Facebook

Archive for 2014

ಪಂಜುವಿನ ಕನ್ನಡ ಪದಗಳ ಮೆರವಣಿಗೆಗೆ ನೂರರ ಸಂಭ್ರಮ: ನಟರಾಜು ಎಸ್. ಎಂ.

ಡಿಸೆಂಬರ್ 3, 2014 ರಂದು ವಿಶ್ವ ವಿಕಲ ಚೇತನರ ದಿನದ ಸಲುವಾಗಿ ಎನ್ ಜಿ ಓ ಒಂದರ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಅವತ್ತೇ ಪಶ್ಚಿಮ ಬಂಗಾಳದ ಸಿಎಂ ನಾನಿರುವ ಪುಟ್ಟ ಊರಾದ ಜಲ್ಪಾಯ್ಗುರಿಗೆ ಆಗಮಿಸಿದ್ದರು. ಆ ಕಾರಣಕ್ಕೆ ಇಡೀ ಊರಿನ ತುಂಬಾ ಬಂದೋಬಸ್ತಿನ ವಾತಾವರಣವಿತ್ತು. ಆ ಎನ್ ಜಿ ಓ ಆಫೀಸಿನ ಹತ್ತಿರದ ಪ್ರವಾಸಿ ಮಂದಿರದಲ್ಲಿ ಸಿಎಂ ತಂಗಿದ್ದ ಕಾರಣ ಆ ಎನ್ ಜಿ ಓ ಗೆ ಮಧ್ಯಾಹ್ನದವರೆಗೂ ತನ್ನ ಕಾರ್ಯಕ್ರಮಗಳನ್ನು ಶುರು ಮಾಡಲು ಒಂಚೂರು ತೊಂದರೆಯೇ ಆಗಿತ್ತು. […]

ಅರುಣ್ ಅಂತರಾಳದ ಮಾತು: ಅರುಣ್ ನಂದಗಿರಿ

ನಿನ್ನ ಭವಿಷ್ಯಕ್ಕೆ ನೀನೇ ಶಿಲ್ಪಿ ಇದು ಸ್ವಾಮಿ ವಿವೇಕಾನಂದರ ಮಾತು, ಈ ಸುಭಾಷಿತವನ್ನು ದಿನಪತ್ರಿಕೆಯೊಂದರಲ್ಲಿ ನೋಡಿದ್ದೆ. ಆಗ ನಾನಿನ್ನು ೮ ವರ್ಷದ ಬಾಲಕನಾಗಿದ್ದೆ. ಆದರೂ ಈ ಮಾತನ್ನು ಅರ್ಥಮಾಡಿಕೊಂಡಿದೆ! ಭವಿಷ್ಯದಲ್ಲಿ ನಾನೇನಾಗಬೇಕೋ ಅದನ್ನು ನಾನೇ ನಿರ್ಧರಿಸಬೇಕು. ಗುರಿ ಈಡೇರುವವರೆಗೂ ಛಲ ಬಿಡಬಾರದೆಂದು. ಆಗ ನಾವೆಲ್ಲ ಬೆಂಗಳೂರಿನಲ್ಲಿದ್ದೆವು. ಸುಮಾರು ೨೨ ವರ್ಷದಷ್ಟು ಹಳೆಯ ಬೆಂಗಳೂರದು. ಡಾ| ಲಕ್ಷ್ಮಿ ಡೇ ನಮ್ಮ ಮನೆಯ ಹತ್ತಿರವೇ ತಮ್ಮ ಕ್ಲಿನಿಕ್ ಇಟ್ಟಿದ್ದರು. ’ಆರೋಗ್ಯ ಧಾಮ’ ಅಂತ ಅದರ ಹೆಸರು ಅದರ ಒಂದು ಭಾಗದಲ್ಲಿ […]

ಸಮಾಜದ ಚೇತರಿಕೆಗೆ ಊರುಗೋಲಾಗ ಬಯಸಿದ “ಚೇತನ”: ಬೀರಪ್ಪ ಅಂಡಗಿ ಚಿಲವಾಡಗಿ

ಅಂಗವಿಕಲತೆ ಎಂಬುದನ್ನು ಯಾವ ವ್ಯಕ್ತಿಯು ಪಡೆದುಕೊಂಡು ಬಂದುದಲ್ಲ. ಅದು ಆಕಸ್ಮಿತವಾಗಿ ಬರುವಂತದ್ದಾಗಿದೆ. ಅಂಗವಿಕಲತೆಯನ್ನು ಹೊಂದಿರುವ ವ್ಯಕ್ತಿಯು ತನ್ನ ವಿಕಲತೆಯ ಕಡೆಗೆ ಗಮನವನ್ನು ಹರಿಸದೇ ಸಾಧನೆಯನ್ನು ಮಾಡಿ ತೋರಿಸುವುದರ ಕಡೆಗೆ ಗಮನವನ್ನು ಹರಿಸುವರು. ಅಂಗವಿಕಲತೆಗೆ  ಒಳಗಾದ ವ್ಯಕ್ತಿಯು ಸಾಧಾರಣ ವ್ಯಕ್ತಿಗಳಿಗಿಂತ ವಿಶೇಷವಾದ ಶಕ್ತಿಯನ್ನು ಹೊಂದಿರುತ್ತಾರೆ. ಅದಕ್ಕೆ ಉದಾಹರಣೆಯೆಂದರೆ ನಾನೇ. ನಾನು ಐದನೇ ವಯಸ್ಸಿನಲ್ಲಿ ಇರುವಾಗ ಪೋಲಿಯೋ ಲಸಿಕೆಯನ್ನು ಹಾಕಿಸಿಯೂ ಅಥವಾ ಹಾಕಿಸದೆಯೋ ನನ್ನ ಎಡಗಾಲು ಶಕ್ತಿಯನ್ನು ಕಳೆದುಕೊಂಡೆ. ಪ್ರಾಥಮಿಕ ಶಿಕ್ಷಣವನ್ನು ನನ್ನ ಸ್ವ ಗ್ರಾಮವಾದ ಕೊಪ್ಪಳ ತಾಲೂಕಿನ ಚಿಲವಾಡಗಿಯಲ್ಲಿ […]

‘ಎಲ್ಲಾ ನ್ಯೂನತೆಗಳಾಚೆ ಮನಸ್ಸು ಜೀವಿಸಲಿ’: ದಿವ್ಯ ಆಂಜನಪ್ಪ

ಆ ತಾಯಿ ದಿನವೂ ತನ್ನ ಮಗುವನ್ನು ಶಾಲೆಗೆ ಕರೆದೊಯ್ಯುತ್ತಿದ್ದಳು. ಮಗುವಿಗೆ ಇನ್ನೂ ಮೂರುವರೆ ವರುಷಗಳು. ಒಂದೇ ಬಸ್ಸಿನ ಪ್ರಯಾಣಿಕಳಾಗಿ ನಾನು ಸಹ ಆಗಾಗ ಇವರನ್ನು ಗಮನಿಸುತ್ತಿದ್ದೆನು. ಮಗುವಿಗೆ ಇನ್ನೂ ಸರಿಯಾಗಿ ನಾಲಿಗೆ ಹೊರಳದು, ಕಿವಿಯೂ ತುಸು ಮಂದವೇ. ಹಾಗಾಗಿ ಆಕೆ ಒಂದು ವಿಶೇಷ ಅಗತ್ಯಯುಳ್ಳ ಶಾಲೆಗೆ ಸೇರಿಸಿದ್ದರು. ಮಗು ಮುದ್ದು ಮುದ್ದುಗಿದ್ದು ಬಸ್ಸಿನ ಎಲ್ಲರ ಗಮನವನ್ನು ಸೆಳೆದಿತ್ತು. ಹಾಗೆಯೇ ಅಕ್ಕಪಕ್ಕದವರನ್ನು ಮುಟ್ಟಿ ಮುಟ್ಟಿ ಮಾತನಾಡಿಸಿ ನಕ್ಕು ಮನ ಗೆದ್ದಿತ್ತು. ಮಗುವಿನ ಮುಗ್ಧತೆಯು ಅದರ ನ್ಯೂನತೆಯನ್ನು ನಮ್ಮೆಲ್ಲರ ಮನಗಳಿಂದ […]

ವಿಕಲಚೇತನರಿಗಾಗಿ ಸಮನ್ವಯ ಶಿಕ್ಷಣ: ವೈ.ಬಿ.ಕಡಕೋಳ

  ಶೈಕ್ಷಣಿಕ ಮುಖ್ಯವಾಹಿನಿಯಲ್ಲಿ ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಅಗತ್ಯವಿರುವ ಮಕ್ಕಳನ್ನು ಸೇರಿಸಿ ನೀಡುವ ಶಿಕ್ಷಣವನ್ನು ಸಮನ್ವಯ ಶಿಕ್ಷಣ ಎನ್ನುವರು.೧೯೮೬ ರ "ರಾಷ್ಟ್ರೀಯ ಶಿಕ್ಷಣ ನೀತಿ",೧೯೯೦ ರಲ್ಲಿ ವಿಶ್ವಸಂಸ್ಥೆ ಮಂಡಿಸಿದ "ಸರ್ವರಿಗೂ ಶಿಕ್ಷಣ" ೧೯೯೫ ರ "ಅಂಗವಿಕಲ ವ್ಯಕ್ತಿಗಳ ಸಮಾನ ಹಕ್ಕುಗಳ ಸಂರಕ್ಷಣೆ ಹಾಗೂ ವಿಕಾಸ ಕಾಯೆ"ಯು ಅಂಗವಿಕಲ ಮಕ್ಕಳು ಸಾಮಾನ್ಯ ಶಾಲೆಯಲ್ಲಿ ಶಿಕ್ಷಣ ಪಡೆಯುವ ಅವಕಾಶವನ್ನು ಹೊಂದಿ ಅಂತಹ ಮಕ್ಕಳು ಕೂಡ ದೈರ್ಯ ಮತ್ತು ಆತ್ಮವಿಶ್ವಾಸದಿಂದ ಜೀವನವನ್ನು ಎದುರಿಸಬೇಕು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಬೇಕು ಎಂಬುದನ್ನು ತಿಳಿಸಿವೆ. […]

ಪ್ರತಿಕ್ ರವರ ಸಂದರ್ಶನ: ಚೈತ್ರ ಭವಾನಿ

ಕಸ್ತೂರಿ ವಾಹಿನಿಯ ಕ್ರೈಂ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದವರಿಗೆ ಪ್ರತಿಕ್ ಅವರ ಧ್ವನಿ ಚಿರಪರಿಚಿತ. ಮಾಧ್ಯಮ ಕ್ಷೇತ್ರದಲ್ಲಿ ಇವರ ಹೆಸರನ್ನು ಕೇಳಿದವರು ಒಮ್ಮೆ ಹುಬ್ಬೆರಿಸೋದು ಸಾಮಾನ್ಯ. ಮಾಧ್ಯಮ ಕ್ಷೇತ್ರದಲ್ಲಿ ಪ್ರತಿಕ್ ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲುತ್ತಾರೆ. ಕೆಲಸ ಮಾಡಲು ದೈಹಿಕವಾಗಿ ಸಮರ್ಥರಿದ್ದರೂ ಕೆಲಸದ ಒತ್ತಡ, ಅತೃಪ್ತಿ, ಸಂಬಳದ ಕೊರತೆ ಹೀಗೆ ನಾನಾ  ಕಾರಣಗಳಿಂದ ಮಾಧ್ಯಮ ಕ್ಷೇತ್ರಕ್ಕೆ ಗುಡ್ ಬೈ ಹೇಳುತ್ತಿರುವವರ ನಡುವೆ ಹುಟ್ಟಿದಾಗಿನಿಂದಲೂ ತಮ್ಮ ಎಡಗೈ ಸ್ವಾಧೀನ ಕಳೆದುಕೊಂಡ ಪ್ರತಿಕ್  ಅದೊಂದು ಸಮಸ್ಯೆಯೇ ಅಲ್ಲವೆಂದು  ಇಂದಿಗೂ, ಮುಂದೆಯೂ ಇದೆ ಕ್ಷೇತ್ರದಲ್ಲಿ ಹೊಸ […]

ವಲ್ಸಮ್ಮನ ಕಥೆ: ಭಾರವಿ

 "ಇನ್ನೊಂದ್ ಹೆಜ್ಜೆ ಮುಂದಿಟ್ರೆ ತಲೆ ಒಡಿತೀನಿ" ದೊಣ್ಣೆ ಹಿಡಿದ ವಲ್ಸಮ್ಮನ ಎಚ್ಚರಿಕೆ ನಾಲ್ಕು ಗೋಡೆಗಳ ಒಳಗಿಂದ ಹೊರಗೆ ಕೇಳಿಸುತ್ತಿದೆ. ಗಂಡನೆನೆಸಿಕೊಂಡವ ಇನ್ನೂ ಗುರುಗುಟ್ಟುತ್ತಲೇ ಇದ್ದಾನೆ. ಕುಡಿದ ಬಾಯಿಂದ ಅಸ್ಪಷ್ಟವಾಗಿ ಕೆಟ್ಟ ಪದಗಳು ವಾಸನೆಯೊಂದಿಗೆ ಉರುಳುತ್ತಿವೆ. 6 ವರ್ಷದ ಮಗ ವಿನಿತ್ ಮೂಲೆಯಲ್ಲಿ ನಿಂತುಕೊಂಡು ಅಪ್ಪನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದಾನೆ. ಆದರೆ ವರ್ಗೀಸ್ ಗೆ ಇದ್ಯಾವುದರ ಪರಿವೆಯೂ ಇಲ್ಲ. ಅವನಿಗೆ ಒಂದು ಬಾರಿ ಹೆಂಡತಿಯ ಮೇಲೆ ಕೈ ಮಾಡುವ ಆಸೆ. ಆದರೆ ಅವಳನ್ನು ಸಮೀಪಿಸಲು ಹೆದರಿಕೆ. ಎಲ್ಲಿ ದೊಣ್ಣೆಯ ಹೊಡೆತ […]

ಗೆದ್ದು ಬಂದಳು ಸೀತೆ ..: ಅನಿತಾ ನರೇಶ್ ಮಂಚಿ

 ಶಾಲೆಯಿಂದ ಬರುವ ದಾರಿಯಲ್ಲೇ ಇದ್ದ ಅಪ್ಪನ ಕ್ಲಿನಿಕ್ಕಿನ ಪಕ್ಕದ  ಖಾಲಿ ಕೋಣೆ ನನ್ನ  ಕಣ್ಣಿಗೆ ನಿತ್ಯವೂ ಬೀಳುತ್ತಿತ್ತು.  ಎಲ್ಲಾ ಅಂಗಡಿಯ ಬಾಗಿಲುಗಳಂತೆ ಇದಕ್ಕೂ ಮರದ ಉದ್ದುದ್ದ ಹಲಗೆಗಳೇ ಬಾಗಿಲು. ಒಂದರ ಪಕ್ಕದಲ್ಲಿ ಒಂದರಂತೆ ಜೋಡಿಸಿ ಇಡುತ್ತಿದ್ದ ಇದನ್ನು ಹಾಕುವುದು ಮತ್ತು ತೆರೆಯುವುದೂ ಕೂಡಾ ನಾಜೂಕಿನ ಕೆಲಸವೇ. ಯಾಕೆಂದರೆ ಆಯಾಯ ಜಾಗ ತಪ್ಪಿ ಹಲಗೆಗಳನ್ನು ಜೋಡಿಸಿದರೆ ಅಂಗಡಿಯ ಬಾಗಿಲು ಹಾಕಲೇ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿಯೇ ಹೆಚ್ಚಿನೆಲ್ಲಾ ಬಾಗಿಲಿನ ಹಲಗೆಗಳ ಮೇಲೆ ಒಂದು, ಎರಡು, ಮೂರು …  ಎಂದು ಸಂಖ್ಯೆಗಳನ್ನು ಬರೆದಿಡುತ್ತಿದ್ದರು. […]

ಕತ್ತಲಡಗಿಸಲು ಹಣತೆಯೊಂದು ಸಾಕು: ಸಚೇತನ

ಕ್ಲಾಸಿನಲ್ಲಿ ಪಾಠ ಓದಲು  ಎದ್ದು ನಿಂತ ಪುಟ್ಟ ಕಂದಮ್ಮ  ಭಯಗೊಂಡಿದ್ದಾನೆ, ಸಣ್ಣನೆಯ ನಡುಕ ಮೈ ತುಂಬಾ ಹರಡಿ ತುಟಿಯ ತುದಿಯಲ್ಲಿ ಕುಳಿತಿದೆ, ತೊದಲಿದರೆ ಎನ್ನುವ ಆತಂಕ ಆ ಚಿಕ್ಕ ಕಣ್ಣುಗಳನ್ನು ದಾಟಿ ಹೊರ ಬರುತ್ತಿದೆ,   ಕೈಯಲ್ಲಿ ಅಂಗಿಯ ತುದಿಯನ್ನು ಹಿಡಿದು ಎಳೆಯುತ್ತಿದ್ದಾನೆ, ಶಕ್ತಿಮೀರಿ ಹೊರಡಿಸಿದ ಮಾತು ಬೆಚ್ಚನೆಯ ಗೂಡಿನಿಂದ ಕೆಳಬಿದ್ದ ನಡುಗುವ ಗುಬ್ಬಚ್ಚಿಯಂತೆ,ಮುದ್ದಾಗಬೇಕಿದ್ದ ಮಾತು ಮೊದ್ದಾಗಿದೆ, ತೊದಲು. ಕಂದಮ್ಮನ ಕಣ್ಣಿನಿಂದ ಮಾತು ಹೊರಬರುತ್ತಿಲ್ಲ ಶಬ್ದಗಳು ಹನಿಗಳಾಗಿವೆ.  ಇಲ್ಲಿಯೂ ಹಾಗೆ ಕಥೆಯ ನಾಯಕ ಅಂತಿಥವನಲ್ಲ, ಅವನು ಬ್ರಿಟಿಷರ […]

ತನ್ನಂತೆ ಪರರ ಬಗೆದೊಡೆ ಕೈಲಾಸ: ಆರಿದ್ರಿಕಾ ಭಾರತಿ

ಅಪ್ಪಾ ಹೆಣ್ಣು ಮಗುವಿಗಾಗಿ ಕಾಯುತ್ತಾ ಕಾಯುತ್ತಾ, ೭ನೇ ಮಗು ಜನಿಸಿದ ಮೇಲೆ ಭೂಮಿಗೆ ಇಳಿಯುತ್ತಾಳೆ 'ಲತಾ, ಮುದ್ದು ಮುಖ, ಬೆಳ್ಳಿ ಗುಂಡಿಗೆ ಟೋಪಿ ಹಾಕಿದಂತೆ ದಟ್ಟ ಕರಿ ಕೂದಲು, ಉದ್ದ ಮೂಗಿನ ಸುಂದರ ಗೊಂಬೆ, ಊರಣ್ಣ, ನಿನ್ ಮಗಳು ಸ್ಪುರದ್ರೂಪಿ, ಕೈ ತೊಳೆದು ಮುಟ್ಬೇಕು. ಎಂದರೆ ತಂದೆಗೊಂದು ಗರಿ. ಉಳಿದ ಯಾವುದೇ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸದ ಊರಣ್ಣ ನಿಗೆ 'ಏ ನನ್ ವಂಶಕ್ಕೆ ಪೋಲಿಯೋ, ಮಣ್ಣು ಮಸಿ ಬರಲ್ಲ, ಎಂಬ ಧೋರಣೆ. ಲತಾ ಗೆ ೩ […]