನ ಹಲ್ಲೇ ಹೊಣೆ.  ಹೌದು .. ಇಷ್ಟಕ್ಕೂ ಮೂಲ ಕಾರಣ ನನ್ನ ಹಲ್ಲುಗಳೇ. ಮಕ್ಕಳಿಗೆ ಮೊದಲು ಮೂಡುವ ಹಲ್ಲುಗಳನ್ನು ಹಾಲು ಹಲ್ಲುಗಳೆಂದು ಅದ್ಯಾರೋ […]

ಅನಿ ಹನಿ

ಮೊದಲು ಮಾನವನಾಗು: ಅನಿತಾ ನರೇಶ್ ಮಂಚಿ

ಶಾಲೆಯಿಂದ ಫೋನ್ ಬಂದಿತ್ತು. ಇವತ್ತು ಶಾಲಾವಾಹನ ಹಾಳಾದ ಕಾರಣ ಸರ್ವಿಸ್ ಬಸ್ಸಿನಲ್ಲೇ ಮಕ್ಕಳನ್ನು ಕಳಿಸ್ತಾ ಇದ್ದೀವಿ.. ಟಕ್ಕನೆ ಫೋನ್ ಕಟ್ಟಾಯಿತು.  ಅಯ್ಯೋ.. ಪಾಪ ಸಣ್ಣವನು.. ಸರ್ವಿಸ್ ಬಸ್ಸಿನಲ್ಲಿ ಹೇಗೆ ಬರ್ತಾನೆ ಎಂಬ ಆತಂಕ ನನ್ನದು. ನಾನೇ ಹೋಗಿ ಕರೆತರಬಹುದು ಆದರೆ ಅಷ್ಟರಲ್ಲೇ ಅವನು ಬೇರೆ ಬಸ್ಸಿನಲ್ಲಿ ಹೊರಟು ಬಿಟ್ಟಿದ್ದರೆ..  ಶಾಲೆಗೆ ಫೋನ್ ಮಾಡಿ ವಿಚಾರಿಸೋಣ ಅಂತ ಡಯಲ್ ಮಾಡಿದರೆ ಅದು ಎಂಗೇಜ್ ಸ್ವರ ಬರುತ್ತಿತ್ತು. ಎಲ್ಲಾ ಮಕ್ಕಳ ಮನೆಗಳಿಗೂ ಸುದ್ದಿ ಮುಟ್ಟಿಸುವ ಅವಸರದಲ್ಲಿ ಅವರಿದ್ದರೇನೋ..  ಮನೆಯಿಂದ ಶಾಲೆಗೆ […]

ಅನಿ ಹನಿ

ಗಂಧದ ಘಮ..: ಅನಿತಾ ನರೇಶ್ ಮಂಚಿ

ತಲೆಬರಹ ನೋಡಿ ಇದರಲ್ಲೇನಿದೆ ವಿಶೇಷ, ’ತನ್ನನ್ನೇ ತೇದು ಪರಿಮಳವನ್ನು ಲೋಕಕ್ಕೆ ಕೊಡುವ ತ್ಯಾಗಜೀವಿ ತಾನೇ ಗಂಧ’ ಅಂತೀರಲ್ವಾ..ಹೌದು ಸ್ವಾಮೀ ನಾನು ಅದನ್ನು ಅಲ್ಲ ಅನ್ನಲಿಲ್ಲ.. ಆದ್ರೆ ಗಂಧ ತನ್ನನ್ನು ತೇಯಬೇಕಾದರೆ ಎಷ್ಟು ಜೀವ ತೇಯುತ್ತದೆ ಅಂತಾದ್ರು ನಿಮಗೆ ಗೊತ್ತಾ.. ಅದೊಂದು ದೊಡ್ಡ ಕಥೆ.. ಹೇಳ್ತೀನಿ ಕೇಳಿ..   ನನ್ನಣ್ಣನ ಮನೆ ಅಂದರೆ ಅದೊಂದು ಸಸ್ಯ ಭಂಡಾರ. ನಮ್ಮೂರಾದ ಕರಾವಳಿಯಲ್ಲಿ ಬೆಳೆಯದ ಹಲವು ಸಸ್ಯಸಂಕುಲಗಳು ಮಲೆನಾಡಿನ ಅವನ ತೋಟದಲ್ಲಿ ನಳನಳಿಸುತ್ತಿರುತ್ತದೆ. ನಾನೋ ’ಕಂಡದ್ದೆಲ್ಲಾ ಬೇಕು…… ಭಟ್ಟನಿಗೆ’ ಅನ್ನೋ ಜಾತಿ. […]

ಅನಿ ಹನಿ

ಅಡುಗೆ ಮನೆ ಪುರಾಣ: ಅನಿತಾ ನರೇಶ್ ಮಂಚಿ

ಅಡುಗೆ ಮನೆ ಆದ್ರೇನು ಹೂವಿನ ಕುಂಡ ಇಟ್ರೆ ಬೇಡ ಅನ್ನುತ್ತದೆಯೇ? ಒಂದು ಕಿಟಕಿ ಹೂವಿನ ಕುಂಡದಿಂದ ಅಲಂಕೃತಗೊಂಡಿದ್ದರೆ ಇನ್ನೊಂದು ಬದಿಯ ಕಿಟಕಿ ಕರೆಂಟ್ ಹೋದರೆ ಕೈಗೆ ಪಕ್ಕನೆ ಸಿಗಬೇಕಾಗಿರುವ ಎಣ್ಣೆಯ ಕಾಲು ದೀಪದಿಂದ ಕಂಗೊಳಿಸುತ್ತಿತ್ತು. ಸ್ಟವ್ವಿನ  ಒಂದು ಪಕ್ಕದ ಶೆಲ್ಫಿನಲ್ಲಿ ಅಡುಗೆಗೆ ಅಗತ್ಯವಾದ ಸಾಂಬಾರ ಪದಾರ್ಥಗಳು,ಇನ್ನೊಂದು ಕಡೆ ಸೌಟಿನಿಂದ ಹಿಡಿದು ಚಮಚದವರೆಗೆ ಚಾಕುವಿನಿಂದ ಹಿಡಿದು ಕತ್ತಿಯವರೆಗೆ ಸಿಗುವಂತಿತ್ತು. ಕೆಳಭಾಗದ ನಾಲ್ಕು ಕಪಾಟುಗಳಲ್ಲಿ ಈಳಿಗೆ ಮಣೆ ಮೆಟ್ಟುಗತ್ತಿ, ಪಾತ್ರೆಗಳು, ಬೇಗ ಹಾಳಾಗದಿರುವ ತರಕಾರಿಗಳಾದ ಆಲೂಗಡ್ಡೆ ಈರುಳ್ಳಿಗಳು ಆಟವಾಡುತ್ತಿದ್ದವು. ವರ್ಷಪೂರ್ತಿಯ […]

ಅನಿ ಹನಿ

ನೋವೊಂದು ಬಳಿ ಬಂದು .. : ಅನಿತಾ ನರೇಶ್ ಮಂಚಿ

ದೊಡ್ಡಪ್ಪನ ಮನೆಯೊಳಗೆ ಕರ್ಫ್ಯೂ ವಿಧಿಸಿದಂತಿದ್ದ ವಾತಾವರಣ. ದೊಡ್ಡಮ್ಮ ಮತ್ತು ಅತ್ತಿಗೆಯರ ಸಂಭಾಷಣೆಯೆಲ್ಲಾ ಸನ್ನೆಯಲ್ಲೇ ಸಾಗುತ್ತಿತ್ತೇ ವಿನಃ ಸ್ವರ ಹೊರ ಬರುತ್ತಿರಲಿಲ್ಲ. ಅಣ್ಣಂದಿರು ಅಲ್ಲಲ್ಲಿ ತಮ್ಮ ಕೆಲಸದಲ್ಲಿ ತೊಡಗಿದಂತೆ ಕಂಡರೂ   ಅವರ ಗಮನವೆಲ್ಲಾ ಈಸೀಚೇರಿನಲ್ಲಿ ಕುಳಿತ ದೊಡ್ಡಪ್ಪನ ಕಡೆಯೇ ಇತ್ತು. ಅವರೊ ಇತ್ತಲಿನ ಪರಿವೆಯಿಲ್ಲದೆ  ಕೈಯನ್ನು ಮೇಲೆತ್ತಲು ಪ್ರಯತ್ನಿಸುತ್ತಾ ಎತ್ತಲಾಗದೇ ಕೆಳಗೆ ಹಾಕುವುದು ಮಾಡುತ್ತ ಕುಳಿತಿದ್ದರು. ಕಣ್ಣಿನಲ್ಲಿ ಶೂನ್ಯ ಭಾವ.  ಮನೆಯೆಲ್ಲಾ ಮೌನದಲ್ಲಿ ಮುಳುಗಿ ಯಾವುದೋ ಶೋಕವನ್ನು ನಿರೀಕ್ಷಿಸುವಂತೆ ಇತ್ತು. ನನ್ನ ಆಗಮನ ಎಲ್ಲರ ಮೊಗದಲ್ಲೂ ನಗೆರೇಖೆಯನ್ನು […]

ಅನಿ ಹನಿ

ಒಗ್ಗರಣೆ: ಅನಿತಾ ನರೇಶ್ ಮಂಚಿ

ಮಿಕ್ಸಿಯೊಳಗೆ ಅಕ್ಕಿ ಮತ್ತು ಉದ್ದಿನಬೇಳೆಗಳು ಮರುದಿನದ ಇಡ್ಲಿಗಾಗಿ ಯಾವುದೇ ಡಯಟ್ ಮಾಡದೇ ಸಣ್ಣಗಾಗುತ್ತಿದ್ದವು. ನನ್ನ ಮಿಕ್ಸಿಯೋ .. ಹೊರಗೆ ಸೂಪರ್ ಸೈಲೆಂಟ್ ಎಂದು  ಕೆಂಪು ಪೈಂಟಿನಲ್ಲಿ ಬರೆಯಲ್ಪಟ್ಟದ್ದು. ಅದು ಎಂತಹ ಮೌನಿ ಎಂದರೆ ಪಕ್ಕದಲ್ಲಿ ಬಾಂಬ್ ಸ್ಪೋಟವಾದರೂ ಅದರ ಸದ್ದಿಗೆ ಕೇಳುತ್ತಿರಲಿಲ್ಲ. ಇದರಿಂದಾಗಿ ನೂರು ಮೀಟರ್ ದೂರದಲ್ಲಿದ್ದ ಪಕ್ಕದ ಮನೆಯವರಿಗೂ ಬೆಳಗ್ಗಿನ ತಿಂಡಿಗೆ ನಾನು ಚಟ್ನಿ ಮಾಡದಿದ್ದರೆ ತಿಳಿದುಬಿಡುತ್ತಿತ್ತು. ಇದರ ಸದ್ದಿಗೆ ಪ್ರಪಂಚದ ಉಳಿದೆಲ್ಲಾ ಸದ್ದುಗಳು ಮೌನವಾಗಿ ಹೊರಗಿನಿಂದ ಇವರು ಒಂದು ಗ್ಲಾಸ್ ಕಾಫೀ ಎನ್ನುವುದೋ , […]

ಅನಿ ಹನಿ

ಟೇಮು ಅಂದ್ರೆ ಟೇಮು: ಅನಿತಾ ನರೇಶ್ ಮಂಚಿ

ಒಂದು ಕೈಯಲ್ಲಿ ಕೋಕೋಕೋಲಾ ಮತ್ತು ರಿಮೋಟ್ ಕಂಟ್ರೋಲರನ್ನು ಬ್ಯಾಲೆನ್ಸ್ ಮಾಡುತ್ತಾ  ಇನ್ನೊಂದು ಕೈಯಲ್ಲಿ ಅಂಗೈ ತುಂಬುವಷ್ಟು ಚಿಪ್ಸನ್ನು ಹಿಡಿದುಕೊಂಡು ನೆಟ್ಟ ಕಣ್ಣಿನಲ್ಲಿ ಟಿ ವಿ ಯಲ್ಲಿ ತೋರಿಸುತ್ತಿದ್ದ ಫಿಟ್ ನೆಸ್ ಕಾರ್ಯಕ್ರಮವನ್ನು ಸೋಫಾದ ಮೇಲೆ ಮಲಗು ಭಂಗಿಯಲ್ಲಿ ಕುಳಿತು ವೀಕ್ಷಿಸುತ್ತಿರುವ ಸಮಯದಲ್ಲಿ  ’ಅವ್ವಾ ಲಂಗರು ಕೊಡಿ’ ಅಂದಳು ನಮ್ಮ ಮನೆಯ ಹೊಸ  ಸಹಾಯಕಿ. ಇದ್ದಕ್ಕಿದ್ದ ಹಾಗೆ ಕೇಳಿದ  ಅವಳ ಮಾತು ಕಿವಿಯೊಳಗೆ ಹೊಕ್ಕರೂ ಅರ್ಥವಾಗದೇ ಕಣ್ಣುಗಳನ್ನು ಟಿ ವಿ ಯ ಕಡೆಯಿಂದ ಬಲವಂತವಾಗಿ ತಿರುಗಿಸಿ ಅತ್ತ ಕಡೆ […]