Facebook

Archive for 2015

ಮತಿಭ್ರಮಣೆ: ಶಿವಕುಮಾರ ಚನ್ನಪ್ಪನವರ

ಪೆಣ್ಣು, ಪೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು  -ಸಂಚಿ ಹೊನ್ನಮ್ಮ ತಾನು ಸೋಮುವಿಗೆ ಹೀಗೆನ್ನಬಾರದಿತ್ತು. ಪಾಪ ಎಷ್ಟು ನೊಂದುಕೊಂಡನೋ ಏನೋ……? ತಾನೇ ಸಾಕಿ ಬೆಳೆಸಿದ ಕೂಸು ಆದರೂ ಅವನು ಹದ್ದುಮೀರಿ ಮಾತಾಡಿದ್ದ. ಬೇಡವೆಂದರೂ ಕೇಳದೇ ಹೆಂಡತಿಯ ಭ್ರೂಣಪತ್ತೆಯ ಕೆಲಸಕ್ಕೆ ಕೈ ಹಾಕಿದ್ದಿರಬಹುದು, ತಮ್ಮ ತಾಯಿಗೆ ಗಂಡು ಮಗುವೇ ಬೇಕೆಂದು, ತನಗೂ ಅದೇ ಇಷ್ಟವಿದೆಯೆಂದು, ಹಟ ಹಿಡಿದು ಈ ಸಲ ಹೆಣ್ಣಾದರೆ ಆಪರೇಷನ್ ಮಾಡಿಸದೇ ಮುಂದಿನದಕ್ಕೆ ಬಿಡಬೇಕೆಂದು ಹಟ ಹಿಡಿದದ್ದು ತಪ್ಪಲ್ಲವೇ……?, ಡಾಕ್ಟರು ಇದು ಎರಡನೇ ಬಾರಿ ಸಿಜೇರಿಯನ್ […]

ಗೆಳೆತನದ ಸುವಿಶಾಲ ಆಲದಡಿ..:ಅನಿತಾ ನರೇಶ್ ಮಂಚಿ.

  ಜೀವನದಲ್ಲಿ  ನನ್ನರಿವಿಗೆ ಬಂದಂತೆ ಮೊಟ್ಟ ಮೊದಲಿಗೆ ನನಗೊಂದು ಪ್ರಮೋಶನ್ ಸಿಕ್ಕಿತ್ತು. ಅದೂ ನಾವು ಅ ಊರಿಗೆ ಕಾಲಿಟ್ಟ ಕೆಲವೇ ಸಮಯದಲ್ಲಿ.. ಅಂಗನವಾಡಿಗೆ ಹೋಗಲಿಕ್ಕೆ ಶುರು ಮಾಡಿ ತಿಂಗಳಾಗಬೇಕಾದರೆ  ಡೈರೆಕ್ಟ್ ಆಗಿ ಒಂದನೇ ತರಗತಿಗೆ..  ಒಂದನೇ ತರಗತಿಗೆ  ವಯಸ್ಸು ಇಷ್ಟೇ ಆಗಿರಬೇಕೆಂಬ ಸರ್ಕಾರಿ ನಿಯಮವೇನೋ ಇದ್ದರೂ ಮಕ್ಕಳು ಮನೆಯಲ್ಲಿದ್ದರೆ ಅಪ್ಪ ಅಮ್ಮನಿಗೆ ಬೇಗನೇ ವಯಸ್ಸಿಗೆ ಬಂದಂತೆ ಕಾಣಿಸಲು ಶುರು ಆಗ್ತಾರಲ್ಲ ಅದಕ್ಕೇನು ಮಾಡೋದು.. ಹಾಗೆ ನಾನೂ ನನ್ನ ಅವಳಿ ಅಣ್ಣನೂ ಒಂದನೇ ತರಗತಿಯೊಳಗೆ ಉದ್ದದ ಒಂದೇ ಕೈ […]

ಚಲರೇ ಭೋಪಳ್ಯಾ ಟುಣಕ್-ಟುಣಕ್ (ಆಡಿಯೋ ಕತೆ): ಸುಮನ್ ದೇಸಾಯಿ

ಒಂದು ಭಯಂಕರ ದಟ್ಟ ಜಂಗಲ್ ಇತ್ತು. ಆಲ. ಹಲಸು, ಹುಣಸೆ, ಮಾವು ಸೊಗೆ, ದೊಡ್ಡ ದೊಡ್ಡ ಮರ ಇದ್ವು. ಅದೆಷ್ಟು ದಟ್ಟ ಇತ್ತಂದರ. ಮಟಾ ಮಟಾ ಮಧ್ಯಾಹ್ನದಾಗು ಸೂರ್ಯನ ಬೆಳಕಿಗೂ ಒಳಗ ಬರಲಿಕಕ್ಕೆ ಜಾಗ ಇದ್ದಿಲ್ಲ. ಆ ಕಾಡಿನ ತುಂಬ ಪ್ರಾಣಿಗಳು ಭಾಳ ಇದ್ವು. ಕಾಡಿಗೆ ಹಚ್ಚಿ ಇನ್ನೊಂದು ಕಡೆ ಸುಂದರ ಸರೋವರ ಇತ್ತು. ಸರೋವರದ ಇನ್ನೊಂದು ಕಡೆ ಒಂದು ಪುಟ್ಟ ಹಳ್ಳಿ ಇತ್ತು. ಅಲ್ಲಿಯ ಜನ ಯಾವಾಗಲೂ ಕಾಡಿನ ಭಯದಿಂದ ಜೀವ ಕೈಯ್ಯೊಳಗ ಹಿಡಕೊಂಡನ ಜೀವನ […]

ಮೌನ ತಳೆದ ಹುಡುಗಿ: ರುಕ್ಮಿಣಿ ನಾಗಣ್ಣವರ

ಆಗಷ್ಟೆ ಬೆಳಕಿನ ಬೆನ್ನಿಗೆ ಕತ್ತಲು ಪತ್ತಲ ಹಾಸುತ್ತಿತ್ತು. ಮಿಣಮಿಣ ಮಿನುಗುವ ತಾರೆಗಳು ಚಂದ್ರನೊಂದಿಗೆ ಕಣ್ಣಾ ಮುಚ್ಚಾಲೆ ಆಡಲು ಸಿದ್ಧವಾಗಿದ್ದವು. ಚಂದ್ರನೋ, ತಾರೆಗಳ ಬಳಗದಿಂದ ತಪ್ಪಿಸಿಕೊಂಡವನಂತೆ ರಮೇಶನ ಕೋಣೆಯನ್ನೇ ಇಣುಕಿ ಇಣುಕಿ ನೋಡುತ್ತಿದ್ದ. ದೀಪ ಹಚ್ಚದ ಕೋಣೆಯಲ್ಲಿ ಕತ್ತಲ ತೆಕ್ಕೆಯೊಳಗೆ ರಮೇಶ್ ಗಾಢ ಮೌನಕ್ಕೆ ಶರಣಾಗಿದ್ದ. ಮನದ ಮೈದಾನದಲಿ ಜಾನಕಿಯೆಡೆಗಿನ ವಿಚಾರಗಳು ಕಾಳಗದ ಹೋರಿಯಂತೆ ಕಾದಾಟ ನಡೆಸಿದ್ದವು. ಅರಳು ಹುರಿದಂತೆ ಮಾತಾಡುವ ಜಾನಕಿ ಕಳೆದ ಆರು ತಿಂಗಳಿನಿಂದ ಮೌನವಾಗಿದ್ದಳು. ಆ ದೀರ್ಘಮೌನ ರಮೇಶನನ್ನು ಭಾದಿಸುತ್ತಿತ್ತು.  ತಲೆ ಚಿಟ್ಟೆನ್ನುವ ಅಸಹನೆ. […]

ಸಾಯಲೇ ಬೇಕು ಎಲ್ಲರಲ್ಲಿನ ಸೀಸರ್: ಸಚೇತನ

ಷೇಕ್ಸ್ ಪಿಯರ್ ಎನ್ನುವ ಸದಾ ತುಂಬಿ ಹರಿಯುವ ನದಿಯಿಂದ ಮೊಗೆ ಮೊಗೆದು ತೆಗೆದ ಅದೆಷ್ಟೋ ಸಾವಿರ ಸಾವಿರ ಬೊಗಸೆ ನೀರು ಲೆಕ್ಕವಿಲ್ಲದಷ್ಟು  ಸಾಹಿತ್ಯದ ಬೀಜಗಳನ್ನು ಹೆಮ್ಮರವಾಗಿಸಿ ಫಲ ಕೊಡುತ್ತಿದೆ.  ಕರುಣೆ ಕ್ರೌರ್ಯ ಪ್ರೀತಿ ಹಾಸ್ಯ ಪ್ರೇಮ ಮೋಸ ಎಲ್ಲ  ಮಾನವೀ ಭಾವಗಳ ಸಮಪಾಕವನ್ನು ನಾವೆಲ್ಲರೂ ಅದೆಷ್ಟೋ ಸಲ ರುಚಿಕಟ್ಟಾಗಿ ಉಂಡಿದ್ದರೂ ಯಾವತ್ತಿಗೂ ಅವು ಸಾಕು ಎನಿಸಿಲ್ಲ. ಹರಿಯುವ ನದಿಯಿಂದ ಕೈ ಒಡ್ಡಿ ಕುಡಿದ ಸಿಹಿ ನೀರು ಮತ್ತೆ ಮತ್ತೆ ಬೇಕೆನಿಸಿದೆ. ಸೀಸರ್ ಎನ್ನುವ ದುರಂತ ನಾಯಕನ ಕತೆಯಿಂದ […]

ಫೋಟೋ ಚೌಕಟ್ಟಿನ ಆಚೀಚೆ: ಅಮರ್ ದೀಪ್ ಪಿ.ಎಸ್.

ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ದಿನಗಳವು.  ವರ್ಷಕ್ಕೊಮ್ಮೆ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಮೇಷ್ಟ್ರು “ಎಲ್ರೂ ನಾಳೆ ನೀಟಾಗಿ ನಿಮಗಿಷ್ಟವಾದ ಡ್ರೆಸ್ ಹಾಕ್ಕೊಂಡ್ ಬನ್ನಿ” ಅನ್ನುತ್ತಿದ್ದರೆ, ನಮ್ಮ ಮುಖ ಇಷ್ಟಗಲವಾಗಿ ಅಲ್ಲೇ ಹಲ್ಕಿರಿದು ನಿಂತು ಬಿಡುತ್ತಿದ್ದೆವು.   ಮತ್ತೆ ಫೋಟೋ ತೆಗೆಯೋ ದಿನ ಮಾತ್ರ  ಅದು ನಡೆಯುತ್ತೋ, ಓಡುತ್ತೋ, ನಿಂತಲ್ಲೇ ಎಲ್ಡು ಬಾರಿ ಸರಿಯಾದ ಟೈಮು ತೋರ್ಸುತ್ತೋ, ಬಿಡುತ್ತೋ, ಒಟ್ನಲ್ಲಿ ಎಲ್ಲಿಂದಲೋ ಒಂದ ವಾಚ್ ಕಟ್ಗ್ಯಂಡು ಅದು ಫೋಟೋದಲ್ಲಿ ಕಾಣೋ ಹಂಗೆ ನಿಂತು ಫೋಸ್ ಕೊಡುತ್ತಿದ್ದೆವು.  ಫೋಟೋ ಪ್ರಿಂಟ್ ಕೈ […]

ಮೂವರ ಕವಿತೆಗಳು: ಮುಕುಂದ್ ಎಸ್., ಮೌಲ್ಯ ಎಂ., ಅಕುವ

ಲೋ ಮಾರ್ಕು,  ನೀ ಕಟ್ಟಿದ್ ಜಗ್ಲಿ ಮ್ಯಾಕ್ ಕೂತು,  ದೊಡ್ಡ್ ದೊಡ್ಡ್ವರು ಹೇಳಿದ್ದು  ಅರ್ಥವಾಗ್ದಿದ್ರು ಬೇರೆಯವರಿಗೆ ಷೇರ್ ಗಿರ್ ಮಾಡಿಕ್ಕಂಡು, ರಾಜಕಾರಣಿ ಹಾಕೋ ಥರಾವರಿ  ಟೋಪಿಗಳ್ ನಾವ್ ನಮ್ಮ್  ಗೆಳ್ಯರಿಗು ಹಾಕಿ,  ಪರ್ ವಿರೋಧ ಬಾಯ್ ಬಡ್ಕೊಂಡು, ಫ್ರೆಂಡ್, ಅನ್ ಫ್ರೆಂಡ್ ಅಂತ್ ಆಟ್ಗಳ ಜೊತೆ ಕ್ಯಂಡಿ ಕ್ರಷುಗಳ್ ಬಗ್ಗೆ ಉರ್ಕೊಂಡು,  ನಮ್ಮ್ ನಮ್ಮ್ ಪಟ್ವ ತೆಗೆದು  ಸ್ಚಯಂವರಕ್ಕೆ ರೆಡಿ ಆಗೋ ಪರಿಯಲ್ಲಿ ತೆಗ್ಸಿ, ಲೈಕುಗಳ ಬಿಕ್ಕ್ಸೆಗೆ ಕಾಯ್ಕೊಂಡು, ಅಕ್ಕ ಪಕ್ಕ ಇರೋ ಅಣ್ಣ್ ತಮ್ಮದಿರ್ ದೂರ್ […]

ಝೆನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

ಪುಷ್ಪ ವೃಷ್ಟಿ ಸುಭೂತಿ ಬುದ್ಧನ ಶಿಷ್ಯನಾಗಿದ್ದ. ಶೂನ್ಯತೆಯ ಶಕ್ತಿಯನ್ನು ತಿಳಿಯುವುದರಲ್ಲಿ ಆತ ಯಶಸ್ವಿಯಾಗಿದ್ದ. ವ್ಯಕ್ತಿನಿಷ್ಠತೆ ಮತ್ತು ವಿಷಯನಿಷ್ಠತೆಗಳೊಂದಿಗೆ ಶೂನ್ಯತೆಗೆ ಇರುವ ಸಂಬಂಧದ ಹೊರತಾಗಿ ಏನೂ ಅಸ್ಥಿತ್ವದಲ್ಲಿ ಇಲ್ಲ ಅನ್ನುವ ದೃಷ್ಟಿಕೋನ ಇದು. ಒಂದು ದಿನ ಮಹೋನ್ನತ ಶೂನ್ಯತೆಯ ಚಿತ್ತಸ್ಥಿತಿಯಲ್ಲಿ ಸುಭೂತಿ ಒಂದು ಮರದ ಕೆಳಗೆ ಕುಳಿತಿದ್ದ. ಅವನ ಸುತ್ತಲೂ ಹೂವುಗಳು ಬೀಳಲಾರಂಭಿಸಿದವು. “ಶೂನ್ಯತೆಯ ಕುರಿತಾದ ನಿನ್ನ ಪ್ರವಚನಕ್ಕಾಗಿ ನಾವು ನಿನ್ನನ್ನು ಶ್ಲಾಘಿಸುತ್ತಿದ್ದೇವೆ” ಎಂಬುದಾಗಿ ಪಿಸುಗುಟ್ಟಿದರು ದೇವತೆಗಳು. “ಶೂನ್ಯತೆಯ ಕುರಿತಾಗಿ ನಾನು ಮಾತನಾಡಿಯೇ ಇಲ್ಲ” ಪ್ರತಿಕ್ರಿಯಿಸಿದ ಸುಭೂತಿ. “ನೀನು […]

ಫ಼ೈಂಡಿಂಗ್ ಫ಼ಾನ್ನಿ ಮತ್ತು ನಮ್ಮೊಳಗಿನ ಮುಗಿಯದ ಹುಡುಕಾಟ: ಪ್ರಶಾಂತ್ ಭಟ್

ಈಗ ನನ್ನ ಬಹಳ ಕಾಡಿದ ಒಂದು ಸಿನಿಮಾ ಬಗ್ಗೆ ಬರೆಯಬೇಕು.  ಅದರಲ್ಲಿ ಬರುವ ಒಂದು ಡೈಲಾಗ್ ಬಗ್ಗೆ 'ನಮ್ಮ ರಾಜ್ಯಕ್ಕೆ ಅಪಮಾನವಾಯಿತು' ಅಂತ ಬೊಬ್ಬಿರಿದ ನನ್ನ ರಾಜ್ಯದ ಕೆಲವರ ಬಗ್ಗೆ ನಿಜಕ್ಕೂ ಕನಿಕರವಿದೆ. ಹೌದು. ಇದು ಅದೇ ಸಿನಿಮಾ. 'ಫ಼ೈಂಡಿಂಗ್ ಫ಼ಾನ್ನಿ' ಹೋಮಿ ಅಡಜನಿಯ ನಿರ್ದೇಶನವಿರುವ  (ಇವನ ಬೀಯಿಂಗ್ ಸೈರಸ್ ಕೂಡ ಒಳ್ಳೆಯ ಪ್ರಯತ್ನ) ಕೆಲವು ಕಡೆ 'ಲೆಟ್ಟರ್ಸ್ ಟು ಜೂಲಿಯಟ್' ಅನ್ನು ಹೋಲುತ್ತದೆ. ಅರ್ಜುನ್ ಕಪೂರ್, ದೀಪಿಕಾ ಪಡುಕೋಣೆ (ಇವಳ ಸ್ಕರ್ಟ್ ನ ಅಂದವನ್ನು ಬಣ್ಣಿಸಲೇ?) […]

ಕತ್ತಲ ಕೊಳ್ಳದಾಚೆಗೆ: ಪ್ರಶಸ್ತಿ ಪಿ.

  ಬೈಕಲ್ಲಿ ಹೋಗ್ಬೇಡ, ಒಂದಷ್ಟು ಲೇಟಾದ್ರೂ ಪರ್ವಾಗಿಲ್ಲ. ಬಸ್ಸಿಗೆ ಹೋಗೋ ಅಂತ ಅಮ್ಮ ಹೇಳಿದ ಮಾತ್ನ ಕೇಳ್ಬೇಕಾಗಿತ್ತು ಅಂತ ಬಾಳೇಬರೆ ಘಾಟೀಲಿ ಕತ್ತಲ ರಾತ್ರೇಲಿ ಕೆಟ್ಟ ಬೈಕಿಗೊಂದು ಮೆಕ್ಯಾನಿಕ್ನ ಹುಡುಕೋಕೋದಾಗ್ಲೇ ಅನಿಸಿದ್ದು. ಫ್ರೆಂಡ್ ಮನೆ ಕಾರ್ಯಕ್ರಮಕ್ಕೆ ಮಧ್ಯಾಹ್ನವೇ ಹೊರಟು ಬಿಡ್ಬೇಕಿತ್ತು. ಆದ್ರೆ ಬೈಕಿದ್ಯಲ್ಲ, ಬಸ್ಸು ಹೋದ್ರೆ ಹೆಂಗಾದ್ರೂ ರಾತ್ರೆಗೆ ಮುಟ್ಕೋಬೋದು ಅನ್ನೋ ಧೈರ್ಯವೇ ನಿರ್ಲಕ್ಷ್ಯಕ್ಕೆ ಕಾರಣವಾಗಿ ಊರಲ್ಲೇ ಸಂಜೆಯಾಗೋಗಿತ್ತು. ನಾಳೆ ಹೋಗೋಣ ಅಂದ್ರೆ ಕಾರ್ಯಕ್ರಮವಿದ್ದಿದ್ದೇ ಇವತ್ತು ರಾತ್ರೆ. ಹೋಗ್ಲೇಬೇಕೆನ್ನೊ ಹಟಕ್ಕೆ ಮನೆಯವ್ರು ಅರೆಮನಸ್ಸಿಂದ್ಲೇ ಒಪ್ಪಿದ್ರು. ಜೊತೆಗಿನ್ನಿಬ್ರು ಗೆಳೆಯಂದ್ರು […]