ಅನಿ ಹನಿ

ಸಸ್ಯ ಪ್ರೇಮಿ: ಅನಿತಾ ನರೇಶ್ ಮಂಚಿ

ಮನೆ ಮಂದಿಯೆಲ್ಲಾ ಔತಣಕ್ಕೆಂದು ಹೊರ ಹೋಗಿದ್ದರು. ಅದ್ಯಾಕೋ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಹಾಡುವ ಉಮೇದು,  ನಾಟಕದ ಡೈಲಾಗುಗಳನ್ನು ದೊಡ್ಡದಾಗಿ  ಹೇಳುವ ಉತ್ಸಾಹ ನನ್ನೊಳಗಿನಿಂದ  ಉಕ್ಕಿ ಬರುತ್ತದೆ. ಯಾಕೆಂದರೆ ನನ್ನ ಹಾಡು ಕೂಡಾ ’ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ’ ಅನ್ನುವ ಮಾದರಿಯದ್ದು. ಇವತ್ತಂತೂ ಯಾವ ಹಾಡು ಕೂಡಾ ಎರಡು ಗೆರೆಯಷ್ಟುದ್ದಕ್ಕೆ ನೆನಪಿಗೇ ಬರಲಿಲ್ಲ. ಕೊನೆಗೆ  ’ಯಾವ ಹಾಡ ಹಾಡಲೀ.. ಎಂದು ಯೋಚಿಸುವಾಗಲೇ ಮುಂದಿನ ಲೈನ್ ನೆನಪಿಗೆ ಬಂದು ’ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲೀ..’  ಅಂತ ಧ್ವನಿ […]

ಅಮರ್ ದೀಪ್ ಅಂಕಣ

ಗುರು ಪರಂಪರೆಯ ಸಂಗೀತ ಕಲೆ ಮತ್ತು ಶಿಷ್ಯ ವೃಂದ: ಅಮರ್ ದೀಪ್ ಪಿ. ಎಸ್.

"ಸ ರಿ ಗ ಮ ಪ ದ ನಿ  ಸಾವಿರದ ಶರಣು …… "ಎಂದು ಅಣ್ಣಾವ್ರು ಹಾಡುತ್ತಿದ್ದರೆ ನಾನು ಆ ಹಾಡನ್ನು ಬಹಳ ಇಷ್ಟಪಟ್ಟು ಕೇಳುತ್ತಿದ್ದೆ.  ಬರೀ  ಹಾಡಲ್ಲ, ಆ ಚಿತ್ರವನ್ನೂ ಅಷ್ಟೇ ಇಷ್ಟಪಟ್ಟು ನೋಡಿದ್ದೆ. ಅದು  ಅದ್ಭುತ ಸಂಗೀತ ಶಕ್ತಿ ಗಾಯಯೋಗಿ ಪಂಡಿತ್  ಶ್ರೀ ಪಂಚಾಕ್ಷರಿ ಗವಾಯಿಗಳ ಕುರಿತು ತಯಾರಿಸಿದ ಚಿತ್ರ. ಅವರ ಜೀವನಗಾಥೆಯ  ಒಂದು ಪವಾಡ ಸೃಷ್ಟಿ ಕಣ್ಣ ತುಂಬಿಕೊಳ್ಳುತ್ತದೆ. ಅದು ಚಲನಚಿತ್ರದ ಮಾತಾಯಿತು. ವಾಸ್ತವವಾಗಿ  ಈ ಮಾತು ಗದುಗಿನ ಶ್ರೀ ವೀರೇಶ್ವರ ಆಶ್ರಮದಲ್ಲಿ […]

ವಿಜ್ಞಾನ-ಪರಿಸರ

ಇಲ್ಲಿ ಮೈಲಿಗೆಯಾದ ಮಂತ್ರಿ ಅಲ್ಲಿ ಕಾರ್ಪೊರೇಟ್‌ಗಳ ಕಣ್ಮಣಿ: ಅಖಿಲೇಶ್ ಚಿಪ್ಪಳಿ ಅಂಕಣ

ಲೋಕಸಭೆ ಚುನಾವಣೆ ಹತ್ತಿರ ಬಂದೇ ಬಿಟ್ಟಿದೆ. ಕಾರ್ಪೋರೇಟ್ ಲಾಬಿಗೆ ಮಣಿಯುವ ಸರ್ಕಾರಗಳು ಲಾಬಿಗೆ ಅನುಕೂಲ ಮಾಡಿಕೊಡುವಲ್ಲಿ ತಮ್ಮ ಅತಿಸಹಕಾರವನ್ನು ನೀಡುತ್ತವೆ. ಪರಿಸರದ ಬಗ್ಗೆ ವೈಯಕ್ತಿಕವಾಗಿ ಸ್ವಲ್ಪ ಬದ್ಧತೆ ತೋರಿದ್ದ ಜೈರಾಂ ರಮೇಶ್‌ರನ್ನು ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಕಿತ್ತು ಹಾಕಿ ಜಯಂತಿ ನಟರಾಜ್‌ರನ್ನು ತಂದು ಕೂರಿಸಿದರು. ಪಕ್ಷ ಸಂಘಟಿಸುವ ನೆವದಲ್ಲಿ ಜಯಂತಿ ನಟರಾಜ್‌ರಿಂದ ರಾಜಿನಾಮೆ ಕೊಡಿಸಿ ಇಂಧನ ಮಂತ್ರಿಯಾದ ವೀರಪ್ಪ ಮೊಯ್ಲಿಗೆ ಹೆಚ್ಚುವರಿ ಖಾತೆಯಾಗಿ ಅರಣ್ಯ ಮತ್ತು ಪರಿಸರ ಇಲಾಖೆಯ ಜವಾಬ್ದಾರಿಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ […]

ಸುಮ್ ಸುಮನಾ ಅಂಕಣ

ಬಾದಾಮಿಯ ಬನಶಂಕರಿ ಜಾತ್ರಿ ಸಂಭ್ರಮ: ಸುಮನ್ ದೇಸಾಯಿ

      'ಬನದಹುಣ್ಣಿಮಿ’ ಮುಂದ ಬನಶಂಕರಿ ಜಾತ್ರಿ ಭಾಳ ದೊಡ್ಡ ಪ್ರಮಾಣದಾಗ ಆಗತದ, 1 ತಿಂಗಳ ತನಕಾ ಇರ್ತದ,ಎಲ್ಲೆಲ್ಲಿಂದೊ ಜನಾ ಬರ್ತದ,ನೋಡಬೇಕ ಆ ಛಂದಾನ, ಸುತ್ತಮುತ್ತಲ ಹಳ್ಳ್ಯಾಗಿನ ಮಂದಿ ಬಂಡಿ ಕಟಗೊಂಡ ಜಾತ್ರಿ ಮಾಡಲಿಕ್ಕೆ ಬರತಾರ. ಬಂಡಿಯೊಳಗ ವ್ಯವಸ್ಥಾ ಹೆಂಗಿರತದ ಗೊತ್ತೇನ ಈಗಿನ ನಿಮ್ಮ ವಿಮಾನದಾಗ ಹೊದ್ರು ಅದರಷ್ಟ ಆರಾಮ ಅನಸಂಗಿಲ್ಲ, ಬಂಡ್ಯಾಗ ಮೆತ್ತಗ ಹುಲ್ಲ ಹಾಸಿ ಮ್ಯಾಲೆ ಜಮಖಾನಿ ಹಾಸಿ ಕುಡಲಿಕ್ಕೆ ಎಷ್ಟ ಮಸ್ತ ಮೆತ್ತಗ ಹಾಸಿಗಿ ಮಾಡಕೊಂಡಿರತಾರ ಮತ್ತ ಅಡಗಿ ಮಾಡಲಿಕ್ಕೆ ಎನೇನು […]

ಕಾವ್ಯಧಾರೆ

ಮೂವರ ಕವಿತೆಗಳು: ವೆಂಕಟೇಶ್ ನಾಯಕ್, ಜಯಾ ನಾಣಯ್ಯ, ದೇಶಾಂಶ ಹುಡಗಿ

ಭಿತ್ತಿ ಚಿ(ಪ)ತ್ರ ಹಚ್ಚುವವರು ರಾತ್ರಿಯಿಡಿ ಕೈಯಲ್ಲಿ ಮೈದಾ ಅಂಟು ಎಳೆದೆಳೆದು ಕಿತ್ತೆಸೆವ ಭಿತ್ತಿಯ ನಂಟು ಗಂಟು ಕಟ್ಟುವ ಸಾಮ್ರಾಜ್ಯ ದೊಳಗೆ ತೇಪೆ ಹಚ್ಚಿ ಹಳತಿನ ಎದುರಲಿ ಹೊಸ ತೇಪೆಯ ತೆರೆಯೊಳಗೆ ದ್ವಿಚಕ್ರ ಕಾಲ ಋತುಮಾನ ಕಾಲಿನಲಿ ತುಳಿದು ತರುವ ಹೊಸತನ ಭಿತ್ತಿ ಚಿ(ಪ)ತ್ರ ಹಚ್ಚುವವರು ಮಾಸಿದ ಭಿತ್ತಿಗೆ ಬಣ್ಣದ ಕಾಗದ ಹಚ್ಚುವವರು ಕಿತ್ತೆಸೆಯಲಾಗದು ಕೆಲವರಂಟಿಸಿದ ಕಾಗದ ಕಣ್ಣೀರಿನಲಿ ಅದ್ದರೂ ಬಿಡದ ಅಂಟು ಈ ವರೆಗೆ ತಿಳಿದಿಲ್ಲ ದೂರವಾದರೂ ಉಳಿದಿದೆ ಸ್ಮೃತಿ ಪಟಲದಲಿ ನೆಂಪು ಹಲವಾರು ಕಾಗದಗಳಂಟಿದೆ ಮನದ […]

ಪ್ರಶಸ್ತಿ ಅಂಕಣ

ಸೂರ್ಯಾಸ್ತವನರಸುತ್ತಾ (ಭಾಗ 2): ಪ್ರಶಸ್ತಿ ಪಿ.

ಬಿಡಲೇ ಆಗದಂತೆ ಉರಿಯುತ್ತಿದ್ದ ಕಣ್ಣುಗಳು, ಕೈ ಕಾಲುಗಳೆಲ್ಲಾ ಹಗ್ಗದಿಂದ ಜಗ್ಗಿದಂತೆ. ಎದ್ದೇನೆಂದರೂ ಏಳಲಾಗದಂತೆ ಧಿಮ್ಮೆನ್ನುತ್ತಿರುವ ತಲೆ.. ಎಲ್ಲಿದ್ದೇನೆಂದು ಅರಿವಿಗೆ ಬರಲು ಸ್ವಲ್ಪ ಹೊತ್ತೇ ಬೇಕಾಯಿತು. ಕಣಿವೆಯೊಂದರ ಸೂರ್ಯಾಸ್ತ ನೋಡಬೇಕೆಂದು ಹೊರಟ ಗೆಳೆಯರ ಗುಂಪಿನ ಉದ್ದೇಶ ಸೂರ್ಯಾಸ್ತಕ್ಕಷ್ಟೇ ಸೀಮಿತವಾಗದೇ ಮುಳುಗುರವಿಯ ದೃಶ್ಯಕಾವ್ಯಕ್ಕೆ ಇನ್ನೊಂದಿಷ್ಟು ರಂಗು ಹಚ್ಚುವಂತೆ ಪಾನ ಗೋಷ್ಟಿಯಲ್ಲಿ ತೊಡಗಿತ್ತು. ಈ ಪಾನವೆಂಬುದು ಪೌರುಷದ, ಸ್ಟೇಟಸ್ಸಿನ ಸಂಕೇತವೆಂಬ ಭಾವ ಗುಂಪಿನ ಗೆಳೆಯರದ್ದು ! ಕುಡಿಯದವರನ್ನು ಹೀಯಾಳಿಸುತ್ತಾ ಎಷ್ಟು ಬಾಟಲ್ ಏರಿಸುತ್ತೇವೆ ಅನ್ನುವುದರ ಮೇಲೆ ತಮ್ಮ "ಕೆಪ್ಯಾಸಿಟಿ"ಯ ಗುಣಗಾನ ಮಾಡುವುದರಲ್ಲಿ […]

ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 13): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಬ್ರಹ್ಮ ದೇವಾಲಯವಿರುವ ಭಾರತದ ಏಕೈಕ ರಾಜ್ಯ ಯಾವುದು? ೨.    ವಿಶ್ವ ಪರಂಪಯ ಪಟ್ಟಿಗೆ ಸೇರಿದ ಕರ್ನಾಟಕ ಸ್ಥಳಗಳು ಯಾವುವು? ೩.    ಹಸಿರು ಕ್ರಾಂತಿ ಪ್ರಾರಂಭಿಸಿದ ಪ್ರಥಮ ರಾಜ್ಯ ಯಾವುದು? ೪.    ಭಾರತದಿಂದ ಹೊಗೆಸೊಪ್ಪು ಆಮದು ಮಾಡಿಕೊಳ್ಳುವ ದೇಶಗಳು ಯಾವುವು? ೫.    ಟಾಟಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ರಾಜ್ಯ ಯಾವುದು? ೬.    ಏ ಗ್ರಾಮರ್ ಆಫ್ ದಿ ಕರ್ನಾಟಕ ಲಾಂಗ್ವೇಜ್ ಕೃತಿಯ ಕರ್ತೃ ಯಾರು? ೭.    ಏಕಲವ್ಯನ ವ್ಯಾಖ್ಯಾನವನ್ನು ಆಧರಿಸಿ ರಚಿಸಿದ ಪೈಯವರ […]