ಓಯಸಿಸ್: ನಿನಾದ (ಭಾಗ 3)

ಇಲ್ಲಿಯವರೆಗೆ

ಮಾರನೆ ದಿನ ಲ್ಯಾಂಡ್ ಲಾರ್ಡ್ಗೆ ಫೋನ್ ಮಾಡುವಾಗ ನೀವು  ಬರೋಕೆ ರೆಡಿ ಆದ್ರೆ ಹೇಳಿ. ಇನ್ನು ಒಂದು ವಾರದಲ್ಲಿ ಎಲ್ಲ ದಾಖಲೆಗಳು ಸರಿ ಆಗುತ್ತೆ ಅಂದು ಹೇಳಿದರು. ಬರುವ ವಾರ ಬರೋದು  ಕಷ್ಟ. ಬರುವ ತಿಂಗಳು ಬರುವೆವು ಅಂದು ಹೇಳಿದ ನಿಶಾಂತ್ . ಆದರೆ ಅದೇ ಸಮಯಕ್ಕೆ ನಿಶಾಂತ್ ನ ವೀಸಾ ವಿಷಯ ದುತ್ತನೆ ಎದುರು ಬಂದು ಸಧ್ಯಕ್ಕೆ ಊರು ಬಿಡುವ ಹಾಗೆ ಇರಲಿಲ್ಲ. ಹೀಗಾಗಿ ದೀಪಾವಳಿ ಕಳೆದು ಬರುವುದಾಗಿ ಹೇಳಿದರು. ಈ ನಡುವೆ ಜೈನ್ ಗೊಂದು ಕೃತಜ್ಞತಾ ಪೂರ್ವಕವಾಗಿ ಒಂದು ಊಟ ಹಾಕೋಣ ಅಂತ ಯೋಚಿಸಿದ ನಿನಾದ & ನಿಶಾಂತ್ ಜೈನ್ ಗೆ ಕರೆ ಮಾಡಿ ಹೇಳಿದರು. ಒಂದು ದಿನ ಎಲ್ಲಾದರೂ ಊಟಕ್ಕೆ ಹೋಗೋಣ ಬಾ.. ಈ. ಜೈನ್ ಸರಿ ಅಂತ ಹೇಳಿದನೆ ಹೊರತು ಭೇಟಿ ಮಾಡುವ ಮನಸ್ಸೇ ಮಾಡಲಿಲ್ಲ. ಪ್ರತಿ ವಾರಾಂತ್ಯ ಕರೆ ಮಾಡಿದರೂ ಏನಾದರೊಂದು ಪಿಳ್ಳೆ ನೆವ ತಯಾರಾಗಿ ಇರುತ್ತಿತ್ತು. ಇವತ್ತು ನನ್ನ ಅಂಕಲ್ ಅಬುಧಾಬಿಗೆ. ಬರೋಕೆ ಹೇಳಿದ್ದಾರೆ, ಇನ್ನೊ೦ದು ವಾರ. ಅವರೇ ನನ್ನ ಬಳಿ ಬರುತ್ತಾರೆ.

ಹೀಗೆ ಮೂರು ನಾಲ್ಕು ವಾರ ಕಳೆದು ಹೋಯಿತು. ನಿಶಾಂತ್ ಫೋನ್ ಮಾಡಿ ಬರೋಕೆ ಹೇಳುವುದು, ಜೈನ್ ಇಲ್ಲ ಬರೋಕೆ ಆಗೋಲ್ಲ ಅನ್ನುವುದು ಅದೇ ರಾಗ ಅದೇ ತಾಳ ! ಕೊನೆಗೆ ಫೋನ್ ಮಾಡಿ. ಬರೋಕೆ. ಹೇಳೋದನ್ನೇ ಬಿಟ್ಟು ಬಿಟ್ಟು ಬಿಟ್ಟರು ಅದೊಂದು ದಿನ ನಿನಾದ ಜೈನ್ ಗೆ. ಫೋನ್. ಮಾಡಿ ಊಟಕ್ಕೆ ಎಲ್ಲಾದ್ರೂ ಹೋಗೋಣ ಅಂದ್ರೆ ಬರಲಿಲ್ಲ ನೀನು ಹೋಗಲಿಬಿಡು ನಾನೇ ಮನೆಗೆ ಬಾ ಅಂತ ಕರೀತಾ ಇದ್ದೀನಿ ಅಂತ ಹೇಳಿದಳು. ಆಗ ಜೈನ್ ನಿಶಾಂತ್ ಗೆ. ಸ್ವಲ್ಪ ಫೋನ್ ಕೊಡು ಅದ್ನ್ದು ಹೇಳಿದ ಅದು ಏನು ಮಾತನಾಡಿದರೋ ಫೋನ್ ಮತ್ತೆ ನಿನಾದಳ ಕೈಗೆ ! ನಿನಾದ… ನಂಗೆ ಗಂಟಲು ನೋವು ಗಟ್ಟಿ ವಸ್ತು ನುಂಗೊಕೆ ಇನ್ನು ಆಗ್ತಾ ಇಲ್ಲ. ಅದಿಕ್ಕೆ ನಾ ಎಲ್ಲೂ ಬರಲಿಲ್ಲ. ಅಂದ. ಸರಿ ನಿಂಗೆ ಏನು ಬೇಕೋ ಅದನ್ನೇ ಮಾಡಿ ಹಾಕೋಣ ನೀ ಬಾ ಅಂದು ನಿನಾದ. ಕರೆ ಮುಗಿಸಿದಳು. ಮತ್ತು ಎರಡು ವಾರ ಕಳೆದ ಮೇಲೆ ಒಂದು ದಿನ ನಿಶಾಂತ್ ಗೆ ಮಧ್ಯಾನ್ನ ಕರೆ.. ನಾನು ಮೆಟ್ರೋ ದಲ್ಲಿ ಇದ್ದೀನಿ. ಯಾವ್ ಸ್ಟೇಷನ್ ನಲ್ಲಿ ಇಳಿಬೇಕು… ?? ಬಿಲ್ಡಿಂಗ್ ನಂಬರ್ ಮನೆ ಡೋರ್ ನಂಬರ್ ಎಷ್ಟು ??ಈಗ ನಿನಾದಳಿಗೆ ಗಾಬರಿ ಇನ್ನು ೩೦ ನಿಮಿಷ ದಲ್ಲಿ ಮನೆ ಮುಟ್ಟುವ.. ಏನು ಮಾಡಲಿ ?? ದೋಸೆ ಹಿಟ್ಟು ಇತ್ತು ಕ್ಯಾರೆಟ್ ಇತ್ತು ದೋಸೆ ಹೊಯ್ದು ಚಟ್ನಿ  ಮಾಡೋಣ ಬೇಕಿದ್ದರೆ ಆಲೂ ಪಲ್ಯ ಮಾಡೋಣ ಅಂತ ಆಲೂ ಬೇಯಿಸಿ ಬಿಟ್ಟಳು…ಆವಾ ಬೇಡ ಅಂದರೆ ?? ಯಾವುದಕ್ಕೂ ಇರಲಿ ಕ್ಯಾರೆಟ್ ಖೀರು ಮಾಡಿ ಬಿಟ್ಟಳು.  ಸ್ವಲ್ಪ  ಅಂದು ಫ್ರಿಜ್ ನಲ್ಲಿ  ಉಳಿದಿದ್ದು ಹೊರಗೆ ಇಟ್ಟಳು.  ಕೆಲಸ ಮುಗಿಸಿದಾಗ ಬಾಗಿಲ ಕರೆ  ನಿನಾದಳನ್ನು ಎಚ್ಚರಿಸಿತು. ಬಾಗಿಲು ತೆರೆದಾಗ ಅದೇ  ಆಜಾನುಬಾಹು ೨೦೦೮ ರ ಗಾತ್ರಕ್ಕೂ ೨೦೧೨ ಕ್ಕೂ  ಯಾವ ವ್ಯತ್ಯಾಸ ಇರಲಿಲ್ಲ. ಆದರೆ ನಿನಾದಳಿಗೆ ಭಯ ಮಾತ್ರ ಇರಲಿಲ್ಲ. ಪಾಪ!!! ತುಂಬಾ ಸುಸ್ತು ಮುಖದಲ್ಲಿ ಎದ್ದು ಕಾಣುತ್ತಿತ್ತು. ಸರಿ ಒಳಗೆ  ಬಂದವನಿಗೆ ಮೊದಲು ಟವೆಲ್ ಸೋಪ್ ಕೊಟ್ಟು ಮುಖ ತೊಳೆದು ಬಾ ಅಂದು ಹೇಳಿದಳು. 
***
ಮುಖ ತೊಳೆದು ಬಂದ ಜೈನ್ ಗೆ ಬಾದಾಮಿ ಹಾಲು ಕೊಟ್ಟು ಹ್ಯಾಗಿರುವೆ ಅಂತ ಕೇಳಿದಳು. ನಾನು ಚೆನ್ನಾಗಿದೀನಿ ನೀವಿಬ್ರೂ ಹ್ಯಾಗಿದೀರಿ ಅಂತ ಕೇಳಿದ. ಮೊದಲ ಬಾರಿಗೆ ಈ ಪರಿಸರ ಇಷ್ಟ ಆಯಿತು. ಸುತ್ತಾಡಿ ಬರೋಣವಾ ಅಂತ ಕೇಳಿದಾಗ ಭಾನು ಬಾನಿಂದ ಮರೆಯಾಗೋಕೆ ಸಿದ್ದತೆ ನಡೆಸಿದ್ದ. ಮೂವರೂ ಮುತ್ಸಂಜೆಯ ವಾಯು ವಿಹಾರಕ್ಕೆ ಹೊರಟರು. ನಿಶಾಂತ್ ಜೈನ್ ಕ್ಷಣ ಕಾಲ ಬಿಡುವಿಲ್ಲದೇ ಹರಟಿದರು. ನಿನಾದ ಸುಮ್ಮನೆ ಅವರ ಮಾತು ಕತೆಗೆ ಕಿವಿಯಾದಳು. ಸುಮಾರು ಎರಡು ಘಂಟೆ ಹರಟಿದ ಮೇಲೆ ಬಹುಶಃ ಸುಸ್ತಾಗಿರಬೇಕು ಇಬ್ಬರಿಗೂ ನಿನಾದಾ ಮನೆಗೆ ಹೋಗೋಣವಾ ಅಂದಾಗ ಸರಿ ಹೊರಡೋಣ ಅಂದು ಮನೆಗೆ ಬಂದರು. ಜೈನ್ ನಿಂಗೆ ತಿನ್ನೋಕೆ ಏನು ಕೊಡಲಿ ? ಅಂತ ನಿನಾದ. ಕೇಳಿದಾಗ ಏನು ಬೇಡಾ ಇನ್ನೊಂದು ಲೋಟ ಆಗ ಕೊಟ್ಟಿದ್ದೆ ಕೊಡು.. ಅಯ್ಯಾ ಇದೇನು ನೋಡು.. ಅಂತ ನಿಂಗೆ ತಂಪು ಇಸ್ಟನಾ ಅಥವಾ ನಾರ್ಮಲ್ ಇಷ್ಟಾನಾ ?? ಅಂತ ಕೇಳಿದಾಗ ನಾರ್ಮಲ್ ಅಂದ ಸರಿ. ಅಂತ ಒಂದು ಸಣ್ಣ ಕಪ್ ನಲ್ಲಿ ಕ್ಯಾರೆಟ್ ಖೀರು ತಂದು ಕೊಟ್ಟಳು ಇಷ್ಟ ಆದ್ರೆ ಹೇಳು ಇಲ್ಲದೆ ಇದ್ರೆ ಮತ್ತೆ ಬಾದಾಮಿ ಹಾಲು ಕೊಡುವೆ ಅಂತ ಕೊನೆಯಲ್ಲಿ ಸೇರಿಸಿದಳು. ರುಚಿ ನೋಡಿ ಇಷ್ಟ ಆಯಿತು. ಇದು ಏನು ? ಯಾವುದರಿಂದ ಮಾಡಿದ್ದು ? ಅಂತ ಜೈನ ನ ಪ್ರಶ್ನೆ. ಆಗ. ನಿನಾದ ಸಿಕ್ಕ ಸಮಯವನ್ನು ರಗಳೆ ಮಾಡೋಕೆ ಉಪಯೋಗಿಸಿದಳು. ನೀ ಜಾಣ ಮರಿ… ಹೇಳು ನೋಡೋಣ ಯಾವುದರಿಂದ ಮಾಡಿರ ಬಹುದು? ? ಆವಾ ಒಂದೇ ಸಲ ಮಾವಿನ ಹಣ್ಣು ಅಂದು ಬಿಟ್ಟ ಅಲ್ವೋ ಇದು ಕೇಸರಿ ಬಣ್ಣ ಇದೆ ಅಲ್ವಾ ಇದು ಯಾವ್ ಮಾವಿನ. ಹಣ್ಣು. ಲೋ ಸರಿ ಗಮನಿಸು ಮಾವಿನ ಹಣ್ಣು ಹೀಗೆ ಪರಿಮಳ ಬೀರುತ್ತ ?? ಇದು ಕಾಕ್ಟೇಲ್ ಜ್ಯೂಸು ಥೂ… ನೀ ಸೋತೆ ಅಂದಳು ನಿನಾದ. ಸರಿ ನೀನೆ ಹೇಳು ಅಂದ ಕೊನೆಗೆ.. ಅದು ಕ್ಯಾರೆಟ್ ಅಂದ್ರೆ ಮತ್ತೆ ಕಿತ್ತಡೋಕೆ ಶುರು.. ಕೊನೆಗೆ ನಿಶಾಂತ್ ಬಂದು ಕಿತ್ತಾಟ ಕೊನೆಗೊಳಿಸಿದ.
  
ನಿನಾದ ನೀ ಒಳ್ಳೆ ಅಡುಗೆ ಮಾಡುವೆ.. ಇನ್ ಸ್ವಲ್ಪ ಹಾಕು ಅಂದ.ಸರಿ., ಇದು ನಿಂಗೆ. ಅಂತ ಮಾಡಿದ್ದು. ಅಂದು ಇದೇ ಬೌಲ್ ಅವನ ಮುಂದೆ ಇಟ್ಟಳು.. ನಿಂಗೆ ೨ ದೋಸೆ ಹೊಯ್ದು ಕೊಂಡು ಬರುವೆ ಸ್ವಲ್ಪ. ಜಾಗ ಉಳಿಸಿಕೋ ಅಂದ್ರೆ.. ಏನು ಬೇಡ…., ಯಾಕೆ ಅಂದ್ರೆ…ಸುಮ್ನೆ ನಿಂಗೆ ಯಾಕೆ ತೊಂದ್ರೆ ?? ಇದೆ ಹೊಟ್ಟೆ ತುಂಬಿತು. ಉಹೂ ಮನೆ ಮುಟ್ಟೋವಾಗ ಮತ್ತೆ ಹೊಟ್ಟೆ ಹಸಿಯುತ್ತೆ. ನಿಂಗೆ ತಿನ್ನೋಕೆ ಆಗುತ್ತಾ ಮೊದಲು ಹೇಳು , ತಿನ್ನೋಕೆ ಆದ್ರೆ ತಿಂದೆ ಹೋಗ್ಬೇಕು ಅಂತ ಒತ್ತಾಯ ಮಾಡಿದಳು. ಮೊದಲು ಬೇಡ ಅಂದ್ರು ಕೊನೆಗೆ ೨ ದೋಸೆ ತಿಂದ. ಅಂತೂ ಮೊದಲ  ಮನೆಗೆ ಬಂದವನು ಖಾಲಿ ಹೊಟ್ಟೆಯಲ್ಲಿ ವಾಪಾಸು ಹೋಗುವಂತೆ ಆಗಲಿಲ್ವ್ಲ ಸಧ್ಯ ನಾ ಬಚಾವ್ ಅಂತ ನಿನಾದ  ಉಸಿರು ಬಿಟ್ಟಳು. ತಿಂಡಿ ಬಳಿಕ ವಟ ವಟ ಹರಟೆ ಸಾಗಿಯೇ ಇತ್ತು. ನಿನಾದ ಎಲ್ಲಾ ಕೆಲಸ ಮುಗಿಸಿ ನೀನು ಇನ್ನು ನಿಶಾಂತ್ ಜೊತೆ ಹರಟಿದ್ದು ಸಾಕು, ಇನ್ನು ನನ್ನ ಕೆಲವು ತುಂಟ ತರಲೆ ಪ್ರಶ್ನೆ ಹಾಗು ಕೆಲವು ಗಂಬೀರ ಪ್ರಶ್ನೆಗೆ ಉತ್ತರಿಸು.. ನಿಶಾಂತ್ ನಿನ್ನ ಟೈಮ್ ಅಪ್ ಏಳು ಏಳು ಮೇಲೆ ಅಂತ ,ತಾನು ಮಾತಿಗೆ ಇಳಿದಳು ನಿನಾದ. ಹೇಯ್ ಜೈನ್ ಆ ಟೀಂ ಲೀಡರ್ ಹ್ಯಾಗಿದಾನೆ ? ರಗಳೆ ಮಾಡೋಲ್ವಾ ? ಅಂತ  ಪ್ರಶ್ನೆ  ಮುಂದಿಟ್ಟು ಕಾದಳು. ಅದಾ ಅದೊಂದು ದೊಡ್ಡ ಕತೆ  ಅಂತ ಹೇಳೋಕೆ ಶುರು. 

ನಾನು ಮೊದಲು ಇದ್ದ ಕಂಪನಿ ಇಂದ EMPA ಕ್ಕೆ ಹೋಗಿದ್ದು ಗೊತ್ತು ಅಲ್ವಾ? ಅಲ್ಲಿ ಕೆಲಸ ಎಲ್ಲ ಚೆನ್ನಾಗಿಯೇ ಇತ್ತು ಆದರೆ ನಂಗೆ ದಿನಕ್ಕೆ ೨ , ೨.೩೦ ಘಂಟೆ ಪ್ರಯಾಣ ರಗಳೆ ಹಿಡಿಯಿತು. ನಾ ಮೊದಲಿನ್ದನೂ ಆಫೀಸ್ ಇಂದ ೧೦ -೧೫ ನಿಮ್ಷ ನಡೆದು ಕೊಂದು ಹೋಗೋ ಹಾಗೆ ಮನೆ ನೋಡ್ತಾ ಇದ್ದೆ. ಈಗ ಹಾಗೆ ಮಾಡೋಕೆ ಆಗೋಲ್ಲ ಅದು ಪಕ್ಕಾ ಮರುಭೂಮಿ… ಹೀಗಾಗಿ ಪ್ರಯಾಣ ಅನಿವಾರ್ಯ. ಇಟ್ಟ ನಮ್ಮ ಮನೆ ಓನರ್ ಮಗ ಬೇರೆ ನನ್ನ ಹತ್ರ ಟ್ಯೂಶನ್ ಹೇಳಿಸಿ ಕೊಳ್ತಾ ಇದ್ದಾನೆ. ಅವನ ಕೆಲವು ಕ್ಲಾಸ್ ಮತ್ತೆ ಕೂಡ ಒಟ್ಟಿಗೆ ಕೂತು ಕೊಳ್ತಾರೆ ಬಂದು, ಅತ್ತ ಅವರಿಗೂ ಸಮಯ ಕೊಡೋಕೆ ಆಗೋಲ್ಲ. ಈ ಪ್ರಯಾಣ ಒಟ್ಟಾರೆ ಬೇರೆ ಕೆಲಸ ಹುಸುಕೋಣ ಅಂತ ಯೋಚಿಸ್ತಾ ಇರ ಬೇಕಿದ್ರೆ ಹಳೆ ಕಂಪನಿ ಜನರಲ್ ಮ್ಯಾನೇಜರ್. ಸುಂದರ್  ಒಂದು ದಿನ ಫೋನ್ ಮಾಡಿ ನೀ ವಾಪಸು ಬರ್ತೀಯಾ ಅಂತ ಕೇಳಿದ್ರು, ಇರಿ ಇಲ್ಲಿ ನನ್ನ ಬಿಟ್ಟು ಕೊಡ್ತಾರ ನೋಡೋಣ ಬಿಟ್ರೆ ಬರ್ತೀನಿ ಅನ್ದೆ. ಈ EMPA ದೋರು ನೀ ಹೋಗೋದು ಬೇಡ ನಿ೦ಗೆ ಅವರು ಎಷ್ಟು ಕೊಡ್ತಾರಂತೆ ಕೇಳು ಅದಕ್ಕಿಂತ ಹೆಚ್ಚು ನಾವು ಕೊಡ್ತೀವಿ ವೇತನ ನೀ ಇಲ್ಲೇ ಇರು ಅಂತ ಹೇಳಿದ್ರು. ಈ ಸುಂದರ್ ದಿನ ಬೆನ್ನು ಬಿದ್ರು ಯಾವಗ ಬರುವೆ ? ಏನು ಹೇಳಿದರು ? ಅಂತ ಕೇಳಿ ಕೇಳಿ ಕೊನೆಗೆ ಹೇಳಿದೆ ಅವರು ನನ್ನ ಬಿಡೋಲ್ಲ ನೀವು  ಎಷ್ಟು ಕೊಡ್ತೀರಿ ಅಂತ ಕೇಳೋಕೆ ಹೇಳಿದ್ರು , ನೋಡು ಜೈನ್ ಅವರೆಷ್ಟು ಕೊಡ್ತಾರೆ ಕೇಳು ಅದಕ್ಕಿಂತ ಜಾಸ್ತಿ ನಾವು ಕೊಡ್ತೀವಿ ಅಂದ್ರು ಹೀಗಾಗಿ ಮತ್ತೆ ಕೇಳಿದೆ ನನ್ನ ವಾಪಾಸ್ ಕರೀತಾ ಇದಾರೆ.. ನಾ ಹೋಗ್ತೀನಿ ಅಂತ ಹೇಳಿದೆ. ನಿಂಗೆ ಈಗ ಕೊಡ್ತಾ ಇರೋದಕ್ಕಿಂತ ೫ ಸಾವಿರ ಜಾಸ್ತಿ ಕೊಡ್ತೀವಿ ನೀ ಹೋಗೋದು ಬೇಡ ಅಂದರು….. 
***
ನನ್ನನ್ನು ಬಿಟ್ಟು ಹೋಗೋಕೆ ಬಿಡೋಲ್ಲ ಅಂತೆ , ಈಗ ಕೊಡ್ತಾ ಇರೋದಕ್ಕಿಂತ ೫ ಸಾವಿರ ಜಾಸ್ತಿ ಕೊಡ್ತೀವಿ ನೀ ಹೋಗೋದು ಬೇಡ ಅಂದರು. ಸರಿ ನಾವು ಇನ್ನು ಎರಡು ಜಾಸ್ತಿ ಕೊಡ್ತೀವಿ ನೀ ಬಾ ಇಲ್ಲಿಗೆ ನಿನ್ನ ಅವಶ್ಯಕತೆ ತುಂಬ ಇದೆ. ಅಂತ ಸುಂದರ್ ಹೇಳಿದರು. EMPA ದಲ್ಲಿ ಇನ್ನು ಎರಡು ಜಾಸ್ತಿ ಕೊಡ್ತೀವಿ ಅಂದ್ರು… ಆದರೆ ನಾ ಸುಂದರ್ ಹೇಳಿದ ಮಾತಿಗೆ ಸೀದಾ ಎದ್ದು ಬಂದೆ. ಕಾರಣ ಇಷ್ಟೇ ನಾನು ಎಲ್ಲೋ ಹೇಗೋ ಇದ್ದವನನ್ನು ಒಂದೇ ಸಲ ಒಳ್ಳೆ ಕಡೆ ಸೇರಿಸಿದ್ದು ನಾ ಮರೆಯೋಲ್ಲ ನಾ ಮೊದಲು ಕೇವಲ ಒಂದೂವರೆ ಸಾವಿರಕ್ಕೆ ಕತ್ತೆ ತರಾ ೨ ವರ್ಷ ದುಡಿದೆ ನನ್ನಒಂದೇ ಸಲ ಮೂರು ಪಟ್ಟಿಗೂ ಜಾಸ್ತಿ ವೇತನಕ್ಕೆ ಕರೆದು ತಂದಿದ್ದು ಸುಂದರ್ ಹೀಗಾಗಿ ನಾ ಯಾವಾಗಲು ಅವರನ್ನು ಗೌರವಿಸುವೆ ಅಂದ. ಆವಾ ಇನ್ನು ತುಂಬಾ ಹೇಳೋದು ಇತ್ತು 

ಆದರೆ ಅವನಿಗೆ ಯಾವುದೊ ಕರೆ ಬಂದು ಹೊರಡಬೇಕಾಯಿತು.ಆದರೂ  ಇದೆಲ್ಲ ಕೇಳಿ ನಿಶಾಂತ್ "ಥೂ… ನೀನು  ಅಲ್ಲೇ ಮತ್ತೆ ಬಂದು ಯಾಕಾದ್ರು ಸೇರಿಕೊಂಡೆಯೋ ? ಆ  ಟೀಂ ಲೀಡರ್ ನಿನ್ನನ್ನು  ನೆಮ್ಮದಿಯಾಗಿ ಇರೋಕೆ ಬಿಡಲ್ಲ. ನಿ೦ಗೆ ಅರ್ಥ ಆಗೋಲ್ಲ ಅಂತ ಹೇಳಿದ. ನೋಡು ನಿಶಾಂತ್ ಇನ್ನೊಮ್ಮೆ ಎಲ್ಲ ಹೇಳ್ತೀನಿ ಈಗ ಹೊರಡ್ಲಾ ?? ಅಂದು ಹೊರಟು  ಹೋದ. ಮತ್ತೆ ವಾರಾಂತ್ಯ ಬಂದಾಗ ಬರೋಕೆ ಹೇಳಿದ್ರೆ ಬರಲಿಲ್ಲ. ತುಂಬ  ಕೆಲಸ ಇದೆ. ಮುಂದಿನ ವಾರ ಬರುವೆ ಎಂದು ಹೇಳಿ ಪರಾರಿ ಯಾದ. ಮುಂದಿನ ವಾರ ನಿಶಾಂತ್ ಗೆ ಏನೋ ಕೆಲಸ ಇತ್ತು ಕರೆಯೋಕೆ ಆಗ್ಲಿಲ್ಲ. ಹೀಗೆ ಒಂದು ತಿಂಗಳು ಕಳೆದೆ ಹೋಯಿತು  ಸುಮಾರು ಸಲ ಕರೆದರೂ ಬರಲು ಆಗಲಿಲ್ಲ. ಈ ನಡುವೆ ಒಮ್ಮೆ ನಿನಾದಗೆ ಫೋನ್ ಮಾಡಿ ತುಂಬ ಬ್ಯುಸಿ ಇದ್ದೀನಿ ನಾನು ಸಾರೀ ಬರೋಕೆ ಆಗ್ತಾ ಇಲ್ಲ. ಸ್ವಲ್ಪ  ಆಮೇಲೆ ಬರುವೆ ಅಂದ ಸರಿ ಅಂದಳು ನಿನಾದ. 

ಒಂದು ದಿನ ಅವನೇ ನಿಶಾಂತ್ ಗೆ ಫೋನ್ ಮಾಡಿ ನಾಳೆ ನೀವು ಫ್ರೀ ಇದೀರಾ ನಾ ಬರ್ಲಾ ಅಂದು ಕೇಳಿದ. ಸರಿ ಬಾ ನಾವು ಮನೆಯಲ್ಲೇ ಇದೀವಿ ಅಂದು ತಿಳಿಸಿದ. ನಾನು ಎಷ್ಟು ಹೊತ್ತಿಗೆ ಬರಬೇಕು ಅಂದು ಕೇಳಿದ ಜೈನ್ ಅದಿಕ್ಕೆ ಪ್ರತುತ್ತರ ವಾಗಿ  ನೀನು ಯಾವಾಗ ಬೇಕಿದ್ರೂ ಬಾ ನಾವು  ಈವತ್ತು ಎಲ್ಲೂ  ಹೋಗೋಲ್ಲ. ಸರಿ ನಾನು ಸಂಜೆ ೩- ೪ ಘಂಟೆ ಹೊತ್ತಿಗೆ ಬರುವೆ ಅಂತ ಹೇಳಿ ಕರೆಯನು ಮುಗಿಸಿದ. ಹೇಳಿದ ಸಮಯಕ್ಕೆ ಸರಿಯಾಗಿ ಬಂದ. ಈ ಬಾರಿ ನಿನಾದ ಮೊದಲೇ ಏನು ತಯಾರಿ ಮಾಡಿಕೊಂಡಿರಲಿಲ್ಲ. ಅವನ ಫೋನ್ ಬಂದ ಮೇಲೆ ಏನು ಮಾಡಲಿ ಅಂತ  ಶುರು. ದೋಸೆ ,ಪಡ್ಡು  ಮಾಡೋಕೆ ಹಿಟ್ಟು  ಇಲ್ಲ , ಪೂರಿ ಮಾಡೋಕೆ ಗೊತ್ತಿಲ್ಲ. ಚಿತ್ರಾನ್ನ ತಿನ್ನೋ ಟೈಮ್ ಅದು ಅಲ್ಲ. ಏನು ಮಾಡಲಿ ಅಂತ ತಲೆ ಕೆರೆದು ಕೊಂಡಳು. ಸಾಲದಕ್ಕೆ ನಿನಾದ ಅಡುಗೆಯಲ್ಲಿ ಜಾಣೆ  ಏನೂ ಅಲ್ಲ. ಸರಿ ಕೊನೆಗೆ ಉಳಿದಿದ್ದು ಚಪಾತಿ ಆಲೂ  ಪಲ್ಯ  ಜೊತೆಗೆ ಒಂದು ಹಯಗ್ರೀವ ಇರಲಿ ಅಂದು ತಯಾರಿನಡೆಸಿದಳು. ಬಂದ ಕೂಡ್ಲೇ ನಿನಾದ ಆತನ ಜೊತೆ ಕದನಕ್ಕೆ ಇಳಿದಳು. ನಿಂಗೆ ಬಾ ಅಂದ್ರೆ ಬರೋಕೆ ಆಗ್ಲಿಲ್ಲ.. ಬರಿ ಪಿಳ್ಳೆ ನೆವ ಹೇಳಿ ಕೂತೆ. ಸಧ್ಯ ಇವತ್ತಾದ್ರೂ ಇತ್ತ ತಲೆ ಹಾಕೋ ಮನಸ್ಸಯಿತಲ್ಲ. ಸರಿ ನೀನು ನಿಶಾಂತ್ ಮತ್ನದ್ತ ಇರಿ ನಾ ಪಟ್ಟ ತಿಂಡಿ ರೆಡಿ ಮಾಡುವೆ ಅಂತ ಅಡುಗೆ ಮನೆಗೆ ಬಂದಳು. ಜೈನ್ ನಿಶನ್ತನ ಕೆಲಸದ ವಿಚಾರ ಕೇಳ  ತೊಡಗಿದ. ಏನಾದ್ರೂ ಬದಲಾವಣೆ ಆಯಿತಾ ಖಾಯಂ ಆಗುವ ಲಕ್ಷಣ ಇದೆಯಾ? "ಹೂ೦..  ಲಕ್ಷಣ  ಇದೆ.  ಪ್ರಕ್ರಿಯೆಗಳು ಆರಂಭ ಆಗಿವೆ. ಈ ತಿಂಗಳ ಕೊನೆಯಲ್ಲಿ ಎಲ ಸರಿ ಆಗುತ್ತೆ. ಅದು ಮುಗಿದ ಮೇಲೆ ಸೈಟ್ ರಿಜಿಸ್ಟ್ರೇಷನ್ ಗೆ ಹೋಗಬೇಕು  ಅಂತ  ಯೋಚಿಸ್ತಾ ಇದ್ದೀನಿ "ಅಂದು ಹೇಳಿದ. 

ಈ ನಿನಾದ ಥೇಟ್  ಕುತೂಹಲಿ ಬೆಕ್ಕು… ಹೇಯ್ ಜೈನ್ ಕಳೆದ ಸಲ ಕತೆ ಅರ್ಧಕ್ಕೆ ನಿಂತು ಹೋಯಿತು. ಪೂರ ಮಾಡು ಆ ಕತೆ. ಕೊನೆ ಸಾಲು ಇದು.. ಸುಂದರ್ ನಿನ್ನ ವಾಪಸು ಬರೋಕೆ ಹೇಳಿದ್ರು ನೀನು ಬರೋದು ಅಂತ ನಿರ್ಧರಿಸಿದೆ. ಮತ್ತೆ ಜೈನ್ ಶುರು ಮಾಡಿದ. ನಾನು ಮೊದಲು ಒಂದು ಷರತ್ತು ಹಾಕಿದೆ. ನಂಗೆ ಆ ಟೀಂ ಲೀಡರ್ ಹಂಜ್ಜ್ಹಾ ಕೈ ಕೆಳಗೆ ಇರೋಕೆ , ಕೆಲಸ ಮಾಡೋದು ಸಾಧ್ಯ ಇಲ್ಲ. ಇದು ನಿಮಗೆ ಒಪ್ಪಿಗೆ ಆದ್ರೆ ನ ಬರುವೆ. ಸರಿ ನಿಂಗೆ ಯಾರು ಬೇಕೂ ನೇನೆ ಆಯಿಕೆ ಮಾಡು ಅಂದು ಸುಂದರ್ ಹೇಳಿದ ಮೇಲೆ ನ ಬರುವ ಯೋಚನೆ ಮಾಡಿದೆ. ಬ೦ದು ಸೆರಿದೆ. ಆಮೇಲೆ ನಂಗೆ ಜ್ಞಾನೋದಯ ಅಯಿತು. ನನಗಿಂತ ಹೆಚ್ಚು ಅನುಭವ ಇರುವ , ಹಿರಿಯ ಸಹುದ್ಯೋಗಿಗಳು ನನಗಿಂತ ಕಮ್ಮಿ ವೇತನದಲ್ಲಿ ಇದ್ದಾರೆ. ಅವರ ವೇತನ ಪಟ್ಟಿಯನ್ನು ನಾನು ತಯಾರಿಸಬೇಕು. ನಂಗೆ ಇದು ಮನಸ್ಸ್ಸಲ್ಲಿ ಚುಚ್ಚೊಕೆ ಶುರು ಮಾಡಿತು. ಕಂಪನಿ ಏನೂ ನಷ್ಟದಲ್ಲಿ ಇಲ್ಲ. ಸುಂದರ್ ಗೆ ಮತ್ತೊಂದು ಬೇಡಿಕೆ ಇಟ್ಟೆ. ನಾನು ಹೇಳಿದವರಿಗೆ ಎಲ್ಲಾ ವೇತನ ಹೆಚ್ಚು ಮಾಡಬೇಕು ನಾನು ಹೇಳಿದಷ್ಟೇ ಮಾಡಬೇಕು ಹಾಗಿದ್ದರೆ ಮಾತ್ರ ನಾನು ಮುಂದುವರೆಯೋದು. ನನ್ನ ಜ್ಞಾನಕ್ಕೆ ದಕ್ಕಿದಷ್ಟು ಮಟ್ಟಿಗೆ ನಿಷ್ಟಾವಂತ ಸಹುದ್ಯೋಗಿಗಳಿಗೆ ನನಗಿಂತ ಸ್ವಲ್ಪ ಹೆಚ್ಚೇ ಇರುವಂತೆ ವೇತನ ಶ್ರೇಣಿಯನ್ನು ಏರಿಸಲು ಬೇಡಿಕೆ ಮುಂದಿಟ್ಟೆ. ಸುಂದರ್ ಒಪ್ಪಲೇ ಬೇಕಾಗಿ ಬಂತು ಒಪ್ಪಿದರು. 

****

(ಮುಂದುವರೆಯುವುದು….)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] ಇಲ್ಲಿಯವರೆಗೆ […]

1
0
Would love your thoughts, please comment.x
()
x