ಸಾಮಾನ್ಯ ಜ್ಞಾನ (ವಾರ 26): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:-
೧.    ಜವಹರ್‌ಲಾಲ್ ನೆಹರು ಅವರು ರಾಜಸ್ಥಾನದ ನಾಗೂರ್‌ನಲ್ಲಿ ಮೊಟ್ಟ ಮೊದಲ ಪಂಚಾಯತಿಯನ್ನು ಉದ್ಘಾಟಿಸಿದ ದಿನ ಯಾವುದು?
೨.    ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು?
೩.    ಗಾಂಧೀ ಸಾಹಿತ್ಯವನ್ನು ಕನ್ನಡಕ್ಕೆ ತಂದವರಲ್ಲಿ ಅಗ್ರಗಣ್ಯರು ಯಾರು?
೪.    ಮೊದಲ ಲೋಕಸೇವಾ ಆಯೋಗವು ಭಾರತದಲ್ಲಿ ಸ್ಥಾಪನೆಯಾದ ವರ್ಷ ಯಾವುದು?
೫.    ರಾಜ್ಯ ವಿಧಾನ ಸಭೆಯಲ್ಲಿ ೧೯೮೦-೮೧ರಲ್ಲಿ ಆಯವ್ಯಯ ಪತ್ರವನ್ನು ಸಂಪೂರ್ಣವಾಗಿ ಕನ್ನಡದಲ್ಲಿ ಮಂಡಿಸಿದ ಸಚಿವರು ಯಾರು?
೬.    ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತದ ಎರಡನೇಯ ರಾಜ್ಯ ಯಾವುದು?
೭.    ಸಮುದಾಯ ಅಭಿವೃದ್ಧಿ ಯೋಜನೆ ಜಾರಿಗೆ ಬಂದ ವರ್ಷ ಯಾವುದು?
೮.    ಜಿಲ್ಲಾ ಪಂಚಾಯತ್ ಹಾಗೂ ಮಂಡಲ ಪಂಚಾಯತ್ ಈ ಎರಡು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲು ಶಿಫಾರಸ್ಸು ಮಾಡಿದ ಸಮಿತಿ ಯಾವುದು?
೯.    ಸಿರಿಸಂಪಿಗೆ ಇದು ಯಾರು ಬರೆದ ಕೃತಿ? 
೧೦.    ಅಮೇರಿಕಾದ  ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?
೧೧.    ಭಾರತದ ಮುನ್ಸಿಪಲ್ ಕಾರ್ಪೋರೇಶನನ್ನು ಮದ್ರಾಸ್‌ನಲ್ಲಿ ಪ್ರಾರಂಭಿಸಲಾದ ವರ್ಷ ಯಾವುದು?
೧೨.    ೧೯೯೩ರ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ಬಂದಾಗ ಇದ್ದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾರು?
೧೩.    ಗ್ರಾಹಕ ರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು?
೧೪.    ೧೯೦೦ ಕಾಂಗ್ರೆಸ್ ಅಧೀವೇಶನದ ಅಧ್ಯಕ್ಷರಾಗಿದ್ದ ಕನ್ನಡಿಗ ಯಾರು?
೧೫.    ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ಮಹಿಳೆ ಯಾರು?
೧೬.    ಕರ್ನಾಟಕದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಒಂದು ಮೈಲುಗಲ್ಲು ಎಂದು ಕರೆಯಬಹುದಾದ ವರ್ಷ ಯಾವುದು?
೧೭.    ಅನುಸೂಚಿತ ಪ್ರದೇಶಗಳಿಗೆ ಪಂಚಾಯಿತಿಯನ್ನು ಅಳವಡಿಸಲು ಜಾರಿಗೆ ತಂದ ಕಾಯ್ದೆ ಯಾವುದು?
೧೮.    ಅಮೇರಿಕಾದಿಂದ ಪ್ರಕಟವಾಗುತ್ತಿದ್ದ ಕನ್ನಡ ಪತ್ರಿಕೆ ಯಾವುದು? ಮತ್ತು ಅದರ ಸಂಪಾದಕರು ಯಾರು?
೧೯.    ಗ್ರಾಮ ಪಂಚಾಯತ್, ತಾಲೂಕ್ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರ ಅಧಿಕಾರಾವಧಿ ಎಷ್ಟು?
೨೦.    ವಿಶ್ವ ಕಾರ್ಮಿಕ ಸಮ್ಮೇಳನದಲ್ಲಿ ಭಾರತದ ತಂಡದ ನೇತೃತ್ವ ವಹಿಸಿದ ಕಾರ್ಮಿಕ ನಾಯಕ ಯಾರು?
೨೧.    ಸ್ಥಳೀಯ ಸರ್ಕಾರದ ಘಟಕವಾಗಿ ಪಂಚಾಯಿತಿ ರಚನೆಗೆ ಅವಕಾಶ ಕಲ್ಪಿಸಿದ ಭಾರತದ ಸಂವಿಧಾನದ ವಿಧಿ ಯಾವುದು?
೨೨.    ಪಂಜಾಬ್ ಮತ್ತು ಹರಿಯಾಣ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಕರ್ನಾಟಕದ ನ್ಯಾಯಾಧೀಶರು ಯಾರು?
೨೩.    ಸ್ವರ್ಣಕಮಲ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಲನಚಿತ್ರ ಯಾವುದು?
೨೪.    ತಾಳಿಕೋಟೆ ಯುದ್ಧ ನಡೆದ ವರ್ಷ ಯಾವುದು?
೨೫.    ಡಿಸೇಲ್ ಎಂಜಿನ್ ಕಂಡು ಹಿಡಿದ ತಂತ್ರಜ್ಞ ಯಾರು?
೨೬.    ಕರ್ನಾಟಕದಲ್ಲಿ ಕಿತ್ತಳೆ ಕೃಷಿಗೆ ಹೆಸರಾಗಿರುವ ಜಿಲ್ಲೆ ಯಾವುದು?
೨೭.    ವಿಶ್ವ ವಿಖ್ಯಾತ ವಿಕ್ಟೋರಿಯಾ ಜಲಪಾತ ಯಾವ ದೇಶದಲ್ಲಿದೆ?
೨೮.    ಕ್ರೀಡೆಗೆ ಮೀಸಲಾಗಿದ್ದ ಕನ್ನಡದ ಮೊಟ್ಟ ಮೊದಲ ಪತ್ರಿಕೆ ಯಾವುದು?
೨೯.    ಪ್ರಸಿದ್ಧ ಹಿನ್ನೆಲೆ ಗಾಯಕ ಕಿಶೋರ್‌ಕುಮಾರ ಯಾವ ಕನ್ನಡ ಚಿತ್ರದಲ್ಲಿ ಹಾಡಿದ್ದಾರೆ?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆಗಳು
ಮೇ – ೫ ರಾಷ್ಟ್ರೀಯ ಶ್ರಮಿಕ ದಿನ 
ಮೇ – ೮ ವಿಶ್ವರೆಡ್ ಕ್ರಾಸ್ ದಿನ
ಮೇ – ೧೧ ತಾಯಂದಿರ ದಿನ ಮತ್ತು ರಾಷ್ಟ್ರೀಯ ತಂತ್ರಜ್ಞಾನ ದಿನ

ಉತ್ತರಗಳು:
೧.    ೧೯೫೯ ಅಕ್ಟೋಬರ್- ೨ 
೨.    ರಾಜಶೇಖರ ಚರಿತ್ರಮು
೩.    ಸಿದ್ದವನಹಳ್ಳಿ ಕೃಷ್ಣಶರ್ಮ
೪.    ೧೯೨೬ ಅಕ್ಟೋಬರ್ – ೧
೫.    ಎಂ.ವೀರಪ್ಪ ಮೊಯ್ಲಿ
೬.    ಆಂಧ್ರ ಪ್ರದೇಶ
೭.    ೧೯೫೨
೮.    ಅಶೋಕ ಮೆಹ್ತಾ ಸಮಿತಿ 
೯.    ಚಂದ್ರಶೇಖರ ಕಂಬಾರ
೧೦.    ಮಾರ್ಟಿನ್ ಲೂಥರ್ ಕಿಂಗ್
೧೧.    ೧೬೮೭
೧೨.    ಎಂ.ವೀರಪ್ಪ ಮೊಯ್ಲಿ
೧೩.    ೧೯೮೬
೧೪.    ನಾರಾಯಣ ಚಂದಾವರ್ಕರ್
೧೫.    ಡಾ||ಅನುಪಮಾ ನಿರಂಜನ್
೧೬.    ೧೯೮೩
೧೭.    ೧೯೯೬ರ ಕಾಯ್ದೆ
೧೮.    ಅಮೇರಿ ಕನ್ನಡ, ಎಸ್.ಕೆ.ಹರಿಹರೇಶ್ವರ
೧೯.     ೫ ವರ್ಷಗಳು
೨೦.    ಎನ್.ವೆಂಕಟರಾಂ
೨೧.    ೪೦ನೇ ವಿಧಿ
೨೨.    ಎನ್.ರಾಮಯೋಜಿಸ್
೨೩.    ಸಂಸ್ಕಾರ
೨೪.    ೧೫೬೫
೨೫.    ರುಡಾಲ್ಫ್ ಡಿಸೇಲ್
೨೬.    ಕೊಡಗು
೨೭.    ಟಾಂಜೇನಿಯ, ಉಗಾಂಡಾ
೨೮.    ರಾಜು ಪತ್ರಿಕೆ
೨೯.    ಕುಳ್ಳ ಎಜೆಂಟ್ ೦೦೦
೩೦.    ಮದರ್ ತೆರೆಸಾ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
B C Girish
B C Girish
10 years ago

You are sharing very good information: thank you Mr. Mahantesh

 

 

mahantesh.Y
mahantesh.Y
10 years ago

Thanku very much sir………….

2
0
Would love your thoughts, please comment.x
()
x