"ಮಾನವನ ಸ್ವಾರ್ಥಪರ ನಡವಳಿಕೆ-ಆಲೋಚನೆ ತೆರೆದಿಡುವ ಜಾನಪದೀಯ ಕಥಾನಕ" ಪ್ರಪಂಚದ ಮರುಹುಟ್ಟು ಕುರಿತ ಇರುಳಿಗರ ಸೃಷ್ಟಿಪುರಾಣದ ಕಥೆಯನ್ನು ಆಧಾರವಾಗಿಟ್ಟುಕೊಂಡು ರಚಿಸಲ್ಪಟ್ಟ "ಸೋರೆಬುರುಡೆ" ಜಾನಪದೀಯ ನೃತ್ಯನಾಟಕವು ಬೆಂಗಳೂರು ವಿವಿ ಆವರಣದಲ್ಲಿರುವ ಕಲಾಗ್ರಾಮದ ರಂಗಮಂದಿರದಲ್ಲಿ ಪ್ರದರ್ಶನಗೊಂಡು ಕಿಕ್ಕಿರಿದ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಬೆಂಗಳೂರಿನ ಕೆ.ಎಸ್.ಎಂ.ಟ್ರಸ್ಟ್ ಕಲಾವಿದರು ಪ್ರಸ್ತುತಪಡಿಸಿದ ಈ ನಾಟಕವು, ಮನುಷ್ಯ ತನ್ನ ಅಸ್ತಿತ್ವದ ಉಳಿವಿಗಾಗಿ ಏನೂ ಬೇಕಾದರೂ ಮಾಡಲು ಹಿಂಜರಿಯಲಾರ ಎಂಬ ಸಂದೇಶವನ್ನು ನೀಡಿತು. ಅಲ್ಲದೆ, ಮಾನವನದು ಸದಾ ಸ್ವಾರ್ಥಪರ-ಅನುಕೂಲಸಿಂಧುವೂ ಆದ ವರ್ತನೆ ಮತ್ತು ನಡವಳಿಕೆಯಾಗಿದೆ ಎನ್ನುವುದನ್ನು ನಾಟಕದಲ್ಲಿ ಮನೋಜ್ಞವಾಗಿ […]
ಕನ್ನಡದ ಬರಹಗಳನ್ನು ಹಂಚಿ ಹರಡಿ
ಗಾಂಧಿಯವರ ಅಸಹಕಾರ ಚಳುವಳಿಯ ಕರೆಗೆ ಓಗೊಟ್ಟ ಫಲವಾಗಿ ಹಲವರು ಸ್ಥಳೀಯ ಮಟ್ಟದಲ್ಲಿ ಕರನಿರಾಕರಣೆ, ಸರಕಾರಿ ಖಜಾನೆಗಳ ಲೂಟಿ, ಶ್ರೀಮಂತರ ಸ್ವತ್ತನ್ನು ದೋಚಿಕೊಂಡು ಬಡವರಿಗೆ ಹಂಚುವುದು ಮುಂತಾದವುಗಳನ್ನು ಮಾಡುತ್ತಾ ಆಗಿನ ಸರಕಾರಗಳಿಗೆ ಸವಾಲಾಗಿರುವ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ. ದೇಶದ ಸ್ವಾತಂತ್ರ್ಯ ಸಮರದ ಇತಿಹಾಸವನ್ನು ಅವಲೋಕಿಸಿದಾಗ, ಜನನಾಯಕರ ಜನಾಂದೋಲನಗಳು, ಕಾನೂನುಬದ್ಧ ಚಳುವಳಿಗಳು ಒಂದೆಡೆಯಾದರೆ ಜಾಗೃತ ಯುವಮನಸ್ಸುಗಳು, ಆದಿವಾಸಿಗಳ ರಕ್ತಸಿಕ್ತ ಹೋರಾಟದಲ್ಲಿ ಸ್ವ್ವಾತಂತ್ರ ಸಮರದ ಗಂಗೆಯ ಪ್ರವಾಹಕ್ಕೆ ಸಾವಿರ ತೊರೆಗಳು ಸೇರಿಕೊಂಡು ಬಿಸಿನೆತ್ತಿರಿನ ತರ್ಪಣದಿಂದ ತಾಯ್ನೆಲದ ಮುಕ್ತಿಗಾಗಿ ಅನ್ಯಾಯದ ವಿರುದ್ಧ ಸಿಡಿದೆದ್ದು […]
ಕನ್ನಡದ ಬರಹಗಳನ್ನು ಹಂಚಿ ಹರಡಿ
ಜನಪದರ ಕಾಯಕಶಕ್ತಿಯೇ ಜಾನಪದ ಸಾಹಿತ್ಯಸೃಷ್ಟಿಗೆ ಮೂಲಕಾರಣವಾದುದು. ಕಾಯಕದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಕಾರಣದಿಂದಲೇ ಜಾನಪದ ಸಾಹಿತ್ಯ ಹೆಚ್ಚೆಚ್ಚು ಬೆಳೆಯುತ್ತಾ ಬಂದು, ಅದೀಗ ಸಂಪೂರ್ಣವಾಗಿ ಏಕಕಾಲದಲ್ಲಿ ಯಾರೊಬ್ಬನು ಮುಟ್ಟಲಾಗದ ಬೃಹದ್ ರಾಶಿಯಾಗಿದೆ. ಇಂತಹ ಜಾನಪದ ರಾಶಿಯಲ್ಲಿ ಕೃಷಿಹಾಡು, ಹಸೆಹಾಡು, ಸೋಬಾನೆಹಾಡು, ದೇವರಮೇಲಿನಹಾಡು, ಮಳೆಹಾಡು, ಕಳೆಕೀಳುವಾಗಿನಹಾಡು, ಮಗುಹುಟ್ಟಿದಹಾಡು, ಯಾರೋ ಸತ್ತರೆಹಾಡು, ಹಬ್ಬಕ್ಕೊಂದುಹಾಡು, ಹರುಷಕ್ಕೊಂದುಹಾಡು, ದುಃಖಕ್ಕೊಂದುಹಾಡು, ಸರಸಕ್ಕೊಂದುಹಾಡು, ವಿರಸಕ್ಕೊಂದುಹಾಡು, ಕೀಟಲೆಗೊಂದುಹಾಡು, ಕಿಚಾಯಿಸಲೊಂದುಹಾಡು, ಚುಡಾಯಿಸಲೊಂದುಹಾಡು, ರೇಗಿಸಲೊಂದುಹಾಡು, ಪ್ರಸ್ತಕ್ಕೊಂದುಹಾಡು, ಹೆಣ್ಣು,ಗಂಡನ ಮನೆಗೆ ಹೋಗುವಾಗೊಂದುಹಾಡು, ತವರುಮನೆಗೆ ಬರುವಾಗೊಂದುಹಾಡು, ಮಡಿಲುತುಂಬುವಾಗೊಂದುಹಾಡು, ಬಾಣಂತಿಗೊಂದುಹಾಡು, ಗರ್ಭಿಣಿಗೊಂದುಹಾಡು, ಮದುವಣಗಿತ್ತಿಯನ್ನು ಕರೆದೊಯ್ಯುವಾಗೊಂದುಹಾಡು, ಮನೆತುಂಬಿಸಿಕೊಳ್ಳವಾಗೊಂದುಹಾಡು, […]
ಕನ್ನಡದ ಬರಹಗಳನ್ನು ಹಂಚಿ ಹರಡಿ
waw nice arts……………
ತುಂಬಾ ಚೆನ್ನಾಗಿದೆ…. ಕಲೆಗಾರಿಕೆ…. ಅಭಿನಂದನೆಗಳು…