Facebook

Archive for 2013

ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಶರತ್ ಚಕ್ರವರ್ತಿ ಚುಟುಕಗಳು

  1. ಕಣ್ಣುಗಳು ನೂರಾರು ತಾರೆಗಳು ಉಲ್ಕೆಗಳಾಗಿ ಉದುರಿದವು ನಿನ್ನ ಕಣ್ ಹೊಳಪಿಗೆ ಸೋತು. 2. ಮಿಂಚು ಬೆಳಕಾಗಿ ಬಾ, ಬೆಳದಿಂಗಳಾಗಿ ಬಾ ಎಂದಾಡಿರೇ.. ಮಿಂಚಾಗಿ ಬಂದಳು ದೃಷ್ಟಿಯನೆ ಹೊತ್ತೊಯ್ದಳು. 3. ಚಳಿ ನವಂಬರ್ ಚಳಿ, ಭಾರವಾದ ಕಂಬಳಿ ಹೊದೆಯಲು ಇಚ್ಚಿಸಿರಲು ನಿನ್ನ ನೆನಪುಗಳು ಬೆಚ್ಚನೆ ಭಿಗಿದಪ್ಪಿದವು. 4. ಹಣತೆ-ಪತಂಗ ಸುಟ್ಟು ಬೂದಿಯಾಗುವೆ ಎಂಬ ಅರಿವಿದ್ದರೂ ಏಕೆ ಎನ್ನನೇ ಸುತ್ತಿ ಸುತ್ತಿ ಬರುತಿರುವೆ.. ನಿನ್ನ ಕೋಮಲ ರೆಕ್ಕೆಗಳ ಸುಡುವ ಮನಸ್ಸಿಲ್ಲದೇ ಇಗೋ.. ನಾನೇ ನಂದಿಹೋಗುತಿರುವೆ. 5. ನೀ […]

ಕಣ್ಣುಗಳನ್ನು ನೋಡಿದೆ ಕಣ್ಣಾಲಿಗಳಲ್ಲಿ ನೀರಾಡುತ್ತಿತ್ತು: ಡಾ. ಗವಿ ಸ್ವಾಮಿ

  ಮೊನ್ನೆ ಒಬ್ಬ ರೈತ ಎತ್ತುಗಳನ್ನು ಹೊಡೆದುಕೊಂಡು ಬಂದಿದ್ದ. ಎತ್ತುಗಳು ಕುಂಟುತ್ತಿದ್ದವು. ಕಾಲುಗಳಲ್ಲಿ ಗಾಯಗಳಾಗಿದ್ದವು. ಏನಪ್ಪಾ ಆಯ್ತು.. ಇಷ್ಟೊಂದು ಗಾಯಗಳಾಗಿವೆಯಲ್ಲ ಅಂದೆ. ''ಯಾನೇಳ್ಳಿ ಸೊಮಿ ಎಲ್ಲಾ ನಮ್ ಹಣಬರ'' ಅಂದು ಹಣೆ ಕುಟ್ಟಿಕೊಂಡ. ಅದೇನ್ ಸ್ಪಷ್ಟವಾಗಿ ಹೇಳಪ್ಪ ಅಂದೆ. '' ಓದುಡ ಓದುಡ ಅಂತ್ ಬಡ್ಕಂಡಿ… ಬಡ್ಡಿಕೂಸು ಕಿಂವಿಗೇ ಹಾಕನಿಲ್ಲ… ಎಸ್ಸೆಲ್ಸಿ ಪೈಲ್ ಮಾಡ್ಕತು. ನಿನ್ ಹಣಾಲ್ ಬರದಾಗಾಬುಡು ನಡ ಆರಂಬನ್ಯಾರು ಕಲ್ತಗ ಅಂತ ಆರಂಬ ಕಲಸ್ದಿ'' '' ಬಡ್ಡಿಕೂಸು ಇವತ್ಯಾನ್ ಮಾಡ್ತು ಅಂದ್ರ.. ಕಟ್ಟಿರ ಏರ್ನೂ […]

ಇವ ಸುಮ್ನೇ ಗೀಚ್ತಾನೆ, ಸೀರಿಯಸ್ ಆಗ್ಬೇಡಿ…: ಎಂ. ಆರ್. ಸಚಿನ್

ಗುರುಭ್ಯೋ ನಮಃ ಅದೊಂದು ಕಾಲವಿತ್ತು. ಗುರುಗಳು ಎಂದರೆ ಸಾಕ್ಷಾತ್ ದೇವರೇ ಎಂಬ ಭಾವನೆ ಜನರಲ್ಲಿತ್ತು. ’ಹರ ಮುನಿದರೂ ಗುರು ಕಾಯ್ವನು’ ಎಂಬಾ ನಂಬುಗೆಯಿತ್ತು. ಮೇಲಾಗಿ ಗೌರವವಿತ್ತು, ಆದರವಿತ್ತು. ಆದರೆ,,, ಕಾಲ ಬದಲಾಯ್ತೋ, ಜನರೇ ಚೇಂಜ್ ಆದ್ರೋ ಗೊತ್ತಾಗ್ಲಿಲ್ಲಾ, ಗುರು ಅನ್ನೋ ಪದವೇ ಇಂದು ಏನೇನೋ ಆಗೊಗಿದೆ. "ಬಾ ಗುರು’, "ತೊಗೋ ಗುರು", "ಮಗಾ ಹೊಡಿ ಗುರು" ಮುಂತಾದ ಪದಗಳನ್ನ ನಿಮ್ಮಾ ಆಸುಪಾಸಲ್ಲಿ ಕೇಳದ ಕಿವಿಗಳಿದ್ರೆ,  ಅದಕ್ಕೆರಡು ಲೀಟರ್ ಚಿಮಣಿ ಎಣ್ಣೆ ಹಾಕಿಸಿ ಕಿಲಿನು ಮಾಡಿಸಿ, ಪುಣ್ಯ ಕಟ್ಕಳಿ. […]

ಕ್ರೂರ ಪ್ರಪಂಚದಲ್ಲಿ ನಾವೂ, ಮಕ್ಕಳೂ:ವಾಸುಕಿ ರಾಘವನ್

ಕಳೆದ ಡಿಸೆಂಬರ್ ಅಲ್ಲಿ ನಡೆದ “ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ”ಕ್ಕೆ ಹೋಗಿದ್ದು ಒಂದು ಅದ್ಭುತ ಅನುಭವ. ಒಂದು ಚಿತ್ರ ನೋಡಿ ಬಂದು, ಇನ್ನೊಂದು ಚಿತ್ರಕ್ಕೆ ಕ್ಯೂನಲ್ಲಿ ನಿಂತುಕೊಳ್ಳೋದು, ನಿಂತಲ್ಲೇ ಒಂದು ಸ್ಯಾಂಡ್ವಿಚ್ಚೋ ವ್ರಾಪೋ ಗಬಗಬ ತಿನ್ನೋದು. ಬೇರೆಯವರಿಗೆ ಹುಚ್ಚಾಟ ಅನ್ನಿಸಬಹುದಾದ ಈ ವರ್ತನೆ ಚಿತ್ರಪ್ರೇಮಿಗಳಿಗೆ ಸರ್ವೇಸಾಮಾನ್ಯ ಆಗಿತ್ತು. ಗೆಳೆಯ ಪವನ್ ಕುಂಚ್ ಜೊತೆ ಎರಡು ದಿನದಲ್ಲಿ ಎಂಟು ಚಿತ್ರ ನೋಡಿದ್ದು ಮರೆಯಲಾಗದ ನೆನಪು!    ಶನಿವಾರ ಸಂಜೆ ಸಿನಿಮಾ ಹಾಲಲ್ಲಿ ಕೂರುವ ಹೊತ್ತಿಗೆ ಏನೋ ಒಂಥರಾ ಸುಸ್ತು. “ಫಿಲಂ […]

ಪ್ರಶಸ್ತಿ ಬರೆವ ಅಂಕಣ: ‘ಪೇಪರ್ ಪೇಪರ್’

ಸಣ್ಣವನಿದ್ದಾಗ ದೂರದರ್ಶನದಲ್ಲಿ ಬೆಳಗ್ಗೆ ಹತ್ತರಿಂದ ಹನ್ನೊಂದರವರೆಗೆ ಬರುತ್ತಿದ್ದ "ಗ್ಯಾನ್ ದರ್ಶನ್" ರಜಾವೇಳೆಯ ಅಚ್ಚುಮೆಚ್ಚಿನ ಕಾರ್ಯಕ್ರಮ ಆಗಿತ್ತು. ಅದರಲ್ಲಿ ಒಮ್ಮೆ ನೋಡಿದ್ದ ರದ್ದಿ ಪೇಪರ್ ಅಂತ ಎಸೆಯೋ ಬದಲು ನಾವು ಮನೆಯಲ್ಲೇ ಅದ್ನ ಹೇಗೆ ಪುನರ್ಬಳಕೆ ಮಾಡ್ಬೋದು, ರದ್ದಿ ಪೇಪರ್ಗಳನ್ನ ಹೇಗೆ ರೀಸೈಕಲ್ ಮಾಡ್ತಾರೆ ಅಂತ ತೋರ್ಸಿದ್ದರು. ವಿಜ್ಞಾನ, ಮುಂದುವರಿದ ಜನ ನಾವು ಅಂತ ರೀಚಾರ್ಚ್ ಕಾರ್ಡಿಂದ ಹಿಡ್ದು ಎಟಿಎಮ್ನಲ್ಲಿ ತೆಗ್ದ ಪ್ರತೀ ನೂರಕ್ಕೂ ಪಡ್ದ ಹರ್ದೆಸೆದ ಪೇಪರ್ನಿಂದ ಎಟಿಎಮ್ನಲ್ಲಿ ದಿನಾ ಬೀಳೋ ಕಸದ ರಾಶಿ, ಫ್ಯಾಷನ್ನಾಗಿರೋ ಪೇಪರ್ […]

ಮೊದಲ ಸೂರ್ಯೋದಯ: ಪ್ರಜ್ವಲ್ ಕುಮಾರ್

  ವಾರದ ಕೊನೆ ಬಂತು ಅಂದ್ರೆ ಫ್ರೆಂಡ್ಸ್ ಎಲ್ಲಾ ಒಟ್ಟಾಗಿ ಸೇರಿ ಟ್ರಿಪ್ ಹೋಗೋದು ಕಾಮನ್ ಆಗಿದೆ. ಅದೇ ರೀತಿ ನಮ್ಮ ಗುಂಪೊಂದು ರಾತ್ರಿ ಟ್ರೆಕ್ಕಿಂಗಿಗೆ ಹೊರಟು ನಿಂತ್ವಿ. ಈ ಸಲ ಹೋಗೋಣಾ ಅನ್ಕೊಂಡಿದ್ದು ಚಂದಗಿರಿ ಅನ್ನುವ ಜಾಗಕ್ಕೆ. ಹಾಸನಕ್ಕೆ ಹೋಗುವ ದಾರಿಯಲ್ಲಿರುವ ಈ ಜಾಗವನ್ನು ನಮ್ಮ ಗುಂಪಲ್ಲಿ ಒಬ್ಬನನ್ನು ಬಿಟ್ಟರೆ ಬೇರೆ ಯಾರೂ ನೋಡಿರ್ಲಿಲ್ಲ. ಚಂದಗಿರಿಯ ತುದಿಯಲ್ಲಿ ಸೂರ್ಯೋದಯ ತುಂಬಾ ಚೆನ್ನಾಗಿ ಕಾಣುತ್ತೆ ಅನ್ನೋದನ್ನ ಕೇಳಿದ್ದ ನಾವು ಈ ಸಲ ಆ ಸೂರ್ಯೋದಯಕ್ಕೆ ಸಾಕ್ಷಿಯಾಗಲಿದ್ದೆವು. ಸೂರ್ಯ […]

ಸರ್ವತ್ರ:’ಪ್ರೀತೀಶ’

ಚಲಂ ನನ್ನ ಬೆನ್ನು ಹತ್ತಿಬಿಟ್ಟಿತ್ತು.  ಯಾವತ್ತೂ ನನ್ನ ಮಾತು ಮೀರದ ಚಲಂ ಇಂದು ಬೇಡಬೇಡವೆಂದರೂ, ನಾನು ಕೋರ್ಟಿಗೆ ಹೋಗುತ್ತಿದ್ದೇನೆ, ಅಲ್ಲಿ ನೀನು ಬರಬಾರದು ಎಂದು ಎಷ್ಟು ಹೇಳಿದರೂ ಕೇಳುತ್ತಿಲ್ಲ. ದಾರಿಯಲ್ಲಿ ಒಂದೆರಡು ಬಾರಿ ಸಿಟ್ಟಿಗೂ ಬಂದೆ.  ನನ್ನ ಸಿಟ್ಟಿಗೆ ಹೆದರಿ ಕಾಲು ಉದ್ದಕ್ಕೆ ಬಿಟ್ಟು ದಾರಿಯಲ್ಲಿ ಕುಳಿತುಕೊಂಡಿತು.  ಹಾಳಾಗಿ ಹೋಗಲಿ, ಮನೆ ದಾರಿ ಅದಕ್ಕೆ ಗೊತ್ತು, ಯಾವಾಗಲಾದರೂ ಮನೆಗೆ ಹೋಗಲಿ ಎಂದು ನಾನು ಬಿರಬಿರನೆ ನಡೆದುಬಿಟ್ಟೆ.  ಮೊದಲೇ ಅದರ ಹಟದಿಂದಾಗಿ ಆಫೀಸಿಗೆ ಹೋಗುವುದು ತಡವಾಗಿತ್ತು. ಕೋರ್ಟಿನ ಗೇಟು […]

ನಾಟಕಕಾರರಾಗಿ ಕುವೆಂಪು (ಭಾಗ-1): ಹಿಪ್ಪರಗಿ ಸಿದ್ದರಾಮ್

  ಸಮೃದ್ಧ ಕನ್ನಡ ಸಾಹಿತ್ಯ ಪ್ರಕಾರದ ಬೆಳವಣಿಗೆಯಲ್ಲಿ ಇಪ್ಪತ್ತನೆಯ ಶತಮಾನವೆಂಬುದು ಹಲವಾರು ದೃಷ್ಟಿಕೋನಗಳಿಂದ ವಿಶಿಷ್ಟ ಮತ್ತು ಅಪರೂಪದ ನವೋದಯ ಕಾಲವಾಗಿ ಬೆಳೆದಿರುವುದು ಸಾಹಿತ್ಯಾಸಕ್ತರಿಗೆ ಗೊತ್ತಿರುವ ಸಂಗತಿಯಾಗಿದೆ. ಆಂಗ್ಲರ ಆಳಿಕೆಯ ದೆಸೆಯಿಂದಾಗಿ ಭಾಷೆಯೆಂಬ ಸಂವಹನ ಸಾಧನದ ಮೂಲಕ ಪಡೆದುಕೊಂಡ ಪರಿಜ್ಞಾನದ ವಿವಿಧ ಮಗ್ಗಲುಗಳು ದೇಶದ ಪ್ರಜ್ಞಾವಂತರ ಮನಸ್ಸನ್ನು ತಾಕಿದ್ದು ಸುಳ್ಳೇನಲ್ಲ. ಇದರ ಪರಿಣಾಮವಾಗಿ ಸಾಹಿತ್ಯಕ್ಷೇತ್ರವೂ ಪ್ರಚೋಧಿತವಾದಂತಾಯಿತು. ಸಾಹಿತ್ಯವು  ಹಲವಾರು ಮಗ್ಗಲುಗಳನ್ನು ಕಂಡುಕೊಂಡಂತೆ ರಂಗಭೂಮಿಯಲ್ಲಿಯೂ ವಿವಿಧ ಪ್ರಕಾರದ ವಿಭಿನ್ನ ಪ್ರದರ್ಶನ-ಪ್ರಯೋಗಗಳು ಚಾಲ್ತಿಗೆ ಬಂದು, ಸಾಹಿತಿಗಳು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗದೇ […]

ಮೂವರ ಕವಿತೆಗಳು: ಕಮಲ ಬೆಲಗೂರ್, ನರಸಿಂಹಮೂರ್ತಿ ಎಂ.ಎಲ್., ಮಾಧವ

  ಬಡವ ಸಿರಿಯು ಬರಿದಾದ  ಸಾಮ್ರಾಜ್ಯದಿ  ಗರಿಕೆದರಿದೆ ಬದುಕು ….    ಬೇಡಿಕೊಂಡಿದ್ದಲ್ಲ  ಅರಸೊತ್ತಿಗೆ  ವಂಶಪಾರಂಪರ್ಯವಾಗಿ  ಸಂದ ಬಳುವಳಿ  ಅವನ ಬದುಕಿಗೇ …..    ಮಾಡು ಗೋಡೆಗಳಿಲ್ಲದ  ಗೂಡೇ ಅವನರಮನೆಯು  ಕಡುಕೋಟಲೆಗಳ  ಹಾರತುರಾಯಿ  ತಾತ್ಸಾರ ಕುಹಕಗಳ  ಬಹು ಪರಾಕು….    ಹುಟ್ಟಿಗೆ ಸಂಭ್ರಮವಿಲ್ಲ  ಸಾವಿಗೆ ಶೋಕವಿಲ್ಲ  ಎಲ್ಲವೂ ಆಕಸ್ಮಿಕವಿಲ್ಲಿ  ನಿಟ್ಟುಸಿರು, ಹಸಿವು  ಆಕ್ರಂದನಗಳ  ಜೋಗುಳದೊಂದಿಗೆ  ಬದುಕಿನ ಸೋಪಾನ …..    ಹಾಸಿಗೆಯಿದ್ದಷ್ಟೇ  ಕಾಲು  ಚಾಚೆಂಬ ಪರಿಪಾಠ  ಪಟ್ಟು ಬಿಡದ ಹಠ  ಪ್ರಾಮಾಣಿಕತೆಯಾ ಶ್ರೀರಕ್ಷೆ ….   ಸಿರಿಯು […]

ಕಟ್ಟೆಯಲ್ಲೊ೦ದಿಷ್ಟು ಹರಟೆ: ವೆಂಕಟೇಶ್ ಪ್ರಸಾದ್

  ಬೆ೦ಗಳೂರಿನಲ್ಲಿ ಆರು ತಿ೦ಗಳ ಬಿಡುವಿಲ್ಲದ ಕೆಲಸದ ಬಳಿಕ ತುಸು ವಿಶ್ರಾ೦ತಿ ಬಯಸಿ ಊರಿಗೆ ಬ೦ದಿದ್ದೆ. ಈ ಆರು ತಿ೦ಗಳಿನಲ್ಲಿ ಓದುವುದು, ಬರೆಯುವುದು ಎರಡೂ ಉದಾಸೀನವೆ೦ಬ ಹೊದಿಕೆ ಹೊದ್ದುಕೊ೦ಡು ಮಕಾಡೆ ಮಲಗಿತ್ತು! ಈ ಬಾರಿ ಏನಾದರು ಬರೆಯೋಣವೆ೦ದು ಲ್ಯಾಪ್ ಟಾಪ್ ನೆದುರು ಫ್ಯಾನಿನ ಕೆಳಗೆ ಕುಳಿತಿದ್ದೆ, ಏನಾಯಿತೊ ಏನೋ ಧುತ್ತನೆ ಕರೆ೦ಟ್ ಹೋಯಿತು. ಬಿಸಿಲ ಬೇಗೆಗೆ ಬೆವರ ಪ್ರವಾಹ ಪ್ರಾರ೦ಭವಾಯಿತು, ತುಸು ಬಾಯಾರಿದ೦ತಾಗಿ ನೀರು ಕುಡಿಯಲು ಅಡುಗೆ ಮನೆಗೆ ಹೋದರೆ ಫಿಲ್ಟರ್ ನಲ್ಲಿ ನೀರು ಖಾಲಿಯಾಗಿತ್ತು. ಸರಿ, […]