“ಮರೆಯಾದ ಜೀವಾ”: ಪಿ ಕೆ…? ನವಲಗುಂದ

praveenkumar-honnakudari

ಹಂಗೆ ಸುಮ್ಮನೆ ಕೆಲಸವಿರಲಿಲ್ಲ ಹರಟೆ ಹೊಡೆಯುತ್ತಾ ಕುಂತಿದ್ದೆ ಆ ಕಡೆ ನನ್ನ ಆತ್ಮೀಯ ಮಿತ್ರನ ಕರೆ ಬಂತು.
ಆ ಕಡೆಯಿಂದ ಎಲ್ಲಿದ್ದೀಯಾ? 
ನಾನು. ಮಾರ್ಕೆಟ್ ನಲ್ಲಿ . 
ಹಾಗಾದರೆ ಸರ್ಕಾರಿ ಆಸ್ಪತ್ರೆಗೆ ಬಾ.
ಯಾಕೋ.?
ಬಾರೋ ಮಾರಾಯ
ಆಯ್ತು ಬಂದೆ.
ಗೆಳೆಯನ ಬೈಕು ತೆಗೆದುಕೊಂಡು ಹೊರಟೆ ಆದರೆ ಮನಸ್ಸುನಲ್ಲಿ ಏನೋ ತಳಮಳ ಏನಾಗಿರಬೇಕು? ಅನ್ನುವ ವಿಚಾರದಲ್ಲಿಯೇ
ಆಸ್ಪತ್ರೆ ಹತ್ತಿರವೇ ಬಂದೆ 
ಗೆಳೆಯ ಮುಖದಲ್ಲಿ ಕೊಂಚು ನೋವು ಕೊಂಚು ಸಂತಸ .
ಇತ್ತ ತಂದೆಯಾಗುವ ಸಂತಸ ಒಂದಾದರೆ ಇತ್ತ ಮಡದಿಗೆ ಏನಾಗುವುದೋ ಅನ್ನುವ ನೋವು .
ನನ್ನ ಹೆಂಡತಿಗೆ ಹೆರಿಗೆ ನೋವು ಜಾಸ್ತಿ ಆಗಿದೆ ಅದಕ್ಕೆ ಆಸ್ಪತ್ರೆಗೆ ಬಂದೇವಿ. ಅಂತಹ ಹೇಳಿದಾಗ 
ಮನಸ್ಸಿಗೆ ಸಮಾಧಾನವಾಯಿತು.


ಈಗ ಹೇಗಿದ್ದಾಳೆ? ತಂಗಿ ಡಾಕ್ಟರ್ ಚೆಕ್ ಮಾಡುತೀದ್ದಾರೆ
ಓ ಹೌದಾ.ಎಂದು ಅಲ್ಲಿಯ ಇದ್ದ ಚಾಹಾ ಅಂಗಡಿಗೆ ಹೋಗಿ ಚಾ ಕುಡಿಯುತ್ತ ಕುಳಿತೇವು 
ನನ್ನ ಗೆಳೆಯನ ತಾಯಿ ಅವಸರದಲ್ಲಿ ಬಂದವರೇ ಡಾಕ್ಟರ್ ನಿಮಗೆ ಕರೆಯುತ್ತಾರೆ?
ಎಂದು ಹೇಳಿದಳು ಪಾಪ ಆ ಮುದುಕಿಗೆ ಅಜ್ಜಿ ಆಗುವ ಸಂತಸದಲ್ಲಿ ನಾನು ಅವನ ಬಾಜು ಇರುವು ಕಾಣಲಿಲ್ಲ ಅಂತ ಕಾಣಿಸುತ್ತಿದೆ.
ಹಂಗೆ ಡಾಕ್ಟರ್ ರೂಂ ಕಡೆ ನಡೆದೆವು.
ಡಾಕ್ಟರ್.ಇದು ಚೂಚ್ಚಲ್ ಹೆರಿಗೆನಾ.?
ಹೌದು ಸರ್ .
ಓ..
ಯಾಕೆ ಸರ್ ಎಂದು ಕೇಳಿದ 
(ನನ್ನ ಗೆಳೆಯನ ಧ್ವನಿಯಲ್ಲಿ ಸ್ವಲ್ಪ ಭಯವೂ ಕಾಣಿಸಿತು.)


ಇಲ್ಲ ನಿಮ್ಮ ಹೆಂಡತಿಗೆ ಸ್ವಲ್ಪ ತೊಂದರೆ ಆಗುತಿದ್ದೆ ಹುಬ್ಬಳ್ಳಿ ಕೆ ಎಮ್ ಸಿ ಕರೆದುಕೊಂಡು ಹೋಗಿ ಭಯಪಡಬೇಕಾದ ಅವಶ್ಯಕತೆ ಇಲ್ಲ ಎಂದು ಸಮಾಧಾನದ ಮಾತು ಹೇಳಿದ ಆಗ ಸಮಯ ರಾತ್ರಿ 10 ಗಂಟೆಯಾಗಿತ್ತು ಆಯ್ತು ಎಂದು ಹೇಳಿ ಹೊರಗಡೆ ಬಂದು ಗಾಡಿ ತಯಾರಿ ನಡೆಸಿದೆವು ಸುಮಾರು 11 ಗಂಟೆಗೆ ಡಾಕ್ಟರ್ ಕೊಟ್ಟು ರಿಪೋರ್ಟ್ ತೆಗೆದುಕೊಂಡು ನಾನು ನನ್ನ ಗೆಳೆಯ ಹಾಗೂ ಅವನ ತಾಯಿ ಅವನ ಅಕ್ಕ ಹುಬ್ಬಳ್ಳಿಯತ್ತ ಪ್ರಯಾಣ ಸಾಗಿತು.


ರಾತ್ರಿ kmc ತಲುಪಿದ ಕೊಡಲೆ ಹೆರಿಗೆ ವಾರ್ಡಿಗೆ ಸಾಗಿಸಿದರು ನಮಗ ಸ್ವಲ್ಪ ಸಮಾಧಾನವಾಗಿತ್ತು ಹೌದು kmc ಉತ್ತಮ ವೈದ್ಯಕೀಯ ಸೌಲಭ್ಯವು ಇದೆ ಅನ್ನುವ ಬಲವೇ ನಮಗೆ ನಂಬಿಕೆಯಾಗಿತ್ತು.
ಅಲ್ಲಿಯ ಸ್ವಲ್ಪ ದೂರದಲ್ಲಿ ಇದ್ದ ಒಂದು ಟೇಬಲ್ ಮೇಲೆ ಕುಳಿತೇವು.
ಅಬ್ಬಾ ಎಂತಹ ವಿಚಿತ್ರ ಅನುಭವ ಎಂತದ್ದು ಅಂದರೆ ಇನ್ನೊಮ್ಮೆ ಕನಸಿನಲ್ಲಿ ಕೂಡ ನೆನಪಿನಲ್ಲಿ ಬರಬಾರದು.ಅಂತಹ ಅನುಭವವೇ ಅನ್ನಬೇಕು.


ರೋಗಿಗಳ ನರಳುತ್ತ ಬಿದ್ದಿರುವರು ಒಂದು ಕಡೆಯಾದರೆ ಇನ್ನೊಂದು ಕಡೆಯಿಂದ ಡಾಕ್ಟರ್ ಕ್ಕಿಂತ ವಾರ್ಡ ಬಾಯ್ ಹಾಗೂ sisters ಅವರೆ ಡಾಕ್ಟರ್ ಗಳ ವರ್ತಿಸುವಂತೆ. ವರ್ತಿಸುವುದನ್ನು 
ನೋಡಲು ಸ್ವಲ್ಪ ಕಷ್ಟವೇ ಅನಿಸುತ್ತೆ.ಹಳ್ಳಿಯಿಂದ ಬಂದ ರೋಗಿಗಳ ಸಂಬಂಧಿಗಳು ರೋಗಿಯ ಆರೋಗ್ಯ ಕುಸಿಯುತ್ತಿದೆ ಎಂದರೆ? ಸ್ವಲ್ಪ ಏನಾದರೂ ಮಾಡಿ ಎಂದು ಅವರ ಕೈ ಕಾಲು ಹಿಡಿಯುತ್ತೀದ್ದರು ಅವರಿಗೆ ಕ್ಯಾರೆ ಅನ್ನುತಿರಲ್ಲಿಲಾ ಎಲ್ಲವನ್ನೂ ನೋಡಿದಾಗ ನನಗೆ ಅಸಹ್ಯ ಅನ್ನಿಸಿತು.ಏನಾದರೂ ಹೇಳಬೇಕು ಅನಿಸಿ ಮನಸ್ಸು ತವಕಗೊಂಡರು ಹೇಳಲಾರದ ಪರಿಸ್ಥಿತಿ.ಏನು ಮಾಡೋದು? ಎಲ್ಲವೂ ಭಗವಂತನ ಆಟ.


ಹೆರಿಗೆ ರೂಂನಿಂದ್ ಬಂದ ಒಬ್ಬ
ನರ್ಸ್ ರೇಣುಕಾಲಾ ಸಂಬಂಧಿಗಳು ಯಾರು? ಎಂದು ಕೇಳಿದರು.ನಾವೇ ಮೇಡಂ ಎಂದು ಎದ್ದು ಹೋದೆವು.
ಯಾಕೋ ಡಿಲೆವರಿ ಆಗವು ಸಾದ್ಯತೆ ಕಡೆಮೆ ಇದೇ ಯಾವುದಕ್ಕು scanning ಮಾಡಬೇಕು ಎಂದರು ಸರಿ ಎಂದು scan ಮಾಡಿಸಿಕೊಂಡು ಬಂದೆವು ಒಳಗೊಂಡು ಇರುವ ಮಗು ಏನೂ ಪ್ರತಿಕ್ರಿಯೆ ಕೊಡುತ್ತಿಲ್ಲ ಸಿಜರಿಂಗ್ ಮಾಡಬೇಕು? ಎಂದರೆ ಆಯ್ತು ಮಾಡಿ. 
ಕೊಡಲೆ ಸಮ್ಮತಿ ಕೊಟ್ಟು ಮತ್ತೆ ಅದೇ ಜಾಗಕ್ಕೆ ಬಂದು ಕುಳಿತೇವು.


ಒಬ್ಬ ವ್ಯಕ್ತಿ ಏನೋ ಕಾಯಿಲೆಯಿಂದ ಮೃತಪಟ್ಟನ್ನು ಕುಟುಂಬದವರು ದುಃಖ ತಡೆಯಲಾರದೆ ಅಳಲು ಶುರುವಾಯಿತು ವಾರ್ಡ ಬಾಯ್ ಅವರಿಗೆ ದೂರ ನೂಕಿ ಆ ಸತ್ತ ಮನುಷ್ಯ ಹೇಗೆ ದೂಖವ ಗಾಡಿಯಲ್ಲಿ ಎಸೆದಾಡುತೀದ್ದ ಎಂದರೆ ನನಗೆ ಆಶ್ಚರ್ಯವೇ ಅನಿಸಿತು ಏನಪ್ಪ ಇದು ಇದ್ದಾಗ ಆ ಮನುಷ್ಯ ಹೇಗಿದ್ದನೋ ಏನೋ ಆದರೆ ಈ ಪರಿ ಮಾಡೋದಾ ಅಂತಹ ಅನಿಸಿತು ಮೃತನ ಅಣ್ಣ ಸ್ವಲ್ಪ ನಿಧಾನವಾಗಿ ಎತ್ತಿ ಏನಿದು ಅಂತ ಕೇಳಿದರೆ?
ಆ ವಾರ್ಡ ಬಾಯ್ ಹೇಗಿದೆ ಉತ್ತರ ಕೊಟ್ಟು ನೋಡಿ. 
ನೋಡಿ ಸ್ವಾಮಿ ನಾನು ದಿನಾಲೂ ಇಂತಹ ಹತ್ತು ರಿಂದ ಹನ್ನೆರಡು ಹೆಣ ಶವಗಾರಕ್ಕೆ ವಯ್ಯತೇವೆ ಹೀಗಂತ್ ನೌಕರಿ ಬಿಟ್ಟು ಹೆಣಗಳ ಸಿಂಗಾರ ಮಾಡೋಕೆ ಆಗುತ್ತೆ 
ಅದು ಹೋಗಲಿ "ದಿನಾ ಸಾಯುವವರಿಗೇ ಅಳುವರು ಯಾರು.?" ಅಂತಹ ಉತ್ತರಿಸಿದ.
ಪ್ರಶ್ನೆ ಕೇಳಿದ ವ್ಯಕ್ತಿ ಸುಮ್ಮನೆ ನಿಂತು ಬಿಟ್ಟ.
ಪಾಪ ಸತ್ತ ಹೆಣಗಳನ್ನು ಶವಗಾರಕ್ಕೆ ಸಾಗಿಸುವ ಕೆಲಸ ಅವನದು ದಿನವೂ ಹೆಣಗಳನ್ನು ನೋಡಿ ನೋಡಿ ಮನಸ್ಸು ಕಲ್ಲಿನಂತಾಗಿದೆ ಎಂದು ಖಾತ್ರಿಯಾಯಿತು.


ಆದರೆ ಆಪರೇಷನ್ ರೂಂ ನಿಂದ್ ಹೊರಗೆ ಬಂದ ನರ್ಸ್ ಹೃದಯಕ್ಕೆ ನೋವು ಆಗುವ ಸುದ್ದಿಯನ್ನೇ ತಂದರು. 
ಸರ್ ನಿಮ್ಮ ಮಗು ಗರ್ಭದಲ್ಲಿ ತೀರಿಕೊಂಡದೆ
Im so sorry ಎಂದು ಹೇಳಿದಾಗ ಬಾಜುಯಿದ್ದ ಗೆಳೆಯ ನೆಲಕ್ಕೆ ಉರಿಳಿದ ಅವನನ್ನು ಸಮಾಧಾನ ಮಾಡಲು ಹರಸಹಾಯ ಮಾಡಬೇಕಾಯಿತು ಇವನು ಹೋಗಲಿ ಬೀಡಿ ಗಂಡು ಮಗಾ ದಿನಾ ರಾತ್ರಿ ಸ್ವಲ್ಪ ಎಣ್ಣೆ ಹೊಡೆದರೆ ಮುಗಿಯುತ್ತೆ ಎಲ್ಲವನ್ನೂ 
ಮರೆಯುತ್ತಾನೇ.ಪಾಪ ಆ ತಾಯಿ ಎಷ್ಟು ಕಷ್ಟ ಅನುಭವಿಸಬೇಕು ಅನ್ನೋದು ಊಹೆಗೂ ಮೀರಿದ್ದು.
"ಪ್ರಪಂಚ ನೋಡುವು ಮುನ್ನ ಕಣ್ಣು ಮುಚ್ಚಿದ" ಆ ಗಂಡು ಹುಡುಗನನ್ನು ನೋಡಿದಾಗ ನನಗೆ ಕರುಳು ಹಿಂಡಿದಂತೆ ಆಗಿತ್ತು ಯಪ್ಪಾಆ ಕೂಸನ್ನು ಒಂದು ಕ್ಯಾರಿ ಬ್ಯಾಗಿನಲ್ಲಿ ಹಾಕಿಕೊಂಡು ಲೀಲಾಜಾಲವಾಗಿ ಕೈ ಬೀಸುತ್ತಾ ತಂದ ಆ ನರ್ಸ್ ಗಾದರು ಹೇಗೆ ಮನಸ್ಸಾಯಿತು ಅಂತಹ ಕಣ್ಣಲ್ಲಿ ಸೂಚನೆ ಕೊಡದೆ ನೀರು ಜಾರುತ್ತಿದೆ.


ನನಗೆ ಇಷ್ಟು ನೋವಾಗುವುದು ಪಾಪದ ನನ್ನ ಗೆಳೆಯ ಹಾಗೂ ಅವನ ಹೆಂಡತಿಗೆ ಎಷ್ಟು ನೋವಾಗಿದೆಯೋ ಆ ಶಿವನೇ ಬಲ್ಲ.
ಆ ಕ್ಯಾರಿ ಬ್ಯಾಗಿನಲ್ಲಿ ತಂದ ಆ ಕಂದನನ್ನು ನೋಡಿದಾಗ ಕೆಂಪನೇ ಮೈ ಬಣ್ಣ ತೆಲೆಯ ತುಂಬು ಕರಿ ಕೂದಲು ಎಷ್ಟು ಮುದ್ದಾಗಿತ್ತು ಎಂದರೆ ವರ್ಣಿಸಿಲು ಪದಗಳು ಸಾಲುತ್ತೀಲ್ಲಾ . ಕೊನೆಯಲ್ಲಿ "ಸಾಯಬೇಕೆಂದು ಹುಟ್ಟಿರಬಹದು ಏನೋ ಅನಿಸಿತು"
ಆ ಬ್ಯಾಗನ್ನೂ ನಾನೇ ಹಿಡಿದುಕೊಂಡು ಒಂದು ಬೆಡ್ ಸೀಟಿನಲ್ಲಿ ಆ ಕೂಸನ್ನು ಹಾಕಿಕೊಂಡು ಹೊರಬಂದೆ ನನ್ನ ಗೆಳೆಯನನ್ನು ಸಮಾಧಾನ ಮಾಡಲು ಆಗುತ್ತಿಲ್ಲ ಅವನ ಬೆಟ್ಟದಷ್ಷು ಆಸೆಯ ಕಳಚಿದ ಹಾಗೆ ಆಗಿತ್ತು. 
ಇನ್ನೂ ಆ ತಾಯಿಯ ಪ್ರಜ್ಞೆ ಬಂದ ಮೇಲೆಂತು ಹೇಳುವುದಕ್ಕೆ ಆಗುತ್ತಿಲ್ಲ.

ಪಿ ಕೆ…? ನವಲಗುಂದ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x