ಇರುವೆ
ಇರುವೆಯೇ ಮನುಜರಿಗೆ ನೀ ಮಾದರಿಯಾಗಿರುವೆ
ಕಾರ್ಯಕೂ ಮೊದಲು ಧ್ಯೇಯವನು ನಿರ್ಧರಿಸುವೆ
ಹಿಡಿದೊಂದು ಕಾರ್ಯದಿ ಶಿಸ್ತಿನ ಸಿಪಾಯಿಯಾಗುವೆ
ಗುರಿತಪ್ಪದೆ ಮುಂದ್ಸಾಗುವ ಛಲದಂಕಮಲ್ಲ ನೀನಾಗುವೆ
ಕಣಕಣವ ಸೇರಿಸುತ ಮಹಾರಾಶಿಯ ಕೂಡಿಸುವೆ
ಆಳರಸನಾಗುತ ಗುಂಪನು ಪಥದಿ ಮುಂದೊಯ್ಯುವೆ ಬಂದ ಮೂಲದಾರಿಯ ಮರೆಯದಿರು ಎಂದಿರುವೆ
ಸಹಬಾಳ್ವೆಯ ತತ್ವವ ಹಿಡಿದೆತ್ತಿ ಸಾರಿರುವೆ
ನಿನ್ನಯಾ ಸಮೂಹ ಜೀವನವು ಅನ್ಯರಿಗಾದರ್ಶವು
ಸಮೂಹದಲಿಹ ಸಾಧಿನಾಶಕ್ತಿಗೆ ನೀನೇ ನಿದರ್ಶನವು
ಜೀವಿಸಿ ತೋರುವೆ ವೈಪರೀತ್ಯವಾದರೂ ವಾತಾವರಣವು ಪ್ರಕೃತಿಯ ಸಮತೋನಕೆ ನಿನ್ನದಿದೆ ರಾಯಭಾರವು ಆನೆಯೇ ಎದುರಾಳಿಯಾದರೂ ಗೆದ್ದು ತೋರಿರುವೆ
ಸಾಧನೆಗೆ ಅಚಲ ಮನಸ್ಥೈರ್ಯವ ಶಕ್ತಿಯಾಗಿರಿಸಿರುವೆ ಆದರ್ಶಪ್ರಾಯದ ವ್ಯಕ್ತಿತ್ವವ ಜಗಕೆ ನಿದರ್ಶಿಸಿರುವೆ
ಮೂರ್ತಿ ಚಿಕ್ಕದಾದರೂ ದೊಡ್ಡ ಕೀರ್ತಿಯಗಳಿಸಿರುವೆ
-ರಾಘವ ಹರಿವಾಣಂ
ಬೊಗಸೆ ನೀರು
ಹೊತ್ತಾರೆ ಎದ್ದು
ಎಲ್ಲವನು ಮರೆತು
ಕತ್ತಲಿನಲಿ ನಡೆದು
ಮಂಜಿನೊಳಗೆ
ಉಳುವ ಹೊಲದೆದೆಯ
ಚರಣಗಳಿಗೆ ವಿಷಜಂತ ಉಸಿರು
ಎತ್ತರ ಹುಲ್ಲುಗಳು
ಮುಳ್ಳುಗಳ ನಡುವೆ
ಕಾಯಕ
ನೆತ್ತಿಯ ಮೇಲೆ ರವಿ
ಸುಟ್ಟಕರುಳು
ಸಂಕಟದಲಿ ನೊಂದ ಕಂಗಳು
ಅಕ್ಕಡಿಸಾಲಿನಲಿ
ಹಚ್ಚನೇ ಪೈರುಬೆಳೆದು
ರಾತ್ರಿಗಳಲಿ ಒಪ್ಪಮಾಡಿದ
ಸುಗ್ಗಿಗೆ
ಅಸಮಾನ ಬೆಳಕು
ಹಂಚುವುದಿಲ್ಲ
ಸೇರುಗಳು
ಬರೀ ಬರೀ ಹೊಟ್ಟು ತುಂಬಿದ
ಚಟಾಕೆಗಳಲಿ
ಕಣ ಮಾರುಕಟ್ಟೆ.
ಸಂಜೆ ಮುಳುಗು
ಮನೆಯಾಂಗಳದಾಚೆ
ಹಟ್ಟಿ ಮೆಟ್ಟಿಲಲಿ
ದಣಿದ ದಮನಿಗಳನು
ತಣಿಸುವುದು
ಎತ್ತರದಲಿ
ಬೊಗಸೆ ನೀರು
ತಂಗಳನ್ನವ
ಸ್ವೀಕರಿಸಿದ
ತೇವದ ಕೈ
ನಡುಗುತ್ತದೆ
ಚಿಪ್ಪಿನೊಳಗಿನ ಕಾಫಿ
ಮೂರುಕಣ್ಣಿನ
ಕಿಂಡಿ ಬಿಸಿಗೆ
ನರಳುತ್ತದೆ ಎದೆ
ನೋವಾಗುವುದು
ವಿಕಾಸನತೆಯ ಯುಗಕೆ
ಎಲ್ಲರೂ ಸಾವಿನ ಅತಿಥಿ ಕೊನೆಗೆ..
*ಸಿಪಿಲೆನಂದಿನಿ
ಈ
ಕೊಸರಾಟಗಳೆಲ್ಲಾ
ನಿಟ್ಟುಸಿರಾಗಿ ಬದಲಾಗುವುದರಲ್ಲಿ
ಅರ್ಥವಿಲ್ಲ;
ಅರ್ಥವಿರುವುದು
ಅವಳ ಕಣ್ಣ ಶೂನ್ಯತೆಯಲಿ,
ಗೋಡೆಗೋಡೆಗಳಲಿ
ಪ್ರತಿಧ್ವನಿಸುವ ಅಹಮ್ಮಿನಲಿ;
ನನಗೂ ಆಸೆಯಿದೆ
ಉಸಿರಾಡಲು,
ಚೆಲುವಿನ ಹೂವಿನ
ಅರಳುವಿಕೆಗಾಗಿ ಕಾಯಲು;
ಸತ್ತು ಹೋದ ಪ್ರೀತಿಯ ಮುಂದೆ
ಬೋರಲು ಬಿದ್ದು ಗೋಳಾಡಬೇಡ,…
ಓ ದೇವಾ,
ನಿನ್ನದೇ ದಯೆ…
ಕಿಟಕಿ ಬಾಗಿಲುಗಳ
ತೆರೆದು ಕಾಯುತಿರುವೆ,
ನನಗೀಗ ಗೋಡೆಗಳ ಕೆಡವಬೇಕಿದೆ
ಬೆಳೆದು ನಿಂತ ಅಹಮ್ಮಿನ ದೈತ್ಯ
ಕಿಟಕಿ ಬಾಗಿಲುಗಳಿಂದ ಹೊರಹೋಗಲಾರ.
– ಜಾನ್ ಸುಂಟಿಕೊಪ್ಪ
ನಂದಿನಿ ಹಾಗೂ ಜೋನ್ ಸುಂಟಿಕೊಪ್ಪರವರ ಕವಿತೆಗಳು ತುಂಬಾ ಚೆನ್ನಾಗಿವೆ