Facebook

Archive for 2013

ಮೈಸೂರ್ ಸ್ಯಾಂಡಲ್ ಸೋಪು ಮತ್ತು ಬೆನ್ನುಜ್ಜೋ ಕಲ್ಲು:ನಟರಾಜು ಎಸ್. ಎಂ.

ಮೊನ್ನೆ ಮೈ ಸೋಪು ತೆಗೆದುಕೊಳ್ಳಲೆಂದು ಗೆಳೆಯನೊಬ್ಬನ ಜೊತೆ ಅಂಗಡಿಯೊಂದಕ್ಕೆ ಹೋಗಿದ್ದೆ. ಅಂಗಡಿಯ ಒಳಗೆ ಎರಡೂ ಕಡೆಗಳಲ್ಲಿ ಸೌಂದರ್ಯವರ್ಧಕಗಳನ್ನು ಮಾರಲು ಒಂದಷ್ಟು ಹುಡುಗಿಯರು ಕುಳಿತ್ತಿದ್ದರು. ವಿಧ ವಿಧದ ಕಂಪನಿಗಳ ಲಿಪ್ ಸ್ಟಿಕ್, ನೈಲ್ ಪಾಲಿಶ್, ಡಿಯೋಡರೆಂಟ್, ಶಾಂಪೂ, ಐ ಲೈನರ್ ಇತ್ಯಾದಿ ರಾಶಿ ರಾಶಿ ಸೌಂದರ್ಯವರ್ಧಕಗಳು ಅವರು ಕುಳಿತ್ತಿದ್ದ ಜಾಗದಲ್ಲಿ ಗಾಜಿನ ಕಪಾಟಿನೊಳಗೆ ಅಲಂಕೃತಗೊಂಡಿದ್ದವು. ಅವರೂ ಸಹ ಅದೇ ಕಂಪನಿಗಳ ಸೌಂಧರ್ಯವರ್ಧಕಗಳನ್ನು ಉಪಯೋಗಿಸಿ ವಿಧವಿಧವಾಗಿ ಅಲಂಕೃತಗೊಂಡಿದ್ದರು. ಸುಮ್ಮನಾದರು ಅವರು ಹಚ್ಚಿಕೊಂಡ ಲಿಪ್ ಸ್ಟಿಕ್, ಹಾಕಿಕೊಂಡಿರುವ ಪೌಡರ್ ನೋಡಿದಾಗ ಅವರು […]

ಪುಸ್ತಕಗಳ ಲೋಕದಲ್ಲಿ:ಪ್ರಶಸ್ತಿ ಅಂಕಣ

ಮಹಾತ್ಮ ಗಾಂಧಿಯವರ ಮಾತೊಂದು ನೆನಪಾಗ್ತಿದೆ."ಪುಸ್ತಕ ಓದೋ ಹವ್ಯಾಸವುಳ್ಳವನು ಎಲ್ಲಿ ಹೋದರೂ ಖುಷಿಯಾಗಿರಬಲ್ಲ" ಎಂದು. ಚಿಕ್ಕವನಿದ್ದಾಗಿಂದ್ಲೂ ಪುಸ್ತಕ ಒಂದಿದ್ರೆ ಸಾಕು. ಎಲ್ಲಿಗೆ ಬೇಕಾದ್ರೂ ಬರ್ತಾನೆ ಈ ಮಾಣಿ ಅಂತ ನಮ್ಮ ನೆಂಟರೆಲ್ಲಾ ತಮಾಷೆ ಮಾಡೋವಷ್ಟು ಪುಸ್ತಕಗಳ ಪ್ರೀತಿ ನನಗೆ. ನನ್ನ ಅಪ್ಪ, ದೊಡ್ಡಪ್ಪಂದಿರಲ್ಲದೇ, ಅಜ್ಜ, ಮಾವಂದಿರಲ್ಲೂ ಇದ್ದ ಸಾಮಾನ್ಯ ಹವ್ಯಾಸ ಪುಸ್ತಕಪ್ರೀತಿ. ಈ ವಾತಾವರಣದ ಪ್ರಭಾವವೇ ನನ್ನ ಮೇಲೆ ಬಿದ್ದಿರಲೂ ಸಾಕು. ನನ್ನ ಮಾವ ಅಂದಾಕ್ಷಣ ಒಂದು ಮಜೆಯ ಪ್ರಸಂಗ ನೆನಪಾಗುತ್ತೆ. ಅವರ ಬಾಲ್ಯದ ಕಾಲ. ಹಳ್ಳಿಯಲ್ಲಿದ್ದ  ನಮ್ಮಜ್ಜಿ […]

ಕನ್ನಡ ಹಾಡು ಬರೆಯಲು ಮದ್ರಾಸಿಗೆ ಹೋದ ಕಥೆಯು: ಹೃದಯಶಿವ ಅಂಕಣ

"ಬಿಳಿ ಕೂದಲಿಗೆ ಬೆಳ್ಳಿ ರೇಟು ಬಂದುಬಿಟ್ಟರೆ ಹೆಂಗಿರುತ್ತೆ ಶಿವಾ?" ಅಂತ ಮುರಳಿಮೋಹನ್ ರವರು ಹೇಳುತ್ತಿದ್ದಂತೆಯೇ ಡ್ರೈವರ್ ಗಕ್ಕನೆ ಗಾಡಿ ಸೈಡಿಗೆ ಹಾಕಿದ. ಕ್ಷಣಹೊತ್ತಿನ ಮೌನದ ನಂತರ ನಾನು, "ಅಣ್ಣತಮ್ಮಂದಿರು ಭಾಗ ಆಗುವ ಸಂದರ್ಭದಲ್ಲಿ ತಂದೆತಾಯಿಗಳು ತಮ್ಮ ಕಡೆಗೇ ಇರಲಿ ಅಂತ ಪಟ್ಟು ಹಿಡೀಬಹುದು ಸಾರ್" ಅಂದೆ. ಒಂದು "ಗೊಳ್ " ಅನ್ನಬಹುದಾದ ಸಾಮೂಹಿಕ ನಗೆಯ ತರುವಾಯ ಎಲ್ಲರೂ ಗಂಭೀರವಾಗಿ ಕಾರಿನಿಂದ ಕೆಳಗಿಳಿದು ಒಬ್ಬರಿಗೊಬ್ಬರು ಗ್ಯಾಪು ಬಿಟ್ಟುಕೊಂಡು ಬೇಲಿಯೆಡೆಗೆ ಮುಖಮಾಡಿ ನಿಂತು ತಂತಮ್ಮ ಲಕ್ಷ್ಯವನ್ನು ತಂತಮ್ಮ ಪ್ಯಾಂಟಿನ ಜಿಪ್ಪಿನತ್ತ […]

ಕೆಂಗುಲಾಬಿ (ಭಾಗ 4): ಹನುಮಂತ ಹಾಲಿಗೇರಿ

(ಹಿಂದಿನ ಭಾಗ ಇಲ್ಲಿದೆ) ಅವತ್ತು ಉಜ್ಜಳಪ್ಪನ ಜಾತ್ರಿ ಈ ಮೊದಲಿನಂಗ ಅದ್ದೂರಿಯಾಗಿಯ ನಡೆದಿತ್ತು. ಸುತ್ತು ಊರು ಕೇರಿಯವರೆಲ್ಲ ಸೇರಿದ್ದರು. ದೇವರಿಗೆ ಬಿಡುವ ಹುಡುಗಿರನ್ನು ಉಜ್ಜಳಪ್ಪನ ಮುತ್ಯಾನ ಗುಡಿಯೊಳಗ ಇರೋ ಅಂತಪುರಕ್ಕೆ ಹೋಗಿ ಅಲ್ಲಿ ಹುಡುಗಿಯರ ಗುಪ್ತಾಂಗವನ್ನು ಗಾಯಗೊಳಿಸುವ ಪದ್ದತಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಕೆಲವು ಪ್ರತಿಭಟನಾಕಾರರ ಪ್ರಯತ್ನದಿಂದಾಗಿ ನಿಂತಿತ್ತಾದರೂ ಹುಡುಗಿಯರನ್ನು ದೇವರಿಗೆ ಬಿಡೋದು ಮತ್ತು ಪ್ರಾಣಿಗಳನ್ನು ಬಲಿ ಕೊಡೋದು ಇನ್ನು ಮುಂದುವರೆದಿತ್ತು. ಅಂದು ಉಜ್ಜಳಪ್ಪನ ಅಣ್ಣ ತಮ್ಮಂದಿರು ಸಂಬಂಧಿಕ ದೇವರುಗಳನ್ನು ಸುತ್ತಲಿನ ಹಳ್ಳಿಯ ಭಕ್ತರು ಪಲ್ಲಕ್ಕಿಗಳಲ್ಲಿ ಹೊತ್ತು ತಂದಿದ್ದರು. […]

ಬದಲಾದ ಹುಬ್ಬಳ್ಳಿಯಲ್ಲಿ ಮತ್ತ ನಾಕಹೆಜ್ಜಿ: ಉಮೇಶ್ ದೇಸಾಯಿ

ಹೌದು ಅಗದಿ ಏನು ಬಹಳ ದಿನಾ ಆಗಿರಲಿಲ್ಲ ಹುಬ್ಬಳ್ಳಿಗೆ ಹೋಗಿ. ಅಲ್ಲಿ ಇಲ್ಲಿ ಫೇಸಬುಕ್ಕಿನ ಹುಬ್ಬಳ್ಳಿ ಮಂದಿ ಯಲ್ಲಿ ಅಲ್ಲಿನ ಸುದ್ದಿ ಅಪಡೇಟ್ ಆಗುತ್ತಲೇ ಇತ್ತು. ಈ ಸಲ ಟೈಮಿತ್ತು. ಹಂಗ ಒಬ್ಬಾವನ ಹುಬ್ಬಳ್ಳಿಯೊಳಗ ಸುತ್ತಾಕಿದೆ.. ಅಗದಿ ಎದ್ದುಕಾಣುವ ಬದಲಾವಣಿ  ಆಗಿದ್ದು  ಗೋಕುಲ್ ರೋಡನ್ಯಾಗ ಅಂತ (ಈಗ ಮತ್ತೆ  ಹಳೇ ಹೆಸರಿಂದ ಅದನ್ನ ಕರೀಬೇಕೋ ಬ್ಯಾಡೋ ಗೊತ್ತಾಗವಲ್ತು..).. ಅಲ್ಲಿ  ಏರಪೋರ್ಟ  ಅದ.  ಹಂಗ ಒಂದೆರಡು ಮಾಲ್  ಬಂದಾವ  ಅಂತ,  ಹಂಗ  ಕೆ ಎಫ್ ಸಿ, ಮೆಕ್ ಡೊನಾಲ್ಡು […]

ಸರಕ್ಕ ಸರಿತಲ್ಲ – ಪರಕ್ಕಂತ್ ಹರಿತಲ್ಲ……: ಸುಮನ್ ದೇಸಾಯಿ ಅಂಕಣ

                        ಮೊನ್ನೆ ಸಂಜಿಮುಂದ ನನ್ನ ಗೆಳತಿ ಕವ್ವಿ(ಕವಿತಾ) ಬಂದಿದ್ಲು. ಹಿಂಗ ಅದು ಇದು ಮಾತಾಡಕೋತ ತಮ್ಮ ತಮ್ಮಂದು ಮದವಿ ಘಟ್ಟಿ ಆದ ಸುದ್ದಿ ಹೇಳಿದ್ಲು.ಆಕಿ ತಮ್ಮಂದು ಕನ್ಯಾ ಆರಿಸೊದ್ರಾಗ ಭಾಳ ತಕರಾರ ಅವ ಅಂತ ಕೇಳಿದ್ದೆ. ಅಂತು ಇಂತು ನಿಶ್ಚೆ ಆತಲ್ಲಾ ಅಂತ " ಅಯ್ಯ ಛೋಲೊ ಆತಲ್ಲಾ ಪಾರ್ಟಿ ಯಾವಾಗಲೇ" ಅಂದೆ. ಅದಕ್ಕ ಆಕಿ "ಹೋಗ ನಮ್ಮವ್ವ ಎಲ್ಲಿ ಪಾರ್ಟಿ […]

ನಾಟಕಕಾರರಾಗಿ ಕುವೆಂಪು (ಭಾಗ-13) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ರಕ್ತಾಕ್ಷಿ (1932) ನಾಟಕ ಕುರಿತ ಲೇಖನದ ಮುಂದುವರಿದ ಭಾಗ ಕೃತಿಯ ಆರಂಭದ ದೃಶ್ಯವು ಹ್ಯಾಮ್ಲೆಟ್ ಕೃತಿಯ ಆರಂಭವನ್ನು ನೆನಪಿಸುತ್ತದೆ. ಮೊದಲ ಅಂಕದ ಮೊದಲ ದೃಶ್ಯದಲ್ಲಿ ಹಾಲು ಚೆಲ್ಲಿದ ಬೆಳದಿಂಗಳ ರಾತ್ರಿಯಲ್ಲಿ ಕೆಳದಿ ಅರಮನೆಯ ಹೆಬ್ಬಾಗಿಲ ಬಳಿ ಕೆಂಚಣ್ಣನು ಭಯಗೊಂಡವನಂತೆ ಕಾವಲು ತಿರುಗುತ್ತಿದ್ದಾನೆ. ಹಿಂದಿನ ರಾತ್ರಿ ಆತ ಕಾವಲು ತಿರುಗುತ್ತಿದ್ದಾಗ ತೀರಿಕೊಂಡ ದೊರೆ ಬಸಪ್ಪನಾಯಕರಂತೆ ಕಾಣುವ ಭೂತವನ್ನು ಕಂಡು ತತ್ತರಿಸಿ ಮರುದಿನ ಬಿದನೂರಿನ ರಾಜಕುಮಾರ ಬಸವಯ್ಯನ ಆಪ್ತಮಿತ್ರ ಹೊನ್ನಯ್ಯನಿಗೆ ಹೇಳಿದ್ದಾನೆ. ಅದರ ಸತ್ಯಾಸತ್ಯತೆಯನ್ನು ಪರಿಕ್ಷಿಸಲು ಈ ದಿನ ತಾನೇ […]

ದೇವರು ಮೆಚ್ಚಿದ ಭಕ್ತ: ಸುಬ್ರಹ್ಮಣ್ಯ ಹೆಗಡೆ

ಅದೊಂದು ಊರು, ಆ ಊರಿನಲ್ಲಿ ಒಂದು ದೇವಸ್ಥಾನ. ಆ ದೇವಸ್ಥಾನಕ್ಕೆ ಒಬ್ಬ ದೇವರು. ಎಲ್ಲಾ ಊರುಗಳ ಎಲ್ಲ ದೇವರುಗಳಂತೆ ಭಕ್ತಗಣಗಳಿಂದ ಸೇವೆ ಮಾಡಿಸಿಕೊಂಡು, ಹಣ್ಣು ಕಾಯಿಗಳನ್ನು ತನ್ನ ಹೆಸರಿನಲ್ಲಿ ಅರ್ಪಿಸಿ ಭ(ಭಂ)ಜಿಸುತ್ತಿರುವ ಜನಸಮೂಹವನ್ನು ಕಂಡು ಒಳಗೊಳಗೆ ನಗುತ್ತಿರುವ ಸರ್ವಜ್ಞ, ಸರ್ವಾಂತರ್ಯಾಮಿ, ಸರ್ವಶಕ್ತ ಆತ. ಎಲ್ಲವೂ ಹೀಗೇ ಇರಲು, ಕಾಲಚಕ್ರ ಸುಮ್ಮನೇ ಉರುಳುತ್ತಿರಲು, ದೇವನಿಗೆ ಒಂದು ದಿನ ಜಗಜ್ಜನಿತವಾದ ತನ್ನ ಮಾಮೂಲು ಮೂಕ ಧಾಟಿಯನ್ನು ಮೀರಿ ತನ್ನೂರಿನ ಒಬ್ಬ ಶ್ರೀಸಾಮಾನ್ಯನ ಬಳಿ ಒಂದಿಷ್ಟು ಸಮಯ ಕಳೆಯುವ ಮನಸ್ಸು ಮೂಡಿತು. […]

ಕುಲೆಶೋವ್ ಪ್ರಯೋಗ:ವಾಸುಕಿ ರಾಘವನ್ ಅಂಕಣ

ನನ್ನ ಪ್ರಕಾರ “ಛಾಯಾಗ್ರಹಣ” ಮತ್ತು “ಸಂಕಲನ” ಸಿನಿಮಾವನ್ನು ಬೇರೆಲ್ಲ ಕಲಾಪ್ರಕಾರಗಳಿಗಿಂತ ವಿಭಿನ್ನವಾಗಿಸುತ್ತವೆ. ತೆರೆಯ ಮೇಲೆ ಇಡೀ ಮರುಭೂಮಿಯನ್ನು ಒಮ್ಮೆಲೇ ಸೆರೆಹಿಡಿಯಬಹುದು, ಅಥವಾ ಕಣ್ಣಂಚಿನ ಒಂದೇ ಒಂದು ಹನಿಯನ್ನು ತೋರಿಸಬಹುದು. ಇದು ಸಿನಿಮಾ ಛಾಯಾಗ್ರಹಣದ ಶಕ್ತಿ! ಸಿನಿಮಾ ಸಂಕಲನ ಕೂಡ ಅಷ್ಟೇ, ಹಲವಾರು ಶಾಟ್ ಗಳನ್ನು ಒಟ್ಟುಗೂಡಿಸಿದಾಗ, ಸೀನಿಗೆ ಒಂದು ಅರ್ಥ, ಸಿನಿಮಾಗೆ ಒಂದು ದಿಕ್ಕು ಸಿಗುತ್ತದೆ. ನನಗೆ ಸಿನಿಮಾ ಸಂಕಲನದ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ನಿಜಕ್ಕೂ ಸಂಕಲನ ಹೇಗೆ ಮಾಡುತ್ತಾರೆ ಅಂತ ಒಂದು ಸಲವೂ ನೋಡಿಲ್ಲ. ಗೊತ್ತಿಲ್ಲದಿರುವಾಗ […]

ಮೂವರ ಕವಿತೆಗಳು: ಅಪಿ೯ತ ಮೇಗರವಳ್ಳಿ, ಪ್ರಭಾಕರ ತಾಮ್ರಗೌರಿ, ಗುರುನಾಥ ಬೋರಗಿ

  ಶಿಕ್ಷೆ-ಬದುಕು ಹಾಸಿಗೆಯ ಸುಕ್ಕಿನಲಿ ಸಿಕ್ಕಿ  ಉಕ್ಕಿ ಹರಿಯದೆ ಹರಯ ಕಳಚಿ  ಬಿಳಿ ಕೂದಲು ಇಣುಕಿ  ಮುಖದಲ್ಲಿ ಸುಕ್ಕು ಮೂಡುವ ಮುನ್ನ  ಕಿಂಚಿತ್ತಾದರೂ ವಂಚಿಸಬೇಕೆನಿಸಿತು          ವಂಚನೆಯ ಪ್ರಕರಣಕ್ಕೆ ಶಿಕ್ಷೆಯುಂಟು ಪೋಲಿಸರಿದ್ದಾರೆ ಜೈಲುವಾಸ ಗ್ಯಾರಂಟಿ ಅವಮಾನ, ತಲೆತಗ್ಗಿಸಬೇಕು ಯೋಚಿಸಲೇಬೇಡ ಸುಮ್ಮನಿದ್ದುಬಿಡು.   ಜೋರಾಗಿ ಗಹಗಹಿಸಿದೆ ಶಿಕ್ಷೆ-ಪೋಲಿಸು-ಜೈಲು ಮಾನ-ಅವಮಾನ ಮತ್ತು ತಲೆತಗ್ಗಿಸಬೇಕು. ಯೋಚಿಸಲೇಬೇಡ, ಸುಮ್ಮನೆ ಇದ್ದುಬಿಡು.   ಗೆರೆಯೆಳೆಯುವುದೇ ಇರಬೇಕು ಜಗತ್ತಿನ ಪುರಾತನ ಮದ್ಯ ಬರಿ ಘಾಟಿಗೇ ಅಮಲು ನಶೆಯಲ್ಲಿ ಗೀರಿದ್ದೆಲ್ಲಾ ಲಕ್ಷ್ಮಣರೇಖೆಗಳೇ  ದಾಟಿದರೆ […]