ಸಾಮಾನ್ಯ ಜ್ಞಾನ (ವಾರ 22): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಸಂವಿಧಾನದ ಯಾವ ತಿದ್ದುಪಡಿಯಲ್ಲಿ ಮತದಾನದ ವಯಸ್ಸು ೨೧ ರಿಂದ ೧೮ಕ್ಕೆ ವರ್ಷಕ್ಕೆ ಇಳಿಸಲಾಯಿತು?
೨.    ರಾಜಾಸಂಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
೩.    ಜಾರ್ಖಂಡ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
೪.    ರಾಮನಾಥ ಅಂಕಿತವಿಟ್ಟು ವಚನಗಳನ್ನು ಬರೆದ ವಚನಕಾರ ಯಾರು?
೫.    ಭಾಷಾವಾರು ಪ್ರಾಂತ್ಯಗಳ ಮೇರೆಗೆ ಸ್ಥಾಪನೆಗೊಂಡ ಮೊದಲ ಭಾರತೀಯ ರಾಜ್ಯ ಯಾವುದು?
೬.    ಗೋಬರ್ ಗ್ಯಾಸ್‌ನಲ್ಲಿರುವ ಅನಿಲ ಯಾವುದು?
೭.    ಮೊದಲ ಬಾರಿಗೆ ಭೂಮಿಯ ಮೇಲೆ ಕಾಣಿಸಿಕೊಂಡ ಸಸ್ಯಜಾತಿ ಯಾವುದು?
೮.    ಡೆಂಗ್ಯೂ ಜ್ವರ ಹರಡುವ ಮಾಡುವ ಸೊಳ್ಳೆ ಯಾವುದು?
೯.    ’ಸಂಭವಾಮಿ ಯುಗೇ ಯುಗೇ’ ಇದು ಯಾರ ಮಾತು?
೧೦.    ಹರಗೋವಿಂದ ಖುರಾನ್ ಅವರಿಗೆ ನೊಬೆಲ್ ಪಾರಿತೋಷಕ ಯಾವ ವರ್ಷದಲ್ಲಿ ದೊರೆಯಿತು?
೧೧.    ಗಣಿತದ ಆಟ ಮತ್ತು ಹಲವಾರು ವಿಜ್ಞಾನದ ವಿಷಯಗಳನ್ನು ಹೊಂದಿರುವ ಸಾಹಿತ್ಯ ಕೃತಿ ಯಾವುದು?
೧೨.    ದಂತಕ್ಷಯ ತಡೆಯಲು ಟೂತ್ ಪೇಸ್ಟ್‌ನಲ್ಲಿ ಬಳಸುವ ಪದಾರ್ಥ ಯಾವುದು?
೧೩.    ಹಾಲಿನಲ್ಲಿರುವ ಪ್ರೋಟೀನ್ ಯಾವುದು?
೧೪.    ಪಾರ್ಲಿಮೆಂಟಿಗೆ ಸಂವಿಧಾನ ತಿದ್ದುಪಡಿ ಮಾಡಲು ಅಧಿಕಾರವಿದೆ. ಇದನ್ನು ಸಂವಿಧಾನದ ಯಾವ ವಿಧಿಯಲ್ಲಿ ಹೇಳಿದೆ?
೧೫.    ಭಾರತದ ಮೊದಲನೆಯ ಮುಖ್ಯ ಚುನಾವಣಾ ಆಯುಕ್ತರು ಯಾರು?
೧೬.    ಬೌದ್ಧಧರ್ಮ ಪ್ರಚಾರಕ್ಕಾಗಿ ಕರ್ನಾಟಕದಲ್ಲಿರುವ ಸಂಸ್ಥೆ ಯಾವುದು?
೧೭.    ಆರೋಗ್ಯವಂತ ವಯಸ್ಕನ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ರಕ್ತವಿರುತ್ತದೆ?
೧೮.    ಗ್ರಹಗಳ ಚಲನೆಯನ್ನು ವಿವರಿಸುವ ಸಿದ್ಧಾಂತ ಯಾವುದು?
೧೯.    ಜೈಮಿನಿಭಾರತ ಬರೆದವರು ಯಾರು?
೨೦.    ಬೆಂಗಳೂರಿನಲ್ಲಿ ಹೈಕೋರ್ಟ್ ಪ್ರಾರಂಭವಾದ ವರ್ಷ ಯಾವುದು?
೨೧.    ಅಪಾಯ ಬಂದಾಗ ಸತ್ತಂತೆ ನಟಿಸಿ ಪಾರಾಗುವ ಜಾಣತನ ಪ್ರಾಣಿಯೊಂದಕ್ಕಿದೆ, ಅದು ಯಾವುದು?
೨೨.    ಓಜೋನ್ ಪದರಿಗೆ ಹಾನಿ ಮಾಡುವಂತ ರಾಸಾಯನಿಕ ಯಾವುದು?
೨೩.    ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುವವರು ಯಾರು?
೨೪.    ಭಾರತದ ಮೊಗಲ ಸಾಮ್ರಾಜ್ಯ ಕೊನೆಯ ಚಕ್ರವರ್ತಿ ಯಾರು?
೨೫.    ಮುನ್ನೂರಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಿಗೆ ಸಾಹಿತ್ಯ ಒದಗಿಸಿ ದಾಖಲೆ ಮಾಡಿದ ಚಿತ್ರಸಾಹಿತಿ ಯಾರು?
೨೬.    ಭಾರತದ ಮೊದಲ ಆಧುನಿಕ ಖಗೋಳ ಪರೀವಿಕ್ಷಣಾಲಯ ಎಲ್ಲಿ ನಿರ್ಮಾಣವಾಯಿತು?
೨೭.    ಕಂಪ್ಯೂಟರ್‌ನ ಸಂಶೋಧಕ ಯಾರು?
೨೮.    ಬಿಳಿ ಆನೆಯ ನಾಡೆಂದು ಯಾವುದನ್ನು ಕರೆಯುತ್ತಾರೆ?
೨೯.    ಭಾರತದಲ್ಲಿ ಜನಗಣತಿ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆಗಳು
ಏಫ್ರಿಲ್ – ೧೨ ವಿಶ್ವ ಬಾಹ್ಯಾಕಾಶ ದಿನ

ಉತ್ತರಗಳು:
೧.    ೬೨ನೇ ತಿದ್ದುಪಡಿ
೨.    ಅಮೃತ ಸರ
೩.    ೧೫.೧೧.೨೦೦೦
೪.    ದೇವರದಾಸಿಮಯ್ಯ
೫.    ಆಂಧ್ರ ಪ್ರದೇಶ
೬.    ಮೀಥೇನ್
೭.    ಥ್ಯಾಲೋಪೈಟ್ 
೮.    ಕ್ಯುಲೆಕ್ಸ್ ಸೊಳ್ಳೆ
೯.    ಶ್ರೀ ಕೃಷ್ಣನದು
೧೦.    ೧೯೬೮
೧೧.    ಆಲಿಸ್ ಇನ್ ವಂಡರ್‌ಲ್ಯಾಂಡ್
೧೨.    ಸೋಡಿಯಂ ಫ್ಲೋರೈಡ್
೧೩.    ಕೇಸಿನ್
೧೪.    ೩೬೦ನೇ ವಿಧಿ
೧೫.    ಸುಕುಮಾರ್ ಸೇನ್
೧೬.    ಮಹಾಬೋಧಿ ಸೊಸೈಟಿ, ಬೆಂಗಳೂರು
೧೭.    ೫-೬ ಲೀಟರ್‌ಗಳು
೧೮.    ಕೆಪ್ಲರ್ ಸಿದ್ದಾಂತ
೧೯.    ಲಕ್ಷ್ಮೀಶ
೨೦.    ೧೮೬೪
೨೧.    ಕತ್ತೆ ಕಿರುಬ
೨೨.    ಕ್ಲೋರೋಫ್ಲೋರೋ ಕಾರ್ಬನ್
೨೩.    ರಾಷ್ಟ್ರಪತಿ
೨೪.    ೨ನೇಯ ಬಹದ್ಧೂರ ಷಾ
೨೫.    ಚಿ||ಉದಯಶಂಕರ
೨೬.    ಚೆನ್ನೈ  
೨೭.    ಚಾರ್ಲ್ಸ್ ಬಾಬೇಜ್
೨೮.    ಥೈಲ್ಯಾಂಡ್
೨೯.    ೧೦ ವರ್ಷಗಳಿಗೊಮ್ಮೆ
೩೦.    ಮಾರ್ಗರೇಟ್ ಆಳ್ವ

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x