ಪಂಜು-ವಿಶೇಷ

ಸಾಮಾನ್ಯ ಜ್ಞಾನ (ವಾರ 51): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಹೋಮಿಯೋಪತಿ ವೈದ್ಯ ಪದ್ಧತಿಯ ಜನಕ ಯಾರು?
೨.    ಅಲ್ಯೂಮಿನಿಯಂ ಲೋಹದ ಅದಿರು ಯಾವುದು?
೩.    ರಾಷ್ಟ್ರೀಯ ಲಾಂಛನವನ್ನು ಭಾರತ ಸರ್ಕಾರವು ಅಳವಡಿಸಿಕೊಂಡ ವರ್ಷ ಯಾವುದು?
೪.    ರಘುಪತಿ ಇದು ಯಾರ ಅಂಕಿತನಾಮವಾಗಿದೆ?
೫.    ಮೇಣದ ಬತ್ತಿಯನ್ನು ತಯಾರಿಸಲು ಬಳಸುವ ಮೇಣ ಯಾವುದು?
೬.    ಮೈಸೂರು – ಕರ್ನಾಟಕ ಎಂದು ನಾಮಕರಣಗೊಂಡ ವರ್ಷ ಯಾವುದು?
೭.    ಜೀವಿಗಳ ಮೂಲಘಟಕವನ್ನು ಜೀವಕೋಶ ಎಂದು ಹೆಸರಿಸಿದ ವಿಜ್ಞಾನಿ ಯಾರು?
೮.    ಅಸ್ಸಾಮಿ ಲೇಖಕ ಬಿ.ಕೆ.ಭಟ್ಟಾಚಾರ್ಯರವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
೯.    ಪ್ರಸಿದ್ಧ ಅವ್ವ  ಕವನ ಸಂಕಲನದ ಕರ್ತೃ ಯಾರು?
೧೦.    ಬೆಸ್ಕಾಂ (BESCOM) ವಿಸ್ತ್ರತ ರೂಪವೇನು?
೧೧.    ೨೦೦೭ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?
೧೨.    ನಾಯಿಯ ಜೀವತಾವಧಿ ಎಷ್ಟು?
೧೩.    ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ರೂವಾರಿ ಯಾರು?
೧೪.    ಕಾಳಿದಾಸ ಸಮ್ಮಾನ್ ಪ್ರಶಸ್ತಿಯನ್ನು ಯಾವ ರಾಜ್ಯ ಸರ್ಕಾರವು ಸ್ಥಾಪಿಸಿದ ಪ್ರಶಸ್ತಿಯಾಗಿದೆ?
೧೫.    ರಾವ್ ಬಹದ್ದೂರ್ ಇದು ಯಾರ ಕಾವ್ಯ ನಾಮವಾಗಿದೆ?
೧೬.    ನ್ಯಾಷನಲ್ ಆರ್ಕೀವ್ ಆಫ್ ಇಂಡಿಯಾ ಮ್ಯೂಸಿಯಂ ಎಲ್ಲಿದೆ?
೧೭.    ಹಿಜಿರಾ ಶಕ ವರ್ಷ ಪ್ರಾರಂಭವಾದ ವರ್ಷ ಯಾವುದು?
೧೮.    ಹಣ್ಣುಗಳಲ್ಲಿರುವ ಸಕ್ಕರೆಯ ಅಂಶ ಯಾವುದು?
೧೯.    ವೈರಸ್ ಎಂಬ ಲ್ಯಾಟಿನ್ ಪದಗಳಲ್ಲಿರುವ ವೈರಾ ಎಂಬ ಪದಕ್ಕಿರುವ ಅರ್ಥವೇನು?
೨೦.    ಯಾವ ರಾಷ್ಟ್ರೀಕೃತ ಬ್ಯಾಂಕ್ ೨೦೦೬ರಲ್ಲಿ ತನ್ನ ಶತಮಾನೋತ್ಸವ ವಾರ್ಷಿಕ ವನ್ನಾಗಿ ಆಚರಿಸಿಕೊಂಡಿತು?
೨೧.    ವೈರ್‌ಲೆಸ್ (ಟೆಲಿಗ್ರಾಫ್)ಯ ಸಂಶೋಧಕರು ಯಾರು?
೨೨.    ೧೯೮೭ ರಲ್ಲಿ ಕುವೆಂಪು ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೨೩.    ದೀನ್-ಇ-ಲಾಹಿ ಧರ್ಮದ ಸ್ಥಾಪಕರು ಯಾರು?
೨೪.    ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಯಾವುದು?
೨೫.    ಸಲಿಂ ದುರಾನಿ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
೨೬.    ೧೯೨೧ರಲ್ಲಿ ಪಂಜೆ ಮಂಗೇಶರಾಯರು ಸ್ಥಾಪಿಸಿದ ಸಂಸ್ಥೆ ಯಾವುದು?
೨೭.    ದಾನಚಿಂತಾಮಣಿ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?
೨೮.    ದೇಶದಲ್ಲಿ ರೈಲ್ವೆ ದುರಸ್ಥಿ ಬಗ್ಗೆ ವರದಿ ನೀಡಲು ನೇಮಿಸಲಾದ ಸಮಿತಿ ಯಾವುದು?
೨೯.    ಬ್ರಹ್ಮಗಿರಿ ವನ್ಯ ಪ್ರಾಣಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.


ಈ ವಾರದ ಪ್ರಸಿದ್ಧ ದಿನಾಚರಣೆಗಳು
ಅಕ್ಟೋಬರ್ ೩೦ – ವಿಶ್ವ ಉಳಿತಾಯ ದಿನ
ಅಕ್ಟೋಬರ್ ೩೧ – ರಾಷ್ಟ್ರೀಯ ಏಕತಾ ದಿನ
ನವೆಂಬರ್ ೦೧ – ಕನ್ನಡ ರಾಜ್ಯೋತ್ಸವ


ಉತ್ತರಗಳು:
೧.    ಸ್ಯಾಮುವೆಲ್ ಹಾನಿಮನ್ 
೨.    ಬಾಕ್ಸೈಟ್ 
೩.    ಜನವರಿ ೨೬-೧೯೫೦
೪.    ನರಹರಿ ತೀರ್ಥರು
೫.    ಪ್ಯಾರಾಫಿನ್ 
೬.    ೧೯೭೩
೭.    ರಾಬರ್ಟ್ ಹುಕ್ 
೮.    ಮೃತ್ಯುಂಜಯ 
೯.    ಪಿ.ಲಂಕೇಶ
೧೦.    ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪೆನಿ (ನಿ)
೧೧.    ಎಲ್.ಎಸ್.ಶೇಷಗಿರಿರಾವ್
೧೨.    ೧೫ ವರ್ಷ
೧೩.    ರಾಜೀವ್ ಗಾಂಧಿ
೧೪.    ಮಧ್ಯಪ್ರದೇಶ
೧೫.    ಆರ್.ಬಿ.ಕುಲಕಿರ್ಣಿ
೧೬.    ದೆಹಲಿ
೧೭.    ಕ್ರಿ.ಶ.೬೨೨
೧೮.    ಪ್ರಾಕ್ಟೋಸ್
೧೯.    ವಿಷಪೂರಿತ 
೨೦.    ಕೆನರಾ ಬ್ಯಾಂಕ್
೨೧.    ಜಿ.ಮಾರ್ಕೊನಿ (ಇಟಲಿ) 
೨೨.    ಶ್ರೀ ರಾಮಾಯಣ ದರ್ಶನಂ
೨೩.    ಅಕ್ಬರ್
೨೪.    ಅರ್ಜುನ್ ಪ್ರಶಸ್ತಿ 
೨೫.    ಕ್ರಿಕೆಟ್
೨೬.    ಬಾಲ ಸಾಹಿತ್ಯ ಮಂಡಲ
೨೭.    ಸಾಹಿತ್ಯ 
೨೮.    ಕಾಕೋಡ್ಕರ್ ಸಮಿತಿ
೨೯.    ಕೊಡಗು
೩೦.    ಹೋಮಿ ಜಹಾಂಗೀರ್ ಭಾಭಾ (ಭಾರತದ ಅಣು ವಿಜ್ಞಾನಿ)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *