ಅವಳಿಗೆ ಸಾಸಿವೆ ಬೇಕಿಲ್ಲ, ಇವಳಿಗೆ ಸಾಸಿವೆ ಸಿಗಲಿಲ್ಲ: ಚೈತ್ರಾ.ಎನ್.ಭವಾನಿ

ಅರೆ ಬೆಂದ ಸೌದೆ

ಅತ್ತ ಬೇಸಿಗೆಯ ಧಗೆಯಲ್ಲಿ ಮೆಲ್ಲಗೆ ವಿಧಾಯ ಹೇಳುತ್ತಿರೋ ಸೌದೆ ಸೀಳುಗಳಿಗೆ ಆರಲೇಬೇಕು ಅನ್ನೋ ಧಾವಂತವಿಲ್ಲ. ಸಣ್ಣಗೆ ಏಳುತಿದ್ದ ಬಿಳಿ ಮಿಶ್ರಿತ ಕಪ್ಪು ಹೊಗೆ ಮುಚ್ಚಿದ ಮೋಡದ ಪ್ರತಿಬಿಂಬ. ಎಂದಿನಂತೆಯೇ  ಮನೆಯ ಬಾಗಿಲಿಗೆ ಒರಗಿ ಮನೆಯ ಮುಂಭಾಗ ಕುಳಿತಿದ್ದ ಮುದುಕಮ್ಮನ ಮುಖದಲ್ಲಿ ಎಂದಿನಂತೆಯೇ ಅದೇ ನಿರ್ಲಿಪ್ತ ಭಾವಗಳು. ಅಲ್ಲೇ ಆಚೆಗೆ  ಕುರ್ಚಿ ಮೇಲೆ ಕುಳಿತಿದ್ದ ಮುದುಕಪ್ಪನಿಗೂ ಅಷ್ಟೇ, ಹೋದವನು ಹೋದ ಅನ್ನೋ ನಿರ್ಲಿಪ್ತ ಭಾವ!? ಸಂತಸದ ಪರಮಾವಧಿಯಲ್ಲಿ ಒಳಗೊಳಗೇ ಬಿಡಿಸಿಕೊಳ್ಳುತ್ತಿರುವ  ನಿರಾಳದ ಮೌನವೇ..!? ದೊರಕಿತೆ ಮುಕ್ತಿ …? ಯಾವ ಮುಕ್ತಿ…?ಅವನು ಹೋದದ್ದೋ…ಅವನೊಟ್ಟಿಗೆ ಅವನ ನೋವುಗಳು ಹೋದದ್ದೋ…? ಕಂಬನಿಗಲ್ಲಿ ಕೆಲಸವಿರಲಿಲ್ಲ. ಕ್ರಿಯೆಯಷ್ಟೇ ಅನ್ನೋದು ಎಲ್ಲರ ಭಾವವಾಗಿತ್ತು. 

ಮನೆ ಹೆಂಚಿನ  ಕಿಂಡಿ

ಅದೆಷ್ಟು ದಿನ ನಿದ್ದೆಯನ್ನು ಅಮಾವಾಸ್ಯೆಗೆ ದೂಡಿದ್ದ ಮಗ. ಈಗ ಶವಪೆಟ್ಟಿಗೆಯಲ್ಲಿ, ಚಿರ ನಿದ್ರೆಯಲ್ಲಿ. ಹರಕೆ ಕಟ್ಟಿ ಹೆತ್ತು ಹೊತ್ತಿದ್ದ ಮಗ ಮಣ್ಣು ಸೇರೋ ಸಮಯ ಮನಸು ಕಲ್ಲಾಯಿತೆ…! ಭಾರತ ಸರ್ಕಾರ ನೌಕರಿ… ಚೆಂದನೆಯ ಹೆಂಡತಿ.. ಮುದ್ದು ಮಕ್ಕಳು..ಅದ್ಯಾಕೋ ಇದ್ದಕಿದ್ದಂತೆ ಅವಳು ಇವನನ್ನ ತೊರೆದಳು… ಅವನಿಗೆ ಶೋಕಿಯಂತೆ… ಕುಡಿಯೋ ಚಟವಂತೆ..ದೊಸ್ತಿಗಳನ್ನು ಒಟ್ಟುಗೂಡಿಸಿಕೊಂಡು ಕುಡಿದು ತೂರಡೋದೇ ಕೆಲಸವಂತೆ. ಪಕ್ಕದ ಮನೆಯವರ ಅಂತೆ ಕಂತೆಗಳು ಗಾಳಿಯಲ್ಲಿ ಸುದ್ದಿಯಾಗಿ ಬೆರೆತಿದ್ರು ಗಾಳಿ ಸುದ್ಧಿ ಅನ್ನಿಸೋದಿಲ್ಲ. ಸಾವಿನ ಮನೆಯ ವಾತಾವರಣ ಅದನ್ನು ಪ್ರತಿಫಲಿಸುತ್ತಿದ್ದವು. 

ಲಾಲಿಗೂ ವಯಸ್ಸಾಯಿತು

ಇನ್ನೊಬ್ಬಳು ಬಂದಳು ಒಡವೆ ಹೊತ್ತುಕೊಂಡು ಹೋದಳು. ಅಷ್ಟರಲ್ಲೇ ಅವನ ಕಿಡ್ನಿ ಕೈ ಕೊಟ್ಟಿತ್ತು. ಮಿದುಳು ಕಾರ್ಯವನ್ನು ನಿಲ್ಲಿಸಿತ್ತು. ಉಣ್ಣೋಕು, ಉಡೋಕು, ಬಾಚೋಕು ಮುದುಕ್ಕಮ್ಮನೆ  ಬೇಕಿತ್ತು. ಮಗ ಮತ್ತೊಮ್ಮೆ ಮಗುವಾಗಿಬಿಟ್ಟಿದ್ದ. ದಿನೇ ದಿನೇ ಆ ಮಗು ಮುದುಕಮ್ಮನ ಸಹನೆ ಕೆಡವಿತ್ತು. 'ಹಾಳದವನೇ ನೀನು ಹಾಳಾದೆ ನಮ್ಮನ್ನು ಹಾಳು ಮಾಡಿಬಿಟ್ಟೆ. ಬಂದವರೆಲ್ಲ ಹೊತ್ಕೊಂಡು ಹೋದ್ರು, ಹೆತ್ತವಳು ನಾನಿನ್ನು ನೊಗ ಹೊರುತ್ತಲೇ ಇದ್ದಿನಲ್ಲೋ, ನನ್ನ ತ್ರಾಣಕ್ಕು ನನ್ನ ಮಾತು ಕೇಳುವಷ್ಟು ಸಹನೆ ಇಲ್ಲ.' ಪ್ರತಿನಿತ್ಯ ಮುದುಕಿಯ ಲಾಲಿ. 'ಅಯ್ಯೋ ಇಬ್ರು  ಸಾಯಿರಿ', ಸತ್ತೋಗಿ ಬದುಕಿ ಏನ್ ಮಾಡ್ತೀರಾ ವಯಸ್ಸಾಯಿತು  ದರಿದ್ರದವ್ರು' ಹಾಸಿಗೆ ಮೇಲಿದ್ದವನ ನಿತ್ಯ ಅಸಹನೆ. 

ಸೆರಗಿನಲ್ಲಿ ಉಳಿಯದ ಉಪ್ಪು 

ಅಂತು ನಿತ್ಯದ ಕಾಯಕ ಮುಗಿಸಿ ಹೊರಟ ಅವನು. ಮುದುಕಮ್ಮ, ಮುದುಕಪ್ಪ ಬೇಗ ಹೊರಟು ಬಿಡ್ತಾರೆನೋ ಅಂದುಕೊಂಡಿದ್ದರು ಇವರನ್ನು ಕಣ್ಣಾರೆ ಕಂಡವರು. ಅಯ್ಯೋ ಅಪ್ಪನ ಚಟ್ಟಕ್ಕೆ ಹೆಗಲು ಕೊಡಬೇಕಾದವ ಅಪ್ಪನ ಕೈಯಲ್ಲೇ ಮಣ್ಣು ಹಾಕಿಸಿಕೊಂಡು ಬಿಟ್ಟ. ಮುದುಕಪ್ಪನ ಕಣ್ಣು ಬರಿದಾಗಿರಲಿಲ್ಲ. ಹಾಗಂತ ತುಂಬಲೂ ಇಲ್ಲ… ಮುದುಕಮ್ಮನ ಕೈ ಕೆನ್ನೆ ಮುಟ್ಟಿಕೊಳ್ಳಲಿಲ್ಲ… ಸೆರಗು ಒದ್ದೆಯಾಗಲಿಲ್ಲ. ನೋಡುಗರಿಗೂ ಅದೇನು ಅನ್ನಿಸಲೂ ಇಲ್ಲ. ಅಂತು ಅಲ್ಲಿದ್ದವರು ತಮ್ಮ ಪಾಡಿಗೆ ತಾವು ಅಂದುಕೊಂಡ ಕಡೆ ಮಾತು "ಅಂತು ಮುದುಕ ಮುದುಕಿಗೆ ಈಗಲಾದ್ರೂ ಮುಕ್ತಿ ಸಿಕ್ತಲ್ಲ'!


ಕಾಲುಗೆಜ್ಜೆ ನಿನಾದ

ಇತ್ತ ತುತ್ತು ತಿನ್ನಲು ಹೆಣಗುತ್ತಿರೋ ಪುಟ್ಟಿ … ಬಟ್ಟಲಲ್ಲಿರೋ ಅನ್ನ ನಾಯಿ ಪಾಲಾಗದಿರುವಂತೆ ಮಾಡಲೆಬೇಕೆನ್ನುವ ಅಮ್ಮನ ತುಡಿತ. ಚಂದಮಾಮನನ್ನು ತೋರಿಸಿದ್ರೂ ಅದು ಬೇಕಿಲ್ಲ ಅವಳಿಗೆ… ಗೊಗ್ಗಯ್ಯ ಬಂದರೂ ಹೆದರೋಲ್ಲ…'ಏನ್ ಮಾಡೋದು ಡಾಕ್ಟರ್ ಬೈತಾರೆ. ನಿಮ್ಮ ಮಗಳಿಗೆ ಹೆಲ್ದಿ ಫುಡ್ ಕೊಡಿ ತೂಕ ಹೆಚ್ಚಾಗುವಂತೆ ನೋಡಿಕೊಳ್ಳಿ. ಇಲ್ಲವಾದರೆ ಮಗಳಿಗೆ ಪೌಷ್ಟಿಕಾಂಶದ ಕೊರತೆಯಾಗುತ್ತೆ'. ಅಮ್ಮನ ಸ್ವಗತ. ಅಂತೂ ಹಸಿದ ನಾಯಿಗೆ ಅಂದು ಹಾಲು ಅನ್ನ ಕೊಂಚ ಹೆಚ್ಚೇ ಬಿದ್ದಿತ್ತು. ಮಗು ನಕ್ಕಿತ್ತು. ನಾಯಿ ಖುಷಿ ಪಟ್ಟಿತ್ತು. 

ಬೆಳದಿಂಗಳ ಬಟ್ಟಲಲ್ಲಿ

 ಮೆಟ್ಟಿಲಿಳಿದು ಓಡುತ್ತಿರೋ ಪುಟ್ಟಿ.. ಸೇಬಿನ ಹಣ್ಣನ್ನು ಬಿಸಿ ಮಾಡಿರೋ ಬಟ್ಟಲಿನ ಜೊತೆ ಪುಟ್ಟಿಯ ಹಿಂದೆ ಓಡುತ್ತಿರೋ  ಅಮ್ಮ.  'ಈ ಸೇಬನ್ನಾದ್ರೂ ತಿನ್ನಬಾರದೇ… ಇವಳ ವಯಸಿನ ಮಕ್ಕಳು ಎಷ್ಟು ಬೇಗ ಬೆಳಿತಿದ್ದಾರೆ. ಆಕ್ಟಿವ್ ಇದ್ದಾರೆ. ದುಂಡಗೆ ದಪ್ಪಗೆ. ಇವಳಿಗಂತೂ ತಿನ್ನಿಸೋದೆ ದೊಡ್ಡ ಪ್ರಾಬ್ಲಮ್.. ಇವಳ ತೂಕ ಹೆಚ್ಚಿಸೋದ್ರಲ್ಲಿ ನನ್ನ ತೂಕ ಇಳಿತು'. ಪಕ್ಕದ ಮನೆಯವಳ ಬಳಿ ಇವಳ ರೋಧನೆ. ತಿನ್ನು ತಿನ್ನು ಅಂತ ಪ್ರಾಣ ತಿನ್ನೋ ಅಮ್ಮ ಒಂದೆಡೆ ಓಡುತಿದ್ರೆ.. ಆಣತಿ ದೂರದಲ್ಲಿ ಇಟ್ಟಿಗೆ ಮನೆಯಲ್ಲಿ "ಅಮ್ಮ ಹಸಿವು' ಅಂತ ಅಳುತ್ತಿರೋ ಪುಟ್ಟ ಮತ್ತೊಂದು ಕಡೆ. ಪಕ್ಕದ ಮನೆಯವಳಿಗೆ ಈ  ವೈರುಧ್ಯಗಳ ಬಗ್ಗೆ ನಿತ್ಯ ತೊಳಲಾಟ ಇದ್ದಿದ್ದೆ. ಅಂತೂ ಅರೆ ಬೆಂದ ಸೇಬು ಅರ್ಧಕ್ಕೆ ತಣ್ಣಗಾಗಿ ನೆಲಕಚ್ಚಿತ್ತು. ಚಂದಿರ ಯೋಚನೆಗೆ ಬಿದ್ದಿದ್ದ. 

ಕಾಲಜ್ಞಾನಿ ಚಂದಿರ

ಭಾನುವಾರ ಇವತ್ತು. ಅಮ್ಮ ಚಿಕನ್  ಪುಟ್ಟಿಯ ತೊದಲು. ಅಬ್ಬಾ! ಇವತ್ತಾದ್ರೂ ಕೊಂಚ ಹೆಚ್ಚೇ ತಿನ್ನಿಸಿಬಿಡುವ ಅಮ್ಮನ ಪ್ರಿ ಪ್ಲಾನ್. ಇವತ್ತು ಪುಟ್ಟಿ ಎಲ್ಲೂ ಓಡಲಿಲ್ಲ. ಹಠ ಮಾಡಲಿಲ್ಲ. ಅಮ್ಮ ಚಿಕನ್  ಅಮ್ಮ ಚಿಕನ್ ಅಂತಲೇ ಹಿಗ್ಗಿ ಹಿಗ್ಗಿ ಚಪ್ಪಾಳೆ ಹೊಡೆದಳು . ಸಂಜೆಯೂ ಪುಟ್ಟಿ ಸರಿಯಾಗಿ ತಿಂದಿಲ್ಲ. ಹಸಿದಿರಬೇಕು ಪಾಪಾ ನನ್ನ ಕಂದ… ಇರು ಬಂಗಾರ ಅಂತಲೇ ತುತ್ತು ಸಿದ್ಧಗೊಳಿಸಿಕೊಂಡು ಆಕಾಶ ತೋರಿಸುತ್ತಲೇ ಹೊರ ಬಂದಳು ಅಮ್ಮ. ತುತ್ತು ಸಿದ್ಧಪಡಿಸಲು ಬಟ್ಟಲು ಎತ್ತಿಕೊಳ್ಳಬೇಕು ಅಷ್ಟರಲ್ಲೇ ಆಯ ತಪ್ಪಿ ೪ ನೇ ಫ್ಲೋರ್ ಪ್ಯಾಸೇಜ್ ಮೇಲಿಂದ ಅಮ್ಮ ಎಂದು ಚೀರುತ್ತಲೇ ದಪ್ ಎಂದು ಬಿದ್ದ ಶಬ್ದ. ಪುಟ್ಟಿ….. ಎಂದು ಒಮ್ಮೆಲೇ ಚೀತ್ಕರಿಸಿ ಅನ್ನದ ಬಟ್ಟಲು ಜಾರಿಬಿಟ್ಟ ಅಮ್ಮ. ಒಮ್ಮೆಲೇ ತಲೆ ತಿರುಗಿ ದೇಹದ ತ್ರಾಣವೆಲ್ಲ ಕುಸಿದಂತಾದ ಅನುಭವ. ಕನಸಲ್ಲಿ ಬಾಯಿ ಬಿಡಲು ಒದ್ದಾಡುವಂತೆ ಮಾತನಾಡಲು ಬಾಯಿ ಬಾರದೆ ರೋಧಿಸುತ್ತಿರೋ ಅಮ್ಮ. ಕೂಗು ಚೀತ್ಕಾರದಲ್ಲೇ ಪುಟ್ಟಿ ಬಿದ್ದ ಜಾಗದಿಂದ ಬಾಗಿ ಬೀಳುತಲಿದ್ದ ಅಮ್ಮನನ್ನು ಓಡಿ ಬಂದು ಹಿಡಿದುಕೊಂಡ ಅಪ್ಪ. ಅಲ್ಲಿದ್ದದ್ದು ತಂದೆಯ ಕಣ್ಣಿರು… ಅಯ್ಯೋ… ಚೀತ್ಕಾರ ಅಮ್ಮನ ಪ್ರಜ್ಞಾಹೀನ ಸ್ಥಿತಿ. ಅತ್ತಿತ್ತ ಬಿದ್ದಿದ್ದ ಚಿಕನ್ ಪೀಸುಗಳು. ಅಗುಳು ಅಗುಳಾಗಿ ಬಿದ್ದಿದ್ದ ಅನ್ನ. ಅಮ್ಮ ಅನ್ನೋ ಚೀತ್ಕಾರದ ಪ್ರತಿಧ್ವನಿ. ಕಾಲಜ್ಞಾನಿ ಚಂದಿರ ಅಮಾವಾಸ್ಯೆಯನ್ನು ಹೊದ್ದು ಮಲಗಿದ್ದ!


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

11 Comments
Oldest
Newest Most Voted
Inline Feedbacks
View all comments
ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
10 years ago

ಹನಿ-ಹನಿಗೂಡಿ ಹಳ್ಳದಂತಿರುವ ಕಥಾಲೋಕದ ಹನಿಗಳು ಸೇರಿದ ಸಾಸಿವೆ ಕಥಾನಕ ಚೆನ್ನಾಗಿದೆ  !

vinayakrao kulkarni
vinayakrao kulkarni
10 years ago

TO i enjoying lot by this katha loka (hani ) becoz It is saying us messageing us wt is aged Life, how they feeling, n what is childs love..by Mammi   so nice madam. Please continue this habit and inform us whenever u display your Kathegalu- it is bunch of Small Kathegalu..very nice madam

srujan
srujan
10 years ago

Kathe tumbaane chennagide.Hosa tantradinda gamana seleyuttade..

srujan
srujan
10 years ago

kathe tumba chennagide..hosa tantra ishtavaguttade..

chaithra.n.bhavani
chaithra.n.bhavani
10 years ago

 ನಮಸ್ತೆ ಹಿಪ್ಪರಗಿ ಸರ್, ಕುಲಕರ್ಣಿ ಸರ್ ಮತ್ತು ಸೃಜನ್ ಅವರೇ ಧನ್ಯವಾದಗಳು. ಮೊದಲ ಕಥೆ, ಸಣ್ಣ ಪ್ರಯತ್ನ.  ನಿಮ್ಮೆಲ್ಲರ ಪ್ರತಿಕ್ರಿಯೆಗೆ ಮತ್ತೊಮ್ಮೆ ಧನ್ಯವಾದಗಳು.

Rajesh Rajagopal
Rajesh Rajagopal
10 years ago

Chaitra Bhavani avare, Kathe thumba Vibhinna haagu hosa reethiya Nirupane yindha koodidhe. Very good. Heege mundhuvareyiri. All the Best.

hariprasad
hariprasad
10 years ago

narration fine. congrats. adare nimma media prabhava eddu kantide. drushyada mulaka kate helo kramadante kanuttalla taye….

hemanth
hemanth
10 years ago

nimma grahike ge banda vasthavagalanna akasharagala mulaka adarallu nimma padagala jodane thumba chennagide… nanna parakara edu katheyalla… vasthavagala anisike… kathe maduvavarige spoorthiyagi sigo elegalu nimma grahikeyalli kanthive.. wish u al da best.. keep it up 

Gaviswamy
10 years ago

ಕಥೆ ಚೆನ್ನಾಗಿದೆ.
ಧನ್ಯವಾದಗಳು.
 

shanthi k a
shanthi k a
10 years ago

nice……

Soory Hardalli
Soory Hardalli
10 years ago

Simple but with good narration.I liked the story.

11
0
Would love your thoughts, please comment.x
()
x