ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 3): ಮಹಾಂತೇಶ್ ಯರಗಟ್ಟಿ


೧. ಕನ್ನಡದ ಮೊದಲ ರಾಜಮನೆತನ ಯಾವುದು?

೨. ಸತತವಾಗಿ ಮೂರು ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಏಕೈಕ ಕನ್ನಡಿಗ ಯಾರು..? ಯಾವ ವರ್ಷ?

೩. ಕನ್ನಡ ನಾಡಿನ ಮೊದಲ ಗಣಿತಜ್ಞ ಯಾರು?

೪. ಕರ್ನಾಟಕದಲ್ಲಿ ಸಾವಿರ ಕಂಬಗಳ ಬಸದಿ ಎಲ್ಲಿದೆ?

೫. ಕನ್ನಡದ ಮೊದಲ ಶಿಲ್ಪಿ ಯಾರು?

೬. ಕನ್ನಡದ ಮೊದಲು ಬೆರಳಚ್ಚುವಿನ ಯಂತ್ರವನ್ನು ರೂಪಿಸಿದವರು ಯಾರು?

೭. ಕನ್ನಡದ ಉಪಮಾ ಲೋಲ ಕವಿ ಯಾರು?

೮. ೧೯೩೦ರಲ್ಲಿ ಪ್ರಕಟವಾದ ಗೋವಿಂದಪೈ ಅವರ ಮೊದಲ ಕವನ ಸಂಕಲನ ಯಾವುದು?

೯. ಎಲ್.ಎಂ.ಕರಿಬಸಪ್ಪ ಯಾವ ಸ್ಪರ್ಧೆಯಲ್ಲಿ ಭಾರತ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ?

೧೦. ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?

೧೧. ಓಶಿಯಾನಾ ಚಿತ್ರೋತ್ಸವದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದವರು ಯಾರು?

೧೨. ಕನ್ನಡದ ಪ್ರಪ್ರಥಮ ಪ್ರಾಧ್ಯಾಪಕ ಯಾರು?

೧೩. ಏಷ್ಯಾ ಖಂಡದಲ್ಲಿ ಬೃಹತ್ ಏಕಶೀಲಾ ಬೆಟ್ಟವಿರುವ ಕರ್ನಾಟಕದ ಜಿಲ್ಲೆ ಯಾವುದು?

೧೪. ಅಕ್ಕಾ ಕೇಳವ್ವ ನಾವೊಂದು ಕನಸ ಕಂಡೆ ಅಕ್ಕಮಹದೇವಿಯವರ ಈ ವಚನವನ್ನು ಹಾಡಿ ಜನಪ್ರಿಯಗೊಳಿಸಿದ ಖ್ಯಾತ ಸಂಗೀತಜ್ಞ ಯಾರು?

೧೫. ಜಲವಿದ್ಯುತ್ ಯೋಜನೆಗಳಲ್ಲಿ ಭಾರತದಲ್ಲೇ ಪ್ರಥಮ ಸ್ಥಾನದಲ್ಲಿರುವ ರಾಜ್ಯ ಯಾವುದು?

೧೬. ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಪ್ರಥಮ ಜಾರಿಗೆಯಾಗಿದ್ದು ಯಾವಾಗ?

೧೭. ಕರ್ನಾಟಕದಲ್ಲಿ ನೋಟು ಮುದ್ರಣಾಲಯವನ್ನು ಹೊಂದಿರುವ ನಗರ ಯಾವುದು?

೧೮. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು?

೧೯. ಕರ್ನಾಟಕದ ಪ್ರತಿಷ್ಠಿತ ನಾಗರೀಕ ಪ್ರಶಸ್ತಿ ಯಾವುದು?

೨೦. ಕರ್ನಾಟಕದ ಪ್ರಥಮ ಮಹಿಳಾ ನ್ಯಾಯಾಧೀಶರು ಯಾರು?

೨೧. ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ವಿಶ್ವದಾಖಲೆ ಮಾಡಿದ್ದ ಕರ್ನಾಟಕ ವೈಧ್ಯ ಯಾರು?

೨೨. ಪಂಚಲೋಹಗಳು ಯಾವುವು?

೨೩. ಕರ್ನಾಟಕದ ವಿಸ್ತೀರ್ಣವೆಷ್ಟು?

೨೪. ಮಹಾ ವಿಷ್ಣುವಿನ ಚತ್ರದ ಹೆಸರೇನು?

೨೫. ವೀರೇಶ ಚರಿತ – ಇದು ಯಾರ ಕೃತಿ.

೨೬. ನೇಗಿಲಯೋಗಿ ಗೀತೆಯನ್ನು ಕನ್ನಡದ ಯಾವ ಚಿತ್ರದಲ್ಲಿ ಅಳವಡಿಸಲಾಗಿದೆ?

೨೭. ಕರ್ನಾಟಕದ ‘ತೊಗರಿಯ ಕಣಜ’ ಎಂದು ಯಾವ ಜಿಲ್ಲೆಗೆ ಕರೆಯುತ್ತಾರೆ?

೨೮. ‘ಶಿಸ್ತು’ ಕಂದಾಯ ಪದ್ಧತಿಯನ್ನು ಜಾರಿಗೆ ತಂದ ಪಾಳೆಗಾರ ಯಾರು?

೨೯. ಶಿವನು ಸಂಧ್ಯಾಕಾಲದಲ್ಲಿ ಮಾಡುವ ನೃತ್ಯಕ್ಕೆ ಏನೆಂದು ಹೆಸರು?

೩೦. ಈ ಭಾವಚಿತ್ರದಲ್ಲಿರುವವರನ್ನು ಗುರ್ತಿಸಿ.

 

ಉತ್ತರಗಳು: ೧. ಕದಂಬ  ೨. ಎಚ್.ವಿ.ನಂಜುಂಡಯ್ಯ (೧೯೧೫-೧೬-೧೭)  ೩. ಮಹಾವೀರಾಚಾರ್ಯರು೪. ಮೂಡಬಿದರೆ  ೫. ಟಿಣಕ  ೬. ಅನಂತ ಸುಬ್ಬರಾವ್  ೭. ಲಕ್ಷ್ಮೀಶ  ೮. ಗಿಳಿವಿಂಡು  ೯. ದೇಹದಾರ್ಢ್ಯ  ೧೦. ಶಬ್ದಮಣಿ ದರ್ಪಣ  ೧೧. ಉಮಾಶ್ರೀ (ಗುಲಾಬಿ ಟಾಕೀಸ್)  ೧೨. ಟಿ.ಎನ್.ವೆಂಕಣ್ಣಯ್ಯ  ೧೩. ತುಮಕೂರು (ಮಧುಗಿರಿ) ೧೪. ಮಲ್ಲಿಕಾರ್ಜುನ ಮನ್ಸೂರ್  ೧೫. ಕರ್ನಾಟಕ  ೧೬. ೧೯೭೧ರಲ್ಲಿ  ೧೭. ಮೈಸೂರು (ರಿಸರ್ವ್ ಬ್ಯಾಂಕ್ ನೋಟು ಮುದ್ರಣ)  ೧೮. ಮುಳ್ಳಯ್ಯನ ಗಿರಿ(ಚಿಕ್ಕಮಗಳೂರು)  ೧೯. ಕರ್ನಾಟಕ ರತ್ನ  ೨೦. ಮಂಜುಳಾ ಚೆಲ್ಲೂರ್  ೨೧. ಡಾ||ಎಂ.ಸಿ.ಮೋದಿ  ೨೨. ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ  ೨೩. ೧.೯೧.೭೯೧ಚ.ಕಿ.ಮೀ  ೨೪. ಸುದರ್ಶನ ಚಕ್ರ  ೨೫. ರಾಘವಾಂಕ  ೨೬. ಕಾಮನಬಿಲ್ಲು   ೨೭. ಗುಲ್ಬರ್ಗಾ  ೨೮. ಶಿವಪ್ಪನಾಯಕ  ೨೯. ತಾಂಡವ  ೩೦. ಟಿ.ಪಿ. ಕೈಲಾಸಂ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಸಾಮಾನ್ಯ ಜ್ಞಾನ (ವಾರ 3): ಮಹಾಂತೇಶ್ ಯರಗಟ್ಟಿ

  1. ಸಾಮಾನ್ಯ ಜ್ಞಾನ ತುಂಬಾ ಚನ್ನಾಗಿದೆ. ನನಗೆ ತುಂಬಾನೆ ಅನುಕೂಲ ಆಯ್ತು. ತುಂಬಾ ತುಂಬಾ ಥ್ಯಾಂಕ್ಸ್……………
    ಹಾಗೆಯೇ ಸಾಮಾನ್ಯ ಜ್ಞಾನ ವಾರ 3 ರ ಉತ್ತರ ಸಿಗುತ್ತಿಲ್ಲ. ದಯವಿಟ್ಟು ತಿಳಿಸ್ತೀರಾ??????,,

Leave a Reply

Your email address will not be published. Required fields are marked *