ಪ್ರಕಟಣೆ

ಶ್ರೀಯುತ ರಮೇಶ್ ಹೆಗಡೆಯವರಿಗೆ ಪಂಜು ಬಳಗದ ನಮನ

ತಮ್ಮ ಕಾವ್ಯದ ಮೂಲಕ ನಮ್ಮ ಪತ್ರಿಕೆಯನ್ನು ಶ್ರೀಮಂತಗೊಳಿಸಿದ ಸಹೃದಯರಾದ ಶ್ರೀಯುತ ರಮೇಶ್ ಹೆಗಡೆಯವರಿಗೆ ಪಂಜು ಬಳಗ ಅಂತಿಮ ನಮನಗಳನ್ನು ಸಲ್ಲಿಸುತ್ತದೆ. 

ರಮೇಶ್ ಹೆಗಡೆಯವರು ಕಳುಹಿಸಿಕೊಟ್ಟಿದ್ದ ಮೊದಲ ಗಝಲ್ ಇದು. ಪತ್ರಿಕೆಯೆಡೆಗಿನ ಅವರ ಪ್ರೀತಿಗೆ ಗೌರವಾರ್ಥವಾಗಿ ತಮ್ಮ ಮುಂದಿಡುತ್ತಿದ್ದೇವೆ.

ಮಾತುಗಳ ಸೇತು . . . :

ಮಾತುಗಳ ಸೇತುವೆಯ ಬೆಸೆದುಬಿಡು ಚೂರು/
ಕುಪಿತ ಭಾವದ ಬಸಿರ ಎಸೆದುಬಿಡು ಚೂರು//

ಕವಿದ ಮೋಡದ ಕೆಳಗೆ ಒಣ ಮೊಗವು ಏಕೆ/
ಸಸುನಗೆಯ ಮಳೆಯ ಹನಿ ಬಸಿದುಬಿಡು ಚೂರು//

ನದಿಯ ದಡದಲಿ ಬಂದು ಕೊಲ್ಲುವುದೆ ಕಾಲ/
ದೋಣಿಯೇರುತ ಕೂತು ಹೊಸೆದುಬಿಡು ಚೂರು//

ಅಲೆಯಲೆಯ ದಿಬ್ಬಣವು ಹಾಜರಿಯ ಇಡಲು/
ಉಸಿರ ತಾಕುತ ಚಳಿಯ ಕಸಿದುಬಿಡು ಚೂರು//

ತೀರ ಕಾಣುವುದಲ್ಲಿ ತಡವೇಕೆ ಮರಳಿ/
ಕೆಂಪು ಅಧರದ ಮಧುವ ಮಸೆದುಬಿಡು ಚೂರು//

– ರಮೇಶ ಹೆಗಡೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *