ಮೊದಲ ಪಾಕ ಪ್ರಯೋಗ: ಶ್ರೀನಿಧಿ ರಾವ್

ನಾನೆಂತಾ ಧಿಗ್ಗಡ ಧಿಮ್ಮಿ ಅಂದ್ರೆ ಮದುವೆಗೆ ಮೊದಲು ಒಂದು ದಿನ ಅಡುಗೆ ಮನೆ ಹೊಕ್ಕು ಅಡುಗೆ ಮಾಡಿದವಳೇ ಅಲ್ಲ. ಒಂದು ಕಾಫಿ, ಟೀ, ಕೂಡಾ ಮಾಡಿ ಗೊತ್ತೇ ಇಲ್ಲ. ಅಮ್ಮ ಎಷ್ಟೇ ಹೇಳಿದರೂ ಅದು ನನಗಲ್ಲ ವೆಂದೇ ಹಾಯಾಗಿ ಇದ್ದವಳು. ಆದರೆ ಅದೊಂದು  ದಿನ ನನ್ನ ನಿಶ್ಚಿತಾರ್ಥ  ಅಂತ ನಿರ್ಧಾರವಾಯಿತಾ ನನ್ನ ಕತೆ ಶುರು. ಅಯ್ಯೋ ನಂಗೆ ಅಡುಗೆ ಮನೆ ಹೊಕ್ಕೆ ಗೊತ್ತಿಲ್ಲ ಏನು ಮಾಡಲಿ ? ಆದರೂ ವಿಶೇಷ ಬದಲಾವಣೆ ಏನೂ ಇಲ್ಲ. ಎಂಟು ಘಂಟೆಗೆ ಏಳೋದು,ಒಂಬತ್ತಕ್ಕೆ ಮನೆ ಬಿಟ್ಟು ಶಾಲೆಗೆ ಹೊರಡೋದು. ಅಮ್ಮ ಏನೇ ಮಾಡಿ ಹಾಕಿದರೂ ತುಟಿಪಿಟಿಕ್ ಅನ್ನದೆ ತಿಂದು ಹೋಗುತ್ತಿದ್ದೆ. 

ನಿಶ್ಚಿತಾರ್ಥ ಮದುವೆ ನಡುವೆ ೯೫ ದಿನಗಳು ಅಂತರವಿದ್ದರೂ ನಂಗೆ ಎಂದೂ ಅಡುಗೆ ಕಲಿತುಕೋ ಬೇಕು ಅಂತ ಅನ್ನಿಸಲೇ ಇಲ್ಲ. ನಾನು ಅತ್ತ ತಲೆ ಹಾಕಲೂ ಇಲ್ಲ. ನನ್ನ ಅಮ್ಮ ಶತಾಯ ಗತಾಯ ಪ್ರಯತ್ನ ಪಟ್ಟಿದ್ದೆ ಬನ್ತು. ಅಮ್ಮ ಕೆಲವುದಿನ ನಾನಾ ಹೆದರಿಸಿ ನೋಡಿದ್ದೂ ಆಯಿತು. ನೋಡು ನಿನ್ನ ಅತ್ತೆಯ ಬಳಿ  ಹೇಳುವೆ. ದಿನ ಅವಳಕೈಯಲ್ಲಿ ಅಡುಗೆ ಮಾಡಿಸಿ ಇಲ್ಲಾಂದ್ರೆ ಈ ಧಿಗ್ಗ ಡ್ ಧಿಮ್ಮಿಗೆ ಬುದ್ದಿ ಬರೋಲ್ಲ ಅನ್ತ. ನಾನು ಅದನ್ನು ಕೇಳಿಯೂ ಕೇಳದಂತೆ ಹಾಯಾಗಿದ್ದೆ. ಅಲ್ಲಿಗೆ ನನ್ನ ಅಡುಗೆ ಮನೆಗೆ ತಳ್ಳೋ ಹುನ್ನಾರ ಎಲ್ಲಾ ಮೂಲೆ ಗುಂಪಾಗಿ ಹೋಯಿತು. ಅದೊಂದು ದಿನ ಆಗಿನ್ನೂ ಪತಿ ಆಗಿರದ ಆತನಿಂದ ಫೋನ್, ನಿಂಗೆ ಏನೆಲ್ಲಾ ಅಡುಗೆ ಮಾಡೋಕೆ ಬರುತ್ತೆ ? ನನ್ನ ಉತ್ತರವೂ ಒಂದು ಪ್ರಶ್ನೆಯೇ ಆಗಿತ್ತು. ನಿಂಗೆ ನಾನು ಏನೇನು ಮಾಡಿ ಹಾಕಬೇಕು ? ಆತ  ನಾನೇನೋ ಪಾಕ ಪ್ರವೀಣೆ ಅಂದುಕೊಂದಿರ್ ಬಹುದು. ನಂಗೆ ಬೇರೆ ಏನು ಬೇಡ ತಂಬುಳಿ ಗೊಜ್ಜು ಇದ್ದಾರೆ ಅಷ್ಟೇ ಸಾಕು ಅಂದ. ಸರಿ ಅದನ್ನೇ ಮಾಡಿ ಹಾಕೋಣ  ಅಂದೆ ಒಳ್ಳೆ ಗತ್ತಿನಲ್ಲಿ. ಆದರೆ ಅಲ್ಲಿಂದ ಶುರುವಾಯಿತು. ಭಯ ಅಯ್ಯೋರಾಮಾ..ನಂಗೆ ಒಂದೂ ಬರೋಲ್ಲ ಅನ್ನವೂ ಗೊತ್ತಿಲ್ಲ ಇನ್ನು ಹೇಗೆ ? 

ಆವತ್ತೇ ಒಂದು ಡೈರಿ ತೆಗೆದು ಅಮ್ಮನ ಬಳಿ ಕೇಳೋಕೆ ಶುರು ಮಾಡಿದೆ. ಅಮ್ಮ ತಂಬುಳಿ ಯಾವುದರದ್ದು ಹೇಗೆಲ್ಲಾ  ಮಾಡಬಹುದು ?  ಹೇಗೆ ಮಾಡಬಹುದು? ಅಮ್ಮನಿಗೆ ಖುಷಿಯೋ ಖುಷಿ ಹೇಗಾದರೂ ದಾರಿಗೆ ಬಂದೆ ಅಲ್ವಾ ಅಂತ. ಆದರೆ ಅಡುಗೆ ಮನೆಯಲ್ಲಿ ಕೂಡಿ ಹಾಕೋಕೆ ಸಮಯ ಇರಲೇ ಇಲ್ಲ. ಅಮ್ಮನ ಅಡುಗೆ ಪಾಠ ಪುಸ್ತಕ ತುಬಿತೆ ಹೊರತು ಮಸ್ತಕ ತುಂಬಲಿಲ್ಲ. ಮದುವೆಯಾಯಿತು ನನ್ನ ಜೊತೆ ಆ ಪುಸ್ತಕವೂ ಪತಿಯ ಮನೆ ಸೇರಿತು. ಅಲ್ಲಿ  ಅತ್ತೆ ಅಡುಗೆ ಮಾಡು ಎಂದು ಹೇಳಲೂ ಇಲ್ಲ. ಎಲ್ಲಿ ಹೇಳುತ್ತಾರೋ ಅನ್ನೋ ಆತಂಕದಲ್ಲಿ ನಾನು ಅತ್ತ ಸುಳಿಯಲೂ ಇಲ್ಲ. ಹಾಗೂ ಹೀಗೂ ಹೊಸ ಮದುಮಗಳು ಅಲ್ಲಿ ಇಲ್ಲಿ ಸುತ್ತಿದ್ದೆ ಬಂತು. ಪತಿರಾಯ ಸಮುದ್ರ ಲಂಘನ ಮಾಡಿ  ಮರುಭೂಮಿ ಸೇರಿದ್ದೂ ಆಯಿತು. ನಾಣಿ ಮತ್ತೆ ಅಮ್ಮನ ಮನೆ ಅತ್ತೆ ಮನೆ ಅಂತ ಅಲೆಮಾರಿ ಆದೆನೇ  ಹೊರತು ಅಡುಗೆ ಮನೆ ಹೇಗಿದೆ ಎಂದೂ ನೋಡಲು ಹೋಗಲಿಲ್ಲ ತಿಂಗಳು ಕಳೆದು ನಾನೂ ನನ್ನ ಪತಿರಾಯನ ಪಯಣದ ಜಾಡು ಹಿಡಿದು ಮರು ಭೂಮಿ ಸೇರಿದೆ. ಸೇರಿದ ದಿನ ತಂದ ಅಡುಗೆಯೇ ಇತ್ತು ಹೀಗಾಗಿ ನಾನು ಎನೂ ಮಾಡಲಿಲ್ಲ. ಪತ್ರೊಡೆ, ಮೂಡೆ ಹುಳಿ ಎಲ್ಲಾ ಪ್ಯಾಕ್ ಬಿಚ್ಚಿ ತಿಂದು ಹಾಯಾಗಿ ಮಲಗಿದೆ. 

ಮಾರನೇ ದಿನ ಬೆಳಗ್ಗೆ ಎದ್ದಾಗ ಇಷ್ಟು ದಿನ  ಉಂಡಾಡಿ ಗುಂಡಿ ಹಾಗೆ ಮಾಡಿದ್ದೆಲ್ಲಾ ನೆನಪಾಯಿತು. ಅಯ್ಯೋ ನಾನೀಗ ಅಡುಗೆ ಮನೆ ಹುಡುಗಿ. ನೋಡಿಕೊಂಡಾದರೂ ಮಾಡೋಣವೆಂದರೆ ಆ ಅಡುಗೆ ಪುಸ್ತಕವೂ ಊರಲ್ಲೇ ಉಳಿದಿತ್ತು. ಜೊತೆ ಉಳಿದದ್ದು ಕೆಲವಳ  ಕ್ಷಣದಲ್ಲಿ ಗೀಚಿಕೊಂಡಿದ್ದು ಮಾತ್ರ. ಸರಿ ಮೊದಲ ಪ್ರಯೋಗ ಚಪಾತಿ, ಅಲೋಪಲ್ಯ. ಅಲ್ಲೂ ಪಾರ್ಟ್ನರ್ ಶಿಪ್ ಚಪಾತಿ ನಾನು  ಮಾಡು ಅಂತ ಪತಿರಾಯ ! ವಾರೆವಾಹ್ಹಾ.. ಸುಲಭದ್ದೇ ಸಿಕ್ಕಿತು ಪರವಾಗಿಲ್ಲ ಅಂದು, ಸರಿ ನಾನು ಪಲ್ಯ  ನೀನು ಚಪಾತಿ ಮಾಡು ನಾನು ಪಲ್ಯ ಮಾಡುವೆ ಅಂತ ಹೊರಟೆ. ಯಾಕೋ ಅಲೂ ಬೇಯೋಕೆ   ಇಡೋಕೆ ಹೋದಾಗ ಅಶರೀರವಾಣಿ  ಎಲ್ಲೋ ತೇಲಿ ಬಂದಂತಹ ಅನುಭವ, "ನಿಧಿ  ನಿಂಗೆ ಇದೆ ಇನ್ನು ಮಾರಿ ಹಬ್ಬ !!!"

ಆಲೂ ಎಷ್ಟು ವಿಸ್ಹಿಲ್ ಕೂಗಬೇಕು? ನೆನಪಿಸಿಕೊಂಡೆ ನೆನಪಾಗಲಿಲ್ಲ. ಮತ್ತೆ ಮೊದಲಿಂದ ನೆನೆಸಿ ಕೊಂಡೆ ಏನೊಂದು ನೆನಪಾಗಲಿಲ್ಲ. ಇಷ್ಟೆಲ್ಲಾ ಯಾಕೆ ಚಿಂತೆ ಒಂದಷ್ಟು ಇಡೋಣ ಅಂತ ಇಟ್ಟೆ. ಈಗ ಮುಂದಿನ ಭಾಗ ಉಹೂ೦.. ಮುಂದೆ ಏನು ನೆನಪಾಗ್ತಾ ಇಲ್ಲ. ಮತ್ತೆ ಆಲೂ ಪಲ್ಯದಲ್ಲಿ ಏನೇನು ಇರುತ್ತೆ ಅಂತ ನನ್ನ ಫೋಟೋಗ್ರಫಿಕ್ ಮೆಮೊರ್ಯ್ಯಲ್ಲಿ ಹುಡುಕೋಕೆ ಶುರು ಮಾಡಿದೆ. ಸಾಸಿವೆ, ಜೀರಿಗೆ ಕಂಡಿತು. ಹಾಗೆ ಕಡ್ಲೆ ಬೇಳೆ, ಉದ್ದಿನ ಬೇಳೆ, ಕೆಂಪು ಮೆಣಸು, ಕರಿ ಬೇವಿನ ಎಲೆ, ಶುಂಟಿ, ನೀರುಳ್ಳಿ, ಆಲೂಗಡ್ಡೆ ಅರಶಿನ, ಕೊ ತ್ತಂಬರಿ ಸೊಪ್ಪು…   ನನ್ನ ಮನಪಟಲದಲ್ಲಿ ಬಂದು ಹೋಯಿತು. ಇಷ್ಟು ಬಂದಿದೆ ತಡ ಥಟ್ ಅಂತ ಎಲ್ಲ ಮಾಡಿಕೊಂಡೆ. ಕೊನೆಯಲ್ಲಿ ನೆನಪಾಯಿತು ನಾನು ಉಪ್ಪೆ ಹಾಕಿಲ್ಲ ಅನ್ನೊದು. ಉಪ್ಪು ಹಾಕಬೇಕಲ್ಲಾ ಎಷ್ಟು ಹಾಕೋದು? ಯಾರನ್ನು ಕೇಳೋದು? ಉತ್ತರ ಸಿಗದ ಯಕ್ಷ ಪ್ರಶ್ನೆ ಯಾರನ್ನು ಕೇಳೋದು ? ಯಾರೂ ಇಲ್ವೆ? ಹೆದರಿ ಹೆದರಿ ಒಂದಿಷ್ಟು ಹಾಕಿದೆ ತಿಂದು ರುಚಿ ನೋಡಿದೆ. ಏನೋ ಕಮ್ಮಿ ಇತ್ತು ಏನು ಅಂತ ನಂಗೆ ಗೊತ್ತಾಗಲಿಲ್ಲ ಹಾಗೇ ಬದಿಗೆ ಇಟ್ಟು  ಬಿಟ್ಟೆ. ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು ಹಾಕಿದೆ. ನನ್ನ ಅಲೂ ಪಲ್ಯ ಘಮ್ಮನೆ ಸುವಾಸನೆ ಬೀರುತ್ತಿತ್ತು. 

ಇತ್ತ ಕಡೆಯಿಂದ ಅತ್ತ ರೊಟ್ಟಿಯೂ ಅಲ್ಲದ ಇತ್ತ ಚಪಾತಿಯೂ ಅಲ್ಲದ ಏನೋ ಒಂದು ತಯಾರಾಯಿತು. ಅಲೂ ಪಲ್ಯ ಹಾಕಿ ಕೊಂಡು ತಿನ್ನೋಕೆ ಕೂತಾಗ ಹೇಯ್ ! ಪರ್ವಾಗಿಲ್ವೆ ನೀನು ಒಳ್ಳೆ ಅಲೂ ಪಲ್ಯ ಮಾಡಿ ಬಿಟ್ಟೆ, ಉಪ್ಪು ಸ್ವಲ್ಪ ಸೇರಿಸಿದರೆ ಬೊಂಬಾಟ್ ಪಲ್ಯ ಎಂದಾಗ ನಂಗೆ ನಗಬೇಕೋ ಅಳಬೇಕೋ ಗೊತ್ತೇ ಆಗಲಿಲ್ಲ ಎನೂ ಹೇಳದೆ ತಿಂದು ಮೇಲೆದ್ದೆ. ಇಷ್ಟೇ ಹೊತ್ತಿಗೆ ನಂಗೆ ವೈದೇಹಿಯವರ ಕವನ " ಅಡುಗೆ ಮನೆ ಹುಡುಗಿ" ೧೦೦ ಬಾರಿ ಮನದಲ್ಲಿ ಬಂದು ಹೋಗಿತ್ತು. ಥೂ ಯಾಕಾದ್ರೂ ಮದ್ವೆ ಆದೆನೋ ಛೆ ! ಅನ್ನಿಸ ಹತ್ತಿತು. ಮಧ್ಯಾಹ್ನಕ್ಕೆ ಏನು ಮಾಡುವೆ ಅನ್ನೋ ಪ್ರಶ್ನೆ ನನ್ನ ವಾಸ್ತವಕ್ಕೆ ಎಳೆದು ತಂದಿತು. ಏನಾದರೂ ಮಾಡೋಕೆ ಬಂದರೆ ಅಲ್ವಾ ಮಾಡೋದು ?ಅಂತ ಯಾರಿಗೆ ಹೇಳೋದು ನಗೆ ಅಡುಗೆ ಮಾಡೋಕೆ ಬರೋಲ್ಲ ನೀನೆ ಏನೋ ಒಂದು ಮಾಡಿ ಹಾಕಿ ಬಿಡು ಅನ್ದೆ. ಅಯ್ಯೋ ಬಗವಂತ ನೀನು ಮೊದಲೇ ಹೇಳೋದು ಅಲ್ವಾ? ನೀನು ಕೇಳಿದ ಧಾಟಿಗೆ ನೀ ಪಾಕ ಪ್ರವೀಣೆ ಅಂದು ಕೊಂಡಿದ್ದೆ ಅಂದಾಗ ನಾನು ತಬ್ಬಿಬ್ಬು. ಇರಲಿ ನಂಗೂ ಬರೋಲ್ಲ ನಿಂಗೂ ಬರೋಲ್ಲ. ಅಲ್ಲಿಗೆ ಸರಿ ಹೋಯಿತು ಅಂದಾಗ ಇರು ನೋಡೋಣ ಏನೋ ಒಂದು ಮಾಡಿ ಇಕ್ಕುವೆ ಅಂದು ಮತ್ತೆ ಒಲ್ಲದ ಮನಸ್ಸಿನಿಂದ ಅಡುಗೆ ಮನೆ ಹೊಕ್ಕೆ ಅಡುಗೆ ಮನೆಯಲ್ಲಿ ಎಲ್ಲಾ ವಸ್ತುಗಳು ನನ್ನ ನೋಡಿ ಕಿಸಕನೆ ನಕ್ಕಂತೆ ಆಯಿತು. 

ಯಾವುದು ಮೊದಲು ಬೇಯಿಸಬೇಕು, ಯಾವುದು ಮೊದಲು ಹಾಕಬೇಕು ಅಂತ ತಿಳಿಯದ ಮೊದ್ದು ಹೀಗಾಗಿ ನಂಗೆ ವಿಂಧ್ಯ ಪರ್ವತದ ನಡುವೆ ಸಿಕ್ಕು ಬಿದ್ದ ಅನುಭವ. ಏನೂ ಮಾಡೋ ಹಾಗಿಲ್ಲ. ಹೀಗಾಗಿ ಮತ್ತೆ ಸ್ಮರಣ ಶಕ್ತಿಯ ಪರೀಕ್ಷೆ ಮೊದಲ ಟೊಮೇಟೊ ಸಾರು ಪ್ರಯೋಗ. ಸಾರಿನ ಪುಡಿ ಅತ್ತೆ ಮಾಡಿ ಕೊಟ್ಟಿದ್ದು ಇತ್ತು. ಎಲ್ಲ ನಂಗೆ ತೋಚಿದಂತೆ, ನೆನಪಾದಾಗ ಹಾಕಿ ಒಂದು ಪುಟ್ಟ ಪಾತ್ರೆ ಸಾರು ತಯಾರಿಸಿದೆ.  ಮತ್ತದೇ ಸಮಸ್ಯೆ ಉಪ್ಪು ಎಷ್ಟು ಹಾಕೋದು ?ಪ್ರತಿ ಬಾರಿಯೂ ಇದೆ ಸಂಕಟ ! ಹೆಚ್ಚಾದರೆ ಏನು ಮಾಡಲಿ? ಉಹುಂ ಎನೂ ತೋಚಲೇ ಇಲ್ಲ. ಮತ್ತೆ ಯೋಚಿಸತೊಡಗಿದೆ ಅಮ್ಮ ಎಷ್ಟು ಹಾಕಿರಬಹುದು? ನೆನಪಾಯಿತು. ಅಮ್ಮ ಒಂದು ಮುಷ್ಠಿ ಕಲ್ಲು ಉಪ್ಪು ಹಾಕುತ್ತಿದ್ದರು ನಾನೀಗ ಕಲ್ಲು  ಉಪ್ಪು ತರಲಿ ಅದೂ ಈ ಮರಳು ಗಾಡಿನಲ್ಲಿ? ಹಾಗೂ ಹೇಗೂ ಅಳೆದು ಸುರಿದು ಎರಡು ಚಮಚ ಟೇಬಲ್ ಸಾಲ್ಟ್ ಹಾಕಿದ್ದು ಅಯಿತು. ಪರಿಮಳ ಏನೋ ಬೇರಿತು, ರುಚಿ ನಂಗೆ ನೋಡೋಕೆ ಧೈರ್ಯವೂ  ಇಲ್ಲ ಇಷ್ಟು ಹೊತ್ತಿಗೆ ನನ್ನ ಪತಿರಾಯ ಇಬ್ಬರನ್ನು ಊಟಕ್ಕೆ ಬೇರೆ ಕರೆದಿದ್ದು. ದೇವರೇ ನೀನೆ ಕಾಪಾಡಪ್ಪಾ… ಅಂತ ಮನಸ್ಸಿನಲ್ಲಿ ನೆನೆಸಿ,ಅಲ್ಲೇ ಇದ್ದ ಚಿಟಿಕೆ ಇಂಗು ಬೆರೆಸಿ ಮುಚ್ಚಿತ್ತು ಬಂದೆ. ಅನ್ನ ಹೇಗೋ ಒಂದು ಮಾಡಿಕೊಂಡಿದ್ದೆ. ಇನ್ನು ಉಳಿದ ಸಿಹಿ ಖಾರಗಳು ಊರಿಂದ ತಂದಿದ್ದು ಇತ್ತು. 

ಊಟದ ಸಮಯದಲ್ಲಿ ನನ್ನ ಪ್ರಥಮ ಪ್ರಯೋಗದ ಸಾರು ಸೂಪರ್ ಹಿಟ್ ! ರಾತ್ರಿಗೂ ಇರಲಿ ಎಂದು ಮಾಡಿದ್ದ ಸಾರು ಮಧ್ಯಾಹ್ನವೇ ಖಾಲಿ ಆಗಿತ್ತು. ಎಲ್ಲ ತಿಂದು ಸಾರಿಗೆ ಏನೆಲ್ಲಾ ಹಾಕುವಿರಿ ? ರೆಸಿಪಿ ಕೊಡಿ ಅಂದ್ರು. ಇರಿ ಇರಿ… ಸ್ವಲ್ಪ ದಿನ ಕಳೆದು ಕೊಡುವೆ ಅಂದು ಸಾಗ ಹಾಕಿದೆ.ಈ ನಡುವೆ ನಂಗೆ ಯಾಕೋ ಅದು ಅಮ್ಮನ ಸಾರಿನ ರುಚಿ ಬರಲೇ ಇಲ್ಲ, ಎಲ್ಲೋ ಏನೋ ಹೆಚ್ಚು ಕಮ್ಮಿ ಆಗಿದೆ ಅನಿಸುತ್ತಿತ್ತು. ನಂಗೆ ಏನಾದ್ರು ಮನಸ್ಸಿಗೆ ಬ೦ದ  ಕೂಡಲೇ ಪರಿಹಾರವಾಗಿ ಬಿದಬೆಕು. ಉಳಿದ ಒಂದೇ ದಾರಿ ಅಮ್ಮನಿಗೆ ಫೋನ್.. ಅಮ್ಮ ನನ್ನ ಸಾರು ಸರಿಯಾಗಲಿಲ್ಲ ಏನೋ ಒಂದು ಆಗಿ ಹೋಯಿತು. ಅಲ್ವೇ ಒಂದೇ ದಿನ ಸರಿ ಆಗ್ಬೇಕು ಅಂದ್ರೆ ಹೇಗೆ ? ಮಗು ಬೀಳದೆ ನಡೆಯೋಕೆ ಕಲಿಯುತ್ತಾ ? ನಿಂದೊಳ್ಳೆ ಕಥೆಯಾಯಿತಲ್ಲಾ ಅಂದಾಗ ಸರಿ ಹಾಗಾದ್ರೆ ನನ್ನ ಸಾರು ಸರಿಯಾಗೋದು ಯಾವಾಗ? ಮರು ಪ್ರಶ್ನೆ ನನದು. ಸಿಕ್ಕಿದ್ದು ಸಿಕ್ಕ ಹಾಗೆ ಹಾಕಿದ್ ಏನೋ ಒಂದು ಆಗುತ್ತೆ. ನಾನು ಅಂದಿನಿಂದ ನಿಂಗೆ ಬಡಕೊಂಡೆ ನೀನೆಲ್ಲಿ ಕೇಳಿ ಉದ್ದಾರ ಆದೇ. ಇನ್ನು  ಅನುಭವಿಸು ಅಂದು ಫೋನ್ ಕುಕ್ಕಿದರು. 

ರಾತ್ರಿಗೆ ಏನಾದ್ರು ಮಾಡೋದು ಅನಿವಾರ್ಯ ಮತ್ತೆ ಒಳದ ಮನಸ್ಸಿಂದ ಅಡುಗೆ ಮನೆ ಹುಡುಗಿ ಕವನ ನೆನಪಿಸಿಕೊಂಡು ಅಡುಗೆ ಮನೆ ಹೋಕೇ ಅಂದು ನಾನು ಪ್ರಯೋಗಿಸಿದ್ದು ಬದನೆ ಕಾಯಿ  ಹುಳಿ. ಅದು ನಂಗೆ ತುಂಬ ಇಷ್ಟ. ನನ್ನ ಪೂರ್ವ ತಯಾರಿ ಇಶ್ತೆ… ಬದನೆಕಾಯಿಹುಳಿ ಯನ್ನು ನೆನೆಸಿಕೊಂಡು ಮಾಡೋಕೆ ಶುರು ಹಚ್ಚಿದೆ ಯಾವಾಗ ಏನು ನೆನಪಾಯಿತೋ ಆಗ ಅದನೆಲ್ಲಾ ಹಾಕಿ ಒಂದು ಬದನೆಕಾಯಿ ಹುಳಿ ಸಿದ್ದವಾಯಿತು. ತಿಂದು ನೋಡಿದ ಪತಿರಾಯ ನಿಂಗೆ ಯಾರೇ ಇಷ್ಟು ಚೆನ್ನಾಗಿ ಅಡುಗೆ ಮಾಡೋಕೆ ಹೇಳಿ ಕೊಟ್ಟಿದ್ದು ಅಂದಾಗ ಇವತ್ತಿನ ಬದನೇಕಾಯಿ ಹುಳಿ  ನನ್ನ ಮರ್ಯಾದೆ ಕಳೆಯಿತು ಅಂದುಕೊಂಡು ರುಚಿ ನೋಡಿದರೆ ಎಲಾ ! ಬದನೇಕಾಯಿ ಹುಳಿ ಚೆನ್ನಾಗಿಯೇ ಇತ್ತು. ಮತ್ತದೇ ಉಪ್ಪು ಕಮ್ಮಿ ಸ್ವಲ್ಪ ಉಪ್ಪು ಹಾಕಿ ಸರಿ ಮಾಡಿಕೊಂಡೆ ಅಂತೂ ಮೊದಲ ಪಾಕ ಪ್ರಯೋಗದಲ್ಲಿ ಎಲ್ಲಿ ಎಡವಿ ಬೀಳದೆ ಪತಿರಾಯನನ್ನು ಬುಟ್ಟಿಗೆ ಹಾಕಿಕೊಂಡೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Soory Hardalli
Soory Hardalli
9 years ago

ತಪ್ಪಾದಾಗಲೇ ಸರಿಯಾಗಿ ಬರೋದು. ಉಪ್ಪು ಹುಳಿ ಖಾರ ಮೂರು ಸರಿಯಾಗಿ ಸೇರಿದರೆ ಆಯಿತು.

Akhilesh Chipli
Akhilesh Chipli
9 years ago

ಇಂಗು, ತೆಂಗು, ಕಂಗು ಇದ್ದರೆ ಮಂಗನೂ ಅಡುಗೆ
ಮಾಡುತ್ತಂತೆ ಅಂತ ಗಾದೆ ಇದೆ. ಗಂಡಡಿಗೆ ಬಹಳ
ರುಚಿಯಂತೆ, ಗಂಡನ ಕೈಲೇ ಅಡುಗೆ ಮಾಡಿಸಿ ಬಿಡಿ.

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
9 years ago

ಚೆನ್ನಾಗಿದೆ ಅಡುಗೆ ಶ್ರೀನಿಧಿಯವರೇ,,,,, 🙂

ಮಾಲಾ
ಮಾಲಾ
9 years ago

ನೀವು ಮೊದಲೇ ಅಡುಗೆ ಕಲಿಯದಿದ್ದದ್ದು ಒಳ್ಳೆಯದಾಯಿತು. ಅಷ್ಟು ದಿನ ನಿಮ್ಮ ಇಷ್ಟದಂತೆ ಇದ್ದರಲ್ಲ ಅದೇ ಖುಷಿ! ಅಡುಗೆ ಏನೂ ಬ್ರಹ್ಮವಿದ್ಯೆಯಲ್ಲ. ಚಿಟಿಕೆ ಹೊಡೆದಂತೆ ಕಲಿತು ಬೇಯಿಸಿ ಹಾಕಬಹುದು.

Pushpa Pranesh
Pushpa Pranesh
9 years ago

ನಿಮ್ಮ ಮೊದಲ ಪಾಕಪ್ರಯೋಗದ ಕಥೆ ತುಂಬಾ ಚೆನ್ನಾಗಿತ್ತು

5
0
Would love your thoughts, please comment.x
()
x