ಸಾಮಾನ್ಯ ಜ್ಞಾನ (ವಾರ 19): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: 
೧.    ೨೦೧೪ ರಲ್ಲಿ ನಡೆಯುವ ಭಾರತದ ಸಾರ್ವತ್ರಿಕ ಚುನಾವಣೆ ಎಷ್ಟನೆಯ ಸಾರ್ವತ್ರಿಕ ಚುನಾವಣೆಯಾಗಿದೆ ?
೨.    ಬಿಹಾರದ ಯಾವ ನದಿಯನ್ನು ಕಣ್ಣೀರಿನ ನದಿ ಎಂದು ಕರೆಯುತ್ತಾರೆ?
೩.    ಭಾರತೀಯ ಜೇನು ಸಂಶೋಧನಾ ಸಂಸ್ಥೆ ಎಲ್ಲಿದೆ?
೪.    ೨೦೧೪ರಲ್ಲಿ ನಡೆದ ಏಷ್ಯಾ ಕಫ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯ ವಹಿಸಿದ ದೇಶ ಯಾವುದು?
೫.    ಜನವರಿ ೩೦ ೨೦೧೩ ರಂದು ಗುಜಾರಾತ್ ಕೆನ್ಸವಿಲ್ ಜಾಲೆಂಜ್ ಗಾಲ್ಫ್ ಟೂರ್ನಿಯ ರಾಯಭಾರಿಯಾದ ಕ್ರಿಕೆಟಿಗ ಯಾರು?
೬.    ಓಡಿಸಾ ರಾಜ್ಯದ ಆಡಳಿತ ಭಾಷೆ ಯಾವುದು?
೭.    ೨೦೧೩ರ ಹುಲಿ ಗಣತಿ ಪ್ರಕಾರ ನಮ್ಮ ದೇಶದಲ್ಲಿ ಎಷ್ಟು ಹುಲಿಗಳಿವೆ?
೮.    ಗೋಪಿನಾಥ್ ಬರ್ಡೋಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
೯.    ಮೈ ಕಂಟ್ರಿ ಮೈ ಲೈಫ್ ಇದು ಯಾರ ಆತ್ಮ ಕಥನವಾಗಿದೆ?
೧೦.    ಭಾರತದ ಮೊದಲ ಸಿಖ್ ರಾಷ್ಟ್ರಪತಿ ಯಾರು?
೧೧.    ಭಾರತದ ಅತಿ ಉದ್ದ ರೈಲ್ವೆ ಸುರಂಗ ಮಾರ್ಗ ಯಾವುದು?
೧೨.    ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡುವ ಮೂಲಕ ಇಟ್ಟ ಹೆಸರು ಯಾವುದು?
೧೩.    ಶ್ವೇತ ಪತ್ರ ಎಂದರೇನು?
೧೪.    ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನ ಜನವರಿ ೫-೨೦೧೩ ರಂದು ಎಲ್ಲಿ ನಡೆಯಿತು?
೧೫.    ಗಾಂಧಿ ವಾದಿ ಅಣ್ಣಾ ಹಜಾರೆ ಅವರಿಗೆ ಜನವರಿ ೧೬-೨೦೧೩ ರಂದು ಕೂಡಲ ಸಂಗಮದಲ್ಲಿ ನೀಡಲಾದ ೨೦೧೩ ನೇ ಸಾಲಿನ ಪ್ರಶಸ್ತಿ ಯಾವುದು ?
೧೬.    ಜುಲೈ ೧೮ನ್ನು ಯಾರ ದಿನಾಚರಣೆಯಾಗಿ ಆಚರಿಸಲಾಗುತ್ತದೆ?
೧೭.    ವಿಶ್ವದಲ್ಲಿ ಮೊದಲ ಬಾರಿಗೆ ಅಂಧರ ಸ್ಮಾರ್ಟ್ ಫೋನ್ ತಯಾರಿಸಿದ ದೇಶ ಯಾವುದು?
೧೮.    ೪೦೩ನೇ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ ಆನೆಯ ಹೆಸರೇನು?
೧೯.    ಜೈನ ಧರ್ಮದ ಪ್ರಥಮ ತೀರ್ಥಂಕರ ಯಾರು?
೨೦.    ಮಹಮ್ಮದ್ ಘಜ್ನಿ ಭಾರತದ ಮೇಲೆ ಎಷ್ಟು ಬಾರಿ ದಂಡೆಯಾತ್ರೆಗಳನ್ನು ಮಾಡಿದ?
೨೧.    ಭಾರತೀಯ ಕ್ರೀಕೆಟಿಗ ಸಚಿನ್ ತೆಂಡೂಲ್ಕರ್‌ರವರ ೪೦ನೇ ಜನ್ಮ ದಿನದ ಸಂದರ್ಭದಲ್ಲಿ ಅವರ ಮೇಣದ ಪ್ರತಿಮೆ ಯಾವ ನಗರದಲ್ಲಿ ಅನಾವರಣಗೊಳಿಸಲಾಯಿತು?
೨೨.    ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ ಮೊದಲ ದೇಶ ಯಾವುದು?
೨೩.    ಕಲ್ಕತ್ತೆಯ ನ್ಯಾಷನಲ್ ಲೈಬ್ರರಿಗೆ ೭೨೦೦೦ ಪುಸ್ತಕಗಳನ್ನು ಉಚಿತವಾಗಿ ನೀಡಿದವರು ಯಾರು?
೨೪.    ಸಂಜೆಯ ನಕ್ಷತ್ರ ಅಥವಾ ಬೆಳ್ಳಿ ಚುಕ್ಕೆ ಎಂದು ಯಾವ ಗ್ರಹಕ್ಕೆ ಕರೆಯುತ್ತಾರೆ?
೨೫.    ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ಎಷ್ಟು ಕಾಲ ಬೇಕು?
೨೬.    ಅತ್ಯಂತ ಅಂಜುಗುಳಿ ಪ್ರಾಣಿ ಯಾವುದು?
೨೭.    ಅತ್ಯಂತ ಹಗುರದ ಮೂಲವಸ್ತು ಯಾವುದು?
೨೮.    ಶಾತವಾಹನರ ರಾಜ್ಯ ಲಾಂಛನ ಯಾವುದು?
೨೯.    ಟಿಪ್ಪು ಸುಲ್ತಾನನ ತಾಯಿಯ ಹೆಸರೇನು?
೩೦.    ಈ ಚಿತ್ರದಲ್ಲಿರುವವರನ್ನು ಗುರುತಿಸಿ:-


ಈ ವಾರದ ಪ್ರಸಿದ್ಧ ದಿನಾಚರಣೆಗಳು

   ಮಾರ್ಚ್ ೨೧ ವಿಶ್ವ ಅರಣ್ಯ ದಿನ ಹಾಗೂ ಅಂತರರಾಷ್ಟ್ರೀಯ ವರ್ಣಬೇಧ ವಿರೋಧಿ ದಿನ 
   ಮಾರ್ಚ್ ೨೨ ವಿಶ್ವ ಜಲದಿನ
   ಮಾರ್ಚ್ ೨೩ ವಿಶ್ವ ಹವಾಮಾನ ದಿನ

ಉತ್ತರಗಳು
೧.    ೧೬ನೇಯ 
೨.    ಕೋಸಿನದಿ
೩.    ಪುಣೆ (ಮಹಾರಾಷ್ಟ್ರ)
೪.    ಬಾಂಗ್ಲಾ
೫.    ಸಚಿನ್ ತೆಂಡೂಲ್ಕರ್
೬.    ಒರಿಯಾ
೭.    ೧೭೦೦
೮.    ಗುವಾಹತಿ
೯.    ಎಲ್. ಕೆ. ಆಡ್ವಾಣಿ
೧೦.    ಗ್ಯಾನಿ ಜೆಲ್ ಸಿಂಗ್
೧೧.    ತೋರ್‍ಸಿ ಸಾರಂಗ
೧೨.    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
೧೩.    ಒಂದು ನಿರ್ದಿಷ್ಟ ವಿಷಯವಾಗಿ ಸರ್ಕಾರವು ನಿಜಾಂಶವನ್ನು ಪ್ರಕಟಪಡಿಸುವ ಪತ್ರ
೧೪.    ಬಿಹಾರದ ಪಟ್ನಾ
೧೫.    ಬಸವ ಕೃಷಿ ಪ್ರಶಸ್ತಿ
೧೬.    ನೆಲ್ಸನ್ ಮಂಡೇಲಾ ದಿನ
೧೭.    ಭಾರತ
೧೮.    ಅರ್ಜುನ
೧೯.    ವೃಷಭನಾಥ
೨೦.    ೧೭ ಬಾರಿ
೨೧.    ಸಿಡ್ನಿ
೨೨.    ಗ್ರೇಟ್ ಬ್ರಿಟನ್ ಇಂಗ್ಲೆಂಡ್
೨೩.    ಆಶುತೋಷ್ ಮುಖರ್ಜಿ
೨೪.    ಶುಕ್ರಗ್ರಹ
೨೫.    ೮ ನಿಮಿಷಗಳು
೨೬.    ಮೊಲ
೨೭.    ಜಲಜನಕ
೨೮.    ವರುಣ
೨೯.    ಫಾತಿಮಾ ಫಕ್ರುನ್ನಿಸಾ
೩೦.    ಫೀಲ್ಡ್ ಮಾರ್ಷಲ್.ಕೆ.ಎಂ ಕಾರಿಯಪ್ಪ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x