ಬಹು ಮುಖದ ‘ ಚಿಲುಮೆ’: ಅರವಿಂದ ಚೊಕ್ಕಾಡಿ

ಸ್ನೇಹಿತ ಲಕ್ಷ್ಮೀಕಾಂತ ಮಿರಜಕರ ಮೊಳಕಾಲ್ಮೂರಿನ ದೇವಸಮುದ್ರದ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರು. ನನ್ನ ಇಲಾಖಾ ಸನ್ಮಿತ್ರರು. ನಮ್ಮದು ಬಹಳ ಸಣ್ಣ ವ್ಯವಸ್ಥಾಪನೆಯಾದುದರಿಂದ, ಸಂಕಷ್ಟಗಳು ಮತ್ತು ಅನುಭವಗಳು ಉಳಿದೆಲ್ಲ ಇಲಾಖೆಯವರಿಗಿಂತ ಭಿನ್ನವಾಗಿರುವುದರಿಂದ ಬೃಹತ್ ವ್ಯವಸ್ಥೆಯಲ್ಲಿ ಕಣ್ಣಿಗೆ ಕಾಣದಷ್ಟು ಸಣ್ಣ ಸಂಖ್ಯೆಯವರು ಇಟ್ಟಾಗಿ ಬಡಿದಾಡಬೇಕಾದ್ದರಿಂದ ಸಂಬಂಧಗಳು ಬಿಗಿಯಾಗಿರುತ್ತವೆ. ಇಂತಿಪ್ಪ ಲಕ್ಷ್ಮೀಕಾಂತರು ಇತ್ತೀಚೆಗೆ ನನಗೊಂದು ಪುಸ್ತಕವನ್ನು ಕಳಿಸಿಕೊಟ್ಟರು. ಅದು ತಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಬರೆದ ಬರಹಗಳ ಸಂಕಲನ-‘ಚಿಲುಮೆ’. ‘ಚಿಲುಮೆ’ಯ ವೈವಿಧ್ಯ ಬಹಳ ಮುದ ನೀಡಿತು. ಒಬ್ಬ ವಿದ್ಯಾರ್ಥಿ ಕವನ … Read more

ಹೋರಾಟದ ಹೆಜ್ಜೆ ಮೂಡಿಸಿ ಮರೆಯಾದ ಮಿತ್ರ ಈಶ್ವರ ಮಗದುಮ್: ಅಶ್ಫಾಕ್ ಪೀರಜಾದೆ

ಈಗ ಬರೆಯುತ್ತಿರುವ ಒಂದೊಂದು ಅಕ್ಷರಕೂಡ ನೇರವಾಗಿ ನನ್ನ ಹೃದಯದಿಂದ ತೊಟ್ಟಿಕುತ್ತಿರುವಂತೆ ಭಾಸವಾಗುತ್ತಲಿದೆ. ಅಂತಿಮವಾಗಿ ಅವನ ಮುಖದರ್ಶನ ಮಾಡಿಕೊಂಡು ಬಂದಾಗಿನಿಂದಲೂ ಮನಸ್ಸಿಗೆ ಸೊಗಸೇ ಇಲ್ಲದಂತಾಗಿದೆ. ಏನೋ ಕಳೆದುಕೊಂಡಿದ್ದು ಅಲ್ಲ ಎಲ್ಲವನ್ನು ಕಳೆದುಕೊಂಡಂತೆ ಹೃದಯ ತಬ್ಬಲಿಯಾಗಿ ಆಕ್ರಂದಿಸುತ್ತಲಿದೆ. ಜೀವ ಸಮಾಧನವಿಲ್ಲದೆ ಒದ್ದಾಡುತ್ತಿದೆ. ನನ್ನೊಳಗಿನ ತಬ್ಬಲಿತನದ ಭಾವನೆ ಶಬ್ಧಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಅನಿಸುತ್ತಲಿದೆ. ಅಣ್ಣ ಸಯಿದ ಮತ್ತು ಸ್ನೇಹಿತ ವಿಠ್ಠಲ ಕರೆ ಮಾಡಿ ನಮ್ಮ ಈಶ್ವರ ಇನಿಲ್ಲವೆಂದಾಗ ಒಂದು ಕ್ಷಣ ನನ್ನ ಕಾಲ ಕೆಳಗಿನ ಭೂಮಿಯೇ ಬಾಯ್ದೆರೆದು ನುಂಗಿದಂತೆ ಭಾಸವಾಯಿತು ನನಗೆ. … Read more

ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಎದುರಿಸುವುದು ಒಂದು ಕಲೆ!: ಸಹನಾ ಪ್ರಸಾದ್

” ಯಾಕ್ರೀ ಜಾನಕಿ, ಎಫ್ ಬಿ ಯಲ್ಲಿ ಕಾಣುತ್ತಾನೇ ಇಲ್ಲ, ಈಚೀಚಿಗೆ. ನಿಮ್ಮ ನಿಲುಮೆಗಳು, ಪಟಗಳು ಇಲ್ಲದೆ ಫ಼ೇಸ್ಬುಕ್ಕು ಸೊರಗಿದೆಯಲ್ಲಾ!” ನನ್ನ ಮಾಮೂಲಿ ಹಾಸ್ಯದ ಧಾಟಿಯಲ್ಲಿ ಕಾಲೆಳೆದಾಗ ಜಾನಕಿಯ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ” ಈ ಮುಖಪುಟ ಒಂದೇ ಸಾಕು, ನಮ್ಮ ಮನಸ್ಸಿನ ನೆಮ್ಮದಿ ಹಾಳು ಮಾಡಕ್ಕೆ ಇಲ್ಲಿ ಜನರು ಬಹಳ ಭಯಂಕರ. ನನ್ನ ಮುಂದೆ ಒಂದು ರೀತಿ, ಬೆನ್ನ ಹಿಂದೆ ಮತ್ತೊಂದೇ ತರಹ. ಅಲ್ಲಿ ಕಾಮೆಂಟ್ ಹಾಕುವುದು ಬೇರೆ, ಇನ್ಬಾಕ್ಸಲ್ಲಿ ಬರೀ ದೂಷಣೆ, ಜಾನಕಿ ಹಾಗೆ, ಅವಳ … Read more

ನಡುವೆ ಬಂದವರು: ಸಿಂಧು ಭಾರ್ಗವ್

ರೋಶನಿ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ. ವಯಸ್ಸು 35 ವರ್ಷವಿರಬಹುದು. ಮದುವೆಯಾಗಿ ಒಂದು ಮಗು ಇರುವ ಸಂಸಾರಸ್ಥೆ. ಹೀಗಿರುವಾಗ ರೋಹಿತ್ ಎಂಬ ಹೊಸ ಸಹೋದ್ಯೋಗಿಯ ಪರಿಚಯವಾಗಿ ಸ್ನೇಹ ಬೆಳೆದು ಪ್ರೀತಿಯ ನಾಮಕರಣ ಮಾಡಿದ್ದಳು. ಅವನೋ ಇನ್ನೂ ಯುವಕ. 23 ವರ್ಷ ವಯಸ್ಸಿರಬಹುದು. ನೋಡಲು ಸುರದ್ರೂಪಿ. ಉತ್ಸಾಹಿ ಕೆಲಸಗಾರ. ಅನುದಿನವೂ ಅವಳ ಜೊತೆ ಹರಟುವುದು, ಅವಳ ಸೌಂದರ್ಯವನ್ನು ಹೊಗಳುವುದು, ವೃತ್ತಿ ನಿಷ್ಠೆಯನ್ನು ಹೊಗಳುವುದು ಅವನ ದಿನಚರಿಯಾಗಿತ್ತು. ಹೆಣ್ಮಕ್ಕಳಿಗೆ ಸ್ವಲ್ಪ ಹೊಗಳಿದರೂ ಕರಗಿ ಹೋಗುವುದು ಅವರ ಮನೋ ದೌರ್ಬಲ್ಯ … Read more

ಇಹದ ದುರ್ಗಂಧ- ಪರದ ಪರಿಮಳ: ಡಾ. ಹೆಚ್ ಎನ್ ಮಂಜುರಾಜ್

(ಹರಿದಾಸ ಪ್ರಸಿದ್ಧ ಶ್ರೀಪಾದರಾಜರ ಎರಡು ಕೀರ್ತನ ರಚನೆಗಳ ವಿಶ್ಲೇಷಣೆ) ರಚನೆ : ಶ್ರೀ ಶ್ರೀಪಾದರಾಜರು ಮರುದಂಶರ ಮತ ಪಿಡಿಯದೆ ಇಹ -ಪರದಲ್ಲಿ ಸುಖವಿಲ್ಲವಂತೆ || ಪ || ಅರಿತು ವಿವೇಕದಿ ಮರೆಯದೆ ನಮ್ಮಗುರುರಾಯರ ನಂಬಿ ಬದುಕಿರೋ || ಅ.ಪ.|| ಕ್ಷೀರವ ಕರೆದಿಟ್ಟ ಮಾತ್ರದಿ ಸಂಸ್ಕಾರವಿಲ್ಲದೆ ಘೃತವಾಗದಂತೆ ಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ || ೧ || ಉಪದೇಶವಿಲ್ಲದ ಮಂತ್ರ ಏಸುಜಪಿಸಲು ಫಲಗಳ ಕೊಡದಂತೆ ಉಪವಾಸ ವ್ರತಗಳಿಲ್ಲದೆ ಜೀವತಪಸಿಯೆನಿಸಿಕೊಳ್ಳಲರಿಯನಂತೆ || ೨ || ಸಾರಮಧ್ವಶಾಸ್ತ್ರವೋದದೆ ಗುರುತಾರತಮ್ಯ ಜ್ಞಾನ … Read more

ವಿವಾಹ ಎಂಬ ಅನುಬಂಧವು, ಲಿವಿಂಗ್ ಟುಗೆದರ್ ಎಂಬ ಸಂಬಂಧವು!:ಕೆ ಟಿ ಸೋಮಶೇಖರ ಹೊಳಲ್ಕೆರೆ

ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನಾ … ಎಂಬ ಮಂತ್ರೋಚ್ಛಾರಣೆಯೊಂದಿಗೆ ಸಾವಿರಾರು ಗುರು ಹಿರಿಯರು, ಬಂಧು ಮಿತ್ರರು ಆಶೀರ್ವಾದ ಮಾಡಿಕೊಟ್ಟ ಪವಿತ್ರ ಮಾಂಗಲ್ಯ ಧಾರಣೆ ಮಾಡುವ ವಿವಾಹ ಎಂಬ ಏಳೇಳು ಜನುಮದ ಸಂಬಂಧ ಎಂಬ ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ – ಎಂದು ಪತಿ ಪತ್ನಿಗೆ ಮಾತು ಕೊಟ್ಟು, ಅಗ್ನೀ ಸಾಕ್ಷಿಯಾಗಿಸಿ ಸಪ್ತಪದಿ ತುಳಿಯುವ ಮದುವೆಗಳು ಸ್ವರ್ಗದಲ್ಲಿ ನಿರ್ಣಯಾವಾಗಿರತ್ತವೆಂದು ಬಿಡಿಸಿಕೊಳ್ಳಲಾಗದಂತೆ ಬಿಗಿಯಾಗಿ ಸಂಬಂಧವನ್ನು ಬೆಸೆದು ಅಕ್ರಮ ಸಂಬಂಧಗಳ ತಡೆಯುವ, ಸಂಗಾತಿಯನ್ನು ಅರ್ಧ ನಾರೀಶ್ವರರಂತೆ ಬೆಸೆಯುವ ಅಧ್ಭತ ಕಲ್ಪನೆ, ಪತಿ … Read more