Facebook

Archive for 2016

ಪಂಜು ಕಾವ್ಯಧಾರೆ

ಮುಖವಾಡ!  ನಮಗೆ,  ಹುಟ್ಟುತ್ತಲೆ ತೊಡಿಸುತ್ತಾರೆ ಜಾತಿ ಧರ್ಮದ ಮುಖವಾಡ ದೊಡ್ಡವರಾಗುತ್ತಲೆ ಮತ್ತೆ ನಾವೆ ತೊಡುತ್ತೇವೆ ಬಣ್ಣ ಬಣ್ಣದ ಮುಖವಾಡ ನಂಬಿದ ಹೆಂಡತಿಯ ಎದರು ನಂಬದ ಗೆಳತಿಯೆದರೂ ಪ್ರೀತಿಸುವ ಮಿತ್ರನ ಎದರು ದ್ವೇಷಿಸುವ ಶತ್ರುಗಳೆದರೂ ನಮ್ಮ ವೃತ್ತಿಗೊಂದರಂತೆ ಇದೆ ಮುಖವಾಡ ಪ್ರವೃತ್ತಿಯಾಗಿ ಮತ್ತೆ ಬೇರೆ ಮುಖವಾಡ ಸಾರ್ವಜನಿಕ ಬದುಕಿನಲ್ಲಿ ಮುಖವಾಡಗಳದೆ ಮೇಲುಗೈ ಮುಖವಾಡವಿಲ್ಲದೆ ಕ್ಷಣಹೊತ್ತು ಬದುಕಲಾರೆವು ನಾವು ನಾವು ಮುಖವಾಡ ಕಳಚುತ್ತಲೆ ಇಲ್ಲ ಕನ್ನಡಿ ತೋರುವ ಮುಖ ನಮ್ಮದೆಂದು ನಂಬಿರುವೆವು ಎಲ್ಲ ನಿಜವಾಗಿ ನಾವು ನಾವೇ ಅಲ್ಲ ಯಾರು […]

ಲಂಕೇಶ್ ಮತ್ತು ಮನಶಾಸ್ತ್ರ: ಶ್ರೀಮಂತ್ ಯನಗುಂಟಿ

ಪಿ.ಲಂಕೇಶ್. ಕನ್ನಡ ಸಾಹಿತ್ಯದಲ್ಲಿ ತುಂಬಾ ಪರಿಚಿತ ಮತ್ತುಆತ್ಮಿಯ ಹೆಸರು. ಈಗಾಗಲೇ ಲಂಕೇಶ್‍ರ ಬದುಕು ಮತ್ತು ಬರಹದ ಬಗ್ಗೆ ಅನೇಕ ಬರಹಗಾರರು ಕೃತಿಗಳನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಏಕೆ ಸ್ವತಃ ಲಂಕೇಶರೇ ತಮ್ಮ ಆತ್ಮಚರಿತ್ರೆ "ಹುಳಿಮಾವಿನ ಮರ"ವನ್ನು ನಮ್ಮಕೈಗಿಟ್ಟು ಹೋಗಿದ್ದಾರೆ. ಆದರೆ ಒಂದು ಮಾತ್ರ ನಿಜ. ಆ ಬರಹಗಳನ್ನೆಲ್ಲ ಮತ್ತೆ ಮತ್ತೆಓದಿದ ಹಾಗೆ ಮತ್ತೆ ಮತ್ತೆ ಲಂಕೇಶರ ವಿಭಿನ್ನ ಮನಸ್ಥಿತಿಗಳ ಅರಿವು ಗಾಢವಾಗುತ್ತಾ ಹೋಗುತ್ತದೆ. ಮೊದಲಿಗೆ ಓದಿದಾಗ ಲಂಕೇಶ ಒಬ್ಬ ಉತ್ತಮ ವಿಚಾರವಾದಿ ಹಾಗೂ ಸಮಾಜವಾದಿ ಎನಿಸಬಹುದು. […]

ಜಾತ್ಯಾಗೇನೈತಿ ಸುಡಗಾಡ: ತಿರುಪತಿ ಭಂಗಿ

       ಅಂವ ಉಳಿಯೋದ ಗ್ಯಾರಂಟಿ ಇಲ್ಲ. ನಾಂವ sಮಾಡಬೇಕಾದ ಪ್ರಯತ್ನಾ ಎಲ್ಲಾ ಮಾಡಾಕ ಹತ್ತೀವಿ. ಮಿಕ್ಕಿದ್ದ ಆ ದೇವ್ರಿಗೆ ಬಿಟ್ಟದ್ದ ಅನಕೋತ ಕೈಯಾಗ ಒಂದ ದೇಹಾ ಚಕ್ಕಮಾಡುವ ಮಶಿನ್ ಹಿಡಕೊಂಡ ಮಾತಾಡಕೋತ ಮಾತಾಡಕೋತ ಕಂಚಿ ಡಾಕ್ಟರ್ ಆಫ್ರೇಶನ್ ಥೇಟರ್ಗೆ ಹೊಂಟ. ಬಿಳಿ ಸೀರಿ,ಬಿಳಿ ಜಂಪರ್ ತೊಟ್ಟ, ಮೂಗಿಗೆ ಎತ್ತಗೊಳಿಗೆ ಹಾಕಿದಂಗ ಒಂದ ಬಾಯಿಬುಟ್ಟಿ ಹಕ್ಕೊಂಡ, ಮನಿ ಕಳ್ಳತನಾ ಮಾಡಾಕ ಬಂದ ಕಳ್ಳರಂತೆ ವೇಷಧಾರಿ ನರಸಬಾಯಿಗೋಳು ಡಾಕ್ಟರ್ ಹಿಂದ ಮುಂದ ಪಾದರಸದ ಹಂಗ ಆ ಕಡೆಯಿಂದ ಈ […]

ಸಕಲ ಕುಲತಿಲಕ ಶ್ರೀಕನಕದಾಸರು!: ಹೊರಾ.ಪರಮೇಶ್ ಹೊಡೇನೂರು

ಶ್ರೀ ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಬಹಳ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ದಾಸ ಶ್ರೇಷ್ಠರೆಂದು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಗಣನೀಯ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ "ಅಶ್ವಿನಿ ದೇವತೆ"ಗಳೆಂದು ಬಣ್ಣಿಸಲಾಗಿದೆ. ಕನಕದಾಸರು ಆರಂಭದಲ್ಲಿ ದಂಡನಾಯಕರಾಗಿದ್ದು […]

ಸುಬ್ರಹ್ಮಣ್ಯ ಸುತ್ತಮುತ್ತ: ಪ್ರಶಸ್ತಿ

ಸುಮಾರಷ್ಟು ಜನರಿಗೆ ಸುಬ್ರಹ್ಮಣ್ಯ ಅಂದ್ರೆ ಅಲ್ಲಿ ನಡೆಯೋ ನಾಗಪ್ರತಿಷ್ಟೆ, ಆಶ್ಲೇಷ ಬಲಿಗಳು ನೆನಪಾಗುತ್ತೆ. ಟ್ರೆಕ್ಕಿಂಗು ಅಂತ ಹೋಗೋರಿಗೆ ಅದಕ್ಕೆ ಸಮೀಪದಲ್ಲಿರೋ ಕುಮಾರ ಪರ್ವತ ನೆನಪಾಗಬಹುದು. ಆದರೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂದಿರುವ ಮರಕತ ಪರ್ವತ ಗೊತ್ತಾ ಎಂದರೆ, ಆದಿ ಸುಬ್ರಹ್ಮಣ್ಯ, ಕಾಶಿ ಕಟ್ಟೆ ಗಣಪತಿ, ಅಭಯ ಗಣಪತಿ, ವನದುರ್ಗಾ ದೇವಿ ನೋಡಿದ್ದೀರಾ ಎಂದರೆ ಎಲ್ಲಿದೆಯಪ್ಪಾ ಇವು ಎನ್ನಬಹುದು. ಸುಬ್ರಹ್ಮಣ್ಯದಿಂದ ೨೦ ಕಿಮೀ ದೂರದ ಒಳಗಿರುವ ಪಂಜ ಪಂಚಲಿಂಗೇಶ್ವರ ದೇವಸ್ಥಾನ, ಬಿಳಿನೆಲೆ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ, ಬನವನ ಮೂಲೆ ಈಶ್ವರ […]

ಮೂಕ ಪ್ರಾಣಿಯ ಪ್ರೀತಿ: ಪ್ರವೀಣ ಕಾಗಾಲ.ಕುಮಟಾ.

                 ಅದೊಂದು ಪುಟ್ಟ ಊರು.  ಆ ಊರಿನಲ್ಲಿ ಸೊಮೇಗೌಡ ಎಂಬ ಮಧ್ಯಮವರ್ಗದ ವ್ಯಕ್ತಿಯು ತನ್ನ ಹೆಂಡತಿ ಹಾಗೂ ಎರಡು ಮಕ್ಕಳೊಂದಿಗೆ ಬಾಳ್ವೆ ನಡೆಸುತ್ತಿದ್ದನು. ಸೊಮೆಗೌಡನು ಇತರರಿಗೆ ಯಾವಾಗಲೂ ಸಹಾಯ ಮಾಡುತ್ತ ತನ್ನ ಎರಡು ಮಕ್ಕಳನ್ನು ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸಲು ಇವರು ಶ್ರಮಿಸುತ್ತಿದ್ದರು. ಸೊಮೇಗೌಡನ ಮಗನ ಹೆಸರು ನಿಖಿಲ್. ಹತ್ತನೆಯ ತರಗತಿಯಲ್ಲಿ ಓದುತ್ತಿದ್ದನು. ಮಗಳ ಹೆಸರು ರೂಪಾ. ಇವಳು ನಿಖಿಲ್ ಗಿಂತ ಎರಡು ವರ್ಷ ದೊಡ್ಡವಳಾಗಿದ್ದಳು. ನಗರದ ಕಾಲೇಜಿನಲ್ಲಿ ಪಿ. ಯು. ಸಿ. […]

“ಮನದಾಳ”: ಟಿ.ಎ.ಗೋಪಾಲ 

    ಹಲವು ದಿನದ ಹಂಬಲ, ತಿಳಿಯುವ ಆಸೆ, ಅರಿಯುವ ಬಯಕೆ, ಬಂದನದಿಂದ ಹೊರಬರುವ ಚಿಂತನೆ. ಅದೇನೊ ನನ್ನ ಬೆನ್ನ ಹಿಂದೆ ಬಿದ್ದು ಎಳೆಯುತಿದೆ ಎಂದು ಕೆಲವು ಬಾರಿ ಬಾಸವಾಗುತ್ತದೆ. ಇದೆಲ್ಲವನ್ನು ತಿಳಿದುಕೊಳ್ಳಲು ಒಂದು ದಿನ ನನ್ನನ್ನು ನಾನು ವಿಶ್ಷ್ಲೇಷಿಸಿದೆ, ಹಲವಾರು ಸತ್ಯಾಂಶಗಳು ಕಂಡುಬಂದವು, ಅವು ಮನದಲ್ಲಿ ಗೊಂದಲ, ಜಂಜಾಟ, ಅಸಮಾದಾನ, ಅಶಾಂತಿ, ಉನ್ಮಾದ ಮತ್ತು ಎನೋ ಒಂದು ತರಹದ ಭಯ. ಇವೆಲ್ಲವು ಬೊರ್ಗರೆಯುವ ವೇಗದಲ್ಲಿ ಸಂಚಲಿಸುತ್ತಿವೆ, ಇದನ್ನು ಹಿಡಿದು ನಿಲ್ಲಿಸುವ ಯೋಚನೆ ಆದರೆ ಸಾದ್ಯವಾಗುತ್ತಿಲ್ಲ, ಹಲವು […]

ಶತಮಾನದ ಅಧ್ಬುತಗಳಲ್ಲೊಂದು-ಗೋಲ್ಡನ್ ಗೇಟ್ ಬ್ರಿಡ್ಜ್: ಪ.ನಾ.ಹಳ್ಳಿ.ಹರೀಶ್ ಕುಮಾರ್

ಇಲ್ಲೊಂದು ಸೇತುವೆಯಿದೆ. ಇದನ್ನು ನೋಡಿದವರೆಲ್ಲಾ ಇದೊಂದು ಇಪ್ಪತ್ತನೇ ಶತಮಾನದ ಅದ್ಭುತಗಳಲ್ಲೊಂದು ಎಂದು ಉಧ್ಗರಿಸುತ್ತಾರೆ. ಅಲ್ಲದೇ ಇದನ್ನು ಶತಮಾನದ ಅದ್ಬುತಗಳಲ್ಲೊಂದು ಎಂದೂ ಘೋಷಿಸಲಾಗಿದೆ. ಜಗತ್ತಿನ ಮೊದಲ ತೂಗುಸೇತುವೆಯೂ ಇದೇ ಆಗಿದೆ ಎಂದರೆ ಆಶ್ಚರ್ಯವಲ್ಲ. ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ಮೇಲಿರುವ ಈ ತೂಗುಸೇತುವೆಯು 1.7 ಮೈಲುಗಳಷ್ಟು ಉದ್ದವಿದ್ದು, ಸ್ಯಾನ್ ಫ್ರಾನ್ಸಿಸ್ಕೋದ ಉತ್ತರ ತುದಿಯನ್ನು ಮರೀನ್‍ಕೌಂಟಿಯ ಸಸಲಿಟೋದೊಂದಿಗೆ ಸೇರಿಸುತ್ತದೆ. ಆಧುನಿಕ ಜಗತ್ತಿನ 7 ಅಧ್ಬುತಗಳಲ್ಲಿ ಗೋಲ್ಡನ್ ಗೇಟ್ ಬ್ರಿಡ್ಜ್ ಕೂಡಾ ಒಂದು. ಸ್ಯಾನ್‍ಫ್ರಾನ್ಸಿಸ್ಕೋ ಕೊಲ್ಲಿಯ ಮೇಲಿರುವ ಈ ತೂಗುಸೇತುವೆ ಮುಖ್ಯವಾಗಿ ಎರೆಡು […]