Facebook

Archive for 2013

ಕನ್ನಡ ರಾಜ್ಯೋತ್ಸವದ ದಿನ ಸಿಕ್ಕಿದ ಗೆಳೆತನ: ನಟರಾಜು ಎಸ್ ಎಂ

ಕಳೆದ ವರ್ಷದ ಅಕ್ಟೋಬರ್ ತಿಂಗಳ ಕೊನೆಯ ದಿನ ಅಂತರ್ಜಾಲ ಪತ್ರಿಕೆಯೊಂದರಲ್ಲಿ “ಕರೆಂಟು ಹೊಡೆಸಿಕೊಂಡ ಡಿಎನ್ಯೆಯೂ, ವಿಮಾನ ಹತ್ತಿದ ಕಾರ್ಟೂನೂ..” ಎಂಬ ಲೇಖನ ಓದಲು ಸಿಕ್ಕಿತ್ತು. ಆ ಲೇಖನ ಓದುತ್ತಿದ್ದಂತೆ ಯಾಕೋ ಆ ಲೇಖಕನ ಭಾಷಾ ಶೈಲಿ ಸಿಕ್ಕಾಪಟ್ಟೆ ಇಷ್ಟವಾಯಿತು. ಆ ಲೇಖನಕ್ಕೆ”ತುಂಬಾ ಚಂದದ ಲೇಖನ.. ಶುಭವಾಗಲಿ” ಎಂದು ಪ್ರತಿಕ್ರಿಯೆ ನೀಡಿದ್ದೆ. ನನ್ನ ಪ್ರತಿಕ್ರಿಯೆಗೆ ಧನ್ಯವಾದ ತಿಳಿಸಿದ ಲೇಖಕನಿಂದ ಆ ದಿನವೇ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದು ನಾವಿಬ್ಬರು ಫೇಸ್ ಬುಕ್ ಫ್ರೆಂಡ್ಸ್ ಆದೆವು. ಮಾರನೆಯ […]

ಮಳೆ, ಕೆರೆ ಮತ್ತು ಕ್ಯಾಬು: ಚೀಮನಹಳ್ಳಿ ರಮೇಶಬಾಬು

ಅದೊಂದು ಜಲಪ್ರಳಯ. ಸಂಜೆ ನಾಲ್ಕು ಗಂಟೆಗೆಲ್ಲಾ ಅಕ್ಷರಶಃ ಕತ್ತಲಾಗಿಬಿಟ್ಟಿತ್ತು. ಸುತ್ತಲೂ ಒತ್ತರಿಸಿ ನಿಂತಿದ್ದ ಕಪ್ಪು ಮೋಡಗಳು ಒಂದು ಗುಹೆಯನ್ನೆ ಸೃಷ್ಟಿಸಿಬಿಟ್ಟಿದ್ದವು. ಬೋರೆಂದು ಸುರಿಯ ಹತ್ತಿದ ಮಳೆಯ ಹನಿಗಳು ಒಂದೇ ಸಮ ರಾತ್ರಿಯೆಲ್ಲಾ ಮುಂದುವರೆಯತೊಡಗಿದವು. ಮಳೆಯ ರಭಸಕ್ಕೆ ವಿದ್ಯುತ್ ಕಡಿತವಾಗಿ ಮಳೆಯ ರೌದ್ರ ನರ್ತನದ ಭೀಕರತೆಯು ಮತ್ತಷ್ಟು ಹೆಚ್ಚಾಗಿ ಇಡೀ ಹಳ್ಳಿ ರಾತ್ರಿ ಏಳು ಗಂಟೆಗೆಲ್ಲಾ ಇದ್ದದ್ದನ್ನು ಉಂಡು ಮುಸುಕೆಳೆದು ಮಲಗಿಬಿಟ್ಟಿತ್ತು. ಅಪ್ಪ “ಈ ಪಾಟಿ ಉಯ್ಯಾಕತ್ತಿದೆ… ಬೆಳಿಗ್ಗೆ ರೋಡಿಗಾಕಿದ ತೆನೇನ ಶಿವನೇ ಕಾಪಾಡ್ಬೇಕು” ಎನ್ನುತ್ತಾ ಮಗ್ಗುಲು ಬದಲಿಸಿದ. […]

ಒಂದಾನೊಂದು ಕಾಲದಲ್ಲಿ:ವಾಸುಕಿ ರಾಘವನ್ ಅಂಕಣ

ಸಾಕಷ್ಟು ಸಿನೆಮಾ ಶುರುವಿನಲ್ಲಿ  ಶೀರ್ಷಿಕೆ ತೋರಿಸುವಾಗ ಯಾವುದಾದರೊಂದು ಹಾಡನ್ನು ಹಾಕುತ್ತಾರೆ. ಬಹಳಷ್ಟು ಸಲ ಸಿನಿಮಾದ ಪಾಪ್ಯುಲರ್ ಹಾಡಿರುತ್ತೆ, ಅಥವಾ ಸಿನಿಮಾದಲ್ಲಿ ಎಲ್ಲೂ ಬಳಸಲು ಸಾಧ್ಯವಾಗಿಲ್ಲದ ಹಾಡಿರುತ್ತೆ. ಇದಕ್ಕೆ ಅಪವಾದ ಗಿರೀಶ್ ಕಾರ್ನಾಡ್ ನಿರ್ದೇಶನದ “ಒಂದಾನೊಂದು ಕಾಲದಲ್ಲಿ”. ಚಿತ್ರದ ಆರಂಭದಲ್ಲಿ ಕವಿತಾ ಕೃಷ್ಣಮೂರ್ತಿ ಹಾಡಿರುವ “ಬಿಚ್ಚುಗತ್ತಿಯ ಬಂಟನ ಕಥೆಯ” ಅನ್ನೋ ಹಾಡು ಬರುತ್ತೆ. ಕೇಳಿದ ತಕ್ಷಣ ಹಿಡಿಸಿದ ಹಾಡು ಇದು, ಯಾಕೆ ಇಷ್ಟ ಆಯ್ತು ಗೊತ್ತಾಗಿದ್ದು ಸಿನಿಮಾ ಮುಗಿದ ಮೇಲೆ. ಆ ಹಾಡು ಈ ಚಿತ್ರ ನೋಡಲು ಬೇಕಾದ […]

ಮದಲ ನಾ ಸೆವೆನ್ ಮಂಥ ಬಾರ್ನ ಇದ್ದೇನಿ: ಸುಮನ್ ದೇಸಾಯಿ

ಮಧ್ಯಾಹ್ನ ಮೂರುವರಿ ಆಗಿತ್ತು.  ನಾನು ಮತ್ತ ನಮ್ಮ ತಮ್ಮಾ ಟಿಪಾಯಿ ಮ್ಯಾಲೆ ರಾಶಿಗಟ್ಟಲೆ ಕನ್ಯಾಗೊಳ ಫೋಟೊ ಮುಂದ ಹರವಿಕೊಂಡ ಕುತಿದ್ವಿ. ಮದಲ ಬ್ರಾಹ್ಮಣರಾಗ ಕನ್ಯಾದ ಅಭಾವ ಅದ ಹಂತಾದ್ರೊಳಗ ಇಂವಾ ನಮ್ಮ ತಮ್ಮಂದು ಆರ್ಸೊಣಿಕಿ ಬ್ಯಾರೆ ನೋಡಿ " ಲೇ ಲಗೂನ ಯಾವದ ಒಂದ ಸೆಲೆಕ್ಟ ಮಾಡಿ ಲಗ್ನಾ ಮಾಡಕೊಂಡ ಕಡಿಕ್ಯಾಗ, ಇಲ್ಲಾಂದ್ರ ಎಲ್ಲಿದರ ಒಂದ ಹಿಡಕೊಂಡ ಬಂದ ಮುದ್ರಾ ಹಾಕಿಸಿ ಮನ್ಯಾಗ ಹೋಗಿಸ್ಕೊಬೇಕಾಗ್ತದ ನೋಡ " ಅಂದೆ. ಖರೆನು ಈಗ ಕನ್ಯಾ ಅವ ಅವ ಅನ್ನೊದ್ರಾಗ […]

ಸ್ಪಾಟಾಗಿದ್ದರೆ : ಡಾ. ಗವಿಸ್ವಾಮಿ

ಸಂಜೆ ಐದಾಗಿತ್ತು. ಬೈಕಿನಲ್ಲಿ ಊರಿಗೆ ಹೋಗುತ್ತಿದ್ದೆ. ಐವತ್ತರವತ್ತು ಮೀಟರಿನಷ್ಟು ಮುಂದೆ ಗೌರ್ಮೆಂಟ್ ಬಸ್ ಹೋಗುತ್ತಿತ್ತು. ಬಿರುಗಾಳಿ ವೇಗದಲ್ಲಿ ನನ್ನ ಸನಿಹಕ್ಕೇ ಬಂದು ಸೈಡು ಹೊಡೆದು  ಹೋಯ್ತು ಒಂದು ಬೈಕು. ಒಂದು ಕ್ಷಣ ಎದೆ ಝಲ್ಲೆಂದಿತು. ಬಸ್ಸನ್ನೂ ಸೈಡು ಹೊಡೆಯಲು  ಯತ್ನಿಸಿದ ಬೈಕ್ ಸವಾರ. ಎದುರಿಗೆ ಲಾರಿ ಬಂದು ಬಿಡ್ತು. ಸಿಕ್ಕಿಕೊಂಡು ಬಿಟ್ಟಿದ್ದರೆ ಅಲ್ಲೇ ಕತೆಯಾಗಿರುತ್ತಿದ್ದ . ಸಣ್ಣ ಗ್ಯಾಪಿನಲ್ಲಿ ನುಸುಳಿಬಿಟ್ಟ. ಆದರೆ ಅದೇ ಸ್ಪೀಡಿನಲ್ಲಿ ಹೋಗಿ  ಎದುರಿಗಿದ್ದ ಮೈಲಿಗಲ್ಲಿಗೆ ಗುದ್ದಿಸಿಬಿಟ್ಟ! ಕೇವಲ ಐದಾರು ಸೆಕೆಂಡುಗಳಲ್ಲಿ  ಇಷ್ಟೆಲ್ಲಾ  ನಡೆದುಹೋಯ್ತು. […]

ಪಂಜು ಚುಟುಕ ಸ್ಪರ್ಧೆ: ಡಾ. ಆಜಾದ್ ಐ ಎಸ್ ಅವರ ಚುಟುಕಗಳು

1.    ನಿನ್ನೆ ಮಳೆ ಹನಿ ಅಂಗೈಲಿದೆ ಇನ್ನೂ ನಿನ್ನೇ ನೆನೆದು ಕುಳಿತಿರುವೆ ಇನ್ನೂ ನಿನ್ನೀ ತಪನದ ಬೇಗೆಯಲಿ ಬರಿದೇ ನನ್ನೇ ಮರೆತಿರುವೆ ವರ್ಷಾ ನೀ ಮತ್ತೆ ……………..ಬರದೇ……………..   2.    ಮಿಂಚು-ಹೊಳಪು ಹುಟ್ಟಿದಾಗ ಮಗ ಮಮತೆ ಮಡಿಲಲಿ ಆಡುತಿರುವಾಗ ತುಂಬಿ ಆತಂಕ-ಕಂಬನಿ ಗೆಲುವಿಲ್ಲದಾಗ  ಬೆಳೆದು ಹೆಮ್ಮರ ನಾನು, ಏನೆನ್ನಲಿ ? ಆ ಮಮತಾ ಮಯಿಯ ಕಣ್ಣ ಕನ್ನಡಿ ಬರೆದಂತೆ ಕಂಡಿಲ್ಲ ನನ್ನ ವಯಸಿಗೂ  ……………ಮುನ್ನುಡಿ ……………   3.    ನೀ ನನ್ನ ಮನದನ್ನೆ […]

ಸಾರಿ ರೀ.. ಥ್ಯಾಂಕ್ಯೂ: ಪ್ರಶಸ್ತಿ ಅಂಕಣ

ತಪ್ಪು ಮಾಡದೋರು ಯಾರವ್ರೇ, ತಪ್ಪೇ ಮಾಡದವ್ರು ಯಾರವ್ರೇ ಅಂತ ನಮ್ಮ ಜಗ್ಗೇಶ್ ಮಠ ಫಿಲ್ಮಲ್ಲಿ ಕುಣಿದಿದ್ದು ಎಲ್ರಿಗೂ ಗೊತ್ತಿದ್ದೆ. ತಿಳಿದೋ, ತಿಳೀದೆನೋ ಏನಾರೂ ತಪ್ಪು ಮಾಡ್ತಾನೆ ಇರ್ತೀವಿ. ನಮಗೆ ಸರಿಯೆನಿಸಿದ್ದು ಯಾರಿಗೋ ತಪ್ಪೆನಿಸಿ ಅವರ ಮನ ನೋಯಿಸಿರ್ತೀವಿ. ಸುಮ್ಮನೇ ತಪ್ಪೆಣಿಸಿ ಮುಗ್ದ ಮನವನ್ನ ನೋಯಿಸಿರ್ತೀವಿ. ಯಾರೋ ತಪ್ಪು ತಿಳೀಬೋದೆಂದು ತಪ್ಪಾಗಿ ಭಾವಿಸಿ ಹೇಳಬೇಕಾದ ಮಾತು, ಮಾಡಬೇಕಾದ ಕೆಲಸ ಮಾಡದೇ ತಪ್ಪೆಸಗಿರ್ತೀವಿ. ಹೀಗೇ ಹೆಜ್ಜೆ ಹೆಜ್ಜೆಗೆ ತಪ್ಪು, ಕೂತಿದ್ದು-ನಿಂತಿದ್ದು ತಪ್ಪೆಂದು ಕಾಡಿ ಎಷ್ಟೋ ಜೀವಗಳ ಕಣ್ಣೀರಿಳಿಸಿರ್ತೀವಿ. ಕೆಲವೊಮ್ಮೆಯಂತೂ ನಾವು […]

ಹೀಗೊಂದು ಕಿಡ್ನಾಪ್:ಪಾರ್ಥಸಾರಥಿ ಎನ್

ಪ್ರಿಯಾ ಸೆಲ್ವರಾಜ್ ಬೆಂಗಳೂರಿನಲ್ಲಿಯೆ ಪ್ರಸಿದ್ದಳಾಗಿದ್ದ ಕ್ರಿಮಿನಲ್ ಅಡ್ವೊಕೇಟ್. ಆಕೆ ಕೊಲೆ ದರೋಡೆಗಿಂತ, ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂದಿಸಿದ ಕೇಸ್ ಗಳನ್ನು ಹ್ಯಾಂಡಲ್ ಮಾಡಿರುವುದೆ ಜಾಸ್ತಿ. ಅದಕ್ಕೆ ಕಾರಣ ಅದರಲ್ಲಿ ಬರುತ್ತಿದ್ದ ಹಣ.  ಆಕೆ ಕೋರ್ಟ್ ನಲ್ಲಿ ಗೆದ್ದ ಕೇಸುಗಳಿಗಿಂತ ಹೊರಗೆ ಸೆಟ್ಲ್ ಮಾಡಿರುವ ಕೇಸ್ ಗಳೆ ಜಾಸ್ತಿ ಇದ್ದವು, ತಾನು ತೆಗೆದುಕೊಂಡ ಕೇಸ್ ಗೆಲ್ಲಲು ಆಕೆ ಎಲ್ಲ ರೀತಿಯಲ್ಲು ಪ್ರಯತ್ನ ಪಡುತ್ತಿದ್ದಳು. ಎದುರು ಪಾರ್ಟಿಯನ್ನು ಹಿಡಿದು ಒಪ್ಪಿಸುವುದು, ಎದುರು ಪಾರ್ಟಿಯ ಲಾಯರ್ ಗಳನ್ನು ಹಣತೋರಿಸಿ ಆಸೆ […]

ಆಂಗ್ಲ – ಕನ್ನಡ ಇತ್ತೀಚಿನ ನಿಘಂಟು, ಇತ್ಯಾದಿ : ಆರತಿ ಘಟಿಕಾರ್

1.       ಬೈತಲೆ ಬಟ್ಟು ಧರಿಸುವವಳು ಬೈತಲೆ ತಗೆಯಲೇ ಬೇಕೆಂಬ ನಿಯಮ ಇಲ್ಲ  ! 2.       ಸಾಮನ್ಯವಾಗಿ  ಡಾಕ್ಟರ್ ದಂಪತಿಗಳು  ತಮ್ಮ ಮಕ್ಕಳ ಹ್ಯಾಂಡ್ ರೈಟಿಂಗ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. 🙂 3.       ವರ ಪೂಜೆಯ ಸಮಾರಂಭದಿಂದಲೇ  ಮದುವೆ  ಆಗುವವನ ಪೂಜೆ ಶುರುವಾಗುತ್ತದೆ. 🙂 4.       ಮನೆಗೆ ಬಂದ ನಂತರ ಮಾಮೂಲಿಗಿಂತಲೂ  ಹೆಚ್ಚು ಮೌನಿಯಾಗಿ  ಗಂಡ  ಕುಳಿತ್ತಿದ್ದರೆ (ಆಫೀಸಿನಲ್ಲಿ) ಏನಾದರೂ ಎಡವಟ್ಟು ಮಾಡಿಕೊಂಡಿದ್ದಾನೆಂದೇ ಅರ್ಥ. 5.       ಪೆನ್ ಅಂಗಡಿಗಳಲ್ಲಿ  ಹೊಸ ಪೆನ್ ಪರೀಕ್ಷಿಸುವವರೆಲ್ಲರೂ  ಅಲ್ಲಿದ್ದ ಪೇಪರ್ ಮೇಲೆ ಗೀಚೀಯೇ ನೋಡುತ್ತಾರೆ. (ಹೀಗಾಗಿ […]

ಅವಳಿಗೆ ಸಾಸಿವೆ ಬೇಕಿಲ್ಲ, ಇವಳಿಗೆ ಸಾಸಿವೆ ಸಿಗಲಿಲ್ಲ: ಚೈತ್ರಾ.ಎನ್.ಭವಾನಿ

ಅರೆ ಬೆಂದ ಸೌದೆ ಅತ್ತ ಬೇಸಿಗೆಯ ಧಗೆಯಲ್ಲಿ ಮೆಲ್ಲಗೆ ವಿಧಾಯ ಹೇಳುತ್ತಿರೋ ಸೌದೆ ಸೀಳುಗಳಿಗೆ ಆರಲೇಬೇಕು ಅನ್ನೋ ಧಾವಂತವಿಲ್ಲ. ಸಣ್ಣಗೆ ಏಳುತಿದ್ದ ಬಿಳಿ ಮಿಶ್ರಿತ ಕಪ್ಪು ಹೊಗೆ ಮುಚ್ಚಿದ ಮೋಡದ ಪ್ರತಿಬಿಂಬ. ಎಂದಿನಂತೆಯೇ  ಮನೆಯ ಬಾಗಿಲಿಗೆ ಒರಗಿ ಮನೆಯ ಮುಂಭಾಗ ಕುಳಿತಿದ್ದ ಮುದುಕಮ್ಮನ ಮುಖದಲ್ಲಿ ಎಂದಿನಂತೆಯೇ ಅದೇ ನಿರ್ಲಿಪ್ತ ಭಾವಗಳು. ಅಲ್ಲೇ ಆಚೆಗೆ  ಕುರ್ಚಿ ಮೇಲೆ ಕುಳಿತಿದ್ದ ಮುದುಕಪ್ಪನಿಗೂ ಅಷ್ಟೇ, ಹೋದವನು ಹೋದ ಅನ್ನೋ ನಿರ್ಲಿಪ್ತ ಭಾವ!? ಸಂತಸದ ಪರಮಾವಧಿಯಲ್ಲಿ ಒಳಗೊಳಗೇ ಬಿಡಿಸಿಕೊಳ್ಳುತ್ತಿರುವ  ನಿರಾಳದ ಮೌನವೇ..!? ದೊರಕಿತೆ ಮುಕ್ತಿ …? […]