ಕಾವ್ಯಧಾರೆ

ಹೇಳಿ-ಕೇಳಿ…: ಗೋಪಾಲ ವಾಜಪೇಯಿ

 

ನಾಲ್ಕು ಮಾತ ನೀನು ಹೇಳು, ನಾಲ್ಕು ನನ್ನ ಮಾತ ಕೇಳು… 
ನಾಲ್ಕು ದಿನದ ಬಾಳು ಅಲ್ಲಾ, ನಾಲ್ಕು ಹೆಜ್ಜಿ ನಡೆಯಿದಲ್ಲಾ
ಹೇಳಿ-ಕೇಳಿ, ಕೇಳಿ-ಹೇಳಿ ಬಾಳಿ ಬದುಕುವಾ… 
ಗೆಳತಿ, ಬಾಳಿ ಬದುಕುವಾ…
ಬಾರೆ, ಬಾಳಿ ಬದುಕುವಾ…                                         

ನಾಲ್ಕು ಜನರ ಓಣಿಯೊಳಗ, ನಾಲ್ಕು ಜನರು ಬಂಧು ಬಳಗ… 
ನಾಲ್ಕು ಹೆಜ್ಜಿ ತಪ್ಪದಾಂಗ, ನಾಲ್ಕು ಜನರು ಮೆಚ್ಚುವಾಂಗ
ಹೇಳಿ-ಕೇಳಿ, ಕೇಳಿ-ಹೇಳಿ ಬಾಳಿ ಬದುಕುವಾ… 
ಗೆಳತಿ, ಬಾಳಿ ಬದುಕುವಾ…
ಬಾರೆ, ಬಾಳಿ ಬದುಕುವಾ…                                         
                          
ಬಾಳು ಒಂದು ಕೇಳಿ ಅಲ್ಲಾ, ಬರಿಯ ನಗಿಯ ಹೋಳಿ ಅಲ್ಲಾ… 
ಹಾಳು-ಗೀಳು ಅನ್ನದೇನೇ, ತಾಳಿಕೊಂಡು ನೋವನೆಲ್ಲಾ
ಹೇಳಿ-ಕೇಳಿ, ಕೇಳಿ-ಹೇಳಿ ಬಾಳಿ ಬದುಕುವಾ… 
ಗೆಳತಿ, ಬಾಳಿ ಬದುಕುವಾ…
ಬಾರೆ, ಬಾಳಿ ಬದುಕುವಾ…  
 
ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಹೇಳಿ-ಕೇಳಿ…: ಗೋಪಾಲ ವಾಜಪೇಯಿ

  1. ನಾಲ್ಕ ದಿನದ ಜೀವನನ ನಾಲ್ಕು ಮಂದಿ ಒಳಗ ಹೆಂಗ ಬದುಕಬೇಕು ಅಂತ ಚೆನ್ನಾಗಿ ಹೇಳಿದ್ದೀರಿ ಸರ್..
    ಸುಂದರ ಕವಿತೆ. ಕೊನೆಯ ಮೂರು ಸಾಲುಗಳು ತುಂಬಾ ಇಷ್ಟವಾದವು,
    ಹೇಳಿ-ಕೇಳಿ, ಕೇಳಿ-ಹೇಳಿ ಬಾಳಿ ಬದುಕುವಾ…
    ಗೆಳತಿ, ಬಾಳಿ ಬದುಕುವಾ…
    ಬಾರೆ, ಬಾಳಿ ಬದುಕುವಾ…

  2.  
    ಬಾಳು ಒಂದು ಕೇಳಿ ಅಲ್ಲಾ, ಬರಿಯ ನಗಿಯ ಹೋಳಿ ಅಲ್ಲಾ… 
    ಹಾಳು-ಗೀಳು ಅನ್ನದೇನೇ, ತಾಳಿಕೊಂಡು ನೋವನೆಲ್ಲಾ
    ಹೇಳಿ-ಕೇಳಿ, ಕೇಳಿ-ಹೇಳಿ ಬಾಳಿ ಬದುಕುವಾ… 
    ಗೆಳತಿ, ಬಾಳಿ ಬದುಕುವಾ…  tumbaa arthapurna maatu sir….
    ಬಾರೆ, ಬಾಳಿ ಬದುಕುವಾ…  

Leave a Reply

Your email address will not be published. Required fields are marked *