Facebook

Archive for 2014

ಶಿಕಾರಿ: ಡಾ. ಗವಿ ಸ್ವಾಮಿ

ಎರಡು ವರ್ಷದ ಎಳೆಗೂಸು  ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಅವನನ್ನು ಅಲುಗಾಡಿಸುತ್ತಿದ್ದಳು. ಆತ ತೆರೆದ ಕಣ್ಣುಗಳಿಂದ ಛಾವಣಿಯನ್ನು ದಿಟ್ಟಿಸುತ್ತಾ ಮರದ ಕೊರಡಿನಂತೆ ಬಿದ್ದಿದ್ದ . ತನ್ನನ್ನು ಎಬ್ಬಿಸಲು ಹೆಣಗಾಡುತ್ತಿದ್ದ ಮುದ್ದಿನ ಮಗಳಿಗೆ ಒಂಚೂರೂ ಸ್ಪಂದಿಸದೇ ನಿತ್ರಾಣನಾಗಿ ಹಾಸಿಗೆಗೆ ಅಂಟಿಕೊಂಡಿದ್ದ. ಮೂರ್ನಾಲ್ಕು ಬಾರಿ ಅಪ್ಪನನ್ನು ಜಗ್ಗಾಡಿ ಸುಸ್ತಾದ ಕಂದನ ಕಣ್ಣುಗಳಲ್ಲಿ ಹತಾಶೆ ಮಡುಗಟ್ಟಿತು. ತನ್ನನ್ನು ಮೊರದಗಲದ ಅಂಗೈ ಮೇಲೆ ಕೂರಿಸಿಕೊಂಡು ಮುದ್ದಿಸುತ್ತಿದ್ದ ಅಪ್ಪ.. ಗೊಂಬೆಯಂತೆ ಎಸೆದು ಆತುಕೊಳ್ಳುತ್ತಿದ್ದ ಅಪ್ಪ ಈಗ ಸ್ಪಂದಿಸದೇ ಮರದ ಕೊಂಟಿನಂತೆ ಮಲಗಿರುವುದನ್ನು ನೋಡಿ ಪುಟ್ಟ ಕಣ್ಣುಗಳಲ್ಲಿ […]

ಮತ್ತೆ ಮಳೆ ಹೊಯ್ಯುತ್ತಿದೆ: ಹೃದಯ ಶಿವ

ಒಂದು ಮಳೆಗಾಲದ ಬೆಳಗ್ಗೆ ಸಕಲೇಶಪುರದ 'ಅಶ್ರಿತಾ' ಲಾಡ್ಜಿನ ಬಾತ್ ರೂಮಿನಲ್ಲಿ ಯೋಗರಾಜಭಟ್ಟರು ಬಾಗಿಲು ಹಾಕಿಕೊಂಡು ಸ್ನಾನ ಮಾಡುತಿದ್ದರು.ನಾನು ಹೊರಗೆ ನಿಂತು 'ಇವನು ಗೆಳೆಯನಲ್ಲ'ವಾಗಬೇಕಿದ್ದ ಕೆಲವು ಅಸ್ಪಷ್ಟ ಸಾಲುಗಳನ್ನು ಹೇಳುತಿದ್ದೆ. ಅವರು ಸ್ನಾನ ಮಾಡುತ್ತಲೇ ಸಾಲುಗಳನ್ನು ಕೇಳಿಸಿಕೊಂಡು ಒಳಗಿನಿಂದಲೇ ಕರೆಕ್ಷನ್ಸ್ ಸೂಚಿಸುತಿದ್ದರು. ನಾನು ಗುರುತು ಹಾಕಿಕೊಳ್ಳುತ್ತಿದ್ದೆ. ಸ್ನಾನ ಮುಗಿಸಿ ಹೊರಬಂದ ಭಟ್ಟರು ಬಟ್ಟೆ ಹಾಕಿಕೊಂಡು ನನ್ನನ್ನೂ ದಡದಡನೆ ಎಳೆದುಕೊಂಡು ಹೋಟೆಲಿನ ಹೊರಕ್ಕೆ ಬಂದಾಗ ನಟ ಗಣೇಶ್,ಕ್ಯಾಮೆರಾಮ್ಯಾನ್ ಕೃಷ್ಣ, ಮ್ಯಾನೇಜರ್ ಪ್ರತಾಪ್ ರಾವ್ ಮತ್ತಿತರರು ಚಳಿಗೆ ನಡುಗುತ್ತ ಕಾರಿನಲ್ಲಿ ಕುಳಿತಿದ್ದರು. […]

ಬಾಲ್ಯದ ನೆನಪುಗಳನ್ನು ನಿನ್ನ ಮುಂದೆ ಹರವಬೇಕು: ಪದ್ಮಾ ಭಟ್

ಒಂದನೇ ಕ್ಲಾಸಿನಲ್ಲಿ ಮೊದಲ ಬೆಂಚಿನಲ್ಲಿ ಕುಳಿತು ನನ್ನ ಬಳಪವೇ ಉದ್ದವಿದೆ ಎಂದು ಹೇಳುತ್ತಿದ್ದವಳು ನೀನು. ಅಮ್ಮ ಅಪ್ಪನಿಗೆ ಗೊತ್ತಿಲ್ಲದಂತೆಯೇ ಹುಣಸೆ ಹಣ್ಣು ಕದ್ದು, ಕಿಸಿೆಯ ತುಂಬೆಲ್ಲಾ ಹರಡಿಕೊಂಡು ಬರುತ್ತಿದ್ದವಳು ನೀನು. ನಿನಗೆ ಆ ದಿನಗಳು ನೆನಪಿದೆಯೋ ಇಲ್ಲವೋ ನಾಕಾಣೆ. ಆದರೆ ನನ್ನ ಮನದಲ್ಲಿ ಆ ನೆನಪುಗಳು ಇನ್ನೂ ಬೆಚ್ಚಗೆ ಕುಳಿತಿವೆ.  ಮಳೆಗಾಲದಲ್ಲಿ ಜೋರು ಮಳೆ ಬಂದು ಶಾಲೆಯೇ ಬಿದ್ದು ಹೋಗಲಿ ಎಂದು ಕ್ಲಾಸಿನಲ್ಲೆಲ್ಲಾ ಶಾಪ ಹಾಕುತ್ತಿದ್ದ ಕ್ಷಣಗಳನ್ನು ನೆನದರೆ ನಗು ಉಕ್ಕುಕ್ಕಿ ಬರುತ್ತದೆ. ನನ್ನ ಅಕ್ಷರ ದುಂಡಗಿದೆ, […]

ಅನಪೇಕ್ಷಿತ ಶಿಕ್ಷೆಯ ಮೂಲ ಅಕಾರಣ ಶೋಷಣೆ: ಅಮರ್ ದೀಪ್ ಪಿ.ಎಸ್.

ಆ ದಿನ ಯಾಕೋ "ಆತ"ನಿಗೆ ಕಣ್ಣಿಗೆ ಪಟ್ಟಿ ಕಟ್ಟಿ ಬಿಟ್ಟ ದಿನ… ನಡೆದದ್ದು ಆಫೀಸಿಗೆ,ದೇಕಿದ್ದು ಕೆಲಸವೇ ಆದರೂ ಎದುರಾದದ್ದು ಕೆಟ್ಟ ಸಂಜೆ ಸಮಯ.   ಆತ ಆ ದಿನ ಇದ್ದ ಇಷ್ಟೇ ಕೆಲಸಗಳನ್ನು ಮುಗಿಸಿ ಗೆಳೆಯ ಬಂದನೆಂದ ಕಾರಣಕ್ಕೆ ಅದೇ ಆವರಣದ ಇನ್ನೊಂದು ಕಚೇರಿಗೆ ಒಂದೆರಡು ನಿಮಿಷದ ಮಟ್ಟಿಗೆ ತೆರಳುತ್ತಾನೆ.  ವಾಪಸ್ಸು ಬರುವುದರೊಳಗೆ ಎಂಕ, ನೋಣ ಸೀನ ಎಂಬಂತಿದ್ದ ಮೂರ್ನಾಲ್ಕು ಜನ ಸಿಬ್ಬಂದಿ ಎದುರಿಗೆ ಹತ್ತು ಹದಿನೈದು ಜನರ ಗುಂಪೊಂದು ಕಚೇರಿಗೆ ಬಂದು "ಆತ "ನನ್ನು ಹುಡುಕುತ್ತಾರೆ, […]

ಹುಲಿ ವಿಧವೆ ರಹೀಮಾ ಬೇಗಂ: ಅಖಿಲೇಶ್ ಚಿಪ್ಪಳಿ

ಮೊನ್ನೆ ಭಾನುವಾರ ಬೇರೆ ಯಾವುದೋ ವಿಚಾರಕ್ಕೆ ಊರಿನಲ್ಲಿ ಮೀಟಿಂಗ್ ಸೇರಿದ್ದೆವು. ಹತ್ತಾರು ಜನರಿದ್ದ ಆ ಗುಂಪಿನಲ್ಲಿ ರಸ್ತೆ ಅಗಲೀಕರಣದ ವಿಷಯ ಅದೇಗೋ ನುಸುಳಿ ಬಂತು. ಗ್ರಾಮಪಂಚಾಯ್ತಿಯ ಸದಸ್ಯರೊಬ್ಬರು ಹೇಳಿದರು. ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಬದಿಯ ಮರಕಡಿಯಲು ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಸಾರಾಂಶ. ಸರಿ ಪರಸ್ಪರ ಚರ್ಚೆ ಶುರುವಾಯಿತು.  ಕೆಲವರು ಹೇಳಿದರು ಅಭಿವೃದ್ಧಿಗಾಗಿ ರಸ್ತೆ ಬದಿಯ ಸಾಲು ಮರಗಳನ್ನು ತೆಗೆಯುವುದು ಅನಿವಾರ್ಯ. ಹಿಂದೆ ಅದ್ಯಾವುದೋ ಕಾಲದಲ್ಲಿ ಜನರು ನಡೆದುಕೊಂಡೊ ಅಥವಾ ಎತ್ತಿನ ಗಾಡಿಗಳಲ್ಲಿ ದೂರದೂರುಗಳಿಗೆ ಹೋಗುತಿದ್ದರು. […]

ಆದಾಯ ತೆರಿಗೆ ಮತ್ತು ನಾವು: ಪ್ರಶಸ್ತಿ ಪಿ.

  ಈಗ ಟೀವಿ, ಪೇಪರ್ಗಳಲ್ಲೆಲ್ಲಾ ಫುಟ್ಬಾಲು ಜ್ವರ. ಮೆಸ್ಸಿ, ರೊನಾಲ್ಡೋ, ರೋಬಿನ್ ವಾನ್ ಪರ್ಸಿ.. ಹೀಗೆ ತರಾವರಿ ಹೆಸರುಗಳದ್ದೇ ಗುಣಗಾನ ಫೇಸ್ಬುಕ್ , ಟ್ವಿಟ್ಟರ್ಗಳಲ್ಲೂ. ಈ ಜೋಶಿನ ಮಧ್ಯೆಯೇ ಆದಾಯ ತೆರಿಗೆ ಮಾಹಿತಿ ಸಲ್ಲಿಸಲು ಜುಲೈ ಮೂವತ್ತು ಕೊನೇ ದಿನ ಅನ್ನೋ ಮಾಹಿತಿ ಮೂಲೆಲೆಲ್ಲೋ ಮಿಂಚ್ತಾ ಇರತ್ತೆ. ಸಣ್ಣವರಿದ್ದಾಗಿಂದ ಟಿ.ವಿಯಲ್ಲಿ ಈ ಬಗ್ಗೆ ಜಾಹೀರಾತು ನೋಡೇ ಇರ್ತೇವೆ. ಆದ್ರೆ ಸ್ವಂತ ದುಡಿಯೋಕೆ ಶುರು ಮಾಡಿದಾಗ್ಲೇ ಇದೇನಪ್ಪಾ ಅನ್ನೋ ಪ್ರಶ್ನೆ ಹೆಚ್ಚೆಚ್ಚು ಕಾಡತೊಡಗೋದು. ನಾವು ಕಟ್ಟೋ ತೆರಿಗೆಯೇ ಸರ್ಕಾರದ […]

ಪಂಜು ಕಾವ್ಯಧಾರೆ

ಡಿಸೆಂಬರ್ ಚಳಿ  ಡಿಸೆಂಬರ್ ಬಂತೆಂದರೆ ಸಾಕು ತುಟಿಗಳು ಒಣಗಿ ಅವಳು ಕೊಡುತ್ತೇನೆಂದ ಮುತ್ತು  ಮತ್ತೆ ಮತ್ತೆ ನೆನೆಯುವಂತೆ ಮಾಡುತ್ತಿದೆ, ಜಗದ ಋತು ಚಕ್ರಕೆ ತಲೆ ಬಾಗಿ  ಕೊರೆಯುವ ಚಳಿಯಲಿ  ಹೆಣ್ಣಿನ ಸೌಂದರ್ಯದ ವಕ್ರತೆ  ಗಂಡಿನ ಚಂಚಲತೆಯನು ಕೆಣಕುತ್ತಿದೆ.  ನಿರಾಶೆ  ಕತ್ತಲೆಯ ಕನಸುಗಳು ಸೋತಾಗ  ಹೋಗುತಿರುವ ದಾರಿ ಮೌನ ತಳೆದಾಗ  ಬಯಕೆಗಳ ಬಾಯಾರಿಕೆಗೆ ನಗುತಲಿದೆ ಮೌನ  ಕಾಣದ ತೀರಕೆ ಹೊರಟಿದೆ ಜೀವನ  ನಿಲ್ಲದ ತವಕ,ಕೊನೆಯಿಲ್ಲದ ಏಕಾಂತ  ನಿಸ್ವಾರ್ಥಿ  ಹೇ ಹಣತೆಯ ದೀಪ ನೀನೆಷ್ಟು ನಿಸ್ವಾರ್ಥಿ  ರಾತ್ರೀಲಿ ನಿನ್ನ ಬಿಟ್ಟರೆ […]

ಬೇಸಿಗೆಯ ರಜೆ(ಸಜೆ): ಸುಮನ್ ದೇಸಾಯಿ

ಬ್ಯಾಸಗಿ ರಜಾ ಮುಗಿದು ಮತ್ತ ಶಾಲಿ ಶುರುವಾದ್ವು. ಇಷ್ಟು ದಿನದ ರಜೆಯ ಮಜಾ ಅನುಭವಿಸಿದ ಮಕ್ಕಳಿಗೆ ಶಾಲೆಗೆ ಹೋಗಲಿಕ್ಕೆ ಎನೊ ಒಂದು ಹುರುಪು ಇರ್ತದ. ಹೊಸಾ ಪುಸ್ತಕ, ಹೊಸಾ ಬ್ಯಾಗು, ಮತ್ತ ಇಷ್ಟು ದಿನ ಬಿಟ್ಟ ಇದ್ದ ಗೆಳೆಯ/ಗೆಳತಿಯರನ್ನ ನೋಡೊ ಕಾತುರ, ಸೂಟಿಯೊಳಗ ತಾವು ಏನೆನೆಲ್ಲ ನೋಡಿದ್ದು, ಆಟ ಆಡಿದ್ದು ಎಲ್ಲ ಸುದ್ದಿಯನ್ನು ಸ್ನೇಹಿತರ ಮುಂದ ಹೇಳ್ಕೊಳ್ಳೊ ಕಾತುರ ಇರ್ತದ.   ಆದ್ರ ಈಗಿನ ಮಕ್ಕಳಿಗೆ ರಜೆನು ಸಜೆ ಹಂಗಿರ್ತದ ಅಂತ ನಂಗ ಅನಿಸ್ತದ. ನಾ ಭಾಳ […]

ಆಯ ತಪ್ಪಿದ್ರೆ ಅಪಾಯ (ಅಳಿದುಳಿದ ಭಾಗ): ಎಂ.ಎಸ್.ನಾರಾಯಣ.

(ಇಲ್ಲಿಯವರೆಗೆ…) ಕೆಲವರಿಗೆ ಇದೆಲ್ಲಾ ವಿವರಣೆ, ಸ್ಪಷ್ಟೀಕರಣಗಳು ರೇಜಿಗೆಯೆನಿಸಬಹುದು. ಹೀಗೆ ದ್ವಂದ್ವ, ಗೊಂದಲ ಹಾಗೂ ಸಂಕೀರ್ಣತೆಗಳಿಂದ ಕೂಡಿದ ಹಲವಾರು ಸಿದ್ಧಾಂತಗಳೇಕೆ ಬೇಕು? ಸರಳವಾದ ಒಂದು ಸಿದ್ಧಾಂತ ಸಾಲದೇ? ಎಂದೂ ಪ್ರಶ್ನಿಸಬಹುದು. ಆದರೆ, ಸತ್ಯದ ಸಮಗ್ರ ವಿವರಣೆಯು ಸತ್ಯದ ಎಲ್ಲ ಮಗ್ಗುಲುಗಳನ್ನೂ ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಅಲ್ಲದೆ, ಅಂತಹ ಅತಿ ಸರಳೀಕರಣಗಳಿಂದ ಆಗಬಹುದಾದ ಅಪಾಯಗಳನ್ನೂ ನಿರ್ಲಕ್ಷಿಸಲಾಗುವುದಿಲ್ಲ. ಈಗ ಉದಾಹರಣೆಗೆ ಬರೀ ಕರ್ಮವಾದವನ್ನು ಅಳವಡಿಸಿಕೊಂಡೆವೆಂದುಕೊಳ್ಳಿ. ಆಗ ಎಲ್ಲ ಹೊಣೆಗಾರಿಕೆಯೂ ನಮ್ಮದೇ ಎಂದಾಗುತ್ತದೆ. ಹಾಗಾದೊಡನೆ, ‘ಎಲ್ಲವೂ ನನ್ನಿಂದಲೇ,  ನಾನಿಲ್ಲದಿದ್ದರೇನೂ ಇಲ್ಲ, ನಾನೇ ಸರ್ವಸ್ವ’, ಎಂದು […]

ಮೊದಲ ಪಾಕ ಪ್ರಯೋಗ: ಶ್ರೀನಿಧಿ ರಾವ್

ನಾನೆಂತಾ ಧಿಗ್ಗಡ ಧಿಮ್ಮಿ ಅಂದ್ರೆ ಮದುವೆಗೆ ಮೊದಲು ಒಂದು ದಿನ ಅಡುಗೆ ಮನೆ ಹೊಕ್ಕು ಅಡುಗೆ ಮಾಡಿದವಳೇ ಅಲ್ಲ. ಒಂದು ಕಾಫಿ, ಟೀ, ಕೂಡಾ ಮಾಡಿ ಗೊತ್ತೇ ಇಲ್ಲ. ಅಮ್ಮ ಎಷ್ಟೇ ಹೇಳಿದರೂ ಅದು ನನಗಲ್ಲ ವೆಂದೇ ಹಾಯಾಗಿ ಇದ್ದವಳು. ಆದರೆ ಅದೊಂದು  ದಿನ ನನ್ನ ನಿಶ್ಚಿತಾರ್ಥ  ಅಂತ ನಿರ್ಧಾರವಾಯಿತಾ ನನ್ನ ಕತೆ ಶುರು. ಅಯ್ಯೋ ನಂಗೆ ಅಡುಗೆ ಮನೆ ಹೊಕ್ಕೆ ಗೊತ್ತಿಲ್ಲ ಏನು ಮಾಡಲಿ ? ಆದರೂ ವಿಶೇಷ ಬದಲಾವಣೆ ಏನೂ ಇಲ್ಲ. ಎಂಟು ಘಂಟೆಗೆ […]