Facebook

Archive for 2018

ಕಾವ್ಯಧಾರೆ

ನೀ ಮೌನ ಮುರಿಯಬೇಕು ನೀನು ಮತ್ತೆ ಎಂದಿನಂತೆ ಮಾತಾಡಬಹುದೆಂಬ ನಂಬಿಕೆ ಅರೆ ಘಳಿಗೆ ಸುಮ್ಮನಿರದ ಕನಸುಗಳು ಹುಟ್ಟುವುದನು ತಡೆಯುವವರು ಯಾರು..!? ನನಸಾಗುವ ಹೂ ಅರಳಲು ರವಿ ಹೊಸತಾಗಿಯೆ ಹುಟ್ಟಬೇಕು ನೀ ಮಾತಿಗೆ ಅಮೃತವನುಣಿಸುವ ಮನಸು ಮಾಡಬೇಕು ಒಲವಲಿ ಮೌನ ಮಾತಾಗಿ ಮುತ್ತಾಗುವುದು ಸಾಮಾನ್ಯ ತಾನೇ..? -ಅಕ್ಷತಾ ಕೃಷ್ಣಮೂರ್ತಿ         ಗಜಲ್ ನೀರಡಿಸಿದಾಗ ಬಾಂವಿ ತೋಡಿದಂಗಾತು ಸಾಯುಹೊತ್ತಾಗ ನಿನ್ನ ನೋಡಿದಂಗಾತು ಹ್ಯಾಂಗೈತಿ ನಮ್ಮ ಜೋಡಿ ಗೊತ್ತೇನ ಸಾಕಿ? ಚೂಡಾದ ಜೊತಿ ಚಹಾ ಕೂಡಿದಂಗಾತು.! ಮಾಡಿಲ್ಲದ […]

ಭೂಜ್ವರ – 2017ರ ಹಿನ್ನೋಟ: ಅಖಿಲೇಶ್ ಚಿಪ್ಪಳಿ

ಹಳೆಯ ಕ್ಯಾಲೆಂಡರ್ ಹಾಗೂ ಡೈರಿಯನ್ನು ಬದಿಗಿಟ್ಟು ಹೊಸದನ್ನು ಪಡೆಯುವ ದಿನ ದಾಪುಗಾಲಿಕ್ಕುತ್ತಾ ಬರುತ್ತಿದೆ. ಮತ್ತೊಂದು ವರುಷ ಕಳೆಯಿತು. ಹಾಗಂತ ಹಳೆಯ ಡೈರಿ ಹಾಗೂ ಕ್ಯಾಲೆಂಡರ್‍ಗಳನ್ನು ಮರತೇ ಬಿಡುವುದು ಐತಿಹಾಸಿಕ ದಾಖಲೆಯನ್ನು ಮರೆತ ಹಾಗೆ ಆಗುತ್ತದೆ. ಅತಿಮುಖ್ಯವಾದ ಘಟನೆಗಳನ್ನು ನೆನಪಿಟ್ಟುಕೊಳ್ಳಲು ಇವು ಅಗತ್ಯ. ಹೊಸದನ್ನು ಸ್ವಾಗತಿಸುವು ಪೂರ್ವದಲ್ಲಿ ಒಮ್ಮೆ ಹಿಂತಿರುಗಿ ಅವಲೋಕನಗೈಯುವುದು ಕೂಡ ಮುಖ್ಯ. ಇಡೀ ಪ್ರಪಂಚ ಇವತ್ತು ನಮ್ಮ ಅಂಗೈ ತುದಿಯಲ್ಲಿದೆ. ಮಾಹಿತಿಗಳು ಭರಪೂರ ಲಭ್ಯ. ಹಾಗಂತ ಅಂಗೈತುದಿಗೆ ನಿಲುಕುವ ಪ್ರಪಂಚ ಎಷ್ಟು ಸುರಕ್ಷಿತ ಎಂದು ಕೇಳಿದರೆ, […]

ಜಾಣಸುದ್ದಿ 6: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ […]

ಪ್ರಕೃತಿಯ ಹಾಡು: ಧನು ಮಲ್ಪೆ

ನೀವು ಎಂದಾದರೂ ಪ್ರಕೃತಿಯ ಸಂಗೀತ ಕೇಳಿದ್ದೀರಾ. . ? ಪಾಪ್ ಗೊತ್ತು ರಾಕ್‌ ಗೊತ್ತು ಇದ್ಯಾವುದಪ್ಪಾ ಹೊಸ ಪ್ರಕಾರದ ಸಂಗೀತ ಅಂತೀರಾ? ಹಾಗಾದರೆ ಇಲ್ಲಿ ಕೇಳಿ. ಪ್ರಕೃತಿಯ ಪ್ರತಿಯೊಂದು ಶಬ್ಧವೂ ಮಧುರ ಸಂಗೀತವೆ. ಆದರೆ ಸಿಟಿಯಲ್ಲಿ ಇರುವವರಿಗೆ ಆಟೋರಿಕ್ಷಾ ಬಸ್ಸುಗಳ ಇಂಜಿನ್ ಶಬ್ಧ, ಕರ್ಕಶ ಹಾರ್ನ್ ಬಿಟ್ಟು ಬೇರೆ ಶಬ್ದ ಮರೆತೇ ಹೋಗಿರಬಹುದು. ಪ್ರಕೃತಿಯ ಹಾಡು ಕೇಳಬೇಕಿದ್ದರೆ ನೀವು ಮಾನವ ನಿರ್ಮಿತ ಕೃತಕ ಶಬ್ಧಗಳೇ ಇಲ್ಲದ ದೊಡ್ಡ ಪರ್ವತವನ್ನೇರಬೇಕು ಅಥವಾ ಬಿಸಿಲೇ ನೆಲ ತಾಗದ ದಟ್ಟ ಅರಣ್ಯವನ್ನು […]

ಬಾನಂಗಳದಲೊಮ್ಮೆ….: ಅನುರಾಧ ಪಿ. ಸಾಮಗ

ಚಂದ್ರನಿಗೆ ರೋಹಿಣಿಯೂ, ಉಳಿದ ಇಪ್ಪತ್ತಾರು ಪತ್ನಿಯರೂ, ಸುತ್ತಮುತ್ತ ರಾರಾಜಿಸುವ ಇನ್ನುಳಿದ ತಾರೆಯರೂ, ಜಲದ ನೈದಿಲೆಯೂ, ಮರದ ಆಕಾಶಮಲ್ಲಿಗೆಯೂ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪ್ರೀತ್ಯರ್ಹರೇ. ಅಲ್ಲದೆ ಅವನು ಅವರೊಬ್ಬೊಬ್ಬರ ಜೊತೆಗೂ ಹೆಣೆದುಕೊಂಡ ಅನುಬಂಧದ ಪರಿಗೆ ಸರಿಯಾಗಿ ಒಬ್ಬೊಬ್ಬರೂ ಅವರವರದೇ ರೀತಿಯಲ್ಲಿ ಅವನ ಸಂತೋಷವನ್ನು ಪರಿಪೂರ್ಣವಾಗಿಸುತಿದ್ದರು. ಅವರಲ್ಲೊಬ್ಬರ ಕೊಡುಗೆಯ ವಿನಃವೂ ಅವನ ಸಂತೋಷ ಅಪರಿಪೂರ್ಣ. ಮತ್ತಾಗ ಚಂದ್ರ ಹುಣ್ಣಿಮೆ ಬಂದರೂ ತನ್ನ ತಾನು ಪೂರ್ಣವಾಗಿ ಕಂಡುಕೊಳ್ಳಲಾರ. ಇದು ಅವನ ಬಲಹೀನತೆಯೆಂದರೂ ಸರಿಯೇ, ಮತ್ತೆ ಮತ್ತೆ ಅಳಿಯುತ್ತ ಬೆಳೆಯುತ್ತ ಅದೆಷ್ಟೋ […]

ವೆಂಕಜ್ಜ: ಗಿರಿಜಾ ಜ್ಞಾನಸುಂದರ್

ಬೆಳಗಿನ ಸೂರ್ಯನ ಕಿರಣ ಕಣ್ಣಿಗೆ ಚುಚ್ಚುತ್ತಿದ್ದು,   ವೆಂಕಜ್ಜನ ಕಣ್ಣು ಭಾರವಾಗಿದ್ದರೂ ನಿಧಾನವಾಗಿ ತೆಗೆಯುತ್ತಿದ್ದ. ದೇವಸ್ಥಾನದ ಒಂದು ಮೂಲೆಯಲ್ಲಿ ಮಲಗುವ ವೆಂಕಜ್ಜ ಯಾವಾಗಲು ಚುರುಕು. ಅಷ್ಟೊಂದು ನಿಧಾನವಾಗಿ ಎದ್ದವನೇ ಅಲ್ಲ. ಇಂದೇಕೋ ಅವನ ಮನಸ್ಸು ಎಂದಿನಂತೆ ಇರಲಿಲ್ಲ. ವಸುಧಾಳ ನೆನಪು ಬಹಳವಾಗಿ ಕಾಡುತ್ತಿತ್ತು. ಅವಳು ತನ್ನನ್ನು ಎಬ್ಬಿಸುತ್ತಿದ್ದ ರೀತಿ,   ಮುದ್ದು ಮಾಡುತ್ತಾ ಕಚಗುಳಿ ಇಡುತ್ತಿದ್ದ ನೆನಪು. ವೆಂಕಜ್ಜನ ಜೀವನದಲ್ಲಿ ವಸುಧಾ ಅವನ ಬಾಳ ಸಂಗಾತಿಗಿಂತ ಹೆಚ್ಚಾಗಿದ್ದಳು. ಅವನೆಲ್ಲ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಳು. ಚಿಕ್ಕವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಅವನಿಗೆ ತನ್ನೆಲ್ಲ […]

ಆರೋಗ್ಯಕ್ಕಾಗಿ ಮರಳಬೇಕಿದೆ ಹಿಂದಿನ ಬದುಕಿಗೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಕಾಲಚಕ್ರ ಉರುಳುತ್ತನೇ ಇರುತ್ತದೆ. ಉರುಳುವಾಗ ಚಕ್ರದ ಭಾಗ ಹಿಂದಿನದು ಮುಂದಕ್ಕೆ, ಮುಂದಿನದು ಹಿಂದಕ್ಕೆ ಬರುವುದು ಸಹಜ! ಇತಿಹಾಸ ಸಹ ಪುನರಾವರ್ತನೆಯಾಗುತ್ತದೆ ಎನ್ನುತ್ತಾರೆ. ಹಾಗೇ ಮಾನವನ ಬದುಕಿನ ರೀತಿ ಸಹ ಪುನರಾವರ್ತನೆಯಾಗಬೇಕಿದೆ! ನಾವು ನಾಗರೀಕರು ತುಂಬಾ ಮುಂದುವರಿದವರು ಎಂಬುದು ನಾವು ಬಹಳ ಹಿಂದುಳಿದವರೆಂಬ ಧ್ವನಿಯನ್ನು ಒಳಗೊಂಡಿದೆಯಲ್ಲವೆ? ನಮಗೆ ಅನುಕೂಲವಾಗಲೆಂದು, ಸುಲಭವಾಗಿ ಬದುಕಬೇಕೆಂದು ಕಷ್ಟಕರ ಬದುಕನ್ನು ತೊರೆದು ಸುಲಭವಾಗಿ ಬದುಕಲು ಪ್ರಯತ್ನಿಸುವಾಗ ಹಿಂದಿನದಕ್ಕೆ ತಿಲಾಂಜಲಿ ಇತ್ತು ಹೊಸದನ್ನು ಬಿಗಿದಪ್ಪಿಕೊಂಡು ಜೀವಿಸುತ್ತಿದ್ದೇವೆ. ಅದರ ದುಷ್ಪರಿಣಾಮಗಳು ಈಗ ಅರಿತದ್ದರಿಂದ ಹಿಂದಿನ ಜೀವನದ ರೀತಿಯ […]

ಹೃದಯಗಳ ಮಿಲನಮಹೋತ್ಸವವೆಂಬುದು: ಸಿದ್ದುಯಾದವ್ ಚಿರಿಬಿ

ಮೈ ಡಿಯರ್ ಸ್ವೀಟ್ ಸವಿ…, ಈ ನವಿರು ಮುಂಜಾವಿಗೆ ನಿನ್ನ ನೆನಪುಗಳಿಂದಲೆ ನೇಯ್ದ ಪ್ರೇಮದ ಬೆಡ್ ಶೀಟ್ ಹೊದ್ದು ಮಲಗಿದ್ದೇನೆ ಸಖಿ. ಸಿಹಿ ಕನಸುಗಳು ನೆನಪಿನ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಆ ನೆನಪಿನ ಪುಟಗಳ ಸಾಲು ಸಾಲು ಅಕ್ಷರಗಳ ಬೀದಿಯಲಿ ಅಲೆದಂತೆ ಅಲ್ಲೆಲ್ಲೊ ನಿನ್ನ ನಗುವಿನ ವೀಣಾ ಲಹರಿ ತೇಲಿದರೆ, ಮತ್ತೆಲ್ಲೋ ನಿನ್ನ ನುಣುಪು ಪಾದಗಳ ಕಾಲ್ಗೆಜ್ಜೆಯ ಝೇಂಕಾರ ಧುಮ್ಮಿಕ್ಕುವುದು, ಕಿವಿಯ ಬಳಿ ಬಂದು ಪ್ರಿಯ ಎಂದು ನೀ ಉಸುರಿದಂತೆ, ಕೈ ಬಳೆಗಳ ಸರಿಗಮ ಚೆಲ್ಲಿದಂತೆ, ಮತ್ತೆಲ್ಲೊ […]

ವೃದ್ಧಾಪ್ಯ: ವೈ. ಬಿ. ಕಡಕೋಳ

ವೃದ್ಧಾಪ್ಯ ಮನುಷ್ಯನ ನಾಲ್ಕು ವಿಧದ ಅವಸ್ಥೆಗಳಲ್ಲಿ ಒಂದು. ಬಾಲ್ಯ, ಯೌವನ. ಗೃಹಸ್ಥ, ನಂತರ ಬರುವುದು ವೃದ್ಧಾಪ್ಯ. ಜೀವಿಯ ದೇಹವು ಬೆಳವಣಿಗೆಯ ಕೊನೆಯ ಹಂತದಲ್ಲಿರುವಾಗ ಬರುವ ಈ ವೃದ್ಧಾಪ್ಯ ಬದುಕಿನಲ್ಲಿ ಕೆಲವು ಕುಟುಂಬಗಳಲ್ಲಿ ಸಂತಸವನ್ನು ತಂದರೆ ಇನ್ನು ಕೆಲವು ಕುಟುಂಬಗಳಲ್ಲಿ ದುಃಖದ ಛಾಯೆಯನ್ನು ನೀಡುವ ಬದುಕಿನ ಕೊನೆಯ ಘಟ್ಟದ ಗಳಿಗೆಯನ್ನು ತಂದೊಡ್ಡುತ್ತಿದೆ. ನಾವು ಇತಿಹಾಸದಲ್ಲಿ ಶ್ರವಣಕುಮಾರನ ಕಥೆಯನ್ನು ಕೇಳುತ್ತೇವೆ. ಹಾಗೂ ಒದುತ್ತೇವೆ. ತನ್ನ ವೃದ್ದ ತಂದೆ-ತಾಯಿಯನ್ನು ಬುಟ್ಟಿಯಲ್ಲಿ ಕುಳ್ಳಿರಿಸಿ ತೀರ್ಥಯಾತ್ರೆ ಮಾಡಿಸಿದ್ದನ್ನು ಮತ್ತೊಬ್ಬರಿಗೆ ಆದರ್ಶಪ್ರಾಯವೆಂಬ ಉದಾಹರಣೆ ಕೊಡುತ್ತೇವಲ್ಲವೇ, ? […]

ನಿರಂತರ ಪರಿಶ್ರಮದಿಂದ “ಯಶಸ್ಸು”ಗಳಿಸಲು ಸಾಧ್ಯ: ವೇದಾವತಿ ಹೆಚ್. ಎಸ್.

ಪ್ರಪಂಚದಲ್ಲಿ “ಯಶಸ್ಸು”ಎಂಬುದು ಯಾರಿಂದಲೂ ಎರವಲಾಗಿ ಪಡೆಯಲು ಸಾಧ್ಯವಿಲ್ಲ. ನಾವೇ ಕಷ್ಟಪಟ್ಟು ಗುರಿಯನ್ನು ಮುಟ್ಟಿದರೆ ಮಾತ್ರ “ಯಶಸ್ಸು”ನಮ್ಮ ಪಾಲಿಗೆ ಒಲಿಯುತ್ತದೆ. ಮನುಷ್ಯನ ಜೀವನದಲ್ಲಿ ಹಣ, ಕಾರು, ಬಂಗಲೆ, ಅಥವಾ ಬೇರೆಯವರಿಗೆ ಆಫೀಸ್ನಲ್ಲಿ ಕೆಲಸವನ್ನೂ ಕೊಡಿಸಬಹುದು! ಅದರ ಮುಂದಿನ ಗುರಿ, ಜೀವನದಲ್ಲಿ ಸಾಧನೆ ರೂಪದಲ್ಲಿ ಮೆಟ್ಟಿಲು ಏರುವುದೇ “ಯಶಸ್ಸು”. ಯಶಸ್ಸು ಎಂಬುದು ಎಲ್ಲಾ ವಸ್ತುಗಳು ಸಿಗುವಷ್ಟು ಸುಲಭವಾಗಿ ಯಾರಿಗೂ ದೊರಕುವುದಿಲ್ಲ. ಅದನ್ನು ಜಾಣತನದಿಂದ ಸಂಪಾದಿಸಲು ಕಲಿಯಬೇಕು. ಹೊಂಡಾ’ಕಂಪನಿಯ ಹೆಸರನ್ನು ಯಾರು ತಾನೇ ಕೇಳಿಲ್ಲ? ಹೊಂಡಾ ಒಬ್ಬ ಸರಳ ಸ್ವಭಾವದ ವ್ಯಕ್ತಿಯಾಗಿದ್ದ. […]