ಲೇಖನ

ಲೇಖನಗಳ ಆಹ್ವಾನ…

 

ಸಹೃದಯಿಗಳೇ,

ಹೊಸ ವರ್ಷ ಎರಡು ಸಾವಿರದ ಹದಿನಾಲ್ಕರ ಮೊದಲ ವಾರ ಬಂದರೆ ಪಂಜುವಿನ 50 ನೇ ಸಂಚಿಕೆ ನಿಮ್ಮ ಮಡಿಲು ಸೇರುತ್ತದೆ. 50ನೇ ಸಂಚಿಕೆ ಪ್ರಕಟಗೊಂಡ ಎರಡು ವಾರಕ್ಕೆ ಅದೇ ಜನವರಿ ತಿಂಗಳಿನಲ್ಲಿ ಪಂಜು ತನ್ನ ಪ್ರಥಮ ಹುಟ್ಟುಹಬ್ಬವನ್ನು ಸಹ ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ. ಪಂಜುವಿನ ಈ ಎರಡು ಶುಭ ಸಾಹಿತ್ಯ ಸಂಭ್ರಮಗಳನ್ನು ನಿಮ್ಮ ಬರಹಗಳ ಮೂಲಕ ಇಡೀ ಜನವರಿ ತಿಂಗಳು ಆಚರಿಸುವ ಆಶಯ ಪಂಜುವಿನದು. ತಡವೇಕೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ನಮ್ಮ ಈ ಮೇಲ್ ವಿಳಾಸಗಳು: editor.panju@gmail.com, smnattu@gmail.com

ನಿಮ್ಮ ಬರಹಗಳ ನಿರೀಕ್ಷೆಯಲ್ಲಿ

ಪಂಜು ಬಳಗ

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಲೇಖನಗಳ ಆಹ್ವಾನ…

  1. ಲೇಖನಗಳನ್ನು ಕಳಿಸಿದರೆ ಅದು ಆಯ್ಕೆ ಆಗಿದೆಯಾ, ಇಲ್ಲವಾ ಎ೦ದು ತಿಳಿಸಿವಷ್ಟೂ ಸೌಜನ್ಯ ನಿಮಗಿಲ್ಲ.

    ದಯವಿಟ್ಟು ಇದನ್ನು ರೂಡಿಸಿಕೊಳ್ಳಿ…

    1. ಪ್ರಶಾಂತ್ ನಿಮಗೆ ರೀಪ್ಲೇ ಕಳುಹಿಸಿದ್ದೆವು.. ನೀವು ನೋಡಿಲ್ಲ ಅನಿಸುತ್ತೆ. ತಾಂತ್ರಿಕ ದೋಷದಿಂದ ನಿಮಗೆ ರೀಪ್ಲೈ ತಲುಪಿಲ್ಲವಾದರೆ ಮತ್ತೆ ಕಳುಹಿಸುತ್ತೇವೆ. ಧನ್ಯವಾದಗಳು..
      ಪಂಜು ಬಳಗ

  2. ಪ್ರಶಾಂತವರು ಹೇಳುವಂತೆ ಲೇಖನಗಳನ್ನು ಕಳಿಸಿದಾಗ ಅವುಗಳು ನಿಮಗೆ ತಲುಪಿವೆ ಅನ್ನುವಂತಹ ಪ್ರತಿಕ್ರಿಯೆ ನಮಗೆ ಸಿಗುವ ಹಾಗೆ ಅವುಗಳು ಆಯ್ಕೆ ಆಗಿದೆಯಾ, ಇಲ್ಲವಾ ಎ೦ದು ನಮಗೆ ತಿಳಿಸುವುದು ಸೂಕ್ತ.

    1. ರತ್ನರವರೇ,
      ನಿಮ್ಮ ಲೇಖನ ಅಸ್ವೀಕೃತಗೊಂಡಿದೆ ಎಂದು ಹೇಳಲು ಪಂಜು ಬಳಗ ಕಲಿಯಬೇಕಿದೆ.
      ಪ್ರಯತ್ನಿಸುತ್ತೇವೆ..
      ಧನ್ಯವಾದಗಳು
      ಪಂಜು ಬಳಗ

Leave a Reply

Your email address will not be published. Required fields are marked *