ಮೂಕ ಪ್ರಾಣಿಯ ಪ್ರೀತಿ: ಪ್ರವೀಣ ಕಾಗಾಲ.ಕುಮಟಾ.

                 praveen-kagal

ಅದೊಂದು ಪುಟ್ಟ ಊರು.  ಆ ಊರಿನಲ್ಲಿ ಸೊಮೇಗೌಡ ಎಂಬ ಮಧ್ಯಮವರ್ಗದ ವ್ಯಕ್ತಿಯು ತನ್ನ ಹೆಂಡತಿ ಹಾಗೂ ಎರಡು ಮಕ್ಕಳೊಂದಿಗೆ ಬಾಳ್ವೆ ನಡೆಸುತ್ತಿದ್ದನು. ಸೊಮೆಗೌಡನು ಇತರರಿಗೆ ಯಾವಾಗಲೂ ಸಹಾಯ ಮಾಡುತ್ತ ತನ್ನ ಎರಡು ಮಕ್ಕಳನ್ನು ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸಲು ಇವರು ಶ್ರಮಿಸುತ್ತಿದ್ದರು. ಸೊಮೇಗೌಡನ ಮಗನ ಹೆಸರು ನಿಖಿಲ್. ಹತ್ತನೆಯ ತರಗತಿಯಲ್ಲಿ ಓದುತ್ತಿದ್ದನು. ಮಗಳ ಹೆಸರು ರೂಪಾ. ಇವಳು ನಿಖಿಲ್ ಗಿಂತ ಎರಡು ವರ್ಷ ದೊಡ್ಡವಳಾಗಿದ್ದಳು. ನಗರದ ಕಾಲೇಜಿನಲ್ಲಿ ಪಿ. ಯು. ಸಿ. ದ್ವಿತೀಯ ವರ್ಷದಲ್ಲಿ ಓದುತ್ತಿದ್ದಳು.  ರೂಪಾಳಿಗೆ ತನ್ನ ತಂದೆ ತಾಯಿಯೆಂದರೆ ಪಂಚಪ್ರಾಣ . . ಹಾಗೇ ಅವಳು ಚಿಕ್ಕಂದಿನಿಂದಲೂ ಇಷ್ಟಪಡುತ್ತಿದ್ದ ನಾಯಿಯನ್ನು ಕಂಡರೆ ಬಲು ಅಚ್ಚುಮೆಚ್ಚು. ಆ ನಾಯಿಗೂ ರೂಪಾಳನ್ನು ಕಂಡರೆ ಏನೋ ಒಂದು ರೀತಿಯಲ್ಲಿ ಇಷ್ಟವಾಗುತಿತ್ತು. ರೂಪಾಳು ಏನೇ ಹೇಳಿದರೂ ಆ ನಾಯಿಯು ಚಾಚುತಪ್ಪದೇ ಮಾಡುತಿತ್ತು. ರೂಪಾ ಕಾಲೇಜಿಗೆ ಯಾವತ್ತೂ ತಪ್ಪದೆ ಹೋಗುತ್ತಿದ್ದಳು. ಬಹಳ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು.  ರೂಪಾ ಓದುವ ಕಾಲೇಜಿನಲ್ಲಿ  ಶ್ರೀಮಂತ ಮನೆತನದಿಂದ ಬಂದಿದ್ದ ದಿಲೀಪ ಎಂಬಾತನು ಕೂಡ ಓದುತ್ತಿದ್ದನು. ತಾನು ಶ್ರೀಮಂತ ಎಂಬ ಅಹಂ ಅವನಲ್ಲಿ ಎದ್ದು ಕಾಣುತಿತ್ತು. ಇವನಿಗೆ ಹುಡುಗಿಯರ ಜೊತೆಗೆ ಸ್ನೇಹ ಬೆಳೆಸಿ ಅವರ ಜೊತೆ ಚೆಲ್ಲಾಟ ಆಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು.

 ರೂಪಾಳಿಗೆ ಕೂಡ ಇವನನ್ನು ಕಂಡರೆ ಇಷ್ಟವಾಗುತ್ತಿರಲಿಲ್ಲ.  ಅವನನ್ನು ಕಂಡರೆ ಬಹಳ ದೂರ ಹೋಗುತ್ತಿದ್ದಳು.  ರೂಪಾ ಇಡೀ ಕಾಲೇಜಿನಲ್ಲಿಯೇ ಅತ್ಯಂತ ಸುಂದರಿಯಾಗಿದ್ದಳು.  ಯಾರಿಗಾದರೂ ಇವಳನ್ನು ಕಂಡರೆ ಒಮ್ಮೆಯಾದರೂ ಅಸೆಯಾಗದೆ ಇರುತ್ತಿರಲಿಲ್ಲ.  ಅಂತಹ ಅಪ್ಸರೆಯಾಗಿದ್ದಳು. ಇವಳ ಅಂದಚೆಂದಕ್ಕೆ ಮಾರುಹೋದ ದಿಲೀಪ ಇವಳನ್ನು ಹೇಗಾದರೂ ಒಲಿಸಿಕೊಳ್ಳಬೆಕೆಂಬ ಉತ್ಕಟವಾದ ಆಸೆಯನ್ನು ಹೊಂದಿದ್ದನು.  ಸುಮಾರು ಸಲ ಇವಳ ಹತ್ತಿರ ತನ್ನ ಆಸೆಯನ್ನು ಹೇಳಿಕೊಂಡಿದ್ದನು. ಇವನ ಆಸೆಗೆ ಪ್ರತಿ ಸಲವೂ ಕೂಡ ನಿರಾಕರಿಸಿದ್ದಳು ರೂಪಾ. ಇವಳ ಈ ನಿರ್ಧಾರದಿಂದ ದಿಲೀಪನು ಸ್ವಲ್ಪ ಮಟ್ಟಿಗೆ ಉತ್ಸಾಹವನ್ನು ಕಳೆದುಕೊಂಡಿದ್ದನು. ಆದರೆ ಇವಳನ್ನು ಹೇಗಾದರೂ ಮಾಡಿ ತನ್ನ ಬುಟ್ಟಿಗೆ ಹಾಕಿಕೊಳ್ಳಬೇಕೆಂದು ತೀರ್ಮಾನಿಸಿದನು. ತನ್ನ ದಾಂಡಿಗರೊಡನೆ ಒಮ್ಮೆ ಬಂದು ಹೆದರಿಸಿಯೂ ಹೋದನು. ಇಂತಹ ಒಂದು ಘಟನೆ ನಡೆದರೂ ಏನೂ ಆಗಿಲ್ಲ ಎಂಬಂತೆ ರೂಪಾ ಇದ್ದಳು. ರೂಪಾ ದಿಲೀಪನ ಬಗ್ಗೆ ಅವನು ಮಾಡಿದ ಈ ಕೃತ್ಯಗಳ ವಿಚಾರಗಳನ್ನು ತನ್ನ ತಂದೆತಾಯಿಗಳ ಹತ್ತಿರ ಕೂಡ ಹೇಳಲಿಲ್ಲ.  ಅದರ ಬದಲಾಗಿ ತನ್ನ ತಮ್ಮನಾದ ನಿಖಿಲ್ ಹತ್ತಿರ ಹೇಳುತ್ತಿದ್ದಳು.  ಹಾಗೇ ಯಾರಿಗೂ ಕೂಡ ಈ ವಿಷಯ ತಿಳಿಸದಂತೆ ಅವನಲ್ಲಿ ತಿಳಿಸಿದ್ದಳು. ಹೀಗೆ ಹಲವು ದಿನಗಳು ಕಳೆದವು. . ದಿಲೀಪನಿಗೆ ರೂಪಾಳ ಬಗ್ಗೆ ಇದ್ದ ಆಸೆ ಸ್ವಲ್ಪವೂ ಕೂಡ ಕಮ್ಮಿಯಾಗದೇ ಅವಳನ್ನು ಹೇಗಾದರೂ ಮಾಡಿ ಪಡೆದೇ ತೀರಬೇಕೆಂದು ನಿರ್ಧರಿಸಿ ಅವಳ ಹತ್ತಿರ ಮತ್ತೊಮ್ಮೆ ಹೇಳಿದನು.  ಈಗಲೂ ಸಹ ಅವಳು ಸ್ಪಷ್ಟವಾಗಿ ನಿರಾಕರಿಸಿ ಅವನ ಕೆನ್ನೆಗೆ ಎರಡೇಟು ಬಾರಿಸಿದಳು. ಇಂತಹ ಅವಮಾನವನ್ನು ಅವನಿಂದ ಸಹಿಸಲು ಸಾಧ್ಯವಾಗಲಿಲ್ಲ. ಇವಳನ್ನು ಬಲತ್ಕಾರದಿಂದನಾದರೂ ಪಡೆಯಬೇಕೆಂಬ ನಿರ್ಧಾರಕ್ಕೆ ಬಂದನು.

ಹೀಗೆ ಒಂದು ದಿನ ರೂಪಾ ತನ್ನ ಮನೆಯಿಂದ ಎರಡೂ ಕಿಲೋ ಮೀಟರ ದೂರದಲ್ಲಿ ಇರುವ ತನ್ನ ಗೆಳತಿಯ ಮನೆಗೆ ಹೋಗಿದ್ದಳು.  ರೂಪಾಳ ಜೊತೆ ಅವಳು ಸಾಕಿದ ನಾಯಿಯು ಕೂಡ ಅವಳನ್ನೇ ಹಿಂಬಾಲಿಸಿ ರಕ್ಷಕನಂತೆ ಸಾಗುತಿತ್ತು. ಹೋಗುವ ದಾರಿ ಸ್ವಲ್ಪ ಕಾಡಿನಿಂದ ಕೂಡಿದ ನಿರ್ಜನ ಪ್ರದೇಶವಾಗಿತ್ತು.  ಇದೇ ಒಳ್ಳೆಯ ಸಮಯವೆಂದು ನಿರ್ಧರಿಸಿ ತನ್ನ ದಾಂಡಿಗರ ಸಹಾಯದಿಂದ ದಿಲೀಪನು ಅವಳನ್ನು ಮರದ ಪೊದೆಯ ಹತ್ತಿರ ಎಳೆದುಕೊಂಡು ಬಂದನು.  ಅವಳ ಜೊತೆ ಬಂದಿದ್ದ ನಾಯಿಯು ಎಷ್ಟೇ ಬೋಗಳಿದರೂ ಅವರು ರೂಪಾಳನ್ನು ಬೀಡಲಿಲ್ಲ.  ತನಗೆ ಅನೇಕ ಸಾರಿ ಅವಮಾನಪಡಿಸಿದ ರೂಪಾಳನ್ನು ಅತ್ಯಾಚಾರ ಮಾಡಿ ಅವಳ ಕತ್ತು ಹಿಸುಕಿ ಕೊಲೆ ಮಾಡಿದನು. ನಂತರ ಅವಳನ್ನು ಅಲ್ಲಿಯೇ ಮರದ ಕೊಂಬೆಗೆ ಹಗ್ಗದ ಸಹಾಯದಿಂದ ನೇತುಹಾಕಿ ಹೋರಟುಹೋದನು. ಇತ್ತ ದಿಲೀಪನು ಮಾಡಿದ ಹೇಯಕೃತ್ಯವನ್ನೆಲ್ಲ ಮೂಕ ವೇದನೆಯಿಂದ ಆ ನಾಯಿಯು ನೋಡುತಿತ್ತು.

ಇತ್ತ ಮನೆಯಲ್ಲಿ ತಳಮಳ ಉಂಟಾಗಲು ಆರಂಭವಾಯಿತು. ಗೆಳತಿಯ ಮನೆಗೆ ಹೋದ ಮಗಳು ಮನೆಗೆ ಬರಲಿಲ್ಲವಲ್ಲಾ ಎಂದು ಹುಡುಕಲು ಪ್ರಾರಂಭಿಸಿದರು. ಕೊನೆಗೆ ಮರದ ಕೊಂಬೆಗೆ ನೇತುಹಾಕಿದ ಸ್ಥಿತಿಯಲ್ಲಿ ಮಗಳನ್ನು ಕಂಡು ತಂದೆ ತಾಯಿಗೆ ದಿಕ್ಕೆ ತೋಚದಂತಾಯಿತು. ಆದರೂ ಅವರ ಮನಸ್ಸಿನಲ್ಲಿ ತನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಲ್ಲ ಎಂಬ ಧೃಡ ವಿಶ್ವಾಸ ಅವರಿಗಿತ್ತು.  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಪ್ರಕರಣದ ತನಿಖೆಯ ಮೊದಲ ಭಾಗವಾಗಿ ಶವದ ಪೊಸ್ಟಮಾರ್ಟಂ ಮಾಡಲಾಯಿತು.  ಅದರ ವರದಿಯಲ್ಲಿ ರೂಪಾಳನ್ನು ಯಾರೋ ಅತ್ಯಾಚಾರ ಮಾಡಿ ಕತ್ತನ್ನು ಹಿಸುಕಿ ಕೊಲೆ ಮಾಡಲಾಗಿದೆ ಎಂದೂ ತಿಳಿಯಿತು.  ರೂಪಾಳ ತಂದೆ ತಾಯಿಗೆ ತಮಗೆ ಇದ್ದ ಸಂದೇಹ ನಿಜವಾಯಿತು. ಆದರೆ ಯಾರೂ ತಮ್ಮ ಮಗಳನ್ನು ಕೊಲೆ ಮಾಡಿರಬಹುದು ಎಂಬುದು ತಿಳಿಯಲಿಲ್ಲ.  ರೂಪಾಳ ಸಾವಿನಿಂದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ಹಾಗೇ ಎಲ್ಲರೂ ಕೂಡ ಅವಳ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದರು. ದಿಲೀಪನು ಕೂಡ ಏನು ಆಗಿಲ್ಲ ಎಂಬಂತೆ ಅವನು ಅಲ್ಲಿಗೆ ಬಂದಿದ್ದನು.  ರೂಪಾಳ ಅಂತ್ಯಸಂಸ್ಕಾರದ ವೇಳೆ ಗಲಾಟೆ ಆಗಬಹುದು ಎಂದು ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಇನ್ನೇನು ರೂಪಾಳ ಚಿತೆಗೆ ಬೆಂಕಿ ಇಡಬೇಕು ಎನ್ನುವಷ್ಟರಲಿ ನಾಯಿಯೂ ಜೋರಾಗಿ ಬೊಗಳುತ್ತಾ ದಿಲೀಪನ ಕಾಲನ್ನು ಹಿಡಿದುಕೊಂಡಿತು. ಇದರಿಂದ ದಿಲೀಪನಿಗೆ ಭಯ ಉಂಟಾಯಿತು. ಅಲ್ಲಿ ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಆಶ್ಚರ್ಯವಾಯಿತು. ಮೊದಲೇ ಹುಡುಗಿಯರನ್ನು ಕಂಡರೆ ಜೊಲ್ಲು ಸುರಿಸುತ್ತಿದ್ದ ದಿಲೀಪನನ್ನು ಕಂಡರೆ ಎಲ್ಲರಿಗೂ ಅಷ್ಟಕಷ್ಟೇ. ಎಲ್ಲರ ಬಾಯಲ್ಲಿ ಇವನೇ ಏನಾದರೂ ಮಾಡಿರಬೇಕು ಎಂಬ ಗುಸುಗುಸು ಉಂಟಾಯಿತು.  ಅಲ್ಲೇ ಇದ್ದ ಪೋಲಿಸ್ ರು ನಾಯಿಯು ಹಿಡಿದಿದ್ದ ದಿಲೀಪನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅವನ ಬಾಯಿ ಬಿಡಿಸಲು ಪ್ರಯತ್ನಿಸುತ್ತಾರೆ. ಮೊದಮೊದಲು ಬಾಯಿಬಿಡಲು ನಿರಾಕರಿಸಿದ ದಿಲೀಪಸಿಂಹ ಪೋಲೀಸರ ಬೆತ್ತದ ಏಟಿಗೆ ಬಾಯಿಬಿಟ್ಟನು. ರೂಪಾಳು ತನಗೆ ಕಾಲೇಜಿನಲ್ಲಿ ಮಾಡಿದ ಅವಮಾನಕ್ಕೆ ತಾನು ಹೀಗೆ ಮಾಡಬೇಕಾಯಿತು ಎಂದು ತಪ್ಪನ್ನು ಒಪ್ಪಿಕೊಂಡನು. ನಂತರ ಅವನನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಿ. . . ಕೊಲೆ ಮಾಡಿದ ತಪ್ಪಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು.

ಅಂತೂ ರೂಪಾಳ ಆತ್ಮಕ್ಕೆ ಶಾಂತಿಯನ್ನು ಸಲ್ಲಿಸಲು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶೃದ್ಧಾಂಜಲಿ ಸಭೆ ಏರ್ಪಡಿಸಿದರು.  ಈ ಸಮಾರಂಭದಲ್ಲಿ ರೂಪಾಳು ಸಾಕಿದ್ದ ನಾಯಿಯ ಚುರುಕುತನದ ಬಗ್ಗೆ ಎಲ್ಲರ ಬಾಯಿಯಲ್ಲಿ ಹೊಗಳಿಕೆಯ ಮಾತು ಬಂದಿತು.  ರೂಪಾಳ ತಂದೆ ತಾಯಿಯ ಜೊತೆ ಬಂದಿದ್ದ ನಾಯಿಯ ಕಣ್ಣಿಂದ ಕಣ್ಣೀರು ಒಂದೊಂದೇ ಹನಿ ಹನಿಯಾಗಿ ಬೀಳುತಿತ್ತು. ನಾಯಿಯು ರೂಪಾಳನ್ನು ಕೊಲೆ ಮಾಡಿದವರನ್ನು ಹಿಡಿದು ಕೊಟ್ಟು ತನ್ನ ಮೂಕವೇದನೆಯ ಮೂಲಕ ಶೃದ್ಧಾಂಜಲಿಯನ್ನು ಅರ್ಪಿಸಿತು.

ಇದಲ್ಲವೇ ಮೂಕ ಪ್ರಾಣಿಯ ಪ್ರೀತಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Vinod Patgar
Vinod Patgar
7 years ago

Super….

1
0
Would love your thoughts, please comment.x
()
x