Facebook

Archive for 2016

ಪಂಜು ಕಾವ್ಯಧಾರೆ

ಸುಡುಗಾಡಿನ ಹಾಡು                                          ಹಾಸಿದ ಹಾಸಿಗೆಯಲಿ ಮುಳ್ಳಿನ ಸಸಿಗಳ ಉದ್ಭವ ಹಾಕಿಕೊಂಡು ತಿರುಗಾಡುವ ಚಪ್ಪಲಿಯಲಿ ಏನೋ ಚುಚ್ಚುತಿರುವ ಅನುಭವ ಮಣ್ಣಲ್ಲಿ ಸಸಿಗಳು ಹುಟ್ಟುವುದೇಕೊ… ಯಾರ್ಯಾರ ಕಾಲಲ್ಲೊ ತುಳಿತಕ್ಕೊಳಗಾಗುವುದೇಕೋ… ಏನೂ ತಿಳಿಯದ ಗೊಂದಲ. ಹುಟ್ಟು ತಿಳಯುತ್ತಿದ್ದಂತೇ ವಿಷಗೊಬ್ಬರದ ಮಜ್ಜನವೇಕಿಲ್ಲೋ… ಬದುಕು ತಿಳಿಯುತ್ತಿದ್ದಂತೇ ತಕ್ಷಣ ಕಿತ್ತುಹಾಕಿಬಿಡುವ ಸಾಹಸವೇಕಿಲ್ಲೋ… ಏನೂ ತಿಳಿಯದ ಗೊಂದಲ. ಎಲ್ಲವೂ […]

ಅನುರಣಿಸಿದ ಅಲೆಗಳು: ಸಾತ್ವಿಕ್ ಹ೦ದೆ

ಭರವಸೆಗಳೆಲ್ಲಾ ಬತ್ತಿ ಹೋಗಿದ್ದವು. ಇರುವಿಕೆಗೆ ಹೊಸ ಅರ್ಥಗಳನ್ನು ಹುಡುಕಿಕೊ೦ಡು ಬದುಕಬೇಕಾಗಿದೆಯೋ ಏನೋ ಎನಿಸುವಷ್ಟು ಖಿನ್ನತೆ. ರೌರವ ಮೌನದ ನಡುವೆ ಅಲೆಗಳ ಆರ್ಭಟ. ತನ್ನದೇ ಪ್ರಶ್ನೋತ್ತರಗಳಲ್ಲಿ ಸಮುದ್ರದ ಅಲೆಗಳು ಮಗ್ನವಾಗಿದ್ದವು. ಸಮುದ್ರ ತೀರದಲ್ಲಿ ಸಾಕಷ್ಟು ಮೀನುಗಳು ಸತ್ತುಬಿದ್ದಿದ್ದವು.  ಕಾಗೆಗಳು ನಾ ಮು೦ದು ತಾ ಮು೦ದು ಎ೦ಬ೦ತೆ ಹಿ೦ಡು ಹಿ೦ಡಾಗಿ ಬ೦ದು ತಿನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೇರೆ ಪಕ್ಷಿಗಳ೦ತೆ ತನ್ನ ಆಹಾರವನ್ನು  ಬೇರೆಡೆಗೆ  ಕೊ೦ಡೊಯ್ದು ತಿನ್ನದ ಕಾಗೆಗಳು ಸ್ವಲ್ಪ ರುಚಿನೋಡಿ ಹಾರಿ ಹೋಗುತ್ತಿದ್ದವು. ಇಡೀ ಸಮುದ್ರತೀರ ಸ್ಮಶಾಣವಾಗಿ ಮಾರ್ಪಾಡಾಗಿತ್ತು. ಸ೦ಸ್ಕಾರವೇ […]

ಕನ್ನಡ ರಂಗಭೂಮಿಯ ಇಳಯರಾಜ: ಪ್ರದೀಪ್ ಮಾಲ್ಗುಡಿ

ಇಸ್ಮಾಯಿಲ್ ಗೋನಾಳ್ ಕಾಲದ ಕರೆಗೆ ಓಗೊಟ್ಟಿದ್ದಾರೆ. ಆದ್ರೆ, ಅವರು ನಮ್ಮಂತವರೊಡನೆ ಬಿಟ್ಟು ಹೋಗಿರುವ ನೆನಪುಗಳು ಚಿರಂತನವಾಗಿರುತ್ತವೆ. ಅಲ್ದೇ, ಅವರು ನೀಡಿರುವ ರಂಗಸಂಗೀತ ಮತ್ತು ಕ್ಯಾಸೆಟ್ ಸಂಗೀತ ನಮ್ಮೊಡನೆ ಯಾವಾಗಲೂ ಇರುತ್ತವೆ. ಬಹುತೇಕ ಎಲ್ಲ ಸಂಗೀತ ಪರಿಕರಗಳನ್ನೂ ನುಡಿಸಬಲ್ಲವರಾಗಿದ್ದ ಇಸ್ಮಾಯಿಲ್, ಎಂದೂ ನನಗೆ ಇಷ್ಟು ಸಾಮಥ್ರ್ಯವಿದೆ ಅಂತ ಹೇಳಿಕೊಳ್ತಿರಲಿಲ್ಲ. ಕ್ಯಾಸೆಟ್ ಸಂಗೀತದ ಉತ್ತುಂಗದ ಶಿಖರದಲ್ಲಿದ್ದ ಅವಧಿಯಲ್ಲೇ ಅಲ್ಲಿಂದ ದಿಡೀರ್ ಅಂತ ಮಾಯವಾಗಿಬಿಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿದ್ರು. ಉತ್ತರ ಕರ್ನಾಟಕದ ಜಾನಪದ ಶೈಲಿಯ ಹಾಡುಗಳಿಂದ ಇವ್ರು ಸಂಗೀತ ಕ್ಷೇತ್ರದಲ್ಲಿ ಬಹಳ […]

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 7): ಪ್ರಸಾದ್ ಕೆ.

ಇಲ್ಲಿಯವರೆಗೆ ಪೌಲ್ ಬರ್ನಾರ್ಡೊನಂತೆಯೇ ಕಾರ್ಲಾಳ ಬಾಲ್ಯದ ದಿನಗಳೂ ವಿಕ್ಷಿಪ್ತವಾಗಿದ್ದಿದು ಸತ್ಯ. ಕಾರ್ಲಾಳ ತಂದೆ, ತಾಯಿ ಇಬ್ಬರೂ ಉದ್ಯೋಗದಲ್ಲಿದ್ದು ಕುಟುಂಬವು ಆರ್ಥಿಕವಾಗಿ ಸದೃಢವಾಗಿದ್ದರೂ, ತನ್ನದೇ ಆದ ಚಿಕ್ಕಪುಟ್ಟ ಸಮಸ್ಯೆಗಳಲ್ಲಿ ತೊಳಲಾಡುತ್ತಿದ್ದವು. ಸ್ವಾಭಾವಿಕವಾಗಿಯೇ ಮಕ್ಕಳಾದ ಕಾರ್ಲಾ, ಲೋರಿ ಮತ್ತು ಟ್ಯಾಮಿ ಗೆ ಉತ್ತಮವಾದ ಜೀವನಶೈಲಿಯ ಪರಿಚಯವಿತ್ತು. ಕಾರ್ಲಾಳ ತಂದೆ ಕರೇಲ್ ಕುಡುಕನಾಗಿದ್ದು, ಲಿಂಡಾ ವೋಲಿಸ್ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದ. ಕಾರ್ಲಾಳ ತಾಯಿ ಡೊರೋಥಿಗೂ ಈ ವಿಷಯ ತಿಳಿದಿತ್ತು. ಕರೇಲ್ ಹೊಮೋಲ್ಕಾ ಮಿತಿಮೀರಿ ಕುಡಿಯುತ್ತಿದ್ದ ಸಮಯಗಳಲ್ಲಿ ಕೆಟ್ಟ ಬೈಗುಳಗಳು, […]

ಮಗು ಮನಸ್ಸಿನ ಮಹಾಕಾವ್ಯ : ಮತ್ತೊಂದು ಮಹಾಭಾರತ: ಡಾ.ವಿ.ಚಂದ್ರಶೇಖರ ನಂಗಲಿ

ನಮ್ಮ ಮುಖದ ಮೇಲಿನ ಎರಡು ಕಣ್ಣುಗಳು ಇಡೀ ಜಗತ್ತನ್ನು ನೋಡುವಂತೆಯೇ, ನಮ್ಮ ನೆಲದ ಎರಡು ಕಣ್ಣುಗಳಂತಿರುವ ರಾಮಾಯಣ ಮತ್ತು ಮಹಾಭಾರತಗಳಿಂದ ಇಡೀ ಜೀವನವನ್ನು ಅರ್ಥಮಾಡಿಕೊಳ್ಳಬಹುದು. ನವಭಾರತದೇಶದ ಸಂವಿಧಾನದಂತೆಯೇ ಇವೆರಡು ಮಹಾಕಾವ್ಯಗಳು ನಮ್ಮ ದೇಶದ ನಿತ್ಯನೂತನ ಸಂವಿಧಾನವೆನ್ನಬಹುದು. ರಚ್ಚೆಯಲ್ಲಿ, ಕಟ್ಟೆಯ ಮೇಲೆ, ಸಂತೆಬೀದಿಯಲ್ಲಿ, ಮಾರುಕಟ್ಟೆಯಲ್ಲಿ ಜನರು ಕುಳಿತು ಮಾತನಾಡುವಾಗ ಈ ಮಹಾಕಾವ್ಯಗಳ ಪ್ರಸ್ತಾಪ ಮತ್ತು ದರ್ಶನವಿದ್ದೇ ಇರುತ್ತದೆ. ಇವನ್ನು ಕುರಿತು ಓದಿದವರ ಕಾವ್ಯಪ್ರಯೋಗವೆನ್ನುವುದಕ್ಕಿಂತಲೂ ಕುರಿತೋದದ ಜನಪದರ ಎದೆಯ ಹಾಡುಗಳೆಂದು ಹೇಳಬಹುದು. ಮಣ್ಣು, ನೀರು, ಗಾಳಿ, ಬೆಳಕುಗಳಂತೆ ಪ್ರಕೃತಿಯ ಜೀವಸತ್ವಗಳಾಗಿ […]

ಸ್ನೇಹಲೋಕದಲ್ಲಿ ಹೊಸದಾದ ಭಾಷ್ಯ ಬರೆಯಬೇಕು…: ಸಿಂಧುಭಾರ್ಗವ್ ಬೆಂಗಳೂರು

ನಗುತಿರು ಪುಟ್ಟ ಮನವೇ ಬೆಳಂದಿಗಳಿನಂತೆ..! ನಾನಿರುವೆನು ಜೊತೆಗೆ ಎಂದಿನಂತೆ..!! ಈಗೀಗ ಎಲ್ಲವನೂ ಸ್ವೀಕರಿಸುವ ಧೈರ್ಯ ಬಂದಿದೆ..! ಮನದಲಿ ನೋವುನಲಿವು ಮಾಮೂಲಿಯಾಗಿದೆ..!! ~ ನಿಜವಾಗಿ ಹೇಳುವುದಾದರೆ ಈ ಜೀವನದ ಸಂತೆಯಲಿ ಸಿಕ್ಕಿದವನಾತ. ನನ್ನ ಮೊಗದಲ್ಲಿ ನಗುವ ಬಯಸಿದವನಾತ. "ಬಿಕ್ಕಿದ್ದು ಸಾಕು ನಿನ್ನ ನಗುಮೊಗವ ನಾ ನೋಡಬೇಕು" ಎಂದಾಗ ಮತ್ತಷ್ಟು ಬಿಕ್ಕಿಬಿಕ್ಕಿ ಅತ್ತಿದ್ದೆ. ಆ ಖುಷಿಯ ಯಾರಲ್ಲಿ ಹೇಳಲಿ.?! ಬೇಕಿತ್ತೇನೋ ಅವನೊಬ್ಬ ನನ್ನ ಕಣ್ಣೀರು ಒರೆಸಲೆಂದು. ಅದಕ್ಕೇ ಬಹಳ ಹತ್ತಿರಕ್ಕೆ ಸೇರಿಸಿಕೊಂಡೆ. ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡೆ. ಪರವಾಗಿಲ್ಲ. "ನಾ ನಿನ್ನ […]

ಸಾವಿರದ ಸರದಾರ ರವಿ ಭಜಂತ್ರಿಯವರ “ನಗೆ ರತ್ನಮಂಜರಿ” ವಿಡಿಯೋ ಸಿ.ಡಿ.: ಗುಂಡೇನಟ್ಟಿ ಮಧುಕರ

ಅಂದು ಹುಕ್ಕೇರಿ ಬಾಳಪ್ಪನವರನ್ನು ಸಾವಿರ ಪದಗಳನ್ನು ಹಾಡಿದವರೆಂಬ ಹಿನ್ನೆಲೆಯಲ್ಲಿ ಬೇಂದ್ರೆಯವರು ‘ಸಾವಿರದ ಸರದಾರ’ ಅಂದರೆ ‘ಸಾವು’ ಇರದ ಸರದಾರ ಎಂಬ ಅರ್ಥದಲ್ಲಿ ಹೊಗಳಿದ್ದರಂತೆ. ಹುಕ್ಕೇರಿ ಬಾಳಪ್ಪನವರು ತಮ್ಮ ಹಾಡುಗಳಿಂದ ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅಂದು ಬೇಂದ್ರೆಯವರು ಹೇಳಿದ ಮಾತು ಇಂದು ಮಾತಿನ ಮೋಡಿಗಾರ ರವಿ ಭಜಂತ್ರಿಯವರಿಗೆ ಅನ್ವಯಿಸುತ್ತದೆ. ಸಾವಿರ ಹಾಸ್ಯಭಾಷಣಗಳ ಧಾಖಲೆ ಮಾಡುವ ಮೂಲಕ ಭಜಂತ್ರಿಯವರು ಸಾವಿರದ ಸರದಾರರಾಗಿದ್ದಾರೆ. ಇವರ ಭಾಷಣಗಳೂ ‘ಸಾವು’ ಇರದ ಭಾಷಣಗಳೆಂಬುದರಲ್ಲಿ ಎರಡು ಮಾತಿಲ್ಲ.        ರವಿ ಭಜಂತ್ರಿ ಹಾಸ್ಯಲೋಕದಲ್ಲಿ ಚಿರಪರಿಚಿತ […]

ವೀರ್ಯವಂತನಾದ ಆಮೆಯೊಂದು ತನ್ನ ಸಂತತಿ ಉಳಿಸಿದ ಕಥೆ: ಅಖಿಲೇಶ್ ಚಿಪ್ಪಳಿ

ಸ್ಥಳೀಯವಾದ ಒಂದು ಘಟನೆ ಹಾಗೂ ಅಂತಾರಾಷ್ಟ್ರೀಯ ಎರಡು ಘಟನೆಗಳು ಈ ವಾರ ದಾಖಲೆ ಮಾಡಬೇಕಾದ ವಿಷಯಗಳೇ ಸೈ. ಸಾಗರದ ಅಗ್ರಹಾರದಲ್ಲಿ ಬೆಂಗಳೂರು ಮೂಲದ ಶ್ರೀಮಂತ ಉದ್ಯಮಿಯೊಬ್ಬರು ಮನೆ ಕಟ್ಟಲು ಪರವಾನಿಗೆ ತೆಗೆದುಕೊಂಡು, ಮನೆ ಕಟ್ಟಲು ಪ್ರಾರಂಭಿಸಿದರು. ಅವರಿಗೆ ಅಡ್ಡಿಯಾಗಿದ್ದು, ರಸ್ತೆ ಬದಿಯ ಎರಡು ಮರಗಳು. ತುಪ್ಪ ತಿಂದ ತಲೆಯನ್ನು ಓಡಿಸಿದರು. ಅದು ಹೇಗೋ ಒಂದಿಷ್ಟು ಜನ ಮರ ಕಡಿತಲೆಯನ್ನು ವಿರೋಧಿಸುವ ಮನೋಭಾವ ಹೊಂದಿದವರು ಅಡ್ಡಿ ಮಾಡಿದರೆ ಕಷ್ಟ ಎಂದುಕೊಂಡು ಎಲ್ಲವನ್ನೂ ಕಾನೂನಾತ್ಮಕವಾಗಿ ಮಾಡಿ ಮುಗಿಸುವ ಪ್ಲಾನ್ ರಚನೆಯಾಯಿತು. […]

ಗೆಳೆಯನಿದ್ದರೆ ಕರ್ಣನಂತಿರಬೇಕು: ಸಿದ್ದುಯಾದವ್ ಚಿರಿಬಿ

ಅವನು ಕರ್ಣ. ಆತ ಕುಂತಿಯ ಮೊದಲ ಮಗ. ಪಾಂಡವರ ಹಿರಿಯಣ್ಣ. ಪರಶುರಾಮರ ಮೆಚ್ಚಿನ ಶಿಷ್ಯ. ದುರ್ಯೋಧನನ ಆಪ್ತಮಿತ್ರ. ಅರ್ಜುನನ ಪರಮಶತ್ರು. ಅವನು, ಭೀಷ್ಮರ ಕಣ್ಣಲ್ಲಿ ಸಿಡಿಮಿಡಿ ಉಂಟುಮಾಡುವ ಸುನಾಮಿ. ಭೀಮನ ಪಾಲಿಗೊಂದು ಅಸೂಯೆ. ಕರ್ಣನೆಂದರೆ ಅಷ್ಟೇ ಅಲ್ಲ. ಮಹಾಭಾರತದ ಮಹಾನ್ ಗ್ರಂಥದಲ್ಲಿ ತನ್ನವರಿಂದಲೆ ಆತಾಷೆ, ಅವಮಾನ, ಕಿಳಿರಿಮೇಗಳ ಚಕ್ರಯೋಹದೊಳಗೆ ಸಿಲುಕಿ ಬಳಲಿ ಬೆಂದ ಆತಭಾಗ್ಯದಾತ. ಆತ, ದ್ರೌಪದಿಯಂಥ ದ್ರೌಪದಿಯ ಎದೆಯಲ್ಲೂ ಆಸೆಯ ತರಂಗ ಎಬ್ಬಿಸಿದ ಸುಂದರಾಂಗ. ಧಾನಶೋರ, ಅಂಗರಾಜ, ಹುಟ್ಟಿನಿಂದ ಕ್ಷತ್ರಿಯನಾಗಿದ್ದರೂ, ಎಲ್ಲರಿಂದಲೂ ಸೂತಪುತ್ರ ಎಂದು ಕರೆಸಿಕೊಂಡ […]

ಶಿಕ್ಷಣ (ಭಾಗ 2): ಭಾರ್ಗವ ಎಚ್.ಕೆ.

ಇಲ್ಲಿಯವರೆಗೆ 4    ಬೋಧನಾ ಕಲೆ ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳಿಗೆ ಯಾವ ರೀತಿ ಶೈಕ್ಷಣಿಕ ಬೋಧನೆ ಮಾಡಬೇಕೆಂಬ ಹೊಸ ಹೊಸ ಆಲೋಚನೆಗಳ ಮತ್ತು ಜಿಜ್ಞಾಸೆಗಳ ಮಧ್ಯೆ ಬೋಧನಾ ಕಲೆಯ ಮಹತ್ವದ ಮನವರಿಕೆಗೆ ಇದು ಸುಸಂದರ್ಭ. ಶಿಕ್ಷಕನ ಬೋಧನೆ ಮಾಡುವ ಶೈಲಿಯು ಮಕ್ಕಳಿಗೆ ಪೂರಕವಾಗಿರಬೇಕು. ವಿದ್ಯಾರ್ಥಿಗಳಿಗೆ ಪಾಠದ ವಿವರಣೆ ಸರಳವಾಗಿ ತಿಳಿಯುವಂತಾಗಬೇಕು. ಶಿಕ್ಷಕರಾದ ನಾವುಗಳು ದಿನಾಲು ಅಪಡೇಟ್ ಆಗಿರಬೇಕು. ಅವುಟುಡೇಟೆಡ್ ಆಗಬಾರದು. ಕಲಿಯಲು ನಿರಂತರ ಉತ್ಸಾಹವುಳ್ಳವರು ಮಾತ್ರ್ರ ಕಲಿಸಲು ಯೋಗ್ಯರು ಎಂದರೆ ತಪ್ಪಾಗಲಾರದು. ಒಬ್ಬ ವಿದ್ಯಾರ್ಥಿಯ ಕಲಿಕಾ ಮಟ್ಟವು […]