ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ಭಾಗ 1): ಮಹಾಂತೇಶ್ ಯರಗಟ್ಟಿ


೧. ಕನ್ನಡದ ಮೊದಲ ರಾಷ್ಟ್ರಕವಿ ಯಾರು?

೨. ಕರ್ನಾಟಕಕ್ಕೆ ಕಾಫಿ ಬೀಜ ತಂದವರು ಯಾರು?

೩. ಸಂಸತ್ತಿನಲ್ಲಿ ಮೊದಲು ಕನ್ನಡ ಮಾತನಾಡಿದ ಕರ್ನಾಟಕದ ಸಂಸದ ಯಾರು?

೪. ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು?

೫. ಕರ್ನಾಟಕದಲ್ಲಿ ಮೊದಲ ಸ್ವತಂತ್ರ ಘೋಶಿಸಿಕೊಂಡ ಗ್ರಾಮ ಯಾವುದು?

೬. ಸಾವಿರ ಹಾಡುಗಳ ಸರದಾರ ಯಾರು?

೭. ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?

೮. ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊಟ್ಟ ಮೊದಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ಸಂಸ್ಥೆ ಯಾವುದು?

೯. ಕಮಲಾದೇವಿ ಚಟ್ಟೋಪಾದ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?

೧೦. ದಕ್ಷಿಣ ಭಾರತದ ಮೊದಲನೆಯ ಸಾಮಾಜಿಕ ಚಲನಚಿತ್ರ ಯಾವುದು?

೧೧. ಕನ್ನಡದ ಮೊದಲ ದಿನ ಪತ್ರಿಕೆ ಯಾವುದು?

೧೨. ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ ಯಾವುದು?

೧೩. ’ತಿರುಕ’ ಇದು ಯಾರ ಕಾವ್ಯನಾಮ?

೧೪. ಭಾರತದ ಪ್ರಧಾನಿಯಾಗಿದ್ದ ಮೊದಲ ಕನ್ನಡಿಗ ಯಾರು?

೧೫. ಕನ್ನಡದ ಮೊದಲ ಕೃತಿ ಯಾವುದು?

೧೬. ಕರ್ನಾಟಕದಲ್ಲಿ ಮೊದಲ ಮಹಿಳಾ ರಾಜ್ಯಪಾಲರು ಯಾರು?

೧೭. ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?

೧೮. ೨೦೧೩ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?

೧೯. ಕನ್ನಡದ ಮೊದಲ ಕವಯತ್ರಿ ಯಾರು?

೨೦. ಕನ್ನಡದ ಮೊದಲ ಗದ್ಯ ಬರಹ ಯಾವುದು?

೨೧. ಕರ್ನಾಟಕದ ಮೊದಲ ಬ್ಯಾಂಕ್ ಯಾವುದು?

೨೨. ಕನ್ನಡದ ಮೊದಲ ವರ್ಣ ಚಿತ್ರ ಯಾವುದು?

೨೩. ಕಾವ್ಯಾನಂದ ಇದು ಯಾರ ಕಾವ್ಯ ನಾಮ?

೨೪. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು?

೨೫. ಕಡಲ ತೀರದ ಕಾಳು ಮೆಣಸಿನ ರಾಣಿ ಎಂದು ಯಾರನ್ನು ಕರೆಯುತ್ತಾರೆ?

೨೬. ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು?

೨೭. ದಕ್ಷಿಣ ಏಷ್ಯಾದ ಮೊದಲ ಪಾಲಿಟೆಕ್ನಿಕ್ ಯಾವುದು?

೨೮. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?

೨೯. ಕನ್ನಡದ ಪ್ರಥಮ ಮಹಮದೀಯ ಕವಿ ಯಾರು?

೩೦. ಕನ್ನಡ ಸಾಹಿತ್ಯ ಸಮ್ಮೇಳನವೊಂದರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಕನ್ನಡತಿ ಯಾರು?

******

ಸರಿ ಉತ್ತರಗಳು:

೧. ಮಂಜೇಶ್ವರ ಗೋವಿಂದ ಪೈ

೨. ಬಾಬಾಬುಡನ್

೩. ಜೆ.ಎಚ್.ಪಟೇಲ್

೪. ಎಸ್.ಎಮ್.ಕೃಷ್ಣ

೫. ಈಸೂರು (ಶಿವಮೊಗ್ಗ ಜಿಲ್ಲೆ)

೬. ಬಾಳಪ್ಪ ಹುಕ್ಕೇರಿ (ಬೆಳಗಾವಿ ಜಿಲ್ಲೆ)

೭. ಹರ್ಡೆಕರ್ ಮಂಜಪ್ಪ

೮. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್

೯. ಗಿರೀಶ್ ಕಾರ್ನಾಡ್

೧೦. ಕನ್ನಡದ ಸಂಸಾರ ನೌಕೆ (೧೯೩೬)

೧೧. ಮಂಗಳೂರು ಸಮಾಚಾರ

೧೨. ದಕ್ಷಿಣ ಕನ್ನಡ

೧೩. ಡಾ|| ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ

೧೪. ಹೆಚ್.ಡಿ.ದೇವೆಗೌಡ

೧೫. ಕವಿ ರಾಜ್ಯ ಮಾರ್ಗ (ಕ್ರಿ.ಶ. ೯ನೇ ಶತಮಾನದ ಕೃತಿ)

೧೬. ವಿ.ಎಸ್.ರಮಾದೇವಿ

೧೭. ಕೆ.ಎಸ್.ನಾಗರತ್ನಂ

೧೮. ಕೋ.ಚನ್ನಬಸಪ್ಪ (ಬೀಜಾಪುರ)

೧೯. ಅಕ್ಕಮಹದೇವಿ

೨೦. ವಡ್ಡಾರಾಧನೆ

೨೧. ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ (೧೮೭೦)

೨೨. ಅಮರ ಶಿಲ್ಪಿ ಜಕಣಾಚಾರಿ

೨೩. ಸಿದ್ದಯ್ಯ ಪುರಾಣಿಕ್

೨೪. ಅಂಕೋಲಾ (ಉತ್ತರ ಕನ್ನಡ ಜಿಲ್ಲೆ)

೨೫. ರಾಣಿ ಅಬ್ಬಕ್ಕ

೨೬. ರಣಧೀರ ಕಂಠೀರವ

೨೭. ಬೆಂಗಳೂರಿನ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್ 

೨೮. ಡಾ|| ಕುವೆಂಪು

೨೯. ಸಂತ ಶಿಶುನಾಳ ಷರೀಪರು

೩೦. ಜಯದೇವಿತಾಯಿ ಲಿಗಾಡೆ (೧೯೭೪ ಮಂಡ್ಯ)

*******

ಕನ್ನಡದ ಬರಹಗಳನ್ನು ಹಂಚಿ ಹರಡಿ

10 thoughts on “ಸಾಮಾನ್ಯ ಜ್ಞಾನ (ಭಾಗ 1): ಮಹಾಂತೇಶ್ ಯರಗಟ್ಟಿ

  1. 1. Govinda Pai
    2. Baba Budan
    3. JH Patel – Not only kannada but any regional language
    4. Siddharamaiah (?)
    5. Eesooru
    6. Hukkeri Balappa
    7. Manjappa Hardekar
    8. 

Leave a Reply

Your email address will not be published. Required fields are marked *