Facebook

Archive for 2014

ಟೀ, ಕಾಫಿ ಮಾರುವ ಹುಡುಗ: ನಟರಾಜು ಎಸ್. ಎಂ.

ನಮ್ಮ ಕಥಾನಾಯಕ ರವಿ ಕಳೆದ ದೀಪಾವಳಿಯ ವೇಳೆ ತನ್ನವ್ವನಿಗೆ ಟೂರಿಗೆ ಹೋಗಿ ಬರುತ್ತೇನೆಂದು ಹೇಳಿ ನಾಲ್ಕೈದು ದಿನ ನಾಪತ್ತೆಯಾಗಿದ್ದ. ಮಧ್ಯೆ ಮಧ್ಯೆ ಮನೆಗೆ ಫೋನ್ ಮಾಡಿ ತಾನು ಎಲ್ಲಿದ್ದೇನೆ ಯಾವಾಗ ಮನೆಗೆ ಬರುತ್ತೇನೆ ಎಂಬುದನ್ನು ಅವನು ಹೇಳುತ್ತಿದ್ದ ಕಾರಣ ಮನೆಯವರಿಗೆ ಹಬ್ಬದ ಸಮಯದಲ್ಲಿನ ಅವನ ಟೂರಿನ ಉದ್ದೇಶದ ಅರಿವಾಗಿರಲಿಲ್ಲ. ಟೂರಿನಿಂದ ಮನೆಗೆ ವಾಪಸ್ಸು ಬಂದವನು ಒಂದು ದಿನ ರಾತ್ರಿ ಅವ್ವನ ಎದುರು ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದ. ಆತನ ದುಃಖದ ಹಿಂದಿನ ಸತ್ಯ ಮತ್ತು ಆ ಟೂರಿನ ಉದ್ದೇಶ ರವಿಯ […]

ವಿಮಾನಾಲಯ ಅಂದ್ರ ಏನ್ ಮೀನಿಂಗು?: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ…) ವೆಂಕಣ್ಣನನ್ನು ಅವನ ಕಂಪನಿಯವರು ಅಮೆರಿಕಾಕ್ಕೆ ಕಳಿಸುವ ನಿರ್ಧಾರ ಮಾಡುತ್ತಾರೆ. ಹೆಂಡತಿ, ಮಗಳನ್ನೂ ಜೊತೆಗೆ ಕರೆದೊಯ್ಯುವ ನಿರ್ಧಾರ ಮಾಡಿ ಅವರಿಗೆ ವೀಸಾ ಮಾಡಿಸಲು ಚೆನ್ನೈಗೆ ಹೋಗುತ್ತಾನೆ. ವಿಸಾ ಕೊಡುವದಕ್ಕೆ ಅಮೇರಿಕದವರು ಕಾಡಿಸುವ ರೀತಿಗೆ ಬೇಸತ್ತು,  ಆ ದೇಶಕ್ಕೆ ಹೋಗುವುದೇ ಬೇಡ ಅನ್ನುವ ನಿರ್ಧಾರ ಮಾಡುತ್ತಾನಾದರೂ ಹೆಂಡತಿ ಮಗಳಿಗೋಸ್ಕರ ನಿರ್ಧಾರ ಬದಲಿಸುತ್ತಾನೆ.  ಮುಂದೆ ಓದಿ… ) ಮೊದಲೆಲ್ಲಾ ವಿದೇಶ ಪ್ರಯಾಣ ಮಾಡುವವರ ದೊಡ್ಡದೊಂದು ಫೋಟೊ ಪೇಪರಿನಲ್ಲಿ ಹಾಕಿಸಿ, ಅವರಿಗೆ ಬಂಧು ಮಿತ್ರರು ಶುಭ ಕೋರುತ್ತಿದ್ದರು. ಅದು ಯಾಕೆ ಹಾಗೆ […]

ಅರ್ಥವಿಲ್ಲ ತತ್ವವಿಲ್ಲ ಅಸಂಗತವೆ ಸತ್ವವೆಲ್ಲ: ಸಚೇತನ

ಅಸಂಗತವಾಗಿರುವ ಕಥೆ ಅಥವಾ ಸಿನಿಮಾಕ್ಕೆ  ಅದೃಶ್ಯವಾದ ಶಕ್ತಿಯೊಂದಿದೆ. ಅಸಂಗತ ಸಾಹಿತ್ಯಕ್ಕೆ ತಂತ್ರ, ಹೆಣೆದ ಬಲೆಯಂತ ಉದ್ದೇಶಪೂರಿತ ಕಥಾವಸ್ತು, ಕಥಾವಸ್ತುವಿಗೊಂದು ಕೊನೆ, ಕೊನೆಯಾಗುವದಕ್ಕೆ  ಒಂದು ತಿರುವು, ರೋಚಕತೆ, ಕೊನೆಯಾಗಿದ್ದಕ್ಕೆ ಒಂದು ನೀತಿ ಇವ್ಯಾವುದು ಇಲ್ಲ.  ಬಹುತೇಕ ಸಲ ಅಸಂಗತ ಕಥಾಲೋಕದಲ್ಲಿ  ನಮ್ಮ ಕಲ್ಪನೆಗೆ ನಿಲುಕಿರದ  ಘಟನೆಗಳು ನಡೆಯುವದು, ಮಾತುಗಳು ಕೇಳಲ್ಪಡುವದು ಸಾಮಾನ್ಯ.  ಅಸಂಗತತೆ ತನ್ನನ್ನು ತಾನು  ಓದುಗ ಅಥವಾ ಕೇಳುಗ ಅಥವಾ ನೋಡುಗನ ದೃಷ್ಟಿ, ಕಲ್ಪನೆ, ತೀರ್ಮಾನಕ್ಕೆ  ಒಪ್ಪಿಸಿಕೊಂಡಿರುತ್ತದೆ.  ಸ್ಪಷ್ಟವಾಗಿ ಹೇಳಿರದ, ಪ್ರಕಟವಾಗಿ ಬಿಚ್ಚಿಟ್ಟಿರದ ಅರ್ಥವೊಂದು ನಮ್ಮಲ್ಲಿ ಹುಟ್ಟುವಂತೆ […]

ಸಚಿನ್ ನಾಯ್ಕ ಅಂಕೋಲ: ಸಚಿನ್ ನಾಯ್ಕ ಅಂಕೋಲ

ನನ್ನ ಕನಸುಗಳೆಲ್ಲವ ತನ್ನದೇ ಎಂಬಂತೆ ಸಲಹುತ್ತಿರುವ ನಿನಗಾಗಿ….                                                                     ನಿನ್ನವನಿಂದ…. ಕಿಟಕಿಯಿಂದ ತೂರಿ ಬರುವ ತಂಗಾಳಿ ಕಿವಿಯಲ್ಲಿ ನೀನು ಪಿಸುಗುಟ್ಟಿದಂತಿದೆ….!! ಆಗಾಗ ಸಿಗುವ  ಹಗಲಲ್ಲೂ ಕತ್ತಲ ನೆನಪ ತರುವ ಅಷ್ಟೇ […]

ಬಂಟ ಮಲೆಯೆಂಬ ಬದುಕ ತಾಣ. . .: ಸ್ಮಿತಾ ಅಮೃತರಾಜ್

ಜನ ನಿಬಿಡ ಪ್ರದೇಶದಲ್ಲಿ, ಉಸಿರುಕಟ್ಟಿಸುವ ಪ್ಲಾಟ್ ಗಳಲ್ಲಿ ವೇಗದ ಬದುಕಿಗಂಟಿದ ಜನ ಅಷ್ಟೇ ಏದುಸಿರು ಬಿಟ್ಟುಕೊಂಡು ಓಡುತ್ತಿದ್ದಾರೆ. ಎಲ್ಲರೂ ಅವರವರ ಬದುಕಿಗಷ್ಟೇ ಸೀಮಿತವಾಗುತ್ತಿರುವ ಈ ಸಂಕುಚಿತ ಕಾಲಗಟ್ಟದಲ್ಲಿ ಎಲ್ಲರೂ ತಳಕು ಬಳುಕಿನ ಮೋಹಕ್ಕೊಳಗಾಗಿ ನಗರವಾಸಿಗಳಾಗುತ್ತಿದ್ದಾರೆ. ನಗರದ ಸೆಳೆತವೇ ಅಂತದ್ದು. ನಮ್ಮ ನರನಾಡಿಗಳಲ್ಲಿ ಅದಮ್ಯ ತೀರದ ಹುಚ್ಚು ಹತ್ತಿಸಿ, ಗಕ್ಕನೆ ಮಾಯಾವಿಯಂತೆ ನಮ್ಮನ್ನು ಅದರ ಕದಂಬ ಬಾಹುಗಳಲ್ಲಿ ಬಂಧಿಸಿಕೊಂಡು, ಬದುಕಿರುವವರೆಗೂ ವಿಲವಿಲನೇ ಒದ್ದಾಡಿಸಿ ಬಿಡುತ್ತದೆ. ಇಂತಹ ಹೊತ್ತಲ್ಲಿ ಹಳ್ಳಿಗಳೂ ನಗರಗಳಾಗುವ ಕನಸು ಹೊತ್ತು ಸಾಗುತ್ತಿವೆ. ಹಳ್ಳಿಯೆಂಬ ಕಲ್ಪಿತ ಚಿತ್ರಣವೇ […]

ಕಾಲೇಜು ದಿನಗಳ ವಾಕಿಂಗ್: ಅಕ್ಷಯ ಕಾಂತಬೈಲು

ನನ್ನ ಇಂಜಿನಿಯರಿಂಗ್ ಕಲಿಕೆಯ ದಿನಗಳವು; ಅಸೈನ್ಮೆಂಟ್ ಬರೆಯದ್ದರಿಂದ, ಕ್ಲಾಸಿಗೆ ತಡವಾಗಿ ಹಾಜರಾಗುತ್ತಿದ್ದ ಕಾರಣ, ಲ್ಯಾಬ್ ರೆಕಾರ್ಡ್ ಸಮಯಕ್ಕೆ ಸರಿಯಾಗಿ ಕೊಡದ್ದರಿಂದ ಲೆಕ್ಚರರ ಕೈಯಲ್ಲಿ ನಾನು ಸಿಕ್ಕಾಪಟ್ಟೆ ಉಗಿಸಿಕೊಳ್ಳುತ್ತಿದ್ದೆನು. ನನ್ನೀ ಉದಾಸೀನತೆ ಅತಿರೇಕ ತಲುಪಿ ಲೆಕ್ಚರುಗಳು ಕ್ಲಾಸಿನಿಂದ ಉಚ್ಚಾಟನೆ ಮಾಡಿದ ಪ್ರಸಂಗವೂ ಬೇಜಾನ್ ಇದೆ. ಕಾಲೇಜಿನಲ್ಲಿ ಚೆಂದಮಾಡಿ ಬೈಗುಳ ಉಂಡು ಸಂಜೆ ಹೊತ್ತು ರೂಂಗೆ ಹಿಂತಿರುಗಿದಾಗ ಆ ದಿನದ ನಿರ್ವಹಣೆಯ ಬಗೆಗೆ ನನ್ನ ಮೇಲೆ ನನಗೇ ಬೇಸರ ಮೂಡುತ್ತಿತ್ತು. ಮನಸಿಗೆ ಮೂಡಿದ ಬೇಸರವ ಕಳೆಯಲು ಮಿತ್ರ -ಶಿವಕುಮಾರನ ಜೊತೆ […]

ತಿರಸ್ಕಾರ (ಭಾಗ 4): ಜೆ.ವಿ.ಕಾರ್ಲೊ, ಹಾಸನ

’ರಾಕ್ಷಸರು. ಪಾಪ ಹುಡುಗಿ!’ ಅವಳು ಅನುಕಂಪ ವ್ಯಕ್ತಪಡಿಸಿದಳು. ಒಬ್ಬ ಮಿಡ್‌ವೈಫಳ ವಿಳಾಸವನ್ನು ಕೊಟ್ಟು ’ನಾನು ಕಳುಹಿಸಿದೆ ಎಂದು ಹೇಳಿ’ ಎಂದಳು. ಮಿಡ್‌ವೈಫ್ ಯಾವುದೋ ಔಷದವನ್ನು ಕೊಟ್ಟಳು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಆನ್ನೆಟ್ ಮತ್ತೂ ಕಾಹಿಲೆ ಬಿದ್ದಳು. ಗರ್ಭ ಬೆಳೆಯುತ್ತಲೇ ಹೋಯ್ತು. ಮೇಡಮ್ ಪೆರಿಯೆರ್‌ಳ ವೃತ್ತಾಂತವನ್ನು ಕೇಳಿದ ಹ್ಯಾನ್ಸ್ ಅರೆಗಳಿಗೆ ಸ್ತಬ್ಧನಾದ. ನಂತರ, ’ನಾಳೆ ಭಾನುವಾರ. ನಾವು ಪುರುಸೊತ್ತಾಗಿ ಕುಳಿತು ಮಾತನಾಡುವ.’ ಎಂದ. ’ನಮ್ಮಲ್ಲಿ ಹೊಲಿಯಲು ಸೂಜಿಗಳಿಲ್ಲ! ಮತ್ತೆ ಬರುವಾಗ ತರುವೆಯಾ?’ ಮೇಡಮ್ ಪೆರಿಯೆರ್ ಕೇಳಿದಳು. ’ಪ್ರಯತ್ನ ಮಾಡುತ್ತೇನೆ […]

ಮೂವರ ಕವಿತೆಗಳು: ಶೋಭಾಶಂಕರ್, ವಿನಾಯಕ ಭಟ್, ಶ್ರೀಕಾಂತ ಧಾರವಾಡ.

ಜಿ ಎಸ್ ಎಸ್ ಎದೆ ತುಂಬಿ ಹಾಡಿದ ಕವಿ ನವೋದಯದ ಸಮನ್ವಯ ಋಷಿ ಕನ್ನಡಿಗರ ಮನಸ ಗೆದ್ದ ಭಾವಜೀವಿ     ಇರುವಷ್ಟು ಕಾಲದಿ ಎದೆ ತುಂಬಿ ಮನತುಂಬಿ ತನು ತುಂಬಿ ಹಾಡಿದಾ ಕವಿ ಇಲ್ಲದ ದೇವರ ಹುಡುಕದೆ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ-ಸ್ನೇಹಗಳ ಹೊಸೆದು  ದೇವರ ದರ್ಶನ ತೋರಿದ ದಾರ್ಶನಿಕ ಕವಿ ಹಾಡು ಹಳೆಯದಾದರೇನು ಭಾವ ನವನವೀನ ಎನಿಸಿ ಎಂದೆಂದಿಗೂ ಮರೆಯದ ಕಾವ್ಯ ಸೃಷ್ಟಿಸಿ ತುಂಬಿದರು ಬತ್ತದ ಅನಂತ ಜೀವನೋತ್ಸಾಹ!! ಹೂವು ಅರಳೀತು ಹೇಗೆ ಪ್ರೀತಿ […]

ನಾಝ್ಕಾ ಗೆರೆಯ ವಿರೂಪ: ಅಖಿಲೇಶ್ ಚಿಪ್ಪಳಿ

ದಿನಾಂಕ:೧೧/೧೨/೨೦೧೪ರ ಗುರುವಾರ ಸಂಜೆ ಸಾಗರದಲ್ಲಿ ಒಟ್ಟು ಮೂರು ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಗೊಂಡವು. ಶ್ರೀ ನಾಗೇಶ ಹೆಗಡೆಯವರ ನರಮಂಡಲ ಬ್ರಹ್ಮಾಂಡ, ಶ್ರೀ ಆನಂದ ತೀರ್ಥ ಪ್ಯಾಟಿಯವರ ಅಹಾ ಇಸ್ರೇಲಿ ಕೃಷಿ ಹಾಗೂ ನನ್ನದೇ ಆದ ಜೋಗದ ಸಿರಿ ಕತ್ತಲಲ್ಲಿ. ಇದೇ ಹೊತ್ತಿನಲ್ಲಿ ಪೆರು ದೇಶದ ಲಿಮಾದಲ್ಲಿ ೧೯೦ ದೇಶಗಳ ಧುರೀಣರು ಒಟ್ಟು ಸೇರಿ ಭೂಬಿಸಿಯನ್ನು ನಿಯಂತ್ರಿಸುವ ಕುರಿತು ೧೧ನೇ ದಿನದ ಗಂಭೀರ ಚರ್ಚೆ ನಡೆಸುತ್ತಿದ್ದರು, ಒಟ್ಟು ಹನ್ನೆರೆಡು ದಿನ ನಡೆದ ಈ ಜಾಗತಿಕ ಸಮಾವೇಶದಲ್ಲಿ ಭೂಬಿಸಿಗೆ ಕಾರಣವಾಗುವ […]

ಒಂದು ಕಾಗದದ ಕತೆ: ಪ್ರಶಸ್ತಿ

ನಮಸ್ಕಾರ. ನಾನ್ಯಾರು ಅಂದ್ರಾ ? ಚಿಗುರಾಗಿ, ಮರವಾಗಿ , ಬೊಡ್ಡೆಯಾಗಿ, ಕಾರ್ಖಾನೆಯ ಅಸಂಖ್ಯ ರಾಸಾಯನಿಕಗಳ ಸಾಗರದಿ ಈಜಾಡಿ ಕೊನೆಗೂ ಪೇಪರ್ರೆಂಬ ಹೆಸರು ಪಡೆದ ಜೀವ ನಾನು. ಹೊರಜಗತ್ತ ಕಾಣೋ ನನ್ನ ಕನಸ ದಿನ ಕೊನೆಗೂ ನನಸಾಗಲಿದೆ. ನನ್ನಂತೇ ಇರೋ ಅದೆಷ್ಟೋ ಜನರನ್ನು ಒಂದು ಕಟ್ಟು ಹಾಕಿ ಚೆಂದದ ಹೊದಿಕೆ ಹೊದಿಸಿ ಇಟ್ಟಿದ್ದಾರೆ. ಹೊರಜಗತ್ತಿನ ಕತೆ ಕೇಳುತ್ತಲೇ ಬದುಕ ಹಲಹಂತ ದಾಟಿದ ನಮ್ಮ ಮುಂದಿನ  ಗಮ್ಯವೆಲ್ಲಿಗೋ ಗೊತ್ತಿಲ್ಲ. ಕಾಗದವೆಂದ್ರೆ ಸರಸ್ವತಿಯ ರೂಪವೆಂದು ಪೂಜಿಸುತ್ತಿದ್ದ ದಿನಗಳಿದ್ದವಂತೆ. ಬರಹವೆಂದರೆ ಪಾಠಿ-ಬಳಪ, ಕಾಗದವೆಂದರೆ […]