Facebook

Archive for 2018

ಪಂಜು ಕಾವ್ಯಧಾರೆ

ಹೋಗಬಾರದಿತ್ತು! ಆತ್ಮೀಯ ಸ್ನೇಹಿತ ರೂಮ ಪಾರ್ಟನರ್‍ ಧೀಢರನೆದ್ದು ಹೊರಟೇ ಹೋದ ಏನನ್ನು ಹೇಳದೆ ಕೇಳದೆ ಎಲ್ಲಿ ಕಳೆದು ಹೋದನೋ ಗೊತ್ತಿಲ್ಲ ಆಕಾಶಕ್ಕೆ ಹಾರಿದನೋ, ಭೂಮಿಯೊಳಕ್ಕೆ ಹೂತು ಹೋದನೋ, ಕಾಡಿಗೆ ಹೋದನೋ, ಸುಡಗಾಡಕ್ಕೆ ಹೋದನೋ ಗೊತ್ತಿಲ್ಲ ಹೋಗಿದಂತೂ ನಿಜ ನಮ್ಮನ್ನು ಬಿಟ್ಟು ಈ ಖೋಲೆ ಬಿಟ್ಟು ಇನ್ನೆಲ್ಲಿಗೋ ಅವನಿಗೆ ಅದೇನಾಯಿತೋ ಯಾಕಾದರು ಮನಸು ಬದಲಿಸಿದನೋ ಇನ್ನೂ ಇರುತ್ತೇನೆಂದವನು ಸಡ್ಡನ್ನಾಗಿ ಎದ್ದು ಹೋಗೇ ಬಿಟ್ಟ ದೈವಾಧೀನನಾದನೆಂದೋ ಸ್ವರ್ಗವಾಸಿಯಾದನೆಂದೋ ಜನ ಹೇಳುತ್ತಿದ್ದಾರೆ ನಂಬಲಾಗುತ್ತಿಲ್ಲ ಆತ್ಮೀಯರು ಅಳುತ್ತಿದ್ದಾರೆ ಆಗದವರು ನಗುತ್ತಿದ್ದಾರೆ ಹೋಗುವದೇ ಆಗಿದ್ದರೆ […]

ಜಾಣಸುದ್ದಿ 10: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ […]

ಅಜ್ಜ ನೆಟ್ಟ ಹಲಸಿನ ಮರ: ಸತೀಶ್ ಶೆಟ್ಟಿ. ವಕ್ವಾಡಿ

ಸೂರ್ಯನ ಬೆಳಗಿನ ಬೆಳಕಿಗೆ ಮಂಜಿನ ಹನಿಗಳ ರಂಗಿನಾಟ ಆಗತಾನೆ ಮುಗಿದಿತ್ತು. ಸೂರ್ಯನ ಬೆಳಕಿನ ಅಟ್ಟಹಾಸ ಹೆಚ್ಚಾದಂತೆ ಮನೆ ಎದುರಿನ ಹುಲ್ಲು ಹಾಸಿನ ಮೇಲೆ ಬೆಚ್ಚನೆ ಮಲಗಿದ್ದ ಮಂಜಿನ ಹನಿಗಳು ಒಂದೊಂದಾಗಿ ಕಾಣದ ಗೂಡು ಸೇರುವ ತವಕದಲ್ಲಿದ್ದವು. ಅದೂ ಬೇರೆ ಕಾರ್ತಿಕ ಮಾಸ. ಚಳಿರಾಯನ ಒಡ್ಡೋಲಗಕ್ಕೆ ಆಗಷ್ಟೇ ರಂಗಸಜ್ಜಿಕೆಯ ಹೂರಣವಾಗಿತ್ತು. ಮನೆಯ ಕಣದಲ್ಲಿ ರಂಗು ಮೂಡಿಸಿದ್ದ ಭತ್ತದ ತಿರಿ ಮತ್ತು ಹುಲ್ಲಿನ ಕುತ್ತರಿಗಳಿಂದ ಮೂಗಿಗೆ ಅಪ್ಪಳಿಸುತ್ತಿದ್ದ ಭತ್ತದ ಸುವಾಸನೆ ಮನದ ಮೂಲೆಯಲ್ಲಿ ಹೊಂಗಿರಣದ ಚಿತ್ತಾರ ಬರೆಸಿದ್ದವು. ಮನೆ ಹಿಂದಿನ […]

ಮೆಕ್ಸಿಕೋ ಮೈತ್ರಿ: ಪ್ರಶಸ್ತಿ ಪಿ.

ಕೆಲಸದ ನಿಮಿತ್ತ ಮೆಕ್ಸಿಕೋಗೆ ಬಂದ ಮೊದಲ ದಿನಗಳಲ್ಲಿ ಕಾಡಿದ ದಿಗಿಲುಗಳು ಅಷ್ಟಿಷ್ಟಲ್ಲ. ಭಾರತದ ಮಾಧ್ಯಮಗಳಲ್ಲಿ ಕಂಡ ಹಾದಿಬೀದಿಯಲ್ಲೆಲ್ಲಾ ಡ್ರಗ್ಸ್ ಮಾಡೋ ನಾಡೆಂಬ ಸುದ್ದಿಗಳಾಗಿರಬಹುದು, ರಾತ್ರಿ ಏಳರ ಮೇಲೆ ಹೊರಗೆ ಕಾಲಿಡಬೇಡವೆಂದು ಎಚ್ಚರಿಸುತ್ತಿದ್ದ ಹೋಟೇಲು ರೂಂಮೇಟಾಗಿರಬಹುದು, ಗೊತ್ತಿಲ್ಲದ ಸ್ಪಾನಿಷ್ ಭಾಷೆಯಾಗಿರಬಹುದು, ಇಂಟರ್ ನ್ಯಾಷನಲ್ ರೋಮಿಂಗ್ ಇದ್ದರೂ ಸಿಗ್ನಲ್ ಸಿಗದ ಸಿಮ್ಮಾಗಿರಬಹುದು, ಎಲ್ಲೆಡೆಯೂ ಮಾಂಸದ ಸಾಮ್ರಾಜ್ಯವಾಗಿ ವೆಜ್ಜಿಗಳಿಗೆ ಸಿಗದ ಊಟವಾಗಿರಬಹುದು, ತಮ್ಮ ಕೆಲಸವನ್ನೇ ನೋಡಿಕೊಳ್ಳುತ್ತಾ ಹೆಚ್ಚೇನೂ ನೆರವಾಗದ ಈಗಾಗಲೇ ಅಲ್ಲಿಗೆ ಹೋಗಿದ್ದ ಸಹೋದ್ಯೋಗಿಗಳಾಗಿರಬಹುದು. ಸಿಮ್ಮು ತಗೊಳ್ಳೋಕೆ ನಾಲ್ಕು ದಿನ, ಬ್ಯಾಂಕ್ […]

ಟಚ್ ಸ್ಕ್ರೀನ್: ಸುದರ್ಶನ್.ವಿ

  “ಹಲೋ ಎಲ್ಲಿದ್ದಿಯೋ? ಎಷ್ಟು ವರ್ಷ ಆಯ್ತು ನಿನ್ನ ನೋಡಿ, ಯಾವಾಗ ಸಿಗೋಣ?” “ಹ್ಯಾಟ್ಸ್ ಆಫ್ ಫೇಸ್ ಬುಕ್‍ಗೆ. ನಿನ್ನ ನಂಬರ್ ಸಿಕ್ತು. ನಿಜಕ್ಕೂ ಥ್ಯಾಂಕ್ಸ್ ಈ ಟೆಕ್ನಾಲಜಿಗೆ” … ಈ ಕಡೆ ಒಂದು ಕ್ಷಣ ಮೌನ. ಹೀಗೆ ಅಚಾನಕ್ಕಾಗಿ ಬಂದ ಹಳೆಯ ಗೆಳೆಯನ ಕರೆ ಕೊಂಚ ನನ್ನನ್ನು ಪಾಪ ಪ್ರಜ್ಞೆ ಗೆ ದೂಡಿತು. ಛೇ ನಾನೆಂಥ ಮನುಷ್ಯ…? ಡಿಗ್ರಿ ಮುಗಿದ ನಂತರ ಎಲ್ಲರ ಜೊತೆಗೂ ಸಂಬಂಧ ಕಡಿದುಕೊಂಡು ಬದುಕುತ್ತಿದ್ದೆನಲ್ಲಾ… ಬಾಲ್ಯದ ಗೆಳೆಯರು ಜಯನಗರದ ಮನೆಯನ್ನು ಬಿಟ್ಟು […]

ಸಡಿಲವಾಗುತ್ತಿರುವ ಸಂಬಂಧಗಳು !: ಕೆ ಟಿ ಸೋಮಶೇಖರ ಹೊಳಲ್ಕೆರೆ

ಬದಲಾವಣೆ ಜಗದ ನಿಯಮ! ಪ್ರಕೃತಿ ನಿತ್ಯನೂತನ. ನವನವೀನ! ಬದಲಾಗದಿದ್ದರೆ ಏಕತಾನತೆ ಉಂಟಾಗಿ ಬೇಸರ ಆವರಿಸಿ ಬದುಕಾಗುವುದು ಯಾತನಾಮಯ! ಬದಲಾವಣೆಯ ಗಾಳಿ ತರುವುದು ಉತ್ಸಾಹ. ನವ ಚೇತನ !ಹೊಸ ಚಿಗುರು ಹೂವು ಹಣ್ಣು! ಹೊಸತನ ತುಂಬಿ ಬದುಕಾಗುವುದು ನೂತನ! ಬದಲಾವಣೆಯೇ ಜೀವನಕೆ ಆಗುವುದು ಟಾನಿಕ್ ! ಅವಿಭಕ್ತಕುಟುಂಬಗಳು ಮಾಯವಾಗಿ ವಿಬಕ್ತಕುಟುಂಬಗಳು ಉಂಟಾಗಿರುವುದರಿಂದ, ಜಾತಿ ಧರ್ಮಗಳ ಕಪಿ ಮುಷ್ಟಿಯಿಂದ ಮಾನವ ಮುಕ್ತನಾಗುತ್ತಿರುವುದರಿಂದ, ಆಧುನಿಕ ಬದಲಾದ ಬದುಕಿನಿಂದ, ತಾಂತ್ರಿಕತೆ ಹೆಚ್ಚಾಗಿರುವುದರಿಂದ, ಶಿಕ್ಷಣಕ್ಕೆ, ಹಣಕ್ಕೆ ಪ್ರಾಧಾನ್ಯತೆ ಬಂದುದರಿಂದ, ವೈಯುಕ್ತಿಕ ಸ್ವಾತಂತ್ರ್ಯ ಅತಿಯಾಗಿರುವುದರಿಂದ, ಪಾಶ್ಚಿಮಾತ್ಯರ […]

ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ: ಮೊಕಾಶಿ ಎಂ.ಎಚ್.

“ನಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” ಎಂದು ಸಂಸ್ಕøತ ಶ್ಲೋಕದಲ್ಲಿ ತಿಳಿಸಲಾಗಿದೆ. ಇದರರ್ಥ ಜ್ಞಾನಕ್ಕಿಂತ ಮಿಗಿಲಾದುದು ಮತ್ತು ಪವಿತ್ರವಾದುದು ಇನ್ನೊಂದಿಲ್ಲ. ಜ್ಞಾನವೊಂದು ಸಾರ್ವತ್ರಿಕ ಶಕ್ತಿಯಾಗಿದೆ. ಶಿಕ್ಷಣದ ಪ್ರಮುಖ ಗುರಿ ಜ್ಞಾನಾರ್ಜನೆಯಾಗಿದೆ. ಜ್ಞಾನದಿಂದ ವ್ಯಕ್ತಿಯ ಬದುಕಿನ ಎಲ್ಲ ಕ್ಷೇತ್ರಗಳನ್ನು ಬೆಳಗಿಸಬಹುದಾಗಿದೆ. “ಜ್ಞಾನವೇ ಶಕ್ತಿಯಾಗಿದ್ದು ಅದರಿಂದಲೇ ಎಲ್ಲ ಕೆಲಸಕಾರ್ಯಗಳು ಸಾಧ್ಯ” ಎಂದು ಸಾಕ್ರೆಟಿಸ್ ಹೇಳಿದ್ದಾನೆ. ಜ್ಞಾನವೆಂಬುದು ಕೇವಲ ಮಾಹಿತಿ ಸಂಗ್ರಹಣೆಯಲ್ಲ ಇದು ಮಾನವ ಜನಾಂಗದ ಅನುಭವಗಳ ಸಾರವಾಗಿದೆ. ಯಾವುದೇ ವಸ್ತು ಘಟನೆಯನ್ನು ವಸ್ತು ನಿಷ್ಠೆಯಿಂದ ಪರಾಮರ್ಶಿಸಿ ನೋಡುವ ರೀತಿಯೇ ಜ್ಞಾನವಾಗಿದೆ. […]

ಕನಸಿನಲ್ಲು ಕನವರಿಸುವಂತ ಪ್ರೀತಿ ಕೊಟ್ಟವಳೇ..: ಸಿದ್ದುಯಾದವ್ ಚಿರಿಬಿ.

ನೆಲದ ಮಣ್ಣು ಒಲುಮೆ ಕಣ್ಣು ತೆರಯಬಹುದು ಪ್ರೇಮದ ಹೆಣ್ಣು ಕನಸು ಮನಸುಗಳ ಬೆಸಗೆಯಲ್ಲಿ ನಮ್ಮಿಬ್ಬರ ಹೃದಯ ಮಿಲನದ ನವಿಲ ನರ್ತನವು ಪ್ರೇಮ ಕಾಶಿಯಲಿ…., ಜಗತ್ತಿನಲ್ಲಿ ಪ್ರೇಮವೇ ಧರ್ಮವೆಂದು ನಂಬಿಕೊಂಡು ಬಂದವರಲ್ಲಿ ಪ್ರೀತಿಯ ಜಲಪಾತ ಹೃದಯಂತರಾಳದಲ್ಲಿ ಧುಮ್ಮಿಕ್ಕುತ್ತದೆ. ನಿನ್ನೊಲವಿನ ಅಮಲಿನಲ್ಲೂ ಪ್ರೇಮ ನಳನಳಿಸುತ್ತದೆ ಸ್ವೀಟಿ. ಬಿರು ಬೇಸಿಗೆಯಲ್ಲೂ ಮುಂಗಾರಿನ ಅಭಿಷೇಕವಾಗುವಂತೆ ನಿನ್ನ ಒಲವಿನ ಮುಂಗಾರಿನ ಮಳೆ ನನ್ನೆದೆಯ ನೆಲದ ಮೇಲೆ ಸುರಿಯುತ್ತಿದೆ ಸಖಿ. ಕಾಡುವ ಕನಸಾಗಿ, ಪ್ರೀತಿಗೆ ಒಲವಾಗಿ, ಬದುಕಿಗೆ ಛಲವಾಗಿ ನನ್ನ ಜೀವನದ ಜ್ಯೋತಿ ನೀನಾಗಿ, ನನ್ನೊಂದಿಗೆ […]

ಬದುಕು ಸ್ನೇಹಮಯವಾಗಿರಲಿ ಬದುಕು ಸುಂದರ!!: ಗೂಳೂರು ಚಂದ್ರು

ಸ್ನೇಹ ಅಂದ ತಕ್ಷಣ ಮನಸ್ಸಿಗೆ ಬರೋದು ಒಂದು ಆಗಾದವಾದ ಸಂಬಂಧ, ಸಂಬಂಧಗಳ ಬಗ್ಗೆ ಗೊತ್ತಿಲ್ಲದವರಿಗೆ ನಿಜವಾಗಿಯೂ ಸ್ನೇಹದ ಮೌಲ್ಯ ಗೊತ್ತಿರಲಿಕ್ಕೆ ಸಾಧ್ಯವೇ ಇಲ್ಲ. ಅದು ಪಕ್ಕಕಿರಲಿ ಬಿಡಿ. ನಮ್ಮನ್ನ ಆಳವಾಗಿ ಅಧ್ಯಯನ ಮಾಡಿ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕನಾಗಿ ಸ್ಬಂದಿಸಿಕೊಂಡು ಸರಿದೂಗಿಸುವವರು ನಿಜವಾದ ಸ್ನೇಹಿತರು. ಈಗಿನ ಜಮಾನದಲ್ಲಿ ನಮ್ಮನ್ನ ಅರ್ಥ ಮಾಡಿಕೊಂಡವರು ಎಷ್ಟು ಜನ ಅಂತ ಯೋಚನೆ ಮಾಡಿದರೆ ಸಿಗವವರು ಬೆರಳೆಣಿಕೆಗಿಂತ ಕಡಿಮೆ. ಇಲ್ಲಿ ಎಲ್ಲಾ ನಿರೀಕ್ಷೆಗಳನ್ನ ಇಟ್ಟುಕೊಂಡು ಬರುವವರು ಹೆಚ್ಚು. ಮೊನ್ನೆ ನನ್ನ ಸ್ನೇಹಿತ ಫೋನ್ […]

ಬೆಸುಗೆ: ವೇದಾವತಿ ಹೆಚ್.ಎಸ್.

ಪಡುವಣದಂಚಿನಲ್ಲಿ ದಿನಕರನು ಮುಳುಗುತ್ತಿರುವ ಸಮಯದಲ್ಲಿ ಕಟಕಿಯಿಂದ ದೂರಾಚೆಯ ಗಿರಿ ಶಿಖರವನ್ನು ದಿಟ್ಟಿಸಿ ನೋಡುತ್ತಿದ್ದಾಗ ರಾಷ್ಟ್ರಕವಿ ಶಿವರುದ್ರಪ್ಪನವರ ಕವಿತೆ ನೆನಪಾಗುತ್ತದೆ. “ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ” ಎಷ್ಟೊಂದು ಅರ್ಥವಿದೆ. ಇಲ್ಲೋಬ್ಬರು ನಮ್ಮಲ್ಲಿ ಕೇಳುತ್ತಿದ್ದರು. “ಎಷ್ಟು ವರ್ಷವಾಯಿತು ಕಾರು ತೆಗೆದುಕೊಂಡು?ಇನ್ನೂ ಹೊಸದಾಗಿ ತೆಗೆದುಕೊಂಡು ಬಂದ ಹಾಗೆ ಇದೆಯಲ್ಲ?ವರ್ಷಕ್ಕೆ ಎಷ್ಟು ಬಾರಿ ಸರ್ವೀಸ್ ಮಾಡುತ್ತೀರಾ? ನಮ್ಮ ಕಾರು ನೋಡಿ ಹೇಗಿದೆಯೆಂದು. ಕಂಪನಿ ಚೆನ್ನಾಗಿಲ್ಲ. ಲಕ್ಷಗಟ್ಟಲೆ ಹಣ ಕೊಟ್ಟು […]