ಅವತ್ತು ನಾನು ನಮ್ಮ ಹೊಲಕ್ಕೆ ನೀರಿಡುತ್ತಿದ್ದೆ. ಆ ನೀರಿಡುವ ಸಮಯದಲ್ಲಿ ಹುಳು ಹುಪ್ಪಟೆಗಳು ನೀರಿನಲ್ಲಿ ತೇಲುತ್ತವೆ. ಅಂತಹ ಹುಳುಗಳನ್ನು ತಿನ್ನಲೆಂದು ಒಂದಷ್ಟು ಹಕ್ಕಿ ಪಕ್ಷಿಗಳು ಬರುತ್ತವೆ. ತನ್ನ ಬೆಳಗಿನ ಉಪಹಾರಕ್ಕೆಂದು ಹಾಗೆ ಬಂದ 'ಕಿಂಗ್ ಫಿಷರ್' ನನ್ನ ಮೊಬೈಲ್ ನಲ್ಲಿ ಹೀಗೆ ಸೆರೆಯಾಯ್ತು. ಮೊದಲಿಗೆ ಸ್ವಲ್ಪ ದೂರದಲ್ಲಿ ನಿಂತು ಕ್ಲಿಕ್ಕಿಸಿದೆ. ಆಮೇಲೆ ನಿಧಾನವಾಗಿ ಸದ್ದಾಗದಂತೆ ಹೆಜ್ಜೆಯೂರಿ ಸ್ವಲ್ಪ ಹತ್ತಿರಕ್ಕೆ ಹೋದೆ. ಒಂದೊಂದು ಫೋಟೋಗಳನ್ನ ಕ್ಲಿಕ್ಕಿಸುತ್ತ ಒಂದೊಂದು ಹೆಜ್ಜೆ ಹತ್ತಿರಕ್ಕೆ ಹೋದೆ. ಗೊತ್ತಾದರೆ ಹಾರಿ ಹೋಗಬಹುದೆಂದು ತುಂಬಾ ಎಚ್ಚರವಹಿಸಿದೆ. […]