ಪಂಜು ಕಾವ್ಯಧಾರೆ

ಬೆನ್ನುಬಿದ್ದ ಕರಾಳರಾತ್ರಿಯ ದಿನಚರಿ ಅಂದು ಮಧ್ಯಾಹ್ನದ ಕಡು ಬಿಸಿಲಿನಲ್ಲಿ ಹಜ್ಜೆಗಳ ಪಕ್ಕ ಹೆಜ್ಜೆಗಳನ್ನು ಇರಿಸಿ ಎಲ್ಲ ಪ್ರೇಮಿಗಳ ಉದಾಹರಣೆಯೊಂದಿಗೆ ಊರ ಮಧ್ಯ ಹೋಗುತ್ತಿದ್ದರೆ; ಯಾರೋ ಬೊಗಳಿದಂತೆ ಅಂಜುವ ಮಾತಿಲ್ಲ, ಆದರೆ ಸ್ವಲ್ಪ ಕಸಿವಿಸಿ ಲೋಕದಲ್ಲಿ ನಾಯಿಗಳು ಬೊಗಳುವದು ಸಹಜ ಅಂಜುವದೇಕೆ…? ಮುಂದೆ ಮುಂದೆ ಹೆಜ್ಜೆ ಹಾಕಿ, ಹಿಂದೆ ಹಿಂದೆ ನೋಡಿದಷ್ಟು ಗಾಢವಾದ ಭಯವು ಬೆನ್ನು ಏರಿ ಕುಳಿತಿದೆ ಪಕ್ಕದಲ್ಲಿ ಪ್ರೇಮಜ್ವಾಲೆ ಉರಿಯುವಾಗ ಯಾವ ಭಯವು ಎಷ್ಟು ಗಟ್ಟಿಗೊಳ್ಳುವದು ಕಗ್ಗತ್ತಲು ಆವರಿಸಿದ ಈ ವರ್ತುಲದಲ್ಲಿ ಎಲ್ಲವೂ ಅಡಕವಾಗಿವೆ ಸಾಕ್ಷೀಕರಿಸಲು … Read more

ಕಲ್ಲರಳಿ… ಹೂವಾಗಿ…: ಪ್ರಸನ್ನ ಆಡುವಳ್ಳಿ

“ಕಲ್ಲರಳಿ ಹೂವಾಗಿ, ಎಲ್ಲರಿ ಗೂ ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ” ಸರ್ವಜ್ಞನಿಂದ ಹಂಸಲೇಖಾವರೆಗೂ ಕಲ್ಲರಳಿ ಹೂವಾಗುವ ರೂಪಕ ಕನ್ನಡದ ಕವಿಗಳನ್ನು ಸದಾ ಕಾಡಿದಂತಿದೆ. ಸುಣ್ಣದ ಕಲ್ಲುಗಳು ನೀರಿನೊಂದಿಗೆ ಬೆರೆತು ಅರಳುವುದು ಸರ್ವಜ್ಞನಿಗೆ ಕಲ್ಲರಳಿ ಹೂವಾಗುವ ಹಾಗೆ ಕಂಡಿತು. ಕಾಡಿನ ಬಂಡೆಗಳ ಮೇಲೆ ಬೆಳೆಯುವ ಈ ಚಿತ್ರದಲ್ಲಿರುವ ಕಲ್ಲು ಹೂವಿನ ಗಿಡಗಳು ಸರ್ವಜ್ಞನ ಸಾಲುಗಳಿಗೆ ಸರಿಹೊಂದುವಂತಿವೆ. ಹಿಮಾಲಯದ ತಪ್ಪಲಿನಲ್ಲಿ, ಪೂರ್ವಾಂಚಲದ ಕಾಡುಗಳಲ್ಲಿ ಬೆಳೆಯುವ ಈ ಬಗೆಯ ಸಸ್ಯಗಳಿಗೆ ಕೆಲವೆಡೆ “ಪಥ್ಥರ್ ಪೋಡಿ” ಎನ್ನುತ್ತಾರೆ. ಸಂಸ್ಕೃತದಲ್ಲಿ … Read more

ಬೇಯದಿರು ಬೆಂಗಳೂರೇ..: ವಿನಾಯಕ ಅರಳಸುರಳಿ,

ಇದೆಂಥಹಾ ದಿನಗಳು ಬಂದುಬಿಟ್ಟವು? ಎಲ್ಲವೂ ಸರಿಯಾಗಿದ್ದರೆ ಅದೆಷ್ಟೋ ಲಕ್ಷ ಜನರೀಗ ಬೆಂಗಳೂರಿನಲ್ಲಿರುತ್ತಿದ್ದರು. ಬೀದಿ ಬದಿಯ ತಳ್ಳುಗಾಡಿಯಿಂದ ಹಿಡಿದು ಬಹುರಾಷ್ಟ್ರೀಯ ಕಂಪನಿಯ ತನಕ ನೂರಾರು ವಿಧದಲ್ಲಿ ಅಲ್ಲಿ ಜೀವನೋಪಾಯ ಸಾಗುತ್ತಿತ್ತು. ಅಲ್ಲಿ ಗಳಿಸಿದ ಸಂಬಳ ಕೇರಳದ ಆಳದಿಂದ ಹಿಡಿದು ಬಿಹಾರದ ತುದಿಯವರೆಗಿನ ಅದೆಷ್ಟೋ ಜನರ ಬದುಕ ಸಲಹುತ್ತಿತ್ತು. ಚಲನೆಯೇ ಬದುಕೆಂಬ ಮೂಲ ಮಂತ್ರವ ಜಪಿಸುತ್ತಾ ಕೋಟಿ ಜನಸಂಖ್ಯೆಯ ಆ ಪಟ್ಟಣ ಜಗತ್ತಿನ ಖ್ಯಾತ ನಗರಿಗಳ ಪಟ್ಟಿಯಲ್ಲಿ ತಾನೂ ಒಂದಾಗಿ ಮುನ್ನಡೆಯುತ್ತಿತ್ತು. ಬೆಂಗಳೂರೆಂದರೆ ಬರೀ ಕಾಯಕದ ಪಟ್ಟಣವೊಂದೇ ಆಗಿರಲಿಲ್ಲ. ಯಾಂತ್ರಿಕತೆಯ … Read more

ಆಕ್ರಮಣ (ಕೊನೆಯ ಭಾಗ): ಜೆ.ವಿ. ಕಾರ್ಲೊ

ಇಲ್ಲಿಯವರೆಗೆ ಲೆನಿಂಜೆನ್ನನಿಗೆ ಒಮ್ಮೆಲೇ ಸಿಡಿಲು ಹೊಡೆದಂತೆ ಜ್ಞಾಪಕಕ್ಕೆ ಬಂದಿತು: ಔಟ್ ಹೌಸಿನಲ್ಲಿ ಈ ವರೆಗೆ ಉಪಯೋಗಿಸದಿದ್ದ ಎರಡು ಫೈರ್ ಎಂಜಿನುಗಳು ಹಾಗೇ ತುಕ್ಕು ಹಿಡಿದು ಬಿದ್ದಿದ್ದವು. ಲೆನಿಂಜೆನ್ ಅವಗಳನ್ನು ಹೊರಗೆಳೆಸಿ ಪೆಟ್ರೊಲ್ ಟ್ಯಾಂಕಿಗೆ ಜೋಡಿಸಿದ. ಅಷ್ಟರಲ್ಲಿ ಕೆಲವು ಇರುವೆಗಳು ಮೇಲೆ ಹತ್ತಿದ್ದವು. ಫೈರ್ ಎಂಜಿನುಗಳು ಸ್ಟಾರ್ಟ್ ಆಗುತ್ತಲೇ ಪೆಟ್ರೊಲನ್ನು ಇರುವೆಗಳ ಮೇಲೆ ಹರಿಸಿ ಮತ್ತೆ ಅವುಗಳನ್ನು ಕಾಲುವೆಗೆ ದಬ್ಬಲಾಯಿತು ಮತ್ತು ಕಾಲುವೆಗೆ ಮೊದಲಿನಂತೆ ಪೆಟ್ರೋಲು ಹರಿಯಲಾಂಭಿಸಿತು. ಕೆಲ ಹೊತ್ತಿನ ಮಟ್ಟಿಗಾದರೂ ಲೆನಿಂಜೆನ್ ಇರುವೆಗಳನ್ನು ತಡೆಯುವುದರಲ್ಲಿ ಯಶಸ್ವಿಯಾಗಿದ್ದ. ಆದರೂ … Read more

ಆಚರಣೆಗೆ ಸಿಮೀತವಾಗದಿರಲಿ. . . . . : ಶಿವಲೀಲಾ ಹುಣಸಗಿ ಯಲ್ಲಾಪುರ

ಯಾರಿಗೆಲ್ಲ ಬೇಡ ಹೇಳಿ ಎರಡು ಹೊತ್ತಿನ ಊಟ, ಮೈ ಮುಚ್ಚಲು ಬಟ್ಟೆ, ನೆತ್ತಿಗೆ ಮಳೆ, ಗಾಳಿ, ಚಳಿಯಿಂದ ರಕ್ಷಣೆ, ಹರಿದ ಕಂಬಳಿ, ಕೌದಿ, ಚಾದರ, ಹರಕು ಚಾಪಿ, ಗೋಣಿಚೀಲ ಅಪರೂಪಕ್ಕೊಮ್ಮೆ ಮೈ ಸೋಪು, ತಲೆಗೆ ಎಣ್ಣೆ ಹಚ್ಚಿಕೊಂ ಡು ಬದುಕ ಕಳೆದ ಅದೆಷ್ಟೋ ಪ್ರತಿಮೆಗಳು ಕಣ್ಣಮುಂದೆ ಹಾದು ಹೋಗಿರುವುದನ್ನು ಅಥವಾ ಅನುಭವಿಸಿರುವುದ ನ್ನು ಎಂದಾದರೂ ಮರೆಯಲಾದಿತೇ?? ಅವನ್ನೆಲ್ಲ ಒದಗಿಸಲು ಕತ್ತಲೆಯಲಿ ಕರಗಿದವರಾರು?? ಕರಿಕಲ್ಲ ಪಾಠಿ ಬಳಪ ಬರೆದಿದ್ದಕ್ಕಿಂತ ತಿಂದಿದ್ದೆ ಜಾಸ್ತಿ. ಗಂಟಲಲ್ಲಿ ಸಿಕ್ಕ ಬಳಪದ ಚೂರ ಹೊರತೆಗೆದು … Read more

ಗುರುವೇ ಸರ್ವಸ್ವ: ಫರಜಾನಾ ಹಬುಗೋಳ

“ಶಿವಪಥವರಿವಡೆ ಗುರುಪಥ ಮೊದಲು” ಎಂದು ಶರಣರು ಹೇಳಿದ್ದಾರೆ. ಜೀವನದಲ್ಲಿ ಗುರಿ ಹಾಗೂ ಗುರು ಬಹುಮುಖ್ಯ. ಗುರುಗಳು ಬೀರಿದ ಪ್ರಭಾವದಿಂದ ಜೀವನದ. ದಿಕ್ಕನ್ನೇ ಬದಲಾಗಿ ಯಶಸ್ಸನ್ನು ಕಂಡು ಸಾಧನೆಯ ಹಾದಿ ತುಳಿದವರ ಸಂಖ್ಯೆ ಸಾಕಷ್ಟಿದೆ. ಗುರಿ ಮುಟ್ಟಲು ಸೋಪಾನ ಅಗತ್ಯ. ಗುರು ಸ್ಥಾನಕ್ಕೆ ತನ್ನದೇ ಆದ ಘನತೆ ಗೌರವಗಳೊಂದಿಗೆ ತನ್ನದೇ ಆದ ಔನ್ನತ್ಯವೂ ಇದೆ. ನಗುರೋರಧಿಕಂ ತತ್ವಂನ ಗುರೋರಧಿಕಂ ತಪಃ| ತತ್ವಜ್ಞಾನಾತ್ ಪರಂ ನಾಸ್ತಿ ತಸ್ಮೈಶ್ರೀ ಗುರುವೇ ನಮಃ°|| ಗುರುವಿಗಿಂತಲೂ ಅಧಿಕವಾದ ತತ್ವವಿಲ್ಲ; ಗುರುವಿಗಿಂತಲೂ ಅಧಿಕವಾದ ತಪಸ್ಸಿಲ್ಲ; ತತ್ವಜ್ಞಾನಕ್ಕಿಂತಲೂ … Read more

ರಾಧಾಕೃಷ್ಣ: ಆರಾ

“ನೀನೆ ನನ್ನಯ ಪ್ರಾಣ ನೀನೆ ತ್ರಾಣ. ನೀನೆ ಆಸರೆ ನೀನೇನೆ ನನ್ನ ಜೀವನ.. ಸನಿಹವೆ ನೀ ಇರದಿರಲು… ಹುಡುಕಿದೆ ನನ್ನ ಮನವನ್ನೆ!. ಕಣ್ಣೆದುರು ನೀನಿರದೆ, ಕಾಣದೆ ಹೋದೆ ನನ್ನೆ ನಾ ರಾಧೆ. ನಿನ್ನ ಬಿಟ್ಟು ಹೇಗೆ ಇರಲಿ ನಾನು ಒಬ್ಬಳೆ……” ಪ್ರಸ್ತುತ ಕೊರೋನಾ ಸಂಕಷ್ಟದಲ್ಲಿ ಹಿರಿಯ-ಕಿರಿಯ ಭೇದಭಾವವಿಲ್ಲದೆ ಎಲ್ಲರ ಮನಸೂರೆಗೊಂಡಿರುವ ಧಾರಾವಾಹಿ ರಾಧಾಕೃಷ್ಣ. ರಾಧಾಕೃಷ್ಣರ ಅಮರ ಪ್ರೇಮಕಥೆಯ ಸಾರಾಂಶವನ್ನೊಳಗೊಂಡಿದೆ. ಇದಾಗಲೇ ಹಿಂದಿಯಲ್ಲಿ 450 ಕ್ಕೂ ಅಧಿಕ ಎಪಿಸೋಡ್ ಗಳನ್ನು ದಾಟಿ ನೋಡುಗರ ಮನಗೆದ್ದಿದೆ. ಕನ್ನಡದಲ್ಲಿ 100ಕ್ಕೂ ಅಧಿಕ … Read more

ಧನದಾಹಕ್ಕೆ ದಿಕ್ಕೆಟ್ಟ ಬದುಕು ಆರ್ ಕೆ. ನಾರಾಯಣ್ ರ – The Financial Expert ನ ಮಾರ್ಗಯ್ಯ: ನಾಗರೇಖಾ ಗಾಂವಕರ

ಅದೊಂದು ಮುಂಜಾನೆ ಮಾರ್ಗಯ್ಯ ತನ್ನ ಕೆಂಪು ಬಣ್ಣದ ಅಕೌಂಟ್ ಪುಸ್ತಕದಲ್ಲಿ ಪೂರ್ಣ ತಲ್ಲೀನ. ತಂದೆ ತಾನು ಕೇಳಿದ ಆನೆ ಆಟಿಕೆ ಕೊಡಿಸಲಿಲ್ಲವೆಂದು ಕೋಪಗೊಂಡ ಬಾಲು ಕಾಲಿಂದ ಶಾಯಿ ಬಾಟಲಿಯ ಜೋರಾಗಿ ತೂರಿದ ರಭಸಕ್ಕೆ ಪುಸ್ತಕ ಬಣ್ಣಮಯವಾಗುತ್ತದೆ. ಸಿಟ್ಟಿಗೆದ್ದ ಮಾರ್ಗಯ್ಯ ಮಗನನ್ನು ದರದರ ಎಳೆದು ಕೋಣೆಯೊಳಗೆ ಕೂಡಿಹಾಕಲು ಯತ್ನಿಸುತ್ತಲೇ ತಪ್ಪಿಸಿಕೊಂಡ ಬಾಲು ಬಣ್ಣಮೆತ್ತಿದ ಪುಸ್ತಕ ಎತ್ತಿಕೊಂಡು ಹೊರಗೋಡಿ ತಟ್ಟನೆ ಗಟಾರಕ್ಕೆ ಚೆಲ್ಲಿ ಬಿಡುತ್ತಾನೆ. ಮಾರ್ಗಯ್ಯ ಹಣಕಾಸಿನ ಭಂಡಾರವೇ ಕೈತಪ್ಪಿದಂತೆ ಕಂಗಾಲಾಗುತ್ತಾನೆ. ಅದೇ ಬಾಲು ಪ್ರಾಯಕ್ಕೆ ಬರುತ್ತಲೂ ಇನ್ನಷ್ಟು ಅವಿವೇಕಿ … Read more

ಮರೆಯಲಾಗದ ಮದುವೆ (ಭಾಗ 9): ನಾರಾಯಣ ಎಮ್ ಎಸ್

   ಇಲ್ಲಿಯವರೆಗೆ      -೯- ಬೆಂಗಳೂರಿನಿಂದ ರೈಲಿನಲ್ಲಿ ಹೊರಟಿದ್ದ ಮುಕ್ತಾಳ ಕುಟುಂಬ ವಿಶಾಖಪಟ್ಟಣ ತಲುಪಿದಾಗ ಸಮಯ ಬೆಳಗ್ಗೆ ಹತ್ತೂವರೆಯಾಗಿತ್ತು. ರೈಲುನಿಲ್ದಾಣದಿಂದ ಹೋಟೆಲ್ ಗ್ರ್ಯಾಂಡ್ ರೆಸಿಡೆನ್ಸಿಗೆ ಹೊರಟ ಟ್ಯಾಕ್ಸಿಯ ಕಿಟಕಿಗಳ ಬಳಿ ಕುಳಿತಿದ್ದ ಯುಕ್ತಾ ಮತ್ತು ಶರತ್ ವಿಶಾಖಪಟ್ಟಣ ಸಿಟಿಯನ್ನು ಕುತೂಹಲದಿಂದ ನೋಡುತ್ತಿದ್ದರು. ಗ್ರ್ಯಾಂಡ್ ರೆಸಿಡೆನ್ಸಿ ಇನ್ನೂ ಸ್ವಲ್ಪದೂರವಿದ್ದಂತಯೇ ಬಹುಮಹಡಿ ಕಟ್ಟಡವನ್ನು ಗುರುತಿಸಿದ ಶರತ್ “ಅಮ್ಮಾ… ನೋಡಲ್ಲೀ… ಹೋಟ್ಲು ಬಂತು” ಎಂದು ಉತ್ಸಾಹದಿಂದ ಕೂಗಿದ. ಅಷ್ಟರಲ್ಲಿ ಹೋಟೆಲಿನ ಸೈನ್ಬೋರ್ಡಿದ್ದ ಸ್ವಾಗತಕಮಾನು ಪ್ರವೇಶಿಸಿ ಸುಮಾರು ನೂರುಮೀಟರಿದ್ದ ಪುಷ್ಪಾಲಂಕೃತ ಕಾರಿಡಾರನ್ನು ದಾಟಿದ ಟ್ಯಾಕ್ಸಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 41 & 42): ಎಂ. ಜವರಾಜ್

-೪೧- ಮೊಕ್ಕತ್ತಲ ಬೆನ್ನು ನಾ ಇಂಜದಿಂದ ಹಿಂಗೆ ಬೇವರ್ಸಿ ತರ ಆಗಿ ಜಾಗ ಬುಟ್ಟು ಕದ್ಲಿಲ್ಲ ಈ ಅಯ್ನೋರು ಯಾವ್ದೇಶುಕ್ಕೋದ್ರು ಅನ್ನದೆ ಗೊತ್ತಾಯ್ತಿಲ್ಲ ಈ ಕತ್ಲೊಳ್ಗ ಈ ದೊಡ್ಡವ್ವ ಮೆಲ್ ಮೆಲ್ಗ ತಡಕಾಡ್ತ ಬಾಗ್ಲ ತಳ್ಳಿ ‘ಕುಸೈ..’ ಅನ್ತ ಕೂಗ್ದ ನೀಲವ್ವೋರು ಬಂದ್ರು ಅನ್ಸುತ್ತ ಲಾಟೀನ್ ಬೆಳ್ಕು ಈಚ್ಗಂಟ ಕಾಣ್ತು. ‘ಕುಸೈ.. ನಿನ್ಗಂಡ ಬದ್ನಾ’ ‘ಇಲ್ಲ ಕಮ್ಮಾ..’ ‘ನಿಂಗೊತ್ತಾ… ಆ ಕಾಲ್ನೆಣ್ಣು ಸವ್ವಿ ಓಡಗಿದ್ದಂತ’ ಲಾಟೀನ್ ಬೆಳ್ಕು ಒಳಕ್ಕೇ ಹೋದಂಗಾಯ್ತು. ಸರೊತ್ತು. ಊರು ಗಕುಂ ಅನ್ತಿತ್ತು ನಾಯ್ಗಳು … Read more