ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 30): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧)    ಮೇ – ೨೬ – ೨೦೧೪ ರಂದು ನರೇಂದ್ರ ಮೋದಿಯವರು ಭಾರತದ ಎಷ್ಟನೆಯ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ?
೨)    ಇತ್ತಿಚೆಗೆ ನಡೆದ ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಉಮಾಭಾರತಿಯವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ ?
೩)    ಪೋಲಿಯೋ ನಿರ್ಮೂಲನೆಯ ಹರಿಕಾರ ಎಂಬ ಖ್ಯಾತಿ ಪಡೆದ ಡಾ||ಹರ್ಷವರ್ಧನ ಅವರಿಗೆ ಮೋದಿ ಸಂಪುಟದಲ್ಲಿ ಯಾವ ಖಾತೆ ನೀಡಲಾಗಿದೆ ?
೪)    ಇತ್ತೀಚೆಗೆ ದೂರ ಸಂಪರ್ಕ ಮತ್ತು ಕಾನೂನು ನ್ಯಾಯಾಂಗ ಸಚಿವರಾದ ರವಿಶಂಕರ್ ಪ್ರಸಾದ್ ಮೊದಲಿಗೆ ಯಾವ ವೃತ್ತಿಯಲ್ಲಿ ಇದ್ದವರು ?
೫)    ಕಿರುತೆರೆ ನಟಿ ಸ್ಮೃತಿ ಇರಾನಿ ಅಮೇಥಿ ಕ್ಷೇತ್ರದಿಂದ ಕಾಂಗ್ರೇಸಿನ ಯಾವ ಅಭ್ಯರ್ಥಿಯ ವಿರುದ್ದ ಸ್ಪರ್ಧಿಸಿದ್ದರು ?
೬)    ತಮಿಳುನಾಡು ಬಿಜೆಪಿಯಿಂದ ಆಯ್ಕೆಯಾಗಿರುವ ಏಕೈಕ ಸಂಸದರು ಯಾರು ?
೭)    ಭಾರತೀಯ ಸೇನಾ ಮುಖ್ಯಸ್ಥ ಸ್ಥಾನದಿಂದ ನಿವೃತ್ತಿ ಬಳಿಕ ವಿ.ಕೆ.ಸಿಂಗ್‌ರವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು ?
೮)    ಭಾರತದ ಪ್ರಧಾನಿ ನರೇಂದ್ರ ಮೋಧಿಯವರ ಜನ್ಮ ಸ್ಥಳ ಯಾವುದು ?
೯)    ನರೇಂದ್ರ ಮೋದಿಯವರು ಮೊದಲು ಗುಜರಾತಿನ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವರ್ಷ ಯಾವುದು ?
೧೦)    ಮೋದಿ ಸಂಪುಟದಲ್ಲಿರುವ ಅತಿ ಹಿರಿಯವಯಸ್ಸಿನ ಸಚಿವೆ ಯಾರು ?
೧೧)    ಅರುಣ ಜೇಟ್ಲಿ ಅವರು ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ವರ್ಷ ಯಾವುದು ?
೧೨)    ಜನರಲ್ ಥಿಯರಿ ಗ್ರಂಥದ ಕರ್ತೃ ಯಾರು ?
೧೩)    VAT ನ – ವಿಸ್ತೃತ ರೂಪವೇನು ?
೧೪)    ನವಿಲುತೀರ್ಥ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ ?
೧೫)    ಮಂಗಳ ಗ್ರಹಕ್ಕೆ ಎರಡು ಉಪಗ್ರಹಗಳಿರಬೇಕೆಂದು ಮೊದಲು ಊಹಿಸಿದವರು ಯಾರು ?
೧೬)    ಕೊಂಕಣ ರೈಲು ಮಾರ್ಗ ಯಾವ ರಾಜ್ಯಗಳ ಜಂಟಿ ಯೋಜನೆ ?
೧೭)     ಬ್ರಹ್ಮಗಿರಿ ವನ್ಯ ಪ್ರಾಣಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ?
೧೮)    ಮಾನವನ ಜಠರದ ಗೋಡೆಯಲ್ಲಿ ಎಷ್ಟು ಪದರದ ಸ್ನಾಯುಗಳಿವೆ ?
೧೯)    ಫಿರಾಮಿಡ್‌ಗಳು ಯಾವ ನಾಗರೀಕತೆಯ ಕೊಡುಗೆಗಳು ?
೨೦)    ಭಾರತ ಸರ್ಕಾರವು ಕೊಳಚೆ ನಿರ್ಮೂಲನಾ ಸುಧಾರಣಾ ಕಾಯಿದೆ ಜಾರಿಗೆ ತಂದ  ವರ್ಷ ಯಾವುದು ?
೨೧)    ರಾಷ್ಟ್ರೀಯ ನರ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ ?
೨೨)    ಭಾರತದಲ್ಲಿ ಮೊದಲ ಸಿನಿಮಾ ತಯಾರಿಕೆ ಆರಂಭವಾದ ವರ್ಷ ಯಾವುದು ?
೨೩)    ಸಿಂಧೂನದಿ ನಾಗರಿಕತೆಯ ಜನರ ಮುಖ್ಯ ಉದ್ಯೋಗ ಯಾವುದಾಗಿತ್ತು ?
೨೪)    ಗೋಬಿ ಮರಭೂಮಿ ಯಾವ ಖಂಡದಲ್ಲಿದೆ ?
೨೫)    ಎಲೆಕ್ಟ್ರಾನನ್ನು ಕಂಡು ಹಿಡಿದವರು ಯಾರು ?
೨೬)    ಅಮೇರಿಕಾದ ಛಾಯಾ ಚಿತ್ರ ಸೊಸೈಟಿಯ ಗೌರವ ಫಿಲೋಷಿಪ್ ಪಡೆದ ಮೊದಲ ಕರ್ನಾಟಕದ ವ್ಯಕ್ತಿ ಯಾರು ?
೨೭)    ಮೈಸೂರು ಸ್ಯಾಂಡಲ್ ಸೋಪು ಕಾರ್ಖಾನೆ ಕರ್ನಾಟಕದಲ್ಲಿ ಎಲ್ಲಿದೆ ?
೨೮)    ’ಇಂದಿರಾ ಪಾಯಿಂಟ್’ ಎಲ್ಲಿದೆ ?
೨೯)    ೧೯೫೨ರಲ್ಲಿ ಭಾರತದ ಮೊದಲ ಚಲನಚಿತ್ರೋತ್ಸವವನ್ನು ಉದ್ಘಾಟಿಸಿದ ಕನ್ನಡಿಗ ಯಾರು ?
೩೦)    ಈ ಚಿತ್ರದಲ್ಲಿರುವವರನ್ನು ಗುರುತಿಸಿ.

ಈ ವಾರದ ಪ್ರಸಿದ್ದ ದಿನಾಚರಣೆಗಳು
ಜೂನ್ ೦೪ ದುರಾಕ್ರಮಣಕ್ಕೆ ಸಿಕ್ಕ ಮುಗ್ಧ ಕಂದಮ್ಮಗಳ ವಿಶ್ವದಿನ
ಜೂನ್ ೦೫ ವಿಶ್ವ ಪರಿಸರ ದಿನಾಚರಣೆ 

ಉತ್ತರಗಳು
೧)    ೧೫ನೇ
೨)    ಝಾನ್ಸಿ
೩)    ಆರೋಗ್ಯ
೪)    ಸುಪ್ರೀಂ ಕೊರ್ಟಿನಲ್ಲಿ ವಕೀಲರು
೫)    ರಾಹುಲ್ ಗಾಂಧಿ
೬)    ಪೊನ್ ರಾಧಾಕೃಷ್ಣನ್
೭)    ಉತ್ತರ ಪ್ರದೇಶದ ಗಾಜಿಯಾಬಾದ್
೮)    ಗುಜರಾತನ ಮೆಹಸಾನಾ ಜಿಲ್ಲೆಯ ವಡ್‌ನಗರ
೯)    ೨೦೦೧ – ಆಗಸ್ಟ್ – ೦೭
೧೦)    ನಜ್ಮಾ ಹೆಪ್ತುಲ್ಲಾ
೧೧)    ೨೦೧೪
೧೨)    ಜೆ.ಎಂ.ಕೇನ್ಸ್
೧೩)    ವ್ಯಾಲ್ಯೊ ಆಡೆಡ್ ಟ್ಯಾಕ್ಸ್ (ಗಿಂಐUಇ ಂಆಆಇಆ. ಖಿಂಘಿ)
೧೪)    ಮಲಪ್ರಭಾ
೧೫)    ಜೊನಾಥನ್ ಸ್ವಿಪ್ಟ್
೧೬)    ಕರ್ನಾಟಕ, ಗೋವಾ, ಮಹಾರಾಷ್ಟ್ರ
೧೭)     ಕೊಡಗು ಜಿಲ್ಲೆ
೧೮)    ಮೂರು
೧೯)    ಈಜಿಪ್ಟ್ ನಾಗರೀಕತೆ
೨೦)    ೧೯೫೬
೨೧)    ಬೆಂಗಳೂರು
೨೨)    ೧೯೧೨
೨೩)    ಕೃಷಿ ಮತ್ತು ವ್ಯಾಪಾರ
೨೪)    ಏಷ್ಯಾ ಖಂಡ
೨೫)    ಜೆ.ಜೆ. ಥಾಮ್ಸನ್
೨೬)    ಸಿ. ರಾಜಗೋಪಾಲ್
೨೭)    ಬೆಂಗಳೂರು
೨೮)    ನಿಕೋಬಾರ್
೨೯)    ಆರ್.ಆರ್.ದಿವಾಕರ್
೩೦)    ರಾಕೇಶ್ ಶರ್ಮಾ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *