ಬದುಕಿದು ಸುಂದರ. . .: ಧೀರೇಂದ್ರ ನಾಗರಹಳ್ಳಿ.

‘ಅವನು’  ವಿಪರೀತವಾದ ಗೊಂದಲದಲ್ಲಿ ಮುಳುಗಿದ್ದ. ತನ್ನ ಸ್ನೇಹಿತನಾದ ‘ಇವನಿ’ಗೆ ಯಾವುದೋ ಒಂದು ಮಾಹಿತಿ ಕೊಡಲು ವಿನಂತಿಸಿದ್ದ. ಅದಕ್ಕೆ ಪ್ರತ್ಯತ್ತರವಾಗಿ ಇವನು,  ಅವನು ಕೇಳಿದ್ದ ಮಾಹಿತಿಯನ್ನೇನೋ  ಒದಗಿಸಿದ್ದ. ಅದನ್ನು ಯಥಾವತ್ತಾಗಿ ಸ್ವೀಕರಸೊವುದೋ ಅಥವಾ ತುಸುವಷ್ಟೇ ತೆಗೆದು ಕೊಂಡು ಉಳಿದದ್ದನ್ನು ಬಿಟ್ಟುಬಿಡಬೇಕೋ?. ಅವನು ಆ ಮಾಹಿತಿಯನ್ನು ಈ ತರಹದ  ಗುಮಾನಿಯಿಂದ ನೋಡುವುದಕ್ಕೆ ಕಾರಣ, ಆ ಮಾಹಿತಿಯಲ್ಲಿ ಇವನು ಕುಳಿತಿದ್ದ. ಇವನು ಕುಳಿತಿದ್ದ ಆ ಮಾಹಿತಿಯಲ್ಲಿ ಅವನಾಗಿರುವ ಇವನಿರಲಿಲ್ಲ. ಹೀಗಾಗಿ ಈ ಮಾಹಿತಿಯನ್ನು ಸ್ವೀಕರಿಸುವುದೋ ಅಥವಾ ಬೇಡವೂ ಎನ್ನುವ ಗೊಂದಲದಲ್ಲಿದ್ದ. ಆದರೆ … Read more

ಹೊಸ ಚೈತನ್ಯ ನೀಡುವ ಹಬ್ಬ ಯುಗಾದಿ: ಡಾ. ಶಿವಕುಮಾರ ಎಸ್‌. ಮಾದಗುಂಡಿ

ಪ್ರಾಚೀನ ರೋಮನ್ ಕವಿ ಓವಿಡ್ ಒಮ್ಮೆ ಜ್ಯೋತಿಷಿ ಜಾನುಸ್ನನ್ನು ಕೇಳಿದ: ‘ಹೊಸ ವಷ೯ ಜನವರಿಯಿಂದಲೇ ಏಕೆ ಆರಂಭವಾಗಬೇಕು’? ಎಂದು. ಅದಕ್ಕೆ ಜ್ಯೋತಿಷಿ ಹೇಳಿದರೂ ಜನವರಿ ತಿಂಗಳಿನಲ್ಲಿ ಸೂರ್ಯ ಮಕರ ರಾಶಿ ಪ್ರವೇಶಿಸುತ್ತಾನೆ. ಅಂದಿನವರೆಗೆ ಹಿಮದಿಂದ ಮಂಕಾಗಿದ್ದ ಜಗತ್ತು ಅಂದಿನಿಂದ ಸ್ವಚ್ಛವಾಗಿ ಜನತೆಯಲ್ಲಿ ಹೊಸ ಉತ್ಸಾಹ, ನವೋದಯ ಆರಂಭವಾಗುವುದರಿಂದ ಅಂದಿನಿಂದ ಹೊಸವರ್ಷದ ಆರಂಭ ಎಂದು ಹೇಳಿದರು. ಆದರೆ, ಸಾಮಾನ್ಯವಾಗಿ ಹೊಸ ವರ್ಷ ಎಂದರೆ ಜಗತ್ತಿನಲ್ಲಿ ಜನವರಿ ಒಂದು ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ, ಆ ದಿನ ಮನೆಯ ಗೋಡೆಯ … Read more

ಮನದಲಿ ಮೂಡಿದ ಸಂಭ್ರಮದ ಯುಗಾದಿ: ಪಿ. ಕೆ. ಜೈನ್ ಚಪ್ಪರಿಕೆ.

ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ಹವಮಾನದಲ್ಲಿ ಹಾಗೂ ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗಳಿಗೆ ಋತುಗಳು ಎನ್ನುತ್ತೇವೆ. ಭಾರತೀಯರ ಪದ್ಧತಿಯಲ್ಲಿ 6 ಋತುಗಳಿದ್ದು ವಸಂತ ಋತುವು ಹಿಂದೂ ವರ್ಷದ ಆರಂಭದ ಋತುವಾಗಿದೆ. ಒಂದೊಂದು ಋತುವಿಗೂ ಎರಡು ಮಾಸಗಳಿದ್ದು ಚೈತ್ರ ಮತ್ತು ವೈಶಾಖ ಮಾಸಗಳು ವಸಂತ ಋತುವಿನಡಿಯಲ್ಲಿ ಬರುತ್ತವೆ. ಹೀಗೆ ಚೈತ್ರ ಮಾಸ ಶುಕ್ಲ ಪಕ್ಷದಲ್ಲಿ ಬರುವ ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸುತ್ತೇವೆ. ಯುಗಾದಿಯು ದಕ್ಷಿಣ ಬಾರತದ ಜನರಿಗೆ ವರ್ಷದ ಮೊದಲ ಹಬ್ಬವಾಗಿ ಉತ್ತರ ಭಾರತದವರಿಗೆ ಇದು ಹೋಳಿಯ ನಂತರ ಬರುವ … Read more

ಹರಕೆ ಸಂದಾಯ: ಕೃಷ್ಣವೇಣಿ ಕಿದೂರು

ನಮ್ಮ ತುಳು ಭಾಷೆಯಲ್ಲಿ ಒಂದು ಮಾತಿದೆ. ಯಾರಿಗಾದರೂ ಒಂದು ಕೆಲಸ ಒಪ್ಪಿಸಿದಾಗ ಅಸಡ್ಡೆಯಿಂದ ಅಥವಾ ಉಡಾಫೆಯಿಂದ ಅರೆಬರೆ ಮಾಡಿದ್ದು ಕಂಡಾಗ ’ ಉಂದ್ ಎಂಚಿನ? ಪರಕೆ ಸಂದಾಯನಾ” (ಏನಿದು ? ಹರಕೆ ಸಂದಾಯವಾ ಅಂತ ಕೇಳುವುದು. ಕನ್ನಡದಲ್ಲಿಯೂ ಅದೇ ಅರ್ಥದ ಮಾತು ಉಂಟು. ಮಾಡುವ ಕಾರ್ಯವನ್ನು ಔದಾಸಿನ್ಯದಿಂದ ಅರ್ಧಮರ್ಧ ಮಾಡಿದಾಗ ಅದಕ್ಕೆ ಹೆಸರೇ’’ ಹರಕೆ ಸಂದಾಯವಾ” ಅಂತ ಸಣ್ಣಕ್ಕೆ ಗದರಿಸುವುದು. ಒಪ್ಪಿಸಿದ ಕೆಲಸ ಒಪ್ಪವಾಗಿ ಮಾಡಿದಾಗ ಅಂಥ ಮಾತಿಗಲ್ಲಿ ಎಡೆಯಿಲ್ಲ. ಬದಲಿಗೆ ಮೆಚ್ಚುಗೆ, ಪ್ರಶಂಸೆ , ಅಭಿಮಾನ … Read more

ಪ್ರಸವ ಕಾಲ….: ಆಶಾಜಗದೀಶ್

  ಮನೆ ಮುಂದಿನ ಮಲ್ಲಿಗೆ ತನ್ನ ಎಂದಿನ ತನ್ಮಯತೆಯಲ್ಲಿ ತಾರಸಿಯ ಮೇಲೆ ಧ್ಯಾನಸ್ಥವಾಗಿತ್ತು. ಮಿಸುಗಾಡುವ ಒಡಲು ಅದಕ್ಕೊಂದು ಗರ್ಭಿಣಿಯ ಕಳೆ ತಂದಿತ್ತಿತ್ತು. ಅದೂ ತೀರಾ ಇತ್ತೀಚಿನಿಂದ ಹೀಗೆ….. ಅದು ನವೆಂಬರ್ ಡಿಸೆಂಬರಿನ ಸಂದರ್ಭ… ಗುಬ್ಬಿಯೊಂದು ತನ್ನ ಸಂಗಾತಿಯೊಂದಿಗೆ ಬಾಣಂತನಕ್ಕಾಗಿ ಬಂದಿತ್ತು… ಹೀಗೆ ಹಕ್ಕಿಗಳು ಮೇಲಿಂದ ಮೇಲೆ ನಮ್ಮ ತೋಟವಲ್ಲದ ಪುಟ್ಟ ತೋಟಕ್ಕೆ ಬರುವುದು ಮಾಮೂಲೇ ಇತ್ತಾದರೂ ಪ್ರತಿ ಬಾರಿಯೂ ಹೋಸದೆಂಬಂತಹ ಉತ್ಸಾಹ ಮಾತ್ರ ನಮ್ಮನ್ನು ಅದೇಕೆ ತುಂಬುತ್ತಿತ್ತೋ ಗೊತ್ತಿಲ್ಲ… ಬಹುಶಃ ಹುಟ್ಟು ಎನ್ನುವುದು ಸಕಲ ಜೀವರಾಶಿಯೊಳಗೆ ಪ್ರವೇಶಿಸುವಾಗ … Read more

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ…?: ರಮೇಶ್ ವಿ

ಆಸೆ ಯಾರಿಗಿರಲ್ಲ  ಹೇಳಿ! ಪ್ರತಿಯೊಬ್ಬ ಮನುಷ್ಯನಿಗೂ ಅವನೆದೆಯಾದಂತ ಆಸೆ ಆಕಾಂಕ್ಷೆ ಇರುತ್ತೆ, ಅವನ ಆಸೆಯೇ ನಾಳೆಗೆ ಪ್ರೇರಣೆ, ಭರವಸೆ ಹಾಗು ಮುನ್ನುಡಿ. ಆದ್ರೆ ಅದು ದುಃಖದ ಮೂಲವು ಹೌದು. ನನಗು ನನ್ನ ತಂದೆ ಉಳಿಸಿಕೋ ಬೇಕೆಂಬ ಮಹದಾಸೆ ಇತ್ತು ಆದ್ರೆ ಕಡೆಯಲ್ಲಿ ನಮ್ಮಾಸೆ ಜೊತೆ ಅಪ್ಪನಿಗೂ ಎಳ್ಳು ನೀರು ಬಿತ್ತಂತಾಯಿತು! ನನ್ನ ಅನುಭವದ ಮಾತು…! ಮಾರ್ಚ್ ೨೦೧೭ ಅಪ್ಪನಿಗೆ ೬೦ ವಸಂತ ತುಂಬಿದಾಗ ಷಷ್ಠಿಪೂರ್ತಿ ಪೂಜೆ ಮಾಡಲಾಗಲಿಲ್ಲ, ಈಗ ೭೦ ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಷಷ್ಠಿಪೂರ್ತಿ … Read more

ಯಶೋದೆ: ಪ್ರೇಮಾ ಟಿ ಎಂ ಆರ್

ಲೇಡೀಸ್ ಕ್ಲಬ್ ನಲ್ಲಿ ನವರಾತ್ರಿ ಉತ್ಸವ. ಕೈಯ್ಯಲ್ಲಿ ಪೂಜಾ ಸಾಮಗ್ರಿ ಹಿಡಿದು ಹಿಡಿದು ಗಡಿಬಿಡಿಯಲ್ಲೇ ಹೊರಟಿದ್ದಳು ಕವನ. ಹಿಂದಿಂದ ಬಂದ ಬೈಕೊಂದು ಅವಳನ್ನು ದಾಟಿಕೊಂಡು ನಾಲ್ಕು ಮಾರು ಮುಂದೆ ನಿಂತಿತು. ಬೈಕ್ ಸವಾರ ಹೆಲ್ ಮೆಟ್ ತೆಗೆದು ಸಣ್ಣಗೆ ನಕ್ಕರು. ಈ ವ್ಯಕ್ತಿಯನ್ಬ ಎಲ್ಲೋ ನೋಡಿದ ನೆನಪು ಎಲ್ಲಿ ? ತಲೆಕೆರೆದುಕೊಂಡಳು ಕವನ. ಓ ಹೌದಲ್ವಾ ತಾನು ಗೇಟಿಗೆ ಬೀಗ ಸಿಕ್ಕಿಸುವಾಗ ಎದುರುಗಡೆ ಮನೆಯ ಅಂಗಳದಲ್ಲಿ ನಿಂತಿದ್ದರು ಆ ವ್ಯಕ್ತಿ . ಕಳೆದ ವಾರವಷ್ಟೇ ಆ ಮನೆಯ … Read more

ಹೊಸ್ತಿನ ಮನೆ ಸ್ಮಶಾನವಾದಾಗ: ಪ್ರವೀಣ್ ಶೆಟ್ಟಿ

ಅಂದೇಕೋ ಅವನು ತುಂಬಾ ಖುಷಿಯಾಗಿದ್ದ! ತಂಗಿ ಬೆಂಗಳೂರಿನಿಂದ ಬಂದ ಖುಷಿ, ಅದರ ಜೊತೆ ನಾಳೆ ಅಂದರೆ ಹೊಸ್ತು ಬೇರೆ. ಮನೆಯಲ್ಲಿ ಎಂದೋ ಕಳೆದುಹೊಗಿದ್ದ ಸಂಭ್ರಮ ಬೇರೆ. ಎಲ್ಲ ಅಣ್ಣ-ಅಕ್ಕ-ತಂಗಿ ಒಟ್ಟಾಗಿ ವರುಷಗಳೇ ಕಳೆದಿತ್ತು. ಎಲ್ಲಾ ಸೇರಿ ಹೊಸ್ತು ಮಾಡುವ ಸಂಭ್ರಮ ಮನೆಮಾಡಿತ್ತು. ಅವನು ಸೀತಾರಾಮ ಮೂವರು ಒಡಹುಟ್ಟಿದ ತಂಗಿಯರೊಂದಿಗೆ ಒಬ್ಬನೇ ಮಗ. ಟಿಸಿಎಚ್ ಮಾಡಿ ಸರಕಾರಿ ಕೆಲಸಕ್ಕಾಗಿ ಅರ್ಜಿ ಗುಜರಾಯಿಸಿ ಕಾಯುತ್ತಿದ್ದ. ಹಾಗೆ ತಂದೆಯ ವ್ಯವಹಾರಲ್ಲಿ ಕೈ ಜೊಡಿಸಿದ್ದ. ಅದೇ ಸಮಯಕ್ಕೆ ಸರಿಯಾಗಿ ಗ್ರಾಮೀಣ ಕೃಪಾಂಕದ ಅಡಿಯಲ್ಲಿ … Read more

ಆಧುನಿಕ ವಿಜ್ಞಾನಕ್ಕೆ ಸವಾಲಾದ ಪುರಾತನ ಸಲಕರಣೆಗಳು: ಆರ್.ಬಿ.ಗುರುಬಸವರಾಜ ಹೊಳಗುಂದಿ

21ನೇ ಶತಮಾನದಲ್ಲಿ ನಮ್ಮ ಪೂರ್ವಜರ ಹೆಚ್ಚಿನ ಸಹಾಯವಿಲ್ಲದೇ ನಾವು ಮಹತ್ತರವಾದ ಮತ್ತು ಪ್ರಬಲವಾದ ತಾಂತ್ರಿಕ ಸಾಮ್ರಾಜ್ಯವನ್ನು ಸಾಧಿಸಿದ್ದೇವೆಂದು ಭಾವಿಸುತ್ತೇವೆ. ಆದರೆ ಭಾವಿಸಿದಂತೆ ಇದು ಸತ್ಯವಲ್ಲ. ಇತ್ತೀಚಿನ ಸಂಶೋಧನೆ ಎಂದು ಹೇಳುವ ಬಹುತೇಕ ವಸ್ತುಗಳನ್ನು ನಮ್ಮ ಪೂರ್ವಜರು ಆಗಲೇ ಬಳಸಿದ್ದರು ಮತ್ತು ನಾವು ಈಗ ಯೋಚಿಸುವುದಕ್ಕಿಂತ ಮುಂಚಿತವಾಗಿ ಅವರು ವೈಜ್ಞಾನಿಕವಾಗಿ ಮುಂದುವರೆದಿದ್ದರು ಎನ್ನುವುದಕ್ಕೆ ಕೆಲವೊಂದು ನಿದರ್ಶನಗಳು ದೊರೆಯುತ್ತವೆ. ಅಂತಹ ಕೆಲ ಸಲಕರಣೆಗಳೇ ನಮ್ಮ ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಹಾಗೂ ವಿವಿಧ ಸಂಶೋಧನೆಗಳಿಗೆ ಪ್ರೇರಣೆಯಾಗಿವೆ. ಹಾಗಾದರೆ ಆ ವಸ್ತುಗಳು ಯಾವುವು? … Read more

ಚಿಗುರಿನ ಮುನ್ನ: ಮಂಜು ಹೆಗಡೆ

“ನಂಗೆ ನಿನ್ನಿಂದ ಒಂದು ಮಗು ಬೇಕು, ಪ್ಲೀಸ್ ಇಲ್ಲ ಅನ್ನಬೇಡ. ನಾನು ಜೀವನದಲ್ಲಿ ಒಂಟಿ ಆಗ್ಬಿಡ್ತೀನಿ. ನೆಮ್ಮದಿ, ನನ್ನ ಜೀವನಕ್ಕೆ ಭರವಸೆಗಾದ್ರು ಬೇಕು. ಇದು ಕೋನೆಯ ಆಸೆ, ಇಲ್ಲ ಅನ್ನಬೇಡಿ. ” ಅಂತ ಗಾಯತ್ರಿ ಗೋಗರಿತಾ ಇದ್ದಾಗ ರಾಘವ ಮೌನವಾಗಿದ್ದ. ‘ಇಲ್ಲ ಕಣೆ ಏನ್ ಹೇಳಬೇಕು ತಿಳಿತಿಲ್ಲ, ನಿನ್ನ ಮಾತು ಒಮ್ಮೆಲೆ ಬಾಂಬ್ ಬಿದ್ದಾಗೆ ಆಗಿದೆ. ‘ ಏಕಾಂತದಲ್ಲೂ ವೈರುಧ್ಯದ ಭಾವ. ‘ಹಾಗಲ್ಲ ರಾಘವ 7ವರ್ಷ ಆಯ್ತು ನಂದು ನಿಂದು ಪರಿಚಯ, ಮದುವೆ ಆದಾಗಿಂದ ನಾನು ಪಟ್ಟ … Read more

ಮೋಹಕ ತಿರುವು: ಕಮಲ ಬೆಲಗೂರ್.

ಪಾರ್ವತಿ ಒಲೆಯ ಮುಂದೆ  ಕುಳಿತು ರೊಟ್ಟಿ ಮಾಡ್ತಿದ್ದಾಳೆ. ಯಾಂತ್ರಿಕವಾಗಿ ಕೈ ಕೆಲಸಮಾಡುತ್ತಿದ್ದರೂ ಮನಸ್ಸು ಗಾಢವಾದ ಯೋಚನೆಯಲ್ಲಿ ಸಿಲುಕಿದೆ. ಕಣ್ಣು ಗಳು ಉರಿಯನ್ನೇ ದಿಟ್ಟಿಸಿ ನೋಡುತ್ತಿವೆ. ಮನಸ್ಸು ಮಗನ ಬಗ್ಗೆ ಯೋಚಿಸುತ್ತಾ ಕೊರಗುತ್ತಿದೆ. ಮಗನ ಸಂಸಾರವನ್ನು ನೋಡುತ್ತಾ ಕಣ್ತುಂಬಿಸಿಕೊಳ್ಳಬೇಕೆಂಬ ಆಸೆ ಆಸೆಯಾಗಿಯೇ ಉಳಿದುಬಿಟ್ಟಿದೆ. ಪಾರ್ವತಿ ವಿಧವೆ. ಮಗ ಸೋಮು ಪ್ರತಿಭಾವಂತ. ಚಿಕ್ಕಂದಿನಲ್ಲಿಯೇ ಅಪ್ಪನನ್ನು ಕಳೆದುಕೊಂಡು ಬೆಳೆದ ಅವನಿಗೆ ಅಮ್ಮನೇ ಸರ್ವಸ್ವ. ಅಪ್ಪನ ಕೊನೆಯ ಆಸೆಯಂತೆ ಅವರ ಸ್ನೇಹಿತರ ಮಗಳೊಂದಿಗೆ ಅವನ ಬಾಲ್ಯ ವಿವಾಹವಾಗಿರುತ್ತದೆ. ತಂದೆಯ ಮರಣಾನಂತರ ಎರಡೂ ಕುಟುಂಬಗಳು … Read more