ಕನ್ನಡ ಭಾಷೆ ಮತ್ತು ಸಂಸ್ಕೃತಿ -ಮುಂದಿನ ದಿನಗಳಲ್ಲಿ!: ಎಸ್.ಜಿ.ಶಿವಶಂಕರ್

Shivashankar SG

ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದ್ದಲ್ಲೇ ಉಜ್ವಲವಾದ ಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸವಿದೆ. ಈ ನಾಡು ಕಾವೇರಿಯಿಂದ ಗೋದಾವರಿಯವರೆಗೂ ವ್ಯಾಪಿಸಿತ್ತು ಎಂದು ಇತಿಹಾಸ ಹೇಳುತ್ತದೆ.
ಈ ನಾಡಿಗೆ ಕರ್ನಾಟಕ ಎಂಬ ಹೆಸರು ಬಂದಿರುವ ಬಗೆಗೆ ವಿದ್ವಾಂಸರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರದೇಶವನ್ನು ಮೊದಲಿಗೆ 'ಕರಿಯ ಮಣ್ಣಿನ ನಾಡು' ಎಂದೂ, 'ಕರುನಾಡು' ಎಂದರೆ ಎತ್ತರದ ಪ್ರದೇಶದಲ್ಲಿರುವ ನಾಡು ಎಂದೂ, 'ಕಮ್ಮಿತ್ತು ನಾಡು' ಎಂದರೆ ಶ್ರೀಗಂಧದ ಕಂಪನ್ನುಳ್ಳ ನಾಡು ಎಂದೂ ಕರೆಯುತ್ತಿದ್ದರು. ಇದು ಕ್ರಮೇಣ ಆಡು ಭಾಷೆಯಲ್ಲಿ ಕರ್ನಾಟಕವಾಗಿದೆ ಎಂದು ವಿಶ್ಲೇಷಣೆ ನೀಡಿದ್ದಾರೆ. 

ಕನ್ನಡ ಭಾಷೆ ಮತ್ತು ಸಂಸ್ಕೃತಿ ಉತ್ಕೃಷ್ಟವಾದದ್ದು, ಶ್ರೀಮಂತವಾದದ್ದು. ವಿಪುಲವಾಗಿ ದೊರಕುವ ಸಾಹಿತ್ಯ ಕೃತಿಗಳು, ಐತಿಹಾಸಿಕ ದಾಖಲೆಗಳು ಈ ಅಂಶವನ್ನು ದೃಢೀಕರಿಸುತ್ತವೆ. ಕನ್ನಡದ ಕೆಲವು ಪದಗಳು ವೇದದಲ್ಲಿಯೂ, ಕ್ರಿ.ಶ.ಎರಡನೆಯ ಶತಮಾನದ ಗ್ರೀಕ್ ನಾಟಕವೊಂದರÀಲ್ಲಿಯೂ ದೊರಕಿದೆ.

ಬೇಲೂರು, ಹಳೇಬೀಡು, ಬಾದಾಮಿ, ಐಹೊಳೆ, ಪಟ್ಟದ ಕಲ್ಲು ಮುಂತಾದ ಕಡೆಗಳಲ್ಲಿ ಶಿಲ್ಪ ಕಲೆಯು ಕಾವ್ಯವಾಗಿ ಮೈದಳೆದಿದೆ. ಪಂಪ, ರನ್ನ, ಜನ್ನರ ಕಾವ್ಯದ ಸೊಗಸು ಕಾಲವನ್ನೂ ಮೆಟ್ಟಿ ತಮ್ಮ ಚಿರಂತನತೆಯನ್ನು ಮೆರೆಯುತ್ತಿದೆ.

ಇಂತಾ ಅದ್ಭುತವಾದ ಭಾಷೆ ಮತ್ತು ಸಂಸ್ಕೃತಿಯ ಮುಂದಿನ ದಿನಗಳನ್ನು ಕುರಿತು ಚಿಂತಿಸುವಾಗ ಆತಂಕದ ಕಾರ್ಮೋಡಗಳು ಮುಸುಕುತ್ತವೆ, ಕೆಲವು ತಲ್ಲಣಗಳನ್ನು ಸೃಷ್ತಿಸುತ್ತವೆ.
ಆದಿಯಿಂದಲೂ ಕನ್ನಡಿಗರು ಹೃದಯವಂತರು, ಮೃದುಭಾಷಿಗಳು, ಪರಮತ, ಪರಭಾಷಾ ಸಹಿಷ್ಣುಗಳು. ಇತಿಹಾಸದುದ್ದಕ್ಕೂ ಮತ್ತು ಈಗಲೂ ಸಹ ಈ ಅಂಶಗಳು ಸ್ಪಷ್ಟವಾಗಿ ಎದ್ದು ಕಾಣುತ್ತವೆ. ಕನ್ನಡಿಗರ ಈ ಉತ್ಕೃಷ್ಟ ಗುಣಗಳನ್ನು ಅನ್ಯರು ದುರಪಯೋಗಪಡಿಸಿಕೊಂಡಿರುವುದನ್ನು ಎಲ್ಲ ಕಾಲಘಟ್ಟದಲ್ಲಿಯೂ ಕಾಣಬಹುದು. ಇದನ್ನು ಅಭಿಮಾನ ಶೂನ್ಯತ್ವ ಅಥವಾ ನಿರಭಿಮಾನತ್ವ ಎಂದು ಹೀಯಾಳುಸುವವರೂ ಇದ್ದಾರೆ. 

ಇಂತಾ ಅದ್ಭುತವಾದ ಪ್ರಾಚೀನವಾದ ಭಾಷೆ ಮತ್ತು ಸಂಸ್ಕೃತಿಯ ಮುಂದಿನ ದಿನಗಳು  ಹೇಗಿರಬಹುದು ಎಂದು ಚಿಂತಿಸುವಾಗ ಇಂದಿನ ಪರಿಸ್ಥಿತಿ ಮುಖ್ಯವಾಗುತ್ತದೆ. ಇಂದಿನ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅವಲೋಕನ ಮುಂದಿನ ದಿನಗಳತ್ತ ಬೆಳಕು ಚೆಲ್ಲುತ್ತದೆ, ಮಾರ್ಗಸೂಚಕವೂ ಆಗುತ್ತದೆ.
ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕನ್ನಡ ಪ್ರದೇಶಗಳು ಹರಿದು ಹಂಚಿ ಹೋಗಿದ್ದವು. ಹೀಗೆ ಹರಿದು ಹೋಗಿದ್ದ ಪ್ರದೇಶಗಳು ಆಂಧ್ರ, ಮಹಾರಾಷ್ಟ್ರ, ಮದ್ರಾಸು ಪ್ರಾಂತ್ಯ ಮತ್ತು ಕೇರಳಗಳಿಗೆ ಸೇರಿ ಹೋಗಿದ್ದವು ಕರ್ನಾಟಕದ ಪ್ರದೇಶಗಳು ಸುಮಾರು 200 ವರ್ಷಗಳ ಕಾಲ ಈ ಸ್ಥಿತಿಯಲ್ಲಿದ್ದವು ಎಂಬುದು ಇಂದಿನವರಿಗೆ ಅಚ್ಚರಿಯಾಗಿ ಕಾಣಬಹುದು. ಕರ್ನಾಟಕ ಏಕೀಕರಣ ಚಳುವಳಿಯ ನಂತರ ಭಾಷಾವರು ಪ್ರಾಂತ್ಯಗಳ ರಚನೆಯಾಯಿಯಿತು. ಹರಿದು ಹಂಚಿ ಹೋಗಿದ್ದ ಪ್ರದೇಶಗಳೆಲ್ಲಾ ಒಂದಾಗಿ ಅಖಂಡ ಕರ್ನಾಟಕ ರೂಪುಗೊಂಡಿತು. ವಿಜ್ಞಾನ ಅಗಾಧವಾಗಿ ಬೆಳೆದು, ನಮ್ಮ ದೈನಂದಿನ ಬದುಕನ್ನು ಬದಲಾಯಿಸಿರುವ ಈ ಸ್ಥಿತ್ಯಂತರ ಕಾಲದಲ್ಲಿ ಭಾಷೆ ಮತ್ತು ಸಂಸ್ಕೃತಿಯ ಕುರಿತು ಚಿಂತಿಸುವಾಗ ಈ ವಿಷಯ ಮುಖ್ಯವಾಗುತ್ತದೆ. 

ಏಕೀಕರಣಕ್ಕೂ ಮುನ್ನ ಹಲವು ಪ್ರದೇಶಗಳ ಆಳ್ವಿಕೆಯಲ್ಲಿದ್ದ ಕನ್ನಡ ನೆಲದ ಜನರು ಅತಂತ್ರ ಪರಿಸ್ಥಿಯಲ್ಲಿದ್ದರು. ಆಯಾ ಪ್ರದೇಶಗಳ ಸಾರ್ವಭೌಮತ್ವದ ಭಾಷೆ ಮತ್ತು ಸಂಸ್ಕೃತಿಯನ್ನು ಬಲವಂತವಾಗಿಯಾದರೂ ಅನುಸರಿಸಲೇಬೇಕಾದ ಪರಿಸ್ಥಿತು ಅಂದು ಇತ್ತು. ಈ ಬಲವಂತ ಕ್ರಮೇಣ ಅಭ್ಯಾಸವಾಗಿ, ಜೀವನದ ಭಾಗವಾಗಿ ಅದರಿಂದ ಹೊರಬರುವ ಪ್ರಯತ್ನ ಪ್ರಜ್ಞಾಪೂರ್ವಕವಾಗಿ ಆ ಜನರು ಪ್ರಯತ್ನಿಸುತ್ತಿಲ್ಲ್ಲ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಹೀಗಾಗಿ ಬೇರೆ ಪ್ರಾಂತ್ಯಗಳಲ್ಲಿ ಸೇರಿದ್ದ ಕನ್ನಡ ಜನರು ಈಗ ಅಖಂಡ ಕರ್ನಾಟಕದಲ್ಲಿ ಸೇರಿದ್ದರೂ ಕೂಡ ತಾವು ಬಹುಕಾಲ ಅನುಸರಿಸಿದ ರೀತಿನೀತಿಗಳು, ಭಾಷಾ ಪ್ರಯೋಗವನ್ನು ಈಗಲೂ ಮುಂದುವರಿಸಿದ್ದಾರೆ. ಉದಾಹರಣೆಗೆ ಹೇಳಬೇಕೆಂದರೆ ಮಹಾರಾಷ್ಟ್ರದ ಗಡಿಯಂಚಿನ ಕನ್ನಡ ಜನ ನುಡಿವ ಭಾಷೆಯಲ್ಲಿ ನುಸುಳುವ ಮರಾಠಿ  ಪದಗಳು. ಇದರ ಜೊತೆಯಲ್ಲಿಯೇ ಹಬ್ಬ- ಹರಿದಿನಗಳಲ್ಲಿ, ಆಟ-ಪಾಠಗಳಲ್ಲಿ ಕೂಡ ಇಂತಹದೇ ಪ್ರವೃತ್ತಿಯನ್ನು ಕಾಣಬಹುದು. ಇವು ಇಂದಿನ ದಿನಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಎರವಾಗಿವೆ.

ಕನ್ನಡ ಭಾಷೆಗೆ ಇಂದು ಹಲವು ಆಯಾಮಗಳು ಸಿಕ್ಕಿವೆ. ತಂತ್ರಜ್ಞಾನ ಬೆಳೆದಂತೆ ಭಾಷೆಯ ಪ್ರಯೋಗಕ್ಕೆ ಬಹು ಮಾಧ್ಯಮಗಳು ದೊರಕಿವೆ. ಮೊದಲು ಮುದ್ರಣ, ಧ್ವನಿ ಪ್ರಸರಣ ಮಾತ್ರ ಸಾಧ್ಯವಾಗಿತ್ತು. ನಂತರ ದಿನಗಳಲ್ಲಿ ಧ್ವನಿ ಸುರುಳಿ, ಸಿ.ಡಿಗಳು ದೊರಕಿದವು. ಇಂದು ಕಂಪ್ಯೂಟರ್, ದೂರದರ್ಶನ, ಮೊಬೈಲು ಫೆÇೀನು ಮುಂತಾದ ಸಾಧನಗಳು ಭಾಷೆಯ ಬೆಳವಣಿಗೆಗೆ ಸಹಕಾರಿಯೂ ಆಗಿವೆ. ಆದರೆ ಇವುಗಳ ಸಮರ್ಥಕ ಬಳಕೆಯಾಗುತ್ತಿಲ್ಲ ಎನ್ನುವುದನ್ನು ಗುರುತಿಸಬಹುದು. ಕಂಪ್ಯುಟರ್ ಮತ್ತು ಮೊಬೈಲುಗಳಲ್ಲಿ ಕನ್ನಡ ಭಾಷೆಯ ಬಳಕೆ ಸಾಧ್ಯವಿದ್ದರೂ ಬಳಸುತ್ತಿರುವವರ ಸಂಖ್ಯೆ ತೀರಾ ಕಡಿಮೆ.
ಮೊದಲು ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿದ್ದ ದೂರದರ್ಶನ ಈಗ ಖಾಸಗಿಯವರಿಗೂ ಲಭ್ಯವಾಗಿದೆ. ಇಪ್ಪತ್ತಕ್ಕೂ ಹೆಚ್ಚು ಕನ್ನಡ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ಸಂಗೀತ, ನೃತ್ಯ, ಸಂದರ್ಶನ, ಸಿನೀಮಾ, ಆಹಾರ-ವಿಹಾರ-ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಈ ವಾಹಿನಿಗಳು ಪ್ರಸಾರ ಮಾಡುತ್ತಾ ಜನಪ್ರಿಯವೂ ಆಗಿವೆ. ಹೊಸ ತಂತ್ರಜ್ಞಾನ ಎನ್ನುತ್ತಲೇ ಅದನ್ನು ಬಳಸುವವರು ಹೆಚ್ಚಿಗೆ ಯುವಜನರೇ. ಯುವ ಪೀಳಿಗೆ ಹೆಚ್ಚಾಗಿ ಖಾಸಗಿ ವಾಹಿನಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಆಡು ಭಾಷೆಯ ಬಳಕೆ ಸಮರ್ಪಕವಾಗಿದ್ದರೂ ಕ್ಯಾಪ್ಶನ್ನುಗಳಲ್ಲಿ ಕಾಗುಣಿತದ ದೋಷಗಳು ಎದ್ದು ಕಾಣುತ್ತಿವೆ. ವ್ಯಾಪಾರೀ ಜಾಹೀರಾತುಗಳಲ್ಲಿ ಕೆಲವೊಮ್ಮೆ ವಿಚಿತ್ರವೆನಿಸುವ ಭಾಷೆಯ ಬಳಕೆಯನ್ನು ಕಾಣುತ್ತಿದ್ದೇವೆ ಇದೇ ಪ್ರವೃತ್ತಿ ಮುಂದುವರಿದರೆ ಭಾಷೆಯ ಬಳಕೆ ಮತ್ತು ಬೆಳವಣಿಗೆ ಸರಿದಾರಿಂiುಲ್ಲಿ ಸಾಗದು. ಇದೇ ಮಾತು ಕನ್ನಡ ವೃತ್ತ ಪತ್ರಿಕೆಗಳು, ವಾರ ಮತ್ತು ಮಾಸಪತ್ರಿಕೆಗಳಿಗೂ ಅನ್ವಯಿಸುತ್ತದೆ. ದೂರದರ್ಶನದ ಖಾಸಗಿ ಚಾನಲ್ಲುಗಳಿಗೆ ಹೋಲಿಸಿದರೆ ಪತ್ರಿಕೆಗಳಲ್ಲಿ ದೋಷಗಳು ಕಡಿಮೆ.

ದೂರದರ್ಶನದಲ್ಲಿ ಖಾಸಗಿ ಚಾನಲ್ಲುಗಳಿಗೆ ಅವಕಾಶ ಸಿಕ್ಕಂತೆಯೇ ರೇಡಿಯೋ ಕೇಂದ್ರಗಳ ಸ್ಥಾಪನೆ ಮತ್ತು ನಿರ್ವಹಣೆ ಕೂಡ ಖಾಸಗಿಯವರಿಗೆ ಸಿಕ್ಕಿದೆ. ಇಲ್ಲಿ ಬಳಸುವ ಭಾಷೆಯಲ್ಲಿ ವ್ಯಾಕರಣ ದೋಷಗಳು, ಅಪಭ್ರಂಶಗಳು ಎದ್ದು ಕಾಣಿಸುತ್ತ್ತಿವೆ. ಇವುಗಳಲ್ಲಿ  ವ್ಯಾಪಾರೀ ಜಾಹೀರಾತುಗಳದ್ದೇ ಸಿಂಹ ಪಾಲು. ಯಾವುದೋ ಭಾಷೆಯಲ್ಲಿ ಸಿದ್ಧಪಡಿಸಿದ ಜಾಹೀರಾತನ್ನು ಕನ್ನಡಕ್ಕೆ ಅನುವಾದಿಸುವಾಗ ಭಾಷೆಯ ಮೇಲೆ ಹಿಡಿತವಿಲ್ಲದವರು ಇಂತಾ ತಪ್ಪುಗಳನ್ನೆಸಗುತ್ತಿದ್ದಾರೆ. ಇವಗಳನ್ನೇ ಇಂದಿನ ಯುವಜನರು ಅನುಕರಿಸುವ ಅಪಾಯವಿದ್ದು, ಇದು ಭಾಷೆಯ ಬೆಳವಣಿಗೆಗೆ ಮಂದಿನ ದಿನಗಳಲ್ಲಿ ತೊಡಕಾಗಬಹುದು.
ಈ ಪರಿಸ್ಥಿತಿಗೆ ಕರ್ನಾಟಕಕ್ಕೆ ಬಂದು ಸೇರಿರುವ ಅತಿ ಹೆಚ್ಚಿನ ಸಂಖ್ಯೆಯ ವಲಸಿಗರೂ ತಮ್ಮ ಕಾಣಿಕೆಯನ್ನಿತ್ತಿದ್ದಾರೆ. ಹಲವು ತಲೆಮಾರುಗಳ ಹಿಂದೆ ವಲಸೆ ಬಂದವರೂ, ಇತ್ತೀಚೆಗೆ ಬಂದವರೂ ಕರ್ನಾಟಕದಲ್ಲಿ ನೆಲಸಿದ್ದರೂ ಕನ್ನಡ ಕಲಿಕೆಗೆ ಅಸ್ಥೆವಹಿಸದೆ ಅನಿವಾರ್ಯತೆ ಬಂದಾಗ ತಪ್ಪು ಕನ್ನಡ ಮಾತಾಡುತ್ತಾರೆ. ಇದನ್ನು ಅಪರಾಧ ಎಂದು ಭಾವಿಸಬೇಕಾಗಿಲ್ಲವಾದರೂ ಅವರನ್ನು ತಿದ್ದುವ ಪ್ರಯತ್ನವನ್ನು ನಾವು ಮಾಡದಿರುವುದು, ಸರಿಯಾಗಿ ಭಾಷೆಯನ್ನು ಕಲಿಯಲು ಪೆÇ್ರೀತ್ಸಾಹ ನೀಡದಿರುವುದು ನಾವು ಮಾಡುತ್ತಿರುವ ಘೋರ ಅಪರಾಧ. ವಲಸಿಗರ ಸಂಖ್ಯ ಹೆಚ್ಚುತ್ತಾ ಹೋದರೆ ಕನ್ನಡ ಭಾಷೆ ನೇಪಥ್ಯಕ್ಕೆ ಸರಿಯಬೇಕಾದ ಅಪಾಯವಿದೆ.

ಇಂತಾ ಪರಿಸ್ಥಿಯಲ್ಲೇ ಇನ್ನೊಂದು ಆಶಾದಾಯಕ ಬೆಳವಣಿಗೆಯೂ ಕಾಣುತ್ತಿದೆ. ಹಿಂದೆಂದಿಗಿಂತಲೂ ಸಾಹಿತ್ಯ ಕೃಷಿ ಮಾಡುತ್ತಿರುವವರ ಸಂಖ್ಯೆ ಗಣನೀಯವಾಗಿದೆ. ಇವರ ರಚನೆಗಳ ಪ್ರಕಾಶನಕ್ಕೆ ಕನ್ನಡ ಪತ್ರಿಕೆಗಳ ಸಂಖ್ಯೆ ಏನೇನೂ ಸಾಲದು. ಅದಕ್ಕೆ ಇವರೇ ಒಂದು ಪರ್ಯಾಯವನ್ನು ಕಂಡುಕೊಂಡಿದ್ದಾರೆ. ಕನ್ನಡದಲ್ಲಿ ಹತ್ತಾರು ಬ್ಲಾಗು ಮ್ಯಾಗಜೀನುಗಳು ಪ್ರಾರಂಭವಾಗಿವೆ. ಇವಲ್ಲದೆ ವೈಯುಕ್ತಿಕ್ವಾಗಿ ತಮ್ಮದೇ ಬ್ಲಾಗು ಹೊಂದಿರುವ ಲೇಖಕರೂ ಇದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಪ್ರಯತ್ನ ಮತ್ತು ಕನ್ನಡ ಭಾಷೆಯ ಬೆಳವಣಿಗೆಗೆ ದೃಷ್ಟಿಯಿಂದ ಹೊಸ ಆಯಾಮ ಸಿಕ್ಕಿದಂತಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡುವ ಬಗೆಗೆ ಚಳುವಳಿಗಳಾದರೂ, ಆಯೋಗಗಳು ವರದಿ ನೀಡಿದ್ದರೂ, ನ್ಯಾಯಾಲಯಗಳು ತೀರ್ಪು ನೀಡಿದ್ದರೂ ಕನ್ನಡದ ಕಲಿಕೆಗೆ ಸ್ವತಃ ಆತಿ ಹೆಚ್ಚಿನ ಕನ್ನಡಿಗರಿಗೇ ಉತ್ಸಾಹವಿಲ್ಲ, ಅಭಿಮಾನವಿಲ್ಲ, ಬದ್ಧತೆಯೂ ಇಲ್ಲ.
ಇಂಗ್ಲಿಷ್ ಭಾಷೆಯ ಅಮಲು ಇನ್ನೂ ಇಳಿದಿಲ್ಲ. ನಮ್ಮಲ್ಲಿನ ಎಲ್ಲಾ ಖಾಸಗಿ ಶಾಲೆಗಳೆಲ್ಲಾ ನೂರಕ್ಕೆ ನೂರರಷ್ಟು ಇಂಗ್ಲಿಷ್ ಮಾಧ್ಯಮದವೇ! ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದ ಶಾಲೆ ನಡೆಸುತ್ತಾರೆ. ಕನ್ನಡ ಆಯ್ಕೆ ಮಾಡುವವರು ಬರುವುದೇ ಇಲ್ಲ ಎನ್ನುತ್ತಾರೆ. 
ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲೇ  ಕಲಿಯಬೇಕೆಂದು ಎಲ್ಲ ತಂದೆ-ತಾಯಿಯರೂ ¨ಯಸುತ್ತಾರೆ. ಕನ್ನಡದ ಬಗೆಗೆ ಕೀಳರಿಮೆ ಇದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಇಂಗ್ಲಿಷ್ ಭಾಷೆಯೇ ಸಮರ್ಥವಾದದ್ದು ಎಂಬ ಭಾವನೆ ಇದೆ. ಈ ಮನಸ್ಥಿತಿಯನ್ನು ಬದಲಾಯಿಸುವುದು ಸಾಮಾನ್ಯ ಮಾತಲ್ಲ. ಇದಕ್ಕೊಂದು ದೊಡ್ಡ ಆಂದೋಲನವೇ ಆಗಬೇಕೇನೋ..? ಅಭಿಮಾನವೆನ್ನುವುದನ್ನು ಹೊರಗಿನಿಂದ ತುಂಬಲಾಗುವುದಿಲ್ಲ ಅದು ಒಳಗಿನಿಂದಲೇ ಬೆಳಯಬೇಕು. 

ಕನ್ನಡ ನಾಡಿನ ಕಲೆ, ಸಾಹಿತ್ಯ, ನೃತ್ಯ, ಸಂಗೀತ ಶ್ರೀಮಂತವಾದದ್ದು. ಸಾಹಿತ್ಯದ ಎತ್ತರದ ಸಾಧನೆಯೆಂದರೆ ಜ್ಞಾನಪೀಠ ಪ್ರಶಸ್ತಿ. ಅತಿ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿ ದಕ್ಕಿರುವುದು ಕನ್ನಡ ಸಾಹಿತ್ಯಕ್ಕೆ, ಕನ್ನಡ ಸಾಹಿತಿಗಳಿಗೆ. ಈ ನಾಡಿನ ಶಿಲ್ಪ ಕಲೆಗೆ ಮನಸೋಲದವರೇ ಇಲ್ಲ. ನಾಟ್ಯ ಸಾಮ್ರಾಜ್ಞಿ ಶಾಂತಲೆಯ ಹೆಸರು ನೃತ್ಯ ಕಲೆಯಲ್ಲಿ ಅಮರ. ಕಾವ್ಯಕ್ಕೆ, ಭಾಷೆಗೆ ಹೊಸ ಕಸುವನ್ನಿತ್ತವರು ಹನ್ನೆರಡನೆಯ ಶತಮಾನದ ಶರಣರು. ಇವರು ರಚಿಸಿದ ವಚನ ಸಾಹಿತ್ಯ ವಿಶ್ವzಲ್ಲೇ ವಿಶಿಷ್ಟವಾದದ್ದು. ಇದು ಈ ನೆಲದಲ್ಲೇ ಮೊಳೆತು ಚಿಗುರೊಡೆದು ಹೂವಾಗಿ ಅರಳಿ ಕಂಪನ್ನಿತ್ತಿದೆ. ದಾಸ ಶ್ರೇಷ್ಠರ ಸಾಹಿತ್ಯ ಆಧ್ಯಾತ್ಮ ಮತ್ತು ಸಂಗೀತವನ್ನು ಶ್ರೀಮಂತಗೊಳಿಸಿದೆ. ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಪಂಚಾಕ್ಷರಿ ಗವಾಯಿ ಮುಂತಾದವರು ತಮ್ಮ ಹಾಡುಗಾರಿಕೆಯಿಂದ ಭಾರತದ ಭೂಪಟದಲ್ಲೇ ಕರ್ನಾಟಕ ಮಿನುಗುವಂತೆ ಮಾಡಿದ್ದಾರೆ.

60 ಮತ್ತು 70ರ ದಶಕಗಳಲ್ಲಿ ಕನ್ನಡ ಚಿತ್ರಗಳು ವಿಶ್ವದ ಗಮನ ಸೆಳೆದಿದ್ದವು. ರಾಷ್ಟ್ರಪ್ರಶಸ್ತಿಗಳು ಕನ್ನಡ ಚಿತ್ರಗಳಿಗೆ ನಿರಂತರವಾಗಿ ದೊರಕುತ್ತಿದ್ದವು. ಆ ದಿನಗಳೀಗ ಬರಿಯ ನೆನೆಪಾಗಿ ಉಳಿಯುವಂತೆ ಮಾಡುತ್ತಿವೆ ಇಂದಿನ ಕನ್ನಡ ಚಿತ್ರಗಳು. ಮಾಸ್ ಅಪೀಲ್ ಎನ್ನುವ ನೆಪದಲ್ಲಿ ತಯಾರಾಗುತ್ತಿರುವ ನೂರಾರು ಚಿತ್ರಗಳು ಭೌದ್ಧಿಕ ದಿವಾಳಿತನವನ್ನು ತೊರಿಸುತ್ತಿವೆಯೇನೋ ಎಂಬ ಅನುಮಾನ ಮೂಡುತ್ತದೆ. ವರ್ಷಕ್ಕೆ ಹತ್ತು ಚಿತ್ರಗಳು ತಯಾರಾಗುತ್ತಿದ್ದ ಕಡೆ ಈಗ ನೂರರ ಸಂಖ್ಯೆಯಲ್ಲಿ ತಯಾರಾಗುತ್ತಿವೆ. ಹಲವು ಲಕ್ಷಗಳ ತಯಾರಿಕಾ ವೆಚ್ಚ ಈಗ ಕೋಟಿಗಳಿಗೆ ಏರಿದೆ. ಇದು ಆಶಾದಾಯಕವಾದರೂ ಚಿತ್ರಗಳ ಗುಣಮಟ್ಟ ನೋಡಿದರೆ ನಾಚಿಕೆಪಡುವಂತಾಗುತ್ತಿದೆ. 
ಸೂಕ್ಷ್ಮ ಸಂವೇದನೆ ಕಲಾತ್ಮಕ ಚಿತ್ರಗಳ ಕಾಲ ಮುಗಿದೇ ಹೋಯಿತೇನೋ ಎಂಬ ಅನುಮಾನ ಇಂದಿನ ಚಿತ್ರಗಳನ್ನು ನೋಡಿದಾಗ ಬರುತ್ತದೆ.  ಲಾಂಗು ಮಚ್ಚು ಸಂಸ್ಕೃತಿಯ, ಕ್ರೌಯವನ್ನೇ ವೈಭವೀಕರಿಸುವ ಇಂದಿನ ಚಲನ ಚಿತ್ರ ತಯಾರಕರ ಪ್ರವೃತ್ತಿ ಮುಂದಿನ ದಿನಗಳ ಬಗೆಗೆ ಭರವಸೆ ಕಳೆದುಕ್ಕೊಳ್ಳುವಂತೆ ಮಾಡುತ್ತಿವೆ. ಈ ಎಲ್ಲದರ  ನಡುವೆ ಎಲ್ಲೋ ಒಂದೊಂದು ಸಮಾಧಾನಕರವಾದ ಚಿತ್ರಗಳೂ ಬರುತ್ತಿವೆ ಎಂಬುದು ಸಮಾಧಾನಪಡಿಸುವ ಅಂಶ.

ಇನ್ನು ನಾಡಿನ ನೃತ್ಯ ಮತ್ತು ಸಂಗೀತಗಳ  ಬಗೆಗೆ ಇಂದಿನ ಸ್ಥಿತಿಯನ್ನು ಗುರುತಿಸುವ ಪ್ರಯತ್ನ ಮಾಡಿದರೆ, ದೇಸೀ ಪರಂಪರೆಯ ಜೊತೆಗೆ ಪಾಶ್ಚ್ಯಾತ್ಯೀಕರಣವನ್ನು ಕಾಣಬಹುದು. ಎರಡು ಪ್ರಭೇದಗಳು ಬಿಡಿಬಿಡಿಯಾಗಿಯೂ, ಒಟ್ಟಾಗಿಯೂ ಪ್ರಕಟವಾಗುತ್ತಿವೆ. ಅಪ್ಪಟ ದೇಸೀ ಶೈಲಿ ಅಸ್ತಿತ್ವದಲ್ಲಿರುವುದು ಸಮಾಧಾನಕರವಾದ ವಿಷಯ. ಎರಡನ್ನೂ ಬೆಸೆಯುವ ಫ್ಯೂಶನ್ ಎಂಬ ಪ್ರಯೋಗಗಳು ನಡೆಯುತ್ತಿವೆ. ಇಲ್ಲೊಂದು ರೀತಿಯ ಆರೋಗ್ಯಕರ ವಾತಾವರಣವಿದೆ. ಇಷ್ಟಾದರೂ ಚಲನಚಿತ್ರ ಸಂಗೀತ, ಗೀತೆಗಳು, ನೃತ್ಯಗಳು ಸರಿದಾರಿಯಲ್ಲಿಲ್ಲ ಎಂಬ ಭಾವನೆ ಮೂಡಿಸುತ್ತದೆ. ಚಲನ ಚಿತ್ರರಂಗದಲ್ಲಿನ ಈ ಏಕಮುಖ ಬೆಳವಣಿಗೆ ಆತಂಕಕಾರಿ ಎನಿಸುತ್ತದೆ.

ಇನ್ನು, ನಮ್ಮ ಸಂಸ್ಕೃತಿಯ ಭಾಗವಾದ ಹಬ್ಬ-ಹರಿದಿನಗಳು, ಊಟ-ಉಪಚಾರಗಳು, ಆಹಾರ-ವಿಹಾರಗಳು ಮತ್ತು ಉಡುಗೆ ತೊಡುಗೆಗಳನ್ನು ಗಮನಿಸಿದರೆ ನಮ್ಮ ಮೂಲ ಸಂಸ್ಕೃತಿಯ ಬೇರುಗಳು ಸಡಿಲವಾಗುತ್ತಿರುವುದನ್ನು ಕಾಣುತ್ತೇವೆ. ಇದಕ್ಕೆ ಮೂಲ ಕಾರಣವೆಂದರೆ ಕರ್ನಾಟಕಕ್ಕೆ ವಲಸೆ ಬಂದು ನೆಲೆ ನಿಂತಿರುವವರು ಮತ್ತು ತೀವ್ರಗತಿಯಲ್ಲಿ ಈ ವಲಸೆ ಪ್ರಕ್ರಿಯೆ ಮುಂದುವರಿಯುತ್ತಿರುವುದು. ಇದರೆ ಜೊತೆಜೊತೆಗೇ ಪಾಶ್ಚ್ಯಾತ್ಯ ಸಂಸ್ಕೃತಿಯ ಪ್ರಭಾವವೂ ನಮ್ಮ ಸಂಸ್ಕೃತಿಯ ಮೇಲಾಗುತ್ತಿರುವುದು.
ಈ ನಾಡಿನ ಮೂಲ ಉಡುಗೆ-ತೊಡುಗೆಗಳು ಬದಲಾಗಿವೆ. ಈ ಬದಲಾವಣೆ ಬ್ರಿಟಿಷರ ಕಾಲದಲ್ಲಿಯೇ ಪ್ರಾರಂಭವಾಗಿ ಸ್ಥಾಯಿಯಾಗಿ ಉಳಿದಿವೆ. ಎಲ್ಲೋ ಕೆಲವೇ ಗ್ರಾಮೀಣ ಭಾಗಗಳಲ್ಲಿ ಹಳೆ ತಲೆಮಾರಿನವರಲ್ಲಿ ನಮ್ಮ ಸಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಕಾಣಬಹುದಾಗಿದೆ. ಇನ್ನು ಸ್ತ್ರೀಯರ ಉಡುಗೆ ಸಂಪೂರ್ಣ ಬದಲಾಗುತ್ತಿದ್ದು ಉತ್ತರ ಭಾರತೀಯವಾಗುವತ್ತ ನಡೆದಿದೆ. ಪುರುಷರ ಸಂಪ್ರದಾಯಿಕ ಉಡುಪಿನ ಜಾಗದಲ್ಲೀಗ ಕುರ್ತಾ, ಪೈಜಾಮಗಳು ಬಂದಿದ್ದು ಮುಂದೊಂದು ಕಾಲದಲ್ಲಿ ಇವೇ ನಮ್ಮ ಸಂಪ್ರದಾಯಿಕ ಉಡುಪೇನೋ ಎನಿಸಿದರೆ ಆಶ್ಚರ್ಯವಿಲ್ಲ.

ನಮ್ಮ ಮೂಲ ಸಂಸ್ಕೃತಿಯ ಹಬ್ಬಗಳ ಜೊತೆಗೆ ಹೊಸ ಹಬ್ಬಗಳು ಸೇರಿವೆ. ಬಣ್ಣ ಎರಚುವ ಹೋಳಿ ಹಬ್ಬ ಶುರುವಾಗಿದೆ. ನಮ್ಮ ಕೋಲಾಟ ಉತ್ತರದವರ ಅನುಕರಣೆಯಿಂದ ದಾಂಡಿಯಾ ಎಂಬ ಹೆಸರಲ್ಲಿ ನಮ್ಮಲ್ಲಿ ಆಚರಣೆಗೆ ಬಂದಿದೆ. ಉತ್ತರದವರ ದೇವರುಗಳಿಗೆ ನಮ್ಮಲ್ಲೂ ಪೂಜೆ-ಪುನಸ್ಕಾರ ನಡೆಯುತ್ತಿದೆ. ಆಹಾರ ಪದ್ದತಿ ಪೂರಾ ಉತ್ತರಮಯವಾಗುವತ್ತ ನಡೆದಿದೆ. ಉದಾಹರಣೆಗೆ ನಮ್ಮ ಮೊಸರು ವಡೆ ಈಗ ದಹಿ ವಡಾ ಎಂದು ಕರೆಯಲ್ಪಡುತ್ತಿದೆ.

ಇತ್ತೀಚೆಗೆ ಹೊಸದಾದ, ನಾಡಿನ ಸಂಸ್ಕೃತಿಗೆ ಎರವಾಗುವ ಹೊಸದೊಂದು ಪ್ರವೃತ್ತಿ ಶುರುವಾಗಿದೆ. ಅದೆಂದರೆ ಗುಳೆ ಹೋಗುವುದು. ¨ರಗಾಲದಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಮಂದಿ ಉದ್ಯೋಗ ಅರಸಿ ಇಡೀ ಊರಿಗೆ ಊರೇ ಬೇರೊಂದೆಡೆ ಹೋಗುವುದನ್ನು ಗುಳೆ ಹೋಗುವುದು ಎನ್ನುತ್ತಾರೆ. ಆದರೆ ಈಗ ನಗರದ ಮಂದಿ ಗುಳೆ ಹೋಗುತ್ತಿರುವುದು ಪಿಕ್ನಿಕ್ಕಿಗಾಗಿ! ಕೆಲವೊಮ್ಮೆ ಹಬ್ಬಗಳು, ರಾಷ್ಟ್ರೀಯ ಆಚರಣೆಗಳು ಒಟ್ಟಾಗಿ ಬರುವುದುಂಟು. ಆಗ ಮೂರ್ನಾಲ್ಕು ದಿನಗಳು ಒಟ್ಟೊಟ್ಟಾಗಿ ರಜೆ ಸಿಗುತ್ತವೆ. ಆಗ ನಗರವಾಸಿಗಳೆಲ್ಲಾ ಹಬ್ಬಗಳನ್ನು ಬಿಟ್ಟು ಪ್ರವಾಸ ಹೋಗುವ ಪ್ರವೃತ್ತಿ ಆರಂಭವಾಗಿದೆ. ಹಿಂದೆ ಮನೆಯನ್ನೆಲ್ಲಾ ತೊಳೆದು, ಸಿಂಗರಿಸಿ ಆಚರಿಸುತ್ತಿದ್ದ ಹಬ್ಬಗಳ ದಿನ ಮನೆಯ ಬಾಗಿಲು ನೀರೂ ಕಾಣದಂತ ಸ್ಥಿತಿ ಬಂದಿದೆ. ಅಂದರೆ ಹಬ್ಬಗಳು ಅರ್ಥ ಕಳೆದುಕ್ಕೊಳ್ಳುತ್ತಿವೆ. ಪಾಶ್ಚ್ಯಾತ್ಯ ಜೀವನ ಶೈಲಿ ದಟ್ಟವಾಗಿ ನಮ್ಮನ್ನು ತನ್ನ ತೆಕ್ಕೆಯಲ್ಲಿ ತೆಗೆದುಕ್ಕೊಳ್ಳುತ್ತಿದೆ. ವಿಪರ್ಯಾಸವೆಂದರೆ ಅವರು ನಮ್ಮ ಸಂಸ್ಕೃತಿಯನ್ನು ಮೆಚ್ಚಿ ಅಳವಡಿಸಿಕ್ಕೊಳ್ಳುವ ಪ್ರಯತ್ನದಲ್ಲಿದ್ದರೆ ನಾವು ಅವರ ಸಂಸ್ಕೃತಿಗೆ ಮಾರೊ ಹೋಗುತ್ತಿದ್ದೇವೆ. ಅವರ 'ಮಜದ ಸಂಸ್ಕೃತಿ ನಮ್ಮ ನಿಜದ ಸಂಸ್ಕೃತಿಯನ್ನು ನುಂಗುತ್ತಿದೆ.'
ಈಚಿನ ದಿನಗಳಲ್ಲಿ ಕೆಲವು ಮಾರುಕಟ್ಟೆ ಜಾಹೀರಾತು ಗಮನಿಸಬಹುದು. 'ಮಸ್ತ್ ಮಜಾ ಮಾಡಿ', 'ಕಮ್ಮಿ ಕಾಸು, ಪುಲ್ ಜಮಾಯ್ಸು'

ಸಾಂಸ್ಕೃತಿಕ ಕೊಡು-ಕೊಳ್ಳುವಿಕೆ ಜನಾಂಗಗಳ ನಡುವೆ ಸಹಜ ಮತ್ತು ಅಪೇಕ್ಷಣೀಯವೂ ಹೌದು. ಆದರೆ ಈ ವಿನಿಮಯ ಸ್ವಲ್ಪಮಟ್ಟಿಗೆ ನಡೆದರೆ ಅದು ಆರೋಗ್ಯಕರ. ಅದು ನೆಲದ ಸಂಸ್ಕ್ರಿತಿಯನ್ನೇ ಮೂಲೋತ್ಪಾಟನೆ ಮಾಡವ ಹಂತಕ್ಕೆ ಹೋದರೆ ಅದು ಸಹ್ಯವಾಗುವುದಿಲ್ಲ, ಅಸಹ್ಯವಾಗುತ್ತದೆ. ಮೇರೆ ಮೀರಿದ ಸಾಂಸ್ಕೃತಿಕ ಆಕ್ರಮಣ ವಿಚಾರವಂತರನ್ನು, ಸ್ವಾಭಿಮಾನಿಗಳನ್ನು ಕೆರಳಿಸುತ್ತದೆ.
ಈವರೆಗೆ ಹೇಳಿದ ಎಲ್ಲಾ ವಿಷಯಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮುಂದಿನ ದಿನಗಳು ಆತಂಕವನ್ನು ಸೃಷ್ಟಿಸುತ್ತವೆ ಎನ್ನುವುದು ಗೋಚರಿಸುತ್ತದೆ.
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಶೋಭಾ.ಹೆಚ್.ಜಿ

ನಮಸ್ತೆ ಎಸ್.ಜಿ.ಶಿವಶಂಕರ್

ನಮ್ಮ ನವಂಬರ್ ತಿಂಗಳ ಪತ್ರಿಕೆಯಲ್ಲಿ  ನಿಮ್ಮ  ಕನ್ನಡ ಭಾಷೆ ಮತ್ತು ಸಂಸ್ಕೃತಿ -ಮುಂದಿನ ದಿನಗಳಲ್ಲಿ!:  ಲೇಖನ( ಅನುಮತಿಯಿಲ್ಲದೆ)  ಕೃಪೆ : ಪಂಜು ಎಂದು ಹಾಕಿ ಪ್ರಕಟಿಸಿದ್ದೇವೆ.  ನಿಮ್ಮ ವಿಳಾಸ   ಈ ಮೇಲ್ನಲ್ಲಿ  ಕಳಿಸಿದರೆ  ಪೋಸ್ಟ್ ಮಾಡಲು ಅನೂಕೂಲವಾಗುತ್ತದೆ.

ಧನ್ಯವಾದಗಳೊಂದಿಗೆ

ಸಂಪಾದಕರು, ಸ್ತ್ರೀ ಜಾಗೃತಿ ಮಾಸಪತ್ರಿಕೆ,
ಜಂಗಮವಾಣಿ : ೯೪೪೮೯೪೫೩೬೭

shivashankar s.g
shivashankar s.g
7 years ago

ಇದು ನನ್ನ ವಿಳಾಸ:

ಎಸ್.ಜಿ.ಶಿವಶಂಕರ್
ನಂ.೫೧೭೭, ’ಶಿವಲತ’
ಹೆಚ್.ಟಿ.ಜೋಡಿ ರಸ್ತೆ,
ವಿಜಯನಗರ ೨ನೆ ಹಂತ
ಮೈಸೂರು-೫೭೦೦೧೭

 

Kartik Jarali
2 years ago

Next notes

3
0
Would love your thoughts, please comment.x
()
x