ಮೌನದೊಳಗೊಂದು ಜೀವಂತ ಪ್ರೀತಿ: ಸಿದ್ದುಯಾದವ್ ಚಿರಿಬಿ

ಅವಳು ಮತ್ತು ನಾನು ಕವಿತೆಗಳಲಿ ಬಳಸುವ ಪದ ಒಂದಿದೆ, ಯಾವ ಕವಿತೆಯೇ ಹಾಗಲಿ ಆ ಪದವಿಲ್ಲದೆ ಆರಂಭವಾಗುವುದಿಲ್ಲ, ಆ ಪದವಿಲ್ಲದೆ ಅಂತ್ಯಯಾಗುವುದಿಲ್ಲ. ನನಗರಿವಿಲ್ಲದೆ ಉದ್ಭವಿಸಿಬಿಡುವ ಆ ಒಂದೆ ಮಾತು ನಮ್ಮಿಬ್ಬರ ಮಧ್ಯೆ ಅದೇನೋ ಸಂಬಂಧಗಳನ್ನು ಸೃಷ್ಟಿಸಿದೆ. ನಮ್ಮಿಬ್ಬರಲ್ಲಿ ಮುಗಿಯಲಾಗದ ಸಂಭಾಷಣೆಯನ್ನು ಸೃಷ್ಟಿಮಾಡುತ್ತದೆ. ಒಲುಮೆ, ಪ್ರೀತಿ, ಮನಸು, ಕನಸು, ಭಾವನೆ, ಬದುಕು, ಉಸಿರು, ಇಂತಹ ಪದಗಳಿಗಿಂದ ಮೋದಲು ಮನಸಿನಲ್ಲಿ ಬಂದು ನಿಲ್ಲುವ ಆ ಒಂದು ಪದ ನಿಶ್ಶಬ್ದವಾದ ಹೃದಯ ಬಡಿತವನ್ನು ಶರವೇಗದಲ್ಲಿ ಭಾವನೆಗಳನ್ನು ಜಾಗೃತವಾಗಿಸಿಬಿಡುತ್ತದೆ. ನಮ್ಮಿಬ್ಬರ ಮಧ್ಯೆ ನೇರ ಸಂಭಾಷಣೆಯ ಸಂದರ್ಭ ಸೃಷ್ಟಿಯಾಗಿಲ್ಲ. ಆಗುತ್ತದೊ ಇಲ್ಲವೊ ಅವಳೆ ನಿರ್ಧರಿಸಬೇಕು. ಆದರೂ ನಾವಿಬ್ಬರು ಪ್ರತಿದಿನ, ಪ್ರತಿಕ್ಷಣ ಮಾತನಾಡುತ್ತಲೇ ಇರುತ್ತೇವೆ, ಕವಿತೆಗಳೆ ನಮ್ಮಿಬ್ಬರ ಮಾತುಕತೆಗಳಾಗಿ ಉದ್ಭವಿಸುತ್ತವೆ.

ಒಂದುಗಂಡಿಗೊಂದು ಹೆಣ್ಣು
ಹೇಗೋ ಒಂದುಗೂಡಿಕೊಂಡು
ಕಾಣದೊಂದು ಕನಸು ಕಂಡು
ಮಾತಿಗೂಲಿಯದ ಅಮೃತ ಉಂಡು
ದುಃಖ ಅಗುರವೇನುತಿರೆ
ಪ್ರೀತಿ ಎನಲು ಹಾಸ್ಯವೇ…, ಕೆ.ಎಸ್.ಎನ್.

ಪ್ರೀತಿ, ಬದುಕು, ಕನಸುಗಳು, ಆಸೆ, ನೋವು, ನಲಿವು, ಎಲ್ಲವು ಅಲ್ಲಿ ಪ್ರತಿದಿನದ ಮುಂಜಾವಿನ ಮೃದು ಕಿರಣದ ಬಾಣಗಳಂತೆ ಅಂತಿಂದಿತ್ತ ಇತ್ತಿಂದತ್ತ ಸುತ್ತುತ್ತಿರುತ್ತವೆ. ಈ ಪ್ರೀತಿಯೇ ಹಾಗೆ ಅಲ್ವಾ? ಹಗಲಿಡಿ ಮಾತನಾಡಿ ಮಾತನಾಡಲು ಪದಗಳೆ ಇಲ್ಲವೆಂದರು ಮತ್ತೆ ಮಾತನಾಡಲು ಹಂಬಲಿಸಿಬಿಡುತ್ತದೆ ಮನಸ್ಸು. ಮತ್ತೆ ಸುರು ಪ್ರೀತಿಯ ವ್ಯವಸಾಯ ಫಲ ಸಿಗುವೂದೊ ಬಿಡುವುದೋ ಎಂದು ಯೋಚಿಸಿಲ್ಲ, ಅವಳ್ಯಾರೂ ಒಂದು ಗೊತ್ತಿಲ್ಲ ಕೇಳುವ ಅಸೇಯು ನನಗಿಲ್ಲ ಕಾರಣ ಅವಳ ಒಂದಿಡಿ ಪ್ರೀತಿಗಾಗಿ ಸದಾ ಹಂಬಲಿಸಿ, ಅವಳಾಡುವ ಪ್ರತಿ ಮಾತಿಗೂ ಜಾತಕದ ಪಕ್ಷಯಂತೆ ಕಾಯುವ ಪ್ರೇಮದಾಸ ನಾನು, ಕವಿ ಕಾಳಿದಾಸನಿಗೆ ಶಾಕುಂತಲೆ ಕೊನೆಯಗೆ ಸಿಗುವುಳು, ಇವಳು ನನಗೆ ಸೀಗುವಳೊ ಬಿಡುವಳೊ ತಿಳಿದಿಲ್ಲ. ಆ ಒಂದು ಮಾತು ನಮ್ಮಿಬ್ಬರ ಮಧ್ಯೆ ಲೆಕ್ಕವಿರದಷ್ಟು ಕವಿತೆಗಳನು ಬರೆಸಿದೆ, ನಮ್ಮಿಬ್ಬರ ಮಧ್ಯೆ ಪ್ರೇಮ ಪತ್ರಗಳು ಸರಿದಾಡಿವೆ. ಕನಸುಗಳು ಹಂಚಿಕೆಯಾಗಿವೆ, ಭಾವನೆಗಳು ಮೆಳೈಸಿವೆ, ಹೃದಯಗಳು ಮಿಲನ ಮಹೋತ್ಸವದ ಸಂಭ್ರಮಾಚರಣೆಯಲ್ಲಿವೆ, ನಮ್ಮಿಬ್ಬರ ಕವಿತೆಗಳ ಸಂಭಾಷೆಗೆಯಲ್ಲಿ ಸಪ್ತಪದಿಯವರೆಗೂ ಮಾತುಕತೆಗಳಾಗಿವೆ, ಒಮ್ಮೆ ಪ್ರೀತಿ, ಮತ್ತೊಮ್ಮೆ, ನಿರಾಶೆ, ಇನ್ನೊಮ್ಮೆ ಒಲವು, ಆಗೊಮ್ಮೆ ವಿರಹ, ಈಗೊಮ್ಮೆ ನೋವು, ಮೋಗದೊಮ್ಮೆ ಬಿಟ್ಟೆಬಿಟ್ಟಳು ಎಂಬ ಬಿರುಸು ನುಡಿಗಳು ನುಡಿದು ಸಾವಿರ ಸಾಗರದ ಅಲೆಗಳು ಒಮ್ಮೆಲೆ ಈ ಹೃದಯಂತರಾಳದಲ್ಲಿ ದುಮ್ಮಿಕ್ಕುವಂತೆ ಮಾಡಿಬಿಡುವ ಚಕೊರಿ ನನ್ನವಳು. ನಲಿದು, ನಲಿಸುವಳು ಅವಳೆ. ಅವಳ ನಗುವೇ ನನಗೆ ಮಗುವಾಗಿ, ಮಗುವಿನ ನಗು ಚಲ್ಲುವ ಅವಳು ನನ್ನ ಪ್ರೀತಿಗೆ ಹೃದಯೇಶ್ವರಿ, ಬದುಕಿನ ಭುವನೆಶ್ವರಿ, ಕನಸುಗಳ ಸ್ಪೂರ್ತಿ, ಬರಿದಾದ ಬದುಕಿನಲಿ ಸದಾ ಹಸಿರು ಹೊತ್ತು ನಿಂತ ಮಲೆನಾಡಿನ ಸುಂದರಿ,

ಇಂತಹ ಸುಂದರಿಯೂ ಒಂದು ಶಬ್ದದ ಬಲೆಗೆ ಬಿದ್ದಿದ್ದಾಳೆ, ನನ್ನನ್ನು ಆ ಬಲೆಗೆ ಕೆಡವಿದ್ದಾಳೆ. ಆ ಶಬ್ದವೇ ""ಮೌನ"" ನಿಜ ಈ ಮೌನ ಅನ್ನುವ ಶಬ್ದ ಮಾತುಗಳಿರದ ನಯನಗಳ ಸುಂದರ ಸಂಭಾಷಣೆ, ಪ್ರೇಮಿಗಳ ಪ್ರೀಯ ಮಿತ್ರ, ತುಂಬಾ ಸಂತೋಷದಲ್ಲಿದ್ದಾಗ ಎತ್ತಲಿಂದಲ್ಲೊ ಬಂದ ಯಾವುದೊ ಒಂದು ನೋವಿನ ಸುದ್ದಿ ನಗುವನ್ನೇ ಕಿತ್ತುಕೊಳ್ಲುತ್ತದೆ, ಆಗಲೆ ಕ್ಷಣಾರ್ಧದಲ್ಲಿ ಜನಿಸಿಬಿಡುವದೆ ಈ "ಮಧುರ ಮೌನ" ನೋವಿಗೊಂದು ನೆಮ್ಮಿದಿ ಹೇಳಿ ಮನಸ್ಸನ್ನು ಶಾಂತವಾಗಿಸುವ ಈ ಮೌನ ನಮ್ಮಿಬ್ಬರ ಪ್ರೀತಿಯ ಸಂಭಾಷಣೆಯ ಮಧ್ಯೆ ಸದಾ ಜೀವಂತ. ಪ್ರತಿ ಪದಗಳಲಿ ಅವಳು ಜೀವಂತ, ಪ್ರತಿ ಕವಿತೆಗಳಲಿ ಮೌನ ಜೀವಂತ, ನನ್ನೊಲವಿನ ದೇವತೆ ಈ ಹೃದಯಂಗಳದಲಿ ಸದಾ ಶಾಶ್ವತ, ಅವಳ ನಗು ಅಲ್ಲಿ ಸದಾ ನಳನಳಿಸುತ್ತದೆ, ಕತ್ತಲು ಮನೆಗೆ ಪ್ರೀತಿಯ ಹಣತೆ ಹಚ್ಚಿ ನಗುವಿನ ಬೆಳಕು ಚಿಮ್ಮಿಸುತದೆ. ಸಾವಿರ ನದಿಗಳು ದುಮ್ಮಿಕ್ಕಿ ಭೊರ್ಗರಿಯುವಂತೆ, ಹೃದಯಂತರಾಳದಲಿ ಭೋರ್ಗರೆದು ದುಮ್ಮಿಕ್ಕುವ ಅವಳೊಲುಮೆಯ ಅಮೃತದ ಸಾಗರದಲಿ ನಾ ಸದಾ ಪಯಣಿಗ, ಅವಳು ಬಂದು ಸೇರಬೇಕಿದೆ ಬೇಗ. ಅವಳು ಬರುವ ದಾರಿಯನ್ನು ಕಾಯುತಿರುವ ಪ್ರೇಮ ಫಕೀರ…,

"ನೀ ಬರುವೆ ಬಂದು ಬಾಳು ಬೆಳಗುವೆ
ಮನೆಯನು ಮಂತ್ರಲಯವನ್ನಾಗಿಸಿ
ಆ ಮನೆಯ ಖಳಸ ನೀನಾಗು ಬಾ ಬೇಗ
ಆ ನಗುವಿನ ಅಲೆ ತಂದು ಮನೆ ಬೆಳಗು ಬಾ ಬೇಗ
ಜಗದ ಸಂತೋಷವನ್ನೆಲ್ಲಾ ನಿನಗಾಗಿ ಕಾಯ್ದಿರಿಸಿ
ನನ್ನೆಲ್ಲ ಕನಸುಗಳನು ನಿನಗಾಗಿ ಮಿಸಲಿರಿಸಿ
ಭಾವನೆಗಳನ್ನೆಲ್ಲಾ ಅಲ್ಲಿ ಕಾವಲಿರಿಸಿ
ಕಾಯುತಿರುವೆ ಓ ನಲ್ಲೆ ನೀ ಬರುವ ದಾರಿಯನು
ಮನೆ-ಮನಗಳೆರಡರ ಬಾಗಿಲು ತೆರೆದು"…,

ಸಿದ್ದುಯಾದವ್ ಚಿರಿಬಿ…,


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x