ವೀರ್ ಸಂತೋಷ್ ರವರ ರೆಡಿ ಟು ಫಾಲ್ ಇನ್ ಲವ್: ಶರತ್ ಚಕ್ರವರ್ತಿ

ಪುಸ್ತಕ ವಿಮರ್ಶೆ ಬರೆಯುವ ನನ್ನ ಮೊದಲ ಪ್ರಯತ್ನ,

 
ಪುಸ್ತಕ: ರೆಡಿ ಟು ಪಾಲ್ ಇನ್ ಲವ್ (ಇಂಗ್ಲೀಷ್)
ಬರಹಗಾರ: ವೀರ್ ಸಂತೋಷ್.
 
ಪ್ರಿಯ ಸಂತೋಷ್ (Veer Santhosh)
 
ಸಿಡ್ನಿ ಶೆಲ್ಡಾನ್ ನಂತಹ ಮಹಾನ್ ಕಾದಂಬರಿಕಾರನ ಪುಸ್ತಕಗಳು ನನಗೆ ಉಡುಗೊರೆಗಳಾಗಿ ಬಂದಾಗ ಅವುಗಳನ್ನು ಸೀದಾ ನನ್ನ ಕಪಾಟಿನಲ್ಲಿ ತುರುಕಿ, ಮತ್ತೆಂದು ತೆರೆದು ನೋಡುವ ಉತ್ಸಾಹವನ್ನೇ ತೋರದ ನಾನು ನಿನ್ನ ಪುಸ್ತಕ 'Ready to fall in love' ಅನ್ನು ಕೊಂಡು ತಂದಿದ್ದೇನೆ. ಸಾಮಾನ್ಯವಾಗಿ ಇಂಗ್ಲೀಷ್ ಸಾಹಿತ್ಯ ಓದುವುದೆಂರೆ ನನಗೆ ರೇಜಿಗೆಯ ವಿಷಯ. ಬಹುಶಃ ಇದರಿಂದಲೇ ಇರಬೇಕು ಇಂಗ್ಲೀಷ್ ನನ್ನ ದೌರ್ಬಲ್ಯವಾಗಿ ಕೆಲವು ಕಡೆ ಅಸಹಾಯಕನಾಗುವಂತೆ ಮಾಡಿದ್ದು. ಇರಲಿ ನಿನ್ನ ಕಥಾಸಂಕಲನ ಹೆಸರೇ ಹೇಳುವಂತೆ ಪ್ರೇಮಕಥೆಗಳ ಹೊತ್ತಿಗೆ. ಸಾಮಾನ್ಯವಾಗಿ ದುರಂತ ಕಥೆಗಳನ್ನು ಇಷ್ಟಪಡುವ ನಾನು ಸಾಮಾಜಿಕ, ಮಾನವೀಯ ಕಥೆಗಳನ್ನು ಹೆಚ್ಚಾಗಿ ಓದಲು ಬಯಸುತ್ತೇನೆ. ತೀರ ವಿರಳವಾಗಿ ಪ್ರೇಮಕಥೆ ಓದಿದ್ದು ಉಂಟು. ಆದರೆ ನಿನ್ನ ಮೊದಲ ಕಥೆಯೇ ನನ್ನಲ್ಲಿ ಪ್ರೇಮಕಥೆಗಳಲ್ಲಿ ಆಸಕ್ತಿ ಮೂಡುವಂತೆ ಮಾಡಿತು.
 
 
ಕಾಲೇಜು ದಿನಗಳಲ್ಲಿ ನಡೆಯುವ ಪ್ರೇಮಕಥೆಗಳಿಗೆ ಬರವಿಲ್ಲ. (ಆದರೆ ನೈಜವಾಗಿಯೂ ಬರ ಬಂದಿರುವುದು ಪ್ರೀತಿಗೆ ಎಂಬುದೂ ನಿಜ) ಕಥೆ ಆರಂಭದಲ್ಲೇ ಆಕರ್ಷಿಸುವುದು ನಿನ್ನ ನೇರ ಮತ್ತು ಸರಳ ನಿರೂಪಣೆ. ಕಥಾನಾಯಕ ಸಂತೋಷ ತನ್ನೊಳಗೆ ಓದುಗನನ್ನು ತನ್ನೊಳಗೆ ಎಳೆದು ಕೂರಿಸಿಕೊಳ್ಳುತ್ತಾನೆ. ತನ್ನಂತೆಯೇ ತಳಮಳಗೊಳ್ಳುವಂತೆ ಮಾಡುತ್ತಾನೆ. ವಿಚಿತ್ರ ಎಂದರೆ ಈ ಕಥೆಯ ಮೊದಲರ್ಧ ನನ್ನ ಜೀವನದಲ್ಲಿ ನಡೆದ ಘಟನೆಗಳೇ ಆಗಿದೆ (ಬಹುಶಃ ಸಾಮಾನ್ಯವಾಗಿ ಎಲ್ಲಾ ತರುಣರ ಜೀವನದಲ್ಲೂ ನಡೆದಿರಬಹುದಾದ ಘಟನೆಗಳು) ಪ್ರೀತಿ ಶುರುವಿನಲ್ಲಿ ಆಗೋ ಆ ತಹತಹ, ಹಪಹಪಿಗಳು, ನಗು ಮರೆತು ಗಂಭೀರಾಗುವ ಮತ್ತೂ ಕೆಲವೊಮ್ಮೆ ಕಾರಣವಿಲ್ಲದೇ ನಗುವ ತಿಕ್ಕಲುತನ ಆ ವಯಸ್ಸಿನಲ್ಲಿ ಮಾಮೂಲೇ, ಆದರೂ ಅದೊಂದು ವಿಶಿಷ್ಟ ಅನುಭವವೇ ಸರಿ. ಆ ಗೊಂದಲಗಳಲ್ಲಿ ಅದೇನೋ ಸುಖ. ನಿನ್ನ ಕಥೆ ಓದುತ್ತಾ 5-6 ವರ್ಷಗಳ ಹಿಂದೆ ಹೋಗಿ ನನ್ನ ಪಿಯುಸಿ ಕ್ಲಾಸಿನ ಬೆಂಚಿನಲ್ಲಿ ಕುಳಿತು, ಬಂಕ್ ಹೊಡೆದು ಅವಳಿಂದೆ ಸುತ್ತಿ, ಸಿಕ್ಕ ಸಿಕ್ಕವರಿಂದ ಬೈಯಿಸಿಕೊಂಡು, ಹಲವರ ಹಗೆತನ ಕಟ್ಟಿಕೊಂಡು, ನಕ್ಕು-ಅತ್ತು ಮಳೆಯಲಿ ನೆಂದ ದಿನಗಳು ಕಣ್ಮುಂದೆ ಬಂದವು. ಆದರೆ ಕಥೆಯ ಅಂತ್ಯದಲ್ಲಾಗುವ ಸಿನಿಮಿಯ ಬದಲಾವಣೆಗಳು ನನ್ನ ಜೀವನದಲ್ಲಾಗಲಿಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟೆ. (ಕಣ್ಣಿರು ಒಳಗೆ ಉಳಿಯಿತು).
 
 
ನಿನ್ನ ಕಥೆಯಿಂದ ಇವೆಲ್ಲಾ ನೆನಪಾದ್ದರಿಂದ ಹೇಳುತ್ತಿದ್ದೇನಷ್ಟೆ. ಸಾಹಿತ್ಯಕವಾಗಿ ಹೇಳಬೇಕೆಂದರೆ ನಿನ್ನ ಕಥೆ ಸಂಪೂರ್ಣ ಯುವ ಮನಸ್ಸುಗಳಿಗಾಗಿಯೇ ಎನ್ನಬಹುದು. ಕೇವಲ ಘಟನೆಗಳನ್ನು ಸೇರಿಸುತ್ತಾ ಓದುಗನಲ್ಲೂ ಅಂತಹದ್ದೇ ತಳಮಳ ಹುಟ್ಟಿಸುವಲ್ಲಿ ಕಥೆ ಯಶಸ್ವಿಯಾಗಿದೆ. ಓದುಗನನ್ನು ಭಿಗಿಹಿಡಿದಿಡುತ್ತದೆ. ತರುಣರ ನಾಡಿಮಿಡಿತ ಅರಿವಿರುವ ನೀನು ಎಲ್ಲೂ ಅದಕ್ಕೆ ಧಕ್ಕೆಯಾಗದಂತೆ ಆ ಮುಗ್ದತೆಯನ್ನ ಎಳೆಯಾಗಿ ಬಿಡಿಸಿದ್ದೀಯ. 
 
ಇದನ್ನೇ ಏಕೆ ಕನ್ನಡದಲ್ಲಿ ಬರೆಯಲಿಲ್ಲ ಎಂದು ಪ್ರಶ್ನಿಸಿಕೊಳ್ಳುವ ಮುಂಚೆಯೇ ಉತ್ತರ ನನ್ನೊಳಗೆ ರೆಡಿಯಿತ್ತು.
ಈ ಕಥೆ ಯತಾಪ್ರಕಾರ ಅನುವಾದಗೊಂಡಲ್ಲಿ ಬಾಲಿಶವೆನಿಸಿಬಿಡುತ್ತಿತ್ತು ಎನಿಸಿತು. ಕನ್ನಡದ ಸಾಹಿತ್ಯ ವಿಸ್ತಾರ ಹಾಗೂ ಆಳವಾದದ್ದು. ನಮ್ಮ ವ್ಯಾಕರಣ ಅಷ್ಟೊಂದು ಕ್ಲಿಷ್ಟವಲ್ಲದಿದ್ದರೂ ಇಂಗ್ಲೀಷ್ ನಷ್ಟು ಸುಲಭದಲ್ಲವಾದ್ದರಿಂದ. ಕಥೆಯ ಕೊನೆಯಲ್ಲಿ ಸಿನಿಮಿಯ ತಿರುವಿಗಿಂತ ತುಸು ಗಾಢವಾಗಿ ಅನುಭವಿಸಿ ಬರೆಯಬಹುದಿತ್ತೇನೋ ಎನಿಸಿತು. ಕಲಾಸೃಷ್ಟಿಯಲ್ಲಿ ಸ್ವಲ್ಪ ಕೊರತೆ ಎನಿಸಿದೆ. ಇರಲಿ ಇವಿಷ್ಟು ವಿಷಯಗಳ ಹೊರತಾಗಿ ಇದೊಂದು ಉತ್ತಮ ಕಿರುಕಥೆ. ಎಲ್ಲಿಯೂ ನಾನು ಇಂಗ್ಲೀಷ್ ಕಥೆ ಓದುತ್ತಿದ್ದೇನೆ ಎನಿಸದಷ್ಟು ಸರಳ ನಿರೂಪಣೆ ಇಷ್ಟವಾಯಿತು. 21ನೇ ವಯಸ್ಸಿಗೆ ಕಥಾಸಂಕಲನ ಹೊರತಂದು, ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿ, ಅತ್ತಕಡೆ ಇಂಜನಿಯರಿಂಗ್ ಕೂಡ ಮುಗಿಸಿರುವ ನಿನ್ನ ಯಶಸ್ಸು ಕಂಡು ನಿಜವಾಗಿಯೂ ಕರುಬುತ್ತಿದ್ದೇನೆ. ನಿನ್ನೊಳಗಿನ ಆ ಚೈತನ್ಯಕ್ಕೆ, ಜೀವಚಿಲುಮೆಗೆ ಶರಣು.
 
ಉಳಿದ ಕಥೆಗಳನ್ನು ಓದಲು ಸಮಯವಾಗಿಲ್ಲ ಓದಿ ವೈಯುಕ್ತಿಕವಾಗಿ ತಿಳಿಸುತ್ತೇನೆ.
ಶುಭವಾಗಲಿ.
 
ಶರತ್ ಚಕ್ರವರ್ತಿ.
19-09-12.
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Utham Danihalli
11 years ago

Sharath nina vimarshe thumba chenagidhe
Shubhavagali nininda enastu vimarshegallu barali

Mallikarjun
Mallikarjun
11 years ago

ನಿನ್ನ ವಿಮರ್ಶೆಯಲ್ಲಿ ಪದ ಪ್ರಯೋಗ ತುಂಬಾ ಚೆನ್ನಾಗಿದೆ ಶರತ್… 
ವೀರ ಸಂತೋಷ್ ಗೆ ಒಳ್ಳೆಯದಾಗಲಿ… 
ಶುಭವಾಗಲಿ… 🙂  

Santhosh
11 years ago

Thanks Sharath 🙂 Its the support from u guys that matters a lot 🙂 Sorry for commenting in english 🙂

Santhosh
11 years ago

mallikarjun : Thank you very much 🙂

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

ಚೆನ್ನಾಗಿದೆ ವಿಮರ್ಶೆ ಸರ್. ಧನ್ಯವಾದಗಳು

5
0
Would love your thoughts, please comment.x
()
x