ಹೇಳಿ-ಕೇಳಿ…: ಗೋಪಾಲ ವಾಜಪೇಯಿ

 

ನಾಲ್ಕು ಮಾತ ನೀನು ಹೇಳು, ನಾಲ್ಕು ನನ್ನ ಮಾತ ಕೇಳು… 
ನಾಲ್ಕು ದಿನದ ಬಾಳು ಅಲ್ಲಾ, ನಾಲ್ಕು ಹೆಜ್ಜಿ ನಡೆಯಿದಲ್ಲಾ
ಹೇಳಿ-ಕೇಳಿ, ಕೇಳಿ-ಹೇಳಿ ಬಾಳಿ ಬದುಕುವಾ… 
ಗೆಳತಿ, ಬಾಳಿ ಬದುಕುವಾ…
ಬಾರೆ, ಬಾಳಿ ಬದುಕುವಾ…                                         

ನಾಲ್ಕು ಜನರ ಓಣಿಯೊಳಗ, ನಾಲ್ಕು ಜನರು ಬಂಧು ಬಳಗ… 
ನಾಲ್ಕು ಹೆಜ್ಜಿ ತಪ್ಪದಾಂಗ, ನಾಲ್ಕು ಜನರು ಮೆಚ್ಚುವಾಂಗ
ಹೇಳಿ-ಕೇಳಿ, ಕೇಳಿ-ಹೇಳಿ ಬಾಳಿ ಬದುಕುವಾ… 
ಗೆಳತಿ, ಬಾಳಿ ಬದುಕುವಾ…
ಬಾರೆ, ಬಾಳಿ ಬದುಕುವಾ…                                         
                          
ಬಾಳು ಒಂದು ಕೇಳಿ ಅಲ್ಲಾ, ಬರಿಯ ನಗಿಯ ಹೋಳಿ ಅಲ್ಲಾ… 
ಹಾಳು-ಗೀಳು ಅನ್ನದೇನೇ, ತಾಳಿಕೊಂಡು ನೋವನೆಲ್ಲಾ
ಹೇಳಿ-ಕೇಳಿ, ಕೇಳಿ-ಹೇಳಿ ಬಾಳಿ ಬದುಕುವಾ… 
ಗೆಳತಿ, ಬಾಳಿ ಬದುಕುವಾ…
ಬಾರೆ, ಬಾಳಿ ಬದುಕುವಾ…  
 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
ರುಕ್ಮಿಣಿ ನಾಗಣ್ಣವರ

ನಾಲ್ಕ ದಿನದ ಜೀವನನ ನಾಲ್ಕು ಮಂದಿ ಒಳಗ ಹೆಂಗ ಬದುಕಬೇಕು ಅಂತ ಚೆನ್ನಾಗಿ ಹೇಳಿದ್ದೀರಿ ಸರ್..
ಸುಂದರ ಕವಿತೆ. ಕೊನೆಯ ಮೂರು ಸಾಲುಗಳು ತುಂಬಾ ಇಷ್ಟವಾದವು,
ಹೇಳಿ-ಕೇಳಿ, ಕೇಳಿ-ಹೇಳಿ ಬಾಳಿ ಬದುಕುವಾ…
ಗೆಳತಿ, ಬಾಳಿ ಬದುಕುವಾ…
ಬಾರೆ, ಬಾಳಿ ಬದುಕುವಾ…

sunitha.a
sunitha.a
13 years ago

Chennaagide sir…………….baduki baluva kavite….:)))

D.Ravivarma
D.Ravivarma
13 years ago

 
ಬಾಳು ಒಂದು ಕೇಳಿ ಅಲ್ಲಾ, ಬರಿಯ ನಗಿಯ ಹೋಳಿ ಅಲ್ಲಾ… 
ಹಾಳು-ಗೀಳು ಅನ್ನದೇನೇ, ತಾಳಿಕೊಂಡು ನೋವನೆಲ್ಲಾ
ಹೇಳಿ-ಕೇಳಿ, ಕೇಳಿ-ಹೇಳಿ ಬಾಳಿ ಬದುಕುವಾ… 
ಗೆಳತಿ, ಬಾಳಿ ಬದುಕುವಾ…  tumbaa arthapurna maatu sir….
ಬಾರೆ, ಬಾಳಿ ಬದುಕುವಾ…  

ಈಶ್ವರ ಭಟ್

ಭಾಷೆಯ ಬಳಕೆಯೂ ಹಾಡೂ ಸೂಪರು 🙂

hipparagi Siddaram
hipparagi Siddaram
13 years ago

ಚೆನ್ನಾಗಿದೆ ಸರ್…

umesh desai
13 years ago

ಜೀವನದ 'ಸಾರಿಗೆ' ಒಗ್ಗರಣಿ ಉತ್ತಮ ಆಗೇದ ಗುರುಗಳ….!!

Santhoshkumar LM
Santhoshkumar LM
13 years ago

Super

7
0
Would love your thoughts, please comment.x
()
x