ಬದುಕಿದು ಸುಂದರ. . .: ಧೀರೇಂದ್ರ ನಾಗರಹಳ್ಳಿ.

‘ಅವನು’  ವಿಪರೀತವಾದ ಗೊಂದಲದಲ್ಲಿ ಮುಳುಗಿದ್ದ. ತನ್ನ ಸ್ನೇಹಿತನಾದ ‘ಇವನಿ’ಗೆ ಯಾವುದೋ ಒಂದು ಮಾಹಿತಿ ಕೊಡಲು ವಿನಂತಿಸಿದ್ದ. ಅದಕ್ಕೆ ಪ್ರತ್ಯತ್ತರವಾಗಿ ಇವನು,  ಅವನು ಕೇಳಿದ್ದ ಮಾಹಿತಿಯನ್ನೇನೋ  ಒದಗಿಸಿದ್ದ. ಅದನ್ನು ಯಥಾವತ್ತಾಗಿ ಸ್ವೀಕರಸೊವುದೋ ಅಥವಾ ತುಸುವಷ್ಟೇ ತೆಗೆದು ಕೊಂಡು ಉಳಿದದ್ದನ್ನು ಬಿಟ್ಟುಬಿಡಬೇಕೋ?. ಅವನು ಆ ಮಾಹಿತಿಯನ್ನು ಈ ತರಹದ  ಗುಮಾನಿಯಿಂದ ನೋಡುವುದಕ್ಕೆ ಕಾರಣ, ಆ ಮಾಹಿತಿಯಲ್ಲಿ ಇವನು ಕುಳಿತಿದ್ದ. ಇವನು ಕುಳಿತಿದ್ದ ಆ ಮಾಹಿತಿಯಲ್ಲಿ ಅವನಾಗಿರುವ ಇವನಿರಲಿಲ್ಲ. ಹೀಗಾಗಿ ಈ ಮಾಹಿತಿಯನ್ನು ಸ್ವೀಕರಿಸುವುದೋ ಅಥವಾ ಬೇಡವೂ ಎನ್ನುವ ಗೊಂದಲದಲ್ಲಿದ್ದ. ಆದರೆ ಅವನ ಈ ವಿಚಾರ ಧಾರೆಗೆ ಇನ್ನೊಂದು ಆಯಾಮವೂ ದೊರಕಿತ್ತು. ಎಷ್ಟೋ ಬಾರಿ ಇವನು ಇರದ ಮಾಹಿತಿಯೂ ಅವನ ಮಾಹಿತಿಯಾಗಿರುತ್ತದೆ, ಅಂತ ಅನ್ನಿಸಿತ್ತು. ಅಲ್ಲದೆ ಅವನು ತಾನು ಇವನಾಗದ ಹೊರತು ಎಲ್ಲವೂ ಅರ್ದಂಬರ್ದ! ಅಲ್ಲದೆ ಅವನಿಗೆ ಈಗ ತಾನು ಇವನಾಗಬೇಕು ಎನ್ನುವ ಹಂಬಲವೂ ಕಾಡ ಹತ್ತಿತ್ತು. ಹೀಗೆ ಅವನು  ಮತ್ತು ಇವನು  ಎನ್ನುವ ಅನಗತ್ಯ ಸ್ವಗತದೊಂದಿಗೆ ಚಿತ್ರಮಂದಿರದ ಮುಂದೆ ಜಾಮಾಸಿದ್ದ ಜನ ನೂಕಿತ್ತು. ಜನ ಅವನನ್ನು ತಳ್ಳುತ್ತಾ  ಸಾಗಿದಾಗಲೇ  ಅರಿವಾಗಿದ್ದು ತಾನಿರುವುದು ಚಿತ್ರ ಮಂದಿರದ ಮುಂದೆ ಇರವುದು ಅಲ್ಲದೆ ತಾನು ಬಂದಿರವುದು ಸಿನಿಮಾಕ್ಕಾಗಿ.

ಅದೇ ಸರಭರದಲ್ಲಿ ಜನರ ತಿಕ್ಕಾಟದಲ್ಲಿ ಒಳಗೆ ನಡೆದು ಹೋದ, ಅವನು. ಎಲ್ಲಾ ಬಾಗಿಲುಗಳು ಢಾಳವಾಗಿ ತೆರೆದೆ ಇದ್ದವು. ಮೂಲೆಗೆ ಸರಿಸಿದ್ದ ಕಡು ನೀಲಿ ಬಣ್ಣದ ಪರದೆ ಸರಿಸಿ ಒಳ ನಡೆದ. ಎಲ್ಲಾ ಕುರ್ಚಿಗಳು ಖಾಲಿ ಖಾಲಿ. ಅಲ್ಲೊಂದು ಇಲ್ಲೊಂದು ಕುರ್ಚಿ ಮಾತ್ರ ಭರ್ತಿಯಾಗಿದ್ದವು. ಮೆಟ್ಟಿಲುಗಳನ್ನು ಏರುತ್ತಾ ಹಿಂದಿನ ಸಾಲಿನ ಕರ್ಚಿಯನ್ನು ಅಲಂಕರಿಸಿದ. ತನ್ನ ಅಕ್ಕ ಪಕ್ಕದಲ್ಲಿದ್ದ ಫ್ಯಾನು, ನೇರಾ –ನೇರಾ ಕಾಣಿಸದ ಪರದೆ, ಕಿರಿ ಕಿರಿಯಾಗದ ಶಬ್ದ ಮತ್ತು ಧ್ವನಿ  ವ್ಯವಸ್ಥೆ ಮತ್ತು ಇತ್ಯಾದಿ ತರ್ಕಗಳನ್ನು ಹಾಕಿ ತಾನು ಕುಳಿತುಕೋಳ್ಳುವ ಸ್ಥಾನವನ್ನು ನಿಗದಿ ಪಡಿಸಿದ್ದ. ಚಿತ್ರ ಮಂದಿರ ನಿಧಾನವಾಗಿ ಭರ್ತಿಯಾಗುತ್ತ ಹೋಯಿತು. ಪ್ರತಿಯೊಬ್ಬರೂ ಅವರದೇ ಆದ ತರ್ಕಗಳೊಂದಿಗೆ ತಮ್ಮ ತಮ್ಮ ಸ್ಥಾನಗಳಲ್ಲಿ ಆಸೀನರಾದರು. ಇನ್ನು ಕೊನೆ ಕೊನೆಗ ಬಂದವರು ತಮಗೆ ಯಾವುದೇ ಆಯ್ಕೆಗಳಿಲ್ಲದೆ ಸಿಕ್ಕ ಸಿಕ್ಕ ಅವಕಾಶಗಳಿಗೆ ತಮ್ಮದೇ ಆದ ತರ್ಕಗಳನ್ನು ಹೊಂದಿಸಿ ಎಲ್ಲವೂ ಸರಿಯಾಗಿದೆ ಎಂದು ಕೊಂಡು ಹುಳಿ ಹುಳಿ ಮನಸ್ಸಿನಿಂದಲೇ ಒಪ್ಪಿಕೊಂಡರು. ಎಲ್ಲಾ ದೀಪಗಳು ಆರಿದವು ಕೇವಲ ಚಿಕ್ಕ ಚಿಕ್ಕ ದೀಪಗಳು ಮಾತ್ರ ಉರಿಯುತ್ತಲಿದ್ದವು. ಅವನು ಥಟ್ಟನೇ ಬಾಗಿಲ ಬಳಿ ನೋಡಿದ ಎನೋ ಒಂದು ಆಶ್ಚರ್ಯ ವೆನಿಸಿತ್ತು. ಕಾರಣ ಇಷ್ಟೆ, ಬಾಗಿಲಿಗೆ ಹಾಕಿದ್ದ ಕಡು ನೀಲಿ ಬಣ್ಣದ ಪರೆದ ಕಾಣದಾಗಿ ಕಪ್ಪು ಬಣ್ಣದ ಪರೆದು ಬಂದಿತ್ತು. ಮತ್ತೊಮ್ಮೆ ಮನದ ಮೂಲೆಯ ಪರದೆ ಸರಿದಿತ್ತು. ತಾನು ನೋಡಿದ ನೀಲಿ ಬಣ್ಣದ ಪರದೆ ನಿಜವೋ ಅಥವಾ ಈಗ ನೋಡತ್ತಿರುವ ಪರದೆ ನಿಜವೋ?ಎಲ್ಲಾ ದೀಪಗಳು ಆರಿದ ಮೇಲೆ ಗೋಡೆಗೆ ಹೊಂದಿಸಿದ್ದ ಫ್ಯಾನ್ ನ ಹಿಂದೆ ಇನ್ನೊಂದು ಫ್ಯಾನ್ ಕೂಡ ಕಾಣಿಸಿತು. ವಾಸ್ತವದಲ್ಲಿ ಅಲ್ಲಿ ಇದ್ದದ್ದು ಕೇವಲ ಒಂದೇ ಒಂದು ಪ್ಯಾನು ಆದರೆ ಚಿಕ್ಕ ದೀಪಗಳ ಬೆಳಕಿನಲ್ಲಿ ಫ್ಯಾನ್ ನ ಕೆಳಗೆ ಆ ಫ್ಯಾನ್ ನ ನೆರೆಳು ಕಾಣಿಸಿತ್ತು. ನಾಯಕ ಸಿನಿಮಾದಲ್ಲಿ ಆರ್ಭಟಿಸಿದಾಗಲಂತು ಎಷ್ಟೋ ಪ್ರಕ್ಷಕರು ಹುಚ್ಚೆದ್ದು ಕುಣಿಯುತ್ತದ್ದರು. ಇವರೆಲ್ಲಾ ಏಕೆ ಹೀಗೆ ಮಾಡುತ್ತಿದ್ದಾರೆ?ಎನ್ನುವ ಪ್ರಶ್ನೆಗೆ ಇವರ್ಯಾರು ಅವರಾಗಿಲ್ಲ ನಾಯಕ ಆರ್ಭಟಿಸುತ್ತಿರುವಾಗ ಅವರೆಲ್ಲಾ ಇನ್ಯಾರೊ ಅಗಿರುತ್ತಾರೆ  ಹಾಗಾಗಿ ಹೀಗೆ ಮಾಡುತ್ತಾರೆ ಎನ್ನುವ ತರ್ಕ ಕೊಟ್ಟು ಸುಮ್ಮನಾದ. ತನ್ನೆಲ್ಲಾ ಸ್ವಗತಗಳೂ ಅನಗತ್ಯ ಎಂದು ಎಷ್ಟೋ ಬಾರಿ ಅನ್ನಿಸಿತ್ತು ಆದರೂ ತೀರಾ ಅನಿವಾರ್ಯ ಎನ್ನುವಂತೆ ಎಲ್ಲಿ ಎಂದರೆ ಅಲ್ಲಿ ಅವನನ್ನು ಗಂಟು ಬೀಳುತ್ತಿದ್ದವು. ಸಿನಿಮಾ ಹಾಗೆಯೇ ಮುಂದುವರೆದಿತ್ತು. ಮತ್ತೊಮ್ಮೆ ಸ್ವಗತ ಶರುವಾಗಿತ್ತು. ನಾನು ಇವನಾಗಲ್ಲ, ಇವನು ನಾನಗಲ್ಲ, ನಾನು ಇವನಾಗದೆ ಇವನು ನಾನಾಗದೆ ಎಲ್ಲೂ ಪೂರ್ಣ ಅರ್ಥವಾಗಲ್ಲ. ಅವನು ಮತ್ತ ಇವನು ಮಾತಾಡುವಾಗ ಅಲ್ಲಿ ಕೇವಲ ಅವನು ಮತ್ತು ಇವನು ಇರಲಿಲ್ಲ . ಅವನು ಮಾತಾಡುವಾಗ ಅವನಿದ್ದ. ಅವನ ಮಾತನ್ನು ಕೇಳಿಸಿಕೊಂಡ ಇವನಿದ್ದ. ಇವನಳೊಗಿನ ಅವನೂ ಇದ್ದ ಅಲ್ಲದೆ ಇವನೊಳಗಿನ ಇವನೂ ಇದ್ದ. ಅಂದರೆ ಒಟ್ಟಾರೆಯಾಗಿ ನಾಲ್ಕು ಜನರಿದ್ದರು. ಅವನ ಮಾತನ್ನು ಯಾರು ಹೇಗೆ ಗ್ರಹಿಸಿದ್ದಾರೆ ಅನ್ನುವ ಆಧಾರದ ಮೇಲೆ ಆ ಮಾತಿನ ಸಾರ್ಥಕತೆ ನಿಂತಿತ್ತು. ಇದಿಷ್ಟು ಸಿನಿಮಾ ಆ ಕಡೆ ಓಡುತ್ತಿದ್ದರೆ ಈ ಕಡೆ ಅವನ ತಲೆಯಲ್ಲಿ ಅವನು ಮತ್ತು ಇವನು ಕಲುಕುತ್ತಿತ್ತು. ಒಮ್ಮೆಲೆ ಸಿನಿಮಾ ಗೃಹದ ದೀಪಗಳು ಉರಿದವು, ಆ, ಎಲ್ಲಾ ಬಾಗಿಲುಗಳು ಢಾಳಾಗಿ ತೆರೆದುಕೊಂಡವು, ಆಗಲೇ ಅವನಿಗೆ ಗೊತ್ತಾಯಿತು ಸಿನಿಮಾ ಮುಗಿದಿದೆ ಎಂದು. ಆದರೆ ಸಿನಿಮಾ ಏನೋ ಮುಗಿದಿತ್ತು ಆದರೆ’ಅವನು ಮತ್ತು ಇವನು’ ಎನ್ನುವ ಸಿನಿಮಾ ಇನ್ನು ಮುಗಿದಿರಲಿಲ್ಲ. ಆದರೆ ಒಂದು ಸತ್ಯಮಾತ್ರ ನಿಚ್ಚಳವಾಗಿತ್ತು  ಬದುಕು ಖಂಡಿತ ಸುಂದರ ಆದರೆ ಅನಗತ್ಯ ಅಗಣಿತ ಗೊಂದಲ  ಬಿಟ್ಡರೆ, ಮಾತ್ರ ಎನ್ನುವುದು.

-ಧೀರೇಂದ್ರ ನಾಗರಹಳ್ಳಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x