Facebook

Archive for 2020

NRIs ಅಂದ್ರೆ ನಾನ್ ರಿಟರ್ನಿಂಗ್ ಇಂಡಿಯನ್ಸ್? (ಭಾಗ ೨): ಗುರುಪ್ರಸಾದ ಕುರ್ತಕೋಟಿ

ಇಲ್ಲಿಯವರೆಗೆ ಪರದೇಶದಲ್ಲಿ ತಳ ಊರಲು ಹೆಣಗಾಡುವ ಮೊದಲ ದಿನಗಳಲ್ಲಿ ತುಂಬಾ ಖುಷಿ ಕೊಡುವ ಕೆಲವೇ ಕೆಲವು ಸ್ಥಳಗಳಲ್ಲಿ ಒಂದು Indian grocery stores! ತರತರಹದ ಮಸಾಲೆ ಪದಾರ್ಥಗಳು, ಕಾಳುಗಳು, ಚುರುಮುರಿ, ಅವಲಕ್ಕಿ, ಇಡ್ಲಿ ಮಿಕ್ಸ್ ಇನ್ನೂ ಏನೇನೋ… ಸಿಗುವ ಏಕೈಕ ಸ್ಥಳ ಜೊತೆಗೆ ಭಾರತೀಯರ ಸಮ್ಮಿಲನದ ಒಂದು ಕೇಂದ್ರವೂ ಹೌದು. ಅಂಥದರಲ್ಲಿ ಅದು ಕನ್ನಡಿಗರದೇ ಇದ್ದರಂತೂ ಮುಗಿದೇ ಹೋಯಿತು. ಕನ್ನಡಿಗರೇ ನಡೆಸುತ್ತಿರುವ ಅಂತಹ ಒಂದು ಅಂಗಡಿ ಒಮಾಹಾದಲ್ಲಿದೆ. ಅದರ ಹೆಸರು ತುಳಸಿ! ಅಲ್ಲಿ ಹೋದಾಗಲೊಮ್ಮೆ, ನಾವು ಸಣ್ಣವರಿದ್ದಾಗ […]

ಸಮಾಧಾನ: ಗಿರಿಜಾ ಜ್ಞಾನಸುಂದರ್

ಘಂಟೆ ರಾತ್ರಿ 8.30 ಆಗಿತ್ತು. ಕುಮುದಳ ಶಿಫ್ಟ್ ಮುಗಿದು ಅವಳು ತನ್ನ ಕಂಪ್ಯೂಟರ್ ಮುಚ್ಚುತ್ತಿದ್ದಳು. ಅಷ್ಟರಲ್ಲಿ ಮೂರ್ತಿ ಅಂಕಲ್ ನ ಕರೆ. ಅವಳಿಗೆ ಅವರ ಕರೆಯನ್ನು ಸ್ವೀಕರಿಸಲು ಮನಸ್ಸಿಲ್ಲ. ಹಾಗೆ ಸುಮ್ಮನೆ ಮೊಬೈಲ್ ಕಂಪಿಸುತ್ತಿತ್ತು. ತನ್ನ ಆಫೀಸ್ ನ ಕ್ಯಾಬ್ ಗಳು ನಿಲ್ಲುವ ಜಾಗಕ್ಕೆ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದಳು. 15 ನಿಮಿಷದಲ್ಲಿ ಅವಳಿಗೆ ಅವಳ ಕ್ಯಾಬ್ ಹಿಡಿದು ಕೂರಬೇಕಿತ್ತು. ಮತ್ತೊಮ್ಮೆ ಮೂರ್ತಿ ಅಂಕಲ್ ನ ಕರೆ. ಅವಳಿಗೆ ಇಷ್ಟವೇ ಇಲ್ಲದ ಕರೆ. ಸುಮ್ಮನಾದಳು. ಕ್ಯಾಬ್ ಹಿಡಿದು […]

ಅಜ್ಜನ ಹಲ್ಲು ಸೆಟ್ಟು ಮಕ್ಕಳಿಗಾಗಿ ಕವಿತೆಗಳು: ಸೂಗೂರೇಶ ಹಿರೇಮಠ

ಕವಿಗಳು: ಗುಂಡುರಾವ್ ದೇಸಾಯಿ ಪ್ರಕಾಶಕರು: ಜಿ ಜಿ ದೇಸಾಯಿ ಮಸ್ಕಿ ಅಜ್ಜನ ಹಲ್ಲು ಸೆಟ್ಟು ಮಕ್ಕಳ‌ಸಾಹಿತ್ಯದ ಮೂಲ ಪುರುಷರೆಂದರೆ ಅಜ್ಜ ಅಜ್ಜಿ ಮೊಬೈಲ್ ಟೀವಿಗಳಿಲ್ಲ ಕಾಲದಲ್ಲಿ ನಮ್ಮ ಅಜ್ಜ ಅಜ್ಜಿಯರು ಕತೆ ಹೇಳಿತ್ತಾ ಮಕ್ಕಳಿಗೆ ಮೌಲ್ಯಗಳನ್ನೂ ಹಾಗೂ ಮನರಂಜನೆಯನ್ನು ನೀಡುತ್ತಾ ಶಾಲೆಗಳು ಕಲಿಸದಂತಹ ಸೃಜನಾತ್ಮಕತೆಯನ್ನು ಅಜ್ಜ ಅಜ್ಜಿಯರು ಹೇಳಿಕೊಡುತ್ತಿದ್ದರು. ಹೀಗಿರುವಾಗ ಮಕ್ಕಳಿಗೆ ಅಜ್ಜನೆಂದರೆ ಹಿಗ್ಗೊಹಿಗ್ಗು ಅಂತಹ ಹಿಗ್ಗು ಕೊಡುವಂತಹ ಕೃತಿ ಅಜ್ಜನ ಹಲ್ಲು ಸೆಟ್ಟು. ಸ್ವತಃ ಶಿಕ್ಷಕರಾಗಿರುವ ಹಾಸ್ಯ ಪ್ರಬಂಧಕಾರರಾಗಿರುವ ಶ್ರೀಯುತ ಗುಂಡುರಾವ್ ದೇಸಾಯಿ ಯವರು ಮಕ್ಕಳಿಗಾಗಿ […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 27 & 28): ಎಂ. ಜವರಾಜ್

-೨೭- ಕತ್ತಲಾಗಿತ್ತು. ಹೆಂಡದ ಗುಳ್ಳಲಿ ಲಾಟೀನು ಉರಿತಾ ಉರಿಯೋ ಬೆಳಕಲಿ ಕುಡಿಯೋರು ಕುಡಿತಾ ತೂರಾಡ್ತ ಆ ಕುಡ್ದೋರು ಗಂಟ್ಲು ಗಳ್ಳಾಕ ಸದ್ದಿತ್ತು. ‘ಅಯ್ನೋರಾ ನಾ ಈಗ ಏನ್ಮಾಡ್ಲಿ ಸಂತ ಒಳಗ ಹೇಳುದ್ದಾ ನಾ ಯಾಗಾರು ನಂಬ್ಲಿ ಮದ್ವಿ ಆಗಿ ಮಕ್ಳ ಫಲ ಇಲ್ದೆ ಈ ಸವ್ವಿನೇ ದೇವ್ತಿತರ ಬಂತು ಆ ದೇವ್ತಿ ಕಿಲಕಿಲ ಅನ್ನವತ್ಲಿ ನನ್ ಪರ್ಶು ಹುಟ್ತು ಆ ದೇವ್ತಿ ಈಗ ಈತರ ಅಂದ್ರ ನನ್ ಕಳ್ಳು ಕಿತ್ಬತ್ತುದ ಅಯ್ನೋರಾ..’ ಅಂತ ನನ್ ಕಾಲಯ್ಯ ಬಿಕ್ಕುಳುಸ್ತ […]

ಅಂಜದೆ ಮುನ್ನುಗ್ಗುತ್ತಿರು: ಪ್ರೊ ಸುಧಾ ಹುಚ್ಚಣ್ಣವರ

ಪ್ರತಿಯೊಬ್ಬ ಮನುಷ್ಯ ತನ್ನ ಬಾಳ ಹಾದಿಯಲ್ಲಿ ಹಲವಾರು ರೀತಿಯ ಏಳು ಬೀಳುಗಳನ್ನು ಕಾಣುತ್ತಾ ಸಾಗುತ್ತಾನೆ, ಕಷ್ಟ ಸುಖ ನೋವು ನಲಿವು ಹೀಗೆ ಹಲವಾರು ರೀತಿಯ ವೈಪರೀತ್ಯಗಳನ್ನು ಜೀವನದ ವಿಭಿನ್ನ ಸನ್ನಿವೇಶಗಳಲ್ಲಿ ಎದುರಿಸುತ್ತಾ ಸಾಗುವ ಮನುಷ್ಯ ಕೆಲವೊಮ್ಮೆ ಜೀವನದ ಕಹಿ ಘಟನೆಗಳಿಂದ ವಿಚಲಿತನಾಗಿ ಬಿಡುತ್ತಾನೆ. ಮುಂದೇನು ಮಾಡಬೇಕು ಎಂಬ  ವಿಚಾರವೇ ತೋಚದಂತಾಗಿ ಗೊಂದಲಕ್ಕೀಡಾಗುತ್ತಾನೆ. ಆದರೆ ವಾಸ್ತವದಲ್ಲಿ ಯಾವುದೇ ಒಂದು ಸಮಸ್ಯೆಗೆ ಚಿಂತೆ ಮಾಡುವುದು ಪರಿಹಾರವಲ್ಲ ಬದಲಾಗಿ ಆ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುತ್ತಾ ಸಾಗುವುದೇ ಮನುಷ್ಯ ಧರ್ಮವಾಗಬೇಕು ಕಾರಣ […]

ಸಂತೆಗಳೆಲ್ಲ ಮತ್ತೆ ತುಂಬಿ ಕಂಗೊಳಿಸುವುದೇ: ವಿಜೇತ ಮಳಲಗದ್ದೆ

ಲಾಕ್ ಡೌನ್, ಸೀಲ್ ಡೌನ್, ಕ್ವಾರಂಟೈನ್, ಕಂಟೈ ನ್ಮೆಂಟ್ ಝೋನ್, ರೆಡ್, ಗ್ರೀನ್, ಆರೇಂಜ್ ಝೋನ್ ಇವೆಲ್ಲ ಈ ಎರಡೂವರೆ ತಿಂಗಳಿಂದ ಪ್ರತಿದಿನ ಕೇಳಿ ಬರುತ್ತಿರುವ ಪದಗಳು. ಬಹುಶಃ ಹಿಂದೆಂದೂ ಕಂಡಿರದಂತಹ ನಿಗೂಢತೆ ಬೆಚ್ಚಿಬೀಳಿಸುವ ಭಯ ಜನರಲ್ಲಿ ಆವರಿಸಿದೆ. ಇಡೀ ವಿಶ್ವಕ್ಕೆ ವಿಶ್ವವೇ ಕೊರೋನಾ ಮಾರಿಯಿಂದ ತತ್ತರಿಸಿದೆ. ಒಂದು ಕಡೆ ಜನರ ಜೀವದ ಪ್ರಶ್ನೆಯಾದರೆ ಮತ್ತೊಂದು ಕಡೆ ಜೀವನದ ಪ್ರಶ್ನೆ. ನಮಗೆ ಎರಡೂ ಮುಖ್ಯವಾದುದೆ. ಜೀವ ಜೀವನದ ಮಧ್ಯೆ ತೂಗುಗತ್ತಿಯ ಮೇಲೆ ನೇತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಜೀವವನ್ನು […]

ಮುಂದಿನ ಪೀಳಿಗೆಯ ಭವಿಷ್ಯವನ್ನು ಕಿತ್ತುಕೊಳ್ಳದಿರೋಣ !: ನಿಂಗಪ್ಪ ಹುತಗಣ್ಣವರ

ನಿಸರ್ಗವು ನಮ್ಮ ಆಸೆಗಳನ್ನು ಪೂರೈಸುತ್ತದೆ, ನಮ್ಮ ದುರಾಸೆಗಳನ್ನಲ್ಲ ! ಗಾಂಧೀಜಿಯವರ ಈ ಮಾತನ್ನು ನಾವು ಅರ್ಥೈಸಿಕೊಳ್ಳದೆ ಹೋದರೆ ಇಡೀ ಭೂಮಿಯನ್ನು ನಾವು ಅಂತ್ಯದೆಡೆಗೆ ಕೊಂಡುಯ್ಯುತ್ತೇವೆ. ಇದು ನನ್ನ ಗೆಳತಿ ಭೂಮಿಯ ಮಾತು. ಹೌದು ನಿಜಕ್ಕೂ ಗಂಭೀರವಾಗಿ ಯೋಚಿಸಬೇಕಾದ ಸಂಗತಿಯಿದು. ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಏರುತ್ತಿದೆ ಆದರೂ ಕಾರ್ಖಾನೆಗಳು ಹೊಗೆಯುಗುಳುತ್ತಿವೆ, ವಾಹನಗಳು ಇಂಧನವನ್ನು ಸುಡುತ್ತಲಿವೆ. ಬದುಕಲು ಆಮ್ಲಜನಕ ಅವಶ್ಯಕವೆಂದು ತಿಳಿದಿದ್ದರೂ ಒಂದು ಸಸಿಗೆ ನೀರುಣಿಸಲಾಗದಷ್ಟು ಅವಿಶ್ರಾಂತರಾಗಿ ದುಡಿಯುವವರ ಹಾಗೆ ನಡೆದುಕೊಳ್ಳಿತ್ತಿದ್ದೇವೆ. ಮತ್ತೊಂದು ಪರಿಸರ ದಿನವನ್ನು ನಾವು ಆಚರಿಸಿ […]