ಸಾಮಾನ್ಯ ಜ್ಞಾನ (ವಾರ 90): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: 1.    ರಾಷ್ಟ್ರೀಯ ಯಕ್ಷಗಾನ ತರಬೇತಿ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ? 2.    ಎನ್.ಟಿ.ಪಿ.ಸಿ ನ (NTPC) ವಿಸ್ತೃತ ರೂಪವೇನು? 3.    ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ? 4.    ಯುರೋಪಿನ ಯಾವ ನಗರವನ್ನು ಬಿಳಿಯ ನಗರ ಎಂದು ಕರೆಯುತ್ತಾರೆ? 5.    ಗಾಂಧೀಜಿಯವರನ್ನು ಕುರಿತು ಪ್ರಥಮ ಬಾರಿಗೆ ಕನ್ನಡದಲ್ಲಿ ಗ್ರಂಥವನ್ನು ರಚಿಸಿದವರು ಯಾರು? 6.    ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು? 7.    ಪರಾಗ ಸ್ಪರ್ಶಕ್ಕಾಗಿ ಕೀಟಗಳನ್ನು ಆಕರ್ಷಿಸುವ ಹೂವಿನ ಭಾಗ ಯಾವುದು? 8.   … Read more

ಕಾವ್ಯ ಧಾರೆ

ಮನೆ ಮಾತು ಮೌನ ಜಂಟಿ ಸದನ ಅನಿವಾರ್ಯತೆ ಖಡಕ್ ಅಧಿಕಾರಿಯೂ  ಸೇವಕನ  ಗುಲಾಮ ಸಮಾಧಾನ ಹಗಲಿನ ನಿರೀಕ್ಷೆಗಳಿಗೆ ರಾತ್ರಿ ಸ್ವಪ್ನ ಸ್ಖಲನ! ತಳ್ಳಾಟ ಹೆಣ್ಣಿನ  ತಾರತಮ್ಯಕ್ಕೆ ತವರು ಮನೆಯೆ ತೊಟ್ಟಿಲು! ಅಲ್ಲಿಂದಲೇ ತಳ್ಳಾಟ ಒಂದೊಂದೆ  ಮೆಟ್ಟಿಲು! ಕರಕುಂಡ ಪುಟಾಣಿ ಕಂದನ ನಗೆಮೊಗ್ಗು ಹೂವಾಯ್ತು ಅಮ್ಮನ ಕರ ಕುಂಡದಲ್ಲಿ ಮರದ ಹನಿ ಮಳೆ ಸುರಿದರೆ ಮರಗಿಡಗಳಿಗೆ ಅದೆಂಥ ಪುಳಕ ಮಳೆ ನಿಂತ ಮೇಲೂ ಹನಿ ಹನಿ ಜಳಕ! ಮೊದಲರಾತ್ರಿ ಮಾತು ಬೆಳ್ಳಿ ಮೌನ ಬಂಗಾರ ಮೊದಲ ರಾತ್ರಿ ಶೃಂಗಾರ … Read more

ಕಾಣದ ಕಣ್ಣಲಿ ಕಾಡುವ ಕಣ್ಣೀರು: ಕ.ಲ.ರಘು.

ಅದೊಂದು ದಿನ ಸಂಜೆ ನನ್ನ ಪಯಣ ಬೆಂಗಳೂರಿನ ಕಡೆಗೆ ಸಾಗಿತ್ತು. ನನ್ನ ಸಂಬಂಧಿಕರ ಮದುವೆಸಮಾರಂಭಕ್ಕೆ ಹೋಗಬೇಕಾಗಿದ್ದರಿಂದ ನನ್ನ ವೃತ್ತಿ ಮುಗಿಸಿಕೊಂಡು ಕೆಎಸ್‍ಆರ್‍ಟಿಸಿ ಬಸ್‍ಗೆ ಹತ್ತಿದೆ. ಮನಸಿಗೆ ಉಲ್ಲಾಸ ನೀಡುವ ಮೌನಗೀತೆ ಹಾಗೂ ಭಾವಗೀತೆಗಳನ್ನು ಕೇಳುವ ಹವ್ಯಾಸ ಸ್ವಲ್ಪ ಇರುವುದರಿಂದ ಏನಾಗಲಿ ಮುಂದೆ ಸಾಗು ನೀ ಎಂಬ ಗೀತೆಯನ್ನು ಕೇಳುತ್ತಾ ಪ್ರಯಾಣ ಆರಂಭವಾಗಿ ಚಂದಿರ ಬರುವ ವೇಳೆಗೆ ಬೇಂಗಳೂರು ತಲುಪಿದೆ.  ಪ್ರಯಾಣ ಅಲ್ಲಿಗೆ ಮುಗಿಯಲಿಲ್ಲ ಅಲ್ಲಿಂದ ನಮ್ಮ ಸಂಬಂಧಿಕರ ಕಾರಿನಲ್ಲಿ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಹೊರಟೆ. ಹಿಂದೆ ಮುಂದೆ … Read more

“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಭಾಗ 3): ಪ್ರಸಾದ್ ಕೆ.

ಇಲ್ಲಿಯವರೆಗೆ ಶ್ರಮಜೀವಿ ವಾರಿಸ್ ಮೆಕ್ ಡೊನಾಲ್ಡ್ ರೆಸ್ಟೊರೆಂಟಿನಲ್ಲಿ ನಿಷ್ಠೆಯಿಂದ ದುಡಿಯುತ್ತಾ ದಿನ ತಳ್ಳುತ್ತಿರುತ್ತಾಳೆ. ಆಗೊಮ್ಮೆ ಈಗೊಮ್ಮೆ ಹಾಲ್ವು ಳೊಂದಿಗೆ ವಾರಾಂತ್ಯಗಳಲ್ಲಿ ಕ್ಲಬ್ ಗಳಿಗೆ ತೆರಳಿ ಮಂದಬೆಳಕಿನಲ್ಲಿ ವೈಭವಿಸುವ ಹಾಡು, ನೃತ್ಯ, ಮದ್ಯಗಳನ್ನು ನಿರ್ಲಿಪ್ತತೆಯಿಂದ ಮೂಲೆಯಲ್ಲಿ ನಿಂತು ಸುಮ್ಮನೆ ನೋಡುತ್ತಿರುತ್ತಾಳೆ. ನಗರದ ಜನರ ಮುಕ್ತ ಲೈಂಗಿಕತೆ ಅವಳಿಗೆ ಅಸಹ್ಯ ಉಂಟುಮಾಡಿದರೆ, ಮೂತ್ರವಿಸರ್ಜನೆಗೂ ಬಾತ್ ರೂಮಿನಲ್ಲಿ ಬಹುಹೊತ್ತು ಹೊಟ್ಟೆಹಿಡಿದುಕೊಂಡು ನರಳಬೇಕಾಗಿ ಒದ್ದಾಡುವ ಅನಿವಾರ್ಯತೆ, ನೋವನ್ನು ಯಾರಲ್ಲೂ ಹೇಳಿಕೊಳ್ಳಲಾಗದ ಎಫ್.ಜಿ.ಎಮ್ ಬಗೆಗಿನ ಕೀಳರಿಮೆ ಅವಳನ್ನು ಮಾನಸಿಕವಾಗಿ ಬಳಲಿಸುತ್ತದೆ. ಆ ದಿನಗಳಲ್ಲಿ ತಕ್ಷಣದ … Read more

ಕಾಡು(ವ) ಕಟ್ಟುವ ಕತೆ!! ಭಾಗ-4: ಅಖಿಲೇಶ್ ಚಿಪ್ಪಳಿ

ಶುಭಸೂಚನೆ ನೀಡಿ ಬಂದ ಮಳೆ ಅದೇಕೋ ಮತ್ತೆ ಮುನಿಸಿಕೊಳ್ಳುವ ಹವಣಿಕೆಯಲ್ಲಿದ್ದಂತೆ  ತೋರಿತು. ಇನ್ನಷ್ಟು ಜನರನ್ನು ಕರೆದುಕೊಂಡು ಬಂದು ಆದಷ್ಟು ಬೇಗ ಗಿಡ ನೆಡಲು ತರಾತುರಿ ಮಾಡಿದೆ. ಆಳುಗಳ ನಿರ್ವಹಣೆ ಮಾಡುವ ನಿರ್ವಾಹಕನಿಗೆ ಕೆಲವು ಷರತ್ತುಗಳನ್ನು ಮೊದಲೇ ಹಾಕಿದ್ದೆ. ಗಿಡಗಳನ್ನು ನೆಟ್ಟ ನಂತರ ಖಾಲಿ ಪ್ಲಾಸ್ಟಿಕ್ ಕೊಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಯಾವುದೇ ಪ್ರಾಣಿ-ಪಕ್ಷಿ-ಕೀಟ-ಹಾವು-ಕಪ್ಪೆಗಳನ್ನು ಅಪ್ಪಿ-ತಪ್ಪಿಯೂ ಕೊಲ್ಲಬಾರದು. ಅಕೇಶಿಯಾ-ನೀಲಗಿರಿ ಹಾಗೂ ಯುಪಟೋರಿಯಂ ಬಿಟ್ಟು ಮತ್ಯಾವುದೇ ನೈಸರ್ಗಿಕ ಗಿಡ-ಬಳ್ಳಿ-ಮುಳ್ಳುಕಂಟಿಗಳನ್ನು ಕಡಿಯಬಾರದು. ಈ ಯಾವುದೇ ಷರತ್ತುಗಳನ್ನು ಉಲ್ಲಂಘನೆ ಮಾಡಿದರೂ ಮತ್ತೆ ಕೆಲಸಕ್ಕೆ ಬರುವುದು … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಾವು ಪಕ್ಕಾ ಕೆಲಸಗಾರರು ಒಮ್ಮೆ ನಜ಼ರುದ್ದೀನ್ ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಒಂದು ದಿನ ಒಬ್ಬಾತ ಅವನ ಹತ್ತಿರ ಓಡಿ ಬಂದು ಹೇಳಿದ, “ಈ ಹಳ್ಳಿಯ ಗಡಿಯ ಸಮೀಪದಲ್ಲಿ ನನ್ನನ್ನು ಲೂಟಿ ಮಾಡಿದ್ದಾರೆ. ಕಳ್ಳ ನನ್ನ ಹತ್ತಿರವಿದ್ದ ಎಲ್ಲವನ್ನೂ ಕಿತ್ತುಕೊಂಡಿದ್ದಾನೆ – ನನ್ನ ಪಾದರಕ್ಷೆಗಳು, ನನ್ನ ಷರಾಯಿ, ನನ್ನ ಅಂಗಿ, ನನ್ನ ಮೇಲಂಗಿ, ನನ್ನ ಕಂಠಹಾರ, ನನ್ನ ಕಾಲುಚೀಲಗಳನ್ನೂ ಬಿಡಲಿಲ್ಲ – ನನ್ನ ಹತ್ತಿರವಿದ್ದ ಎಲ್ಲವನ್ನೂ ಕಿತ್ತುಕೊಂಡ. ಅವನನ್ನು ಪತ್ತೆಹಚ್ಚಿ ನನಗೆ ನ್ಯಾಯ ಕೊಡಿಸಿ.” ನಜ಼ರುದ್ದೀನ್‌ ಹೇಳಿದ, … Read more

ಪುರಾಣಂ ಪರಾಭವಂ’ನ ಒಂದು ರಂಗ ನೋಟ: ಮಂಜುಳಾ ಎಸ್.

ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ, ಮೈಸೂರು, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಾವಣಗೆರೆ ಹೀಗೆ ಕರ್ನಾಟಕದ ವಿವಿಧ ಭಾಗಗಳಿಂದ, ವಿವಿಧ ರೀತಿಯ ಸಂಸ್ಕøತಿ, ಸಾಮಾಜಿಕ ಹಿನ್ನಲೆಯನ್ನು ಹೊತ್ತು ಬಂದಿರುವ ನಮ್ಮ ತೆನೆ ಗುಂಪಿನಲ್ಲಿ, ಕೌರವರ ಜೊತೆ ಪಾಂಡವರು ಪಗಡೆಯಾಟದಲ್ಲಿ ಸೋತಾಗ ದ್ರೌಪದಿ ಬೆತ್ತಲಾಗಿದ್ಲು, ಪ್ರಸ್ತುತ ಕತ್ತಲಲ್ಲೂ, ಬೆಳಕಲ್ಲೂ ದೇವದಾಸಿ ವ್ಯವಸ್ಥೆಯಲ್ಲಿ, ಲೈಂಗಿಕ ಕಾರ್ಯಕರ್ತೆಯರಾಗಿ, ಬೇರೆ ಬೇರೆ ಕಾರಣಗಳಿಂದ, ಅನಿವಾರ್ಯತೆಗಳಿಂದ, ಬೆತ್ತಲಾದ ವ್ಯವಸ್ಥೆಯಿಂದ ಬಂದವರು, ನಮ್ಮ ಜೀವನದಲ್ಲಿ ಇನ್ಯಾರೋ ಬಂದು ನಿರ್ಧಾರದ ಅಧಿಕಾರ ಚಲಾಯಿಸುವ ವ್ಯವಸ್ಥೆಯನ್ನು … Read more