“ಮನದಾಳ”: ಟಿ.ಎ.ಗೋಪಾಲ 

   
ಹಲವು ದಿನದ ಹಂಬಲ, ತಿಳಿಯುವ ಆಸೆ, ಅರಿಯುವ ಬಯಕೆ, ಬಂದನದಿಂದ ಹೊರಬರುವ ಚಿಂತನೆ. ಅದೇನೊ ನನ್ನ ಬೆನ್ನ ಹಿಂದೆ ಬಿದ್ದು ಎಳೆಯುತಿದೆ ಎಂದು ಕೆಲವು ಬಾರಿ ಬಾಸವಾಗುತ್ತದೆ. ಇದೆಲ್ಲವನ್ನು ತಿಳಿದುಕೊಳ್ಳಲು ಒಂದು ದಿನ ನನ್ನನ್ನು ನಾನು ವಿಶ್ಷ್ಲೇಷಿಸಿದೆ, ಹಲವಾರು ಸತ್ಯಾಂಶಗಳು ಕಂಡುಬಂದವು, ಅವು ಮನದಲ್ಲಿ ಗೊಂದಲ, ಜಂಜಾಟ, ಅಸಮಾದಾನ, ಅಶಾಂತಿ, ಉನ್ಮಾದ ಮತ್ತು ಎನೋ ಒಂದು ತರಹದ ಭಯ. ಇವೆಲ್ಲವು ಬೊರ್ಗರೆಯುವ ವೇಗದಲ್ಲಿ ಸಂಚಲಿಸುತ್ತಿವೆ, ಇದನ್ನು ಹಿಡಿದು ನಿಲ್ಲಿಸುವ ಯೋಚನೆ ಆದರೆ ಸಾದ್ಯವಾಗುತ್ತಿಲ್ಲ, ಹಲವು ಪ್ರಯತ್ನದ ನಂತರ ಸ್ವಲ್ಪ ಸಮಯದವರೆಗೆ ನಿಲ್ಲಿಸಿದೆ ಆಗ ಕೆಲವು ವಿಷಯಗಳು ಅರಿವಿಗೆ ಬಂದವು, ಎನೋ ಒಂದು ಭಯ ಮನದಲ್ಲಿ ಕಾಡುತ್ತಿದೆ, ಎನೋ ಕಳೆದುಕೊಂಡತೆ ಬಾಸವಾಗುತ್ತಿದೆ, ಜೀವನದ ಗುರಿ ತಲುಪುತ್ತಿಲ್ಲ ಎಂಬ ನಿರಾಶೆ.
    
ಇದೆಲ್ಲದರ ಪರಿಣಾಮವಾಗಿ ಮನಸ್ಸು ನಿಯಂತ್ರಣ ಕಳೆದುಕೊಂಡು ಏನು ಮಾಡಬೇಕು? ಎಂಬ ಬಹುದೊಡ್ಡ ಪ್ರಶ್ನೆ ಉತ್ತರವಿಲ್ಲದೆ ಮುಂದೆ ಬಂದು ನಿಂತಿತ್ತು. ಇದನೆಲ್ಲ ಯಾರಿಗಾದರೂ ಹೇಳಿಕೊಂಡು ಬೇರೆಯವರ ಸಲಹೆಗಳನ್ನ ಸ್ವೀಕರಿಸಿ ಅದರ ಆಧಾರದ ಮೇಲೆಯಾದರೂ ಸ್ವಲ್ಪ ಸಮಸ್ಯೆಪರಿಹರಿಸಿಕೊಳ್ಳೊನೆಂದರೆ ಅದು ಸಾಧ್ಯವಾಗದ ಮಾತು ಏಕೆಂದರೆ ನಾನು ಎಲ್ಲರಿಗೆ ಸಲಹೆ ನೀಡಿ ಅವರ ಜೀವನಕ್ಕೆ ಸ್ಪೂರ್ತಿದಾಯಕನಾದವನು ಆದರೆ ಈಗ ಯಾರ ಹತ್ತಿರ ಹೇಳಿಕೊಳ್ಳಲಿ ಎಂಬ ಪ್ರಶ್ನೆ, ಹಂಚಿಕೊಂಡರೆ ಅವರು ಅಪಹಾಸ್ಯ ಮಾಡುವರು ಅಥವ ನಂಬಲಾರರು ಎಂಬ ಮನೋಭಾವನೆ. 

ಈ ಎಲ್ಲಾ ಮನದಾಳದ ಗೊಂದಲದ ಮಧ್ಯೆ ಏನು ಮಾಡಬೇಕು ಎಂದು ತಿಳಿಯದೆ ಜೀವನ ಬೇಜಾರಾಗಿ ಬದುಕಲು ನಿರಾಸೆ ಹೊಂದಿದಾಗ ಬಂದ ಯೋಚನೆಯೆ ಆತ್ಮಹತ್ಯೆ! ಆದರೆ ನಾನು ಹಲವು ಜನರನ್ನ ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ರಕ್ಷಿಸಿದ ವ್ಯಕ್ತಿ! ಈಗ ಆ ಹೇಡಿ ಕೆಲಸ ನಾನು ಮಾಡಲೇ ಮೂರ್ಖತನ ಎಂದು ನನಗೆ ನಾನೇ ಹೇಳಿಕೊಂಡ ಕ್ಷಣ ನನಗೆ ರೋಮಾಂಚನಕಾರಿಯಾಗಿತ್ತು.

ಅಯ್ಯೋ! ಯಾವ ಸ್ಥಿತಿಗೆ ನಾನು ತಲುಪಿದೆ, ಇಷ್ಟೆಲ್ಲ ಪ್ರಕ್ರಿಯೆ ನನ್ನಲ್ಲಿ ಹೇಗೆ ನಡೆಯಿತು? ಯಾವ ಕಾರಣಕ್ಕೆ ನಾನು ಈ ಹಂತವನ್ನ ತಲುಪಿದೆ ಪ್ರಜ್ಞಾವಸ್ಥೆಯನ್ನ ತ್ಯಜಿಸಿ ಎಷ್ಟು ದಿನಗಳಾದವೋ ತಿಳಿಯದು. ಈ ಎಲ್ಲಾ ಅನುಭವಗಳನ್ನು ಆತ್ಮೀಯ ಗೆಳೆಯರಿಗೆ ಹೇಳಬೇಕೆಂದು ಒಬ್ಬನಿಗೆ ಕರೆ ಮಾಡಿದೆ ಹೇಳಬೇಕೆಂದು ಪ್ರಯತ್ನಿಸಿದೆ ಆಗಲಿಲ್ಲ, ಇನ್ನೊಬ್ಬನಿಗೆ ಕರೆ ಮಾಡಿದೆ ಹೇಳಬೇಕೆಂದು ಪ್ರಯತ್ನಿಸಿದೆ ಆದರೆ ಸ್ವಾಭಿಮಾನ ಇಬ್ಬರಿಗೂ ತಿಳಿಸಲಾಗದೆ ಸೋತುಹೋದೆ.

ಇವೆಲ್ಲವೂ ನನ್ನಲಿಯೇ ಆಗಿರುವ ಪ್ರಕ್ರಿಯೆಗಳು ಮತ್ತು ಇದಕ್ಕೆಲ್ಲ ನಾನೇ ಕಾರಣ ಬೇರೆಯವರು ಏನು ಮಾಡಿಯಾರು? ಹೆಚ್ಚೆಂದರೆ ಕೆಲವು ಸಲಹೆಗಳನ್ನು ನೀಡಬಹುದು ಆದರೆ ನಿರ್ದಾರ ಮಾತ್ರ ನಾನೇ ತೆಗೆದುಕೊಳ್ಳಬೇಕು, ಎಲ್ಲರಿಗಿಂತ ಹೆಚ್ಚು ನನಗೆ ನಾನು ಗೊತ್ತು! ನಾನು ಹೇಗಿದ್ದೇನೆ ನನಲ್ಲಿ ಏನಾಗುತಿದೆ ನನ್ನ ಸಮಸ್ಯೆಗಳೇನು? ಅದಕ್ಕೆ ಪರಿಹಾರ ಮತ್ತು ನಾನು ಮುಂದೆ ಎನು ಮಾಡಬೇಕು.

ಈಗಿನಿಂದಲೇ ನನ್ನಲ್ಲಿ ನಾನು ಏನು ಬದಲಾವಣೆಗಳು ಆಗುತ್ತಿವೆ ಎಂದು ವೀಕ್ಷಿಸುತ್ತೇನೆ ಮತ್ತು ಈ ಬದಲಾವಣೆಗಳಿಗೆ ಕಾರಣಗಳೇನು? ಈ ಯೋಚನೆಗಳು ಹೇಗೆ ಬರುತ್ತಿವೆ ಮತ್ತು ಯೋಚನೆಯಿಂದ ಬದಲಾಗುವ ಭಾವನೆಗಳನ್ನು ಪ್ರಜ್ಞಾವಸ್ಥೆಯಿಂದ ವೀಕ್ಷಿಸಿ ಬದಲಾವಣೆಯ ಪ್ರಕ್ರಿಯೆಯನ್ನು ನಿಯಂತ್ರಣಕ್ಕೆ ತಂದು, ಸಮಸ್ಯೆ ಬಗೆಹರಿಸುವಲ್ಲಿ ಆನಂದಿಸುತ್ತೇನೆ.

ಸಮಸ್ಯೆಗಳಿಲ್ಲದವರು ಯಾರಿದ್ದಾರೆ ಹೇಳಿ? ಒಂದುವೇಳೆ “ಸಮಸ್ಯೆ ಇಲ್ಲವೆಂದರೆ ಅದುವೇ ಒಂದು ದೊಡ್ಡ ಸಮಸ್ಯೆ” ಆಗಬಹುದು!. ಇನ್ನು ಜೀವನ ಒಂದು ಸಮಸ್ಯೆಯ ಸಾಗರವೆನ್ನದೆ ಜೀವನದ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸಮಸ್ಯೆಯನ್ನ ಬಗೆಹರಿಸವ ಪ್ರಯತ್ನದಲ್ಲಿ ಸಿಗುವಂತಹ ತೃಪ್ತಿಯನ್ನು ಆನಂದಿಸುತ್ತಾ, ನಾನು ಮತ್ತು ನನಗೆ ಎನ್ನುವುದರ ಬಗ್ಗೆ ಹೆಚ್ಚು ಗಮನಹರಿಸದೆ ಸಾಧ್ಯವಾದಷ್ಟು ಬೇರೆಯವರಿಗೆ ಸಹಾಯ ಮಾಡಿ ಸಮಾಜಿಕ ಅಭಿವೃದ್ಧಿಯಲ್ಲಿ ಪಾಲ್ಗೊಂಡು ಕೊಡುಗೆಗಳನ್ನು ನೀಡುವ ವಿಚಾರಗಳನ್ನು ಬೆಳೆಸಿಕೊಳ್ಳಬೇಕಾಗಿದೆ. ದೇಹ ಹುಟ್ಟಿ ಬೆಳೆದು ನಶಿಸಿ ಹೋಗುವ ವಸ್ತು ಇದನ್ನು ಸವಾರಿ ಮಾಡುವ ನಾನು ಸರಿಯಾದ ಕೆಲಸಕ್ಕೆ ಉಪಯೊಗಿಸಿಕೊಂಡು ಉತ್ತಮವಾಗಿ ಬದುಕಬೇಕೆಂದು ನಿರ್ಧರಿಸುತ್ತೇನೆ.
-ಟಿ.ಎ.ಗೋಪಾಲ 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
nanda
nanda
7 years ago

ಮನದಾಳದ ಮಾತುಗಳು ತುಂಬಾ ಮನೋಜ್ನವಾಗಿ ಮೂಡಿ ಬಂದಿವೆ

1
0
Would love your thoughts, please comment.x
()
x