ಭಾರತದಲ್ಲಿ ಜಾತಿವ್ಯವಸ್ಥೆ: ದ್ಯಾವನೂರ್ ಮಂಜುನಾಥ್


“ಮಳೆಯ ಭರದಿ ತಿಳಿಯ ಮಣ್ಣು ಒಳಗು ಹೊರಗೂ ಏಕವಾಗಿ ಸೋರುತಿಹುದು ಮನೆಯ ಮಾಳಗಿ ಅಜ್ಞಾನದಿಂದ…..” ಇದನ್ನು ಬಗೆಹರಿಸಲು ಬುದ್ಧ ಬಸವಣ್ಣನಂತಹ ಮಹಾತ್ಮರು ಎಲ್ಲಿ ಸೋತರು ಎನ್ನುವ ಪ್ರಶ್ನೆ ನನ್ನಲಿ ಸದಾ ಪ್ರಶ್ನಿಸುತ್ತಿರುವೆ. ಈ ಒಂದು ಪ್ರಶ್ನೆಗೆ ನಮ್ಮ ಬಳಿ ಸ್ಪಷ್ಟವಾದಂತಹ ಉತ್ತರವಿಲ್ಲ ಯಾಕೆಂದರೆ ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೆ? ಎನ್ನು ಗೊಂದಲದ ಪ್ರಶ್ನೆ ಹುಟ್ಟುತ್ತದೆ. ಇಂದಿನ ನಮ್ಮ ಸಮಾಜ ವಿಜ್ಞಾನಗಳಲ್ಲಿ ನಡೆಯುವ ಪ್ರಭಕಾರಿಯಾದ ಸಂಶೋಧನೆಯಲ್ಲಿ ನೋಡುವಂತಹದ್ದು ಐಡಿಯಾಲಾಜಿಕಲ್ ಸ್ವರೂಪದ್ದೆ ವಿನಃ ಯಾವುದೇ ರೀತಿಯಲ್ಲಿ ವೈಜ್ಞಾನಿಕ ಸ್ವರೂಪದಲ್ಲ.

    ಇತ್ತೀಚಿಗೆ ವೇದಗಳ ವೈಜ್ಞಾನಿಕ ಅಧ್ಯನ ಸಂಸ್ಥೆ (ಐ ಸರ್ವ್) ರಾಮಾಯಣ, ಮಹಾಭಾರತ ಗ್ರಂಥಗಳು ಭಾರತದಲ್ಲಿ ಹಿಂದೂ ಧಾರ್ಮಿಕ ವಾರಸುಧಾರಿಕೆಯಾಗಿವೆ ಎನ್ನುವ ಬುದ್ಧಿಜೀವಿಗಳಿಗೆ ಒಂದು ಅಚ್ಚರಿಯ ಮಾಹಿತಿಯನ್ನು ತನ್ನ ವರದಿಯಲ್ಲಿ ಪ್ರಕಟಿಸಲಾಗಿದೆ. ಪೂರಣದಲ್ಲಿ (ರಾಮಾಯಣ ಮತ್ತು ಮಹಾಭಾರತ) ಬರುವಂತಹ ರಾಮ ಹುಟ್ಟಿದ ದಿನದ ಬಗ್ಗೆ ಮಾಹಿತಿಯನ್ನು ನೀಡಿತು. ಇದಕ್ಕೆ ಅಮೆರಿಕದಿಂದ ಖರೀದಿಸಿದ ವಿಶೇಷ  ಸಾರ್ಫ್ ವೇರನ್ನು ಬಳಸಲಾಗಿದೆ ಎಂದು ಐ ಸರ್ವ್  ಎನ್ನುವ ಸಂಸ್ಥೆ ತನ್ನ ವರದಿಯಲ್ಲಿ ಸ್ಪಷ್ಟ ಪಡಿಸುತ್ತದೆ. ಈ ಒಂದು ಸಂಸ್ಥೆ ರಾಮಾಯಣ ಕಾಲ್ಪನಿಕವೇ ಅಥವಾ ಐತಿಹಾಸಿಕವೇ? ರಾಮ ನಿಜವಾಗಿಯೂ ಜೀವಿಸಿದ್ದನೇ? ಎಂಬಿತ್ಯಾದಿ ಹತ್ತು ಹಲವು ಪ್ರಶ್ನೆಗಳಿಗೆ  ದೆಹಲಿಯ ಲಲಿತ ಕಲಾ ಆಕಾಡೆಮಿಯಲ್ಲಿ ಏರ್ಪಡಿಸಲಾದ ವಸ್ತು ಪ್ರದರ್ಶದಲ್ಲಿ  ಶ್ರೀ ರಾಮಚಂದ್ರನಿದ್ದಿದ್ದೂ ಸತ್ಯ ಎಂಬ ಮಹತ್ವದ ಮಾಹಿತಿ ಹೊರಬಿದ್ದಿದೆ. ಕ್ರಿ.ಪೂ. 5114ರ ಜನವರಿ 10ರ 12.05ಕ್ಕೆ ಶ್ರೀರಾಮ ಜನಿಸಿದ. ಮಹಾಭಾರತ ಯುದ್ಧ ಕ್ರಿ.ಪೂ. 3139ರ ಅ. 13ರಂದು ಆರಂಭವಾಗಿತ್ತು. ಕ್ರಿ.ಪೂ. 5076ರ ಸೆ. 12ರಂದು ಲಂಕೆಯ ಅಶೋಕವನದಲ್ಲಿ ಹನುಮಂತ ಸೀತೆಯನ್ನು ಭೇಟಿಯಾಗಿದ್ದ, ಆ ಸಂದರ್ಭದಲ್ಲಿ ಚಂದ್ರಗ್ರಹಣ ಸಂಭವಿಸಿತ್ತು ಎನ್ನುವ ಕುತೂಹಲಕಾರಿ ಅಂಶಗಳನ್ನು ತನ್ನ ವರದಿಯಲ್ಲಿ ತಿಳಿಸಿದೆ. 

ಐ ಸರ್ಮ್ ರವರ ಮಾಹಿತಿಯ ಪ್ರಕಾರ ನೋಡಿದರೆ ಸನಾತನ ಧರ್ಮ ಹೇಳುವ ಪ್ರಕಾರ ಒಂದೊಂದು ಯುಗಕ್ಕೂ ಎಷ್ಟು ವರ್ಷಗಳು, ಹಾಗೂ ರಾಮ ಹುಟ್ಟಿನ ಬಗ್ಗೆ ಇಷ್ಟು ಖಚಿತವಾದ ವೈಜ್ಞಾನಿಕವಾಗಿ ಸಬೀತಾದ ಕಾಲಮಾನದ ಕುರಿತು ಯೋಚಿಸಿ ಒಂದು ಕೃತಯುಗ + ಒಂದು ತ್ರೇತಾಯುಗ + ಒಂದು ದ್ವಾಪರಯುಗ + ಒಂದು ಕಲಿಯುಗ ಸೇರಿದೆ ಒಂದು ಮಹಾಯುಗ  ಆಯುಸ್ಸು = 4320000 ಅಂದರೆ ಒಂದು ಮಹಾಯುಗವನ್ನು ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳಿಗೆ 4:3:2:1 ರ ಅನುಪಾತದಲ್ಲಿ ಹಂಚಲಾಗಿದೆ.

ಈ ಒಂದು ಯುಗಗಳ ಪ್ರಾರಂಭ ಮತ್ತು ಆಯಸ್ಸುಗಲಳನ್ನು ಕಲಿಯುಗದಲ್ಲಿ ಶಿವಪುರಾಣ, ಕೊರೇಶ ವಿಜಯ, ರಾಮಾಯಣ, ಮಹಾಭಾರತ, ಭಾಗವತ, ವಿಷ್ಣುಪುರಾಣ, ಸ್ಕಂದಪುರಾಣ, ಪೆರಿಯಪುರಾಣ, ವಿನಾಯಕ ಪುರಾಣಗಳಲ್ಲಿ ಭಿನ್ನವಾಗಿ ಬರೆಯಲು ಹೇಗೆ ಸಾಧ್ಯ? ಇಲ್ಲಿ ನಾವುಗಳು ಗಮನಿಸಬೇಕಾದ ಮತ್ತೊಂದು ವಿಷಯವೇನೆಂದರೆ ತ್ರೇತಾಯುಗಕ್ಕೆ ನಿಗದಿಪಡಿಸಿರುವ ಆಯಸ್ಸು 12,96,000 ವರ್ಷಗಳು, ಆದರೆ ಈ ಯುಗದಲ್ಲಿ ಬದುಕಿದ್ದ ರಾವಣ 5000000 ವರ್ಷಗಳಷ್ಟು ಆಳ್ವಿಕೆ ನಡೆಸಿದ ಎಂದು ಬರೆಯಲಾಗಿದೆ ಇದು ಹೇಗೆ ಸಾಧ್ಯ? ಇಲ್ಲಿ` ವೈಜ್ಞಾನಿಕ ಸಂಸ್ಥೆ ಹೇಳಿಕೊಂಡಿರುವ ಮಾಹಿತಿ ಆಧಾರ ರಹಿತವಾದುದ್ದು ಹಾಗೂ ಅವೈಜ್ಞಾನಿಕವಾದುದ್ದು. ಎಂದು ಸ್ಪಷ್ಟವಾಗುತ್ತದೆ.

    ಸುಮಾರು 4000 ವರ್ಷಗಳ ಹಿಂದಿನ ಭಾರತವನ್ನು ಕಲ್ಪಿಸಿಕೊಂಡರೆ ಒಂದು ಹೊಸ ಸಮಸ್ಯೆಯೆ ಹುಟ್ಟಿಕೊಳ್ಳುತ್ತದೆ. ಸಾಕಷ್ಟು ದೂರದ ಅಂತರದಲ್ಲಿದ್ದ ನಗರಗಲು, ಅಗಾಧ ವ್ಯತ್ಯಾಸಗಳುಳ್ಳ ವಿಭಿನ್ನ ಭಾಷೆಗಳು, ಆ ಕಾಲದಲ್ಲಿ ಸಂಪರ್ಕದ ಮಾಧ್ಯಮಗಳು… ಇಂತಹ ಪರಿಸ್ಥಿತಿಯಲ್ಲಿ ಜಾತಿವ್ಯವಸ್ಥೆ ಆ ಸಮಾಜದಲ್ಲಿತ್ತು ಎಂದು ಹೇಳಬೇಕಾದರೆ ಆ ಒಂದು ಕಾಲಘಟ್ಟದಲ್ಲಿ ಒಂದು ಕೇಂದ್ರಿಕೃತವಾದ ಸಮಾಜ ಇದ್ದಿರಲೇಬೇಕು ಎಂದು ಕಲ್ಪಿಸಿಕೊಳ್ಳಬೇಕಾಗುತ್ತದೆ. ಅದರೇ ಇತಿಹಾಸ ಪುಟದಲ್ಲಿ ಇದರಬಗ್ಗೆ ಯಾವುದೇ ರೀತಿಯ ಒಂದು ಕೇಂದ್ರಿಕೃತವಾದ ಸಮಾಜವನ್ನು ನಾವು ನೋಡುವುದಿಲ್ಲ. ಉತ್ತರದ ಹಿಮಾಲಯದ ಶಿಖರಾಗ್ರದಿಂದ ದಕ್ಷಿಣದ ಕನ್ಯಾಕುಮಾರಿಯ ತುದಿಯವರೆಗೆ ಒಂದೇ ರೀತಿ ನಾಲ್ಕು ವರ್ಣಗಳಿರುವ [ಸುಮಾರು ಒಂದೇ ರೀತಿಯ ಅಸ್ಪೃಶ್ಯ ಜಾತಿಗಳನ್ನೂ ಹೊಂದಿರುವ] ಎಲ್ಲಾ ಕಡೇಯಲ್ಲಿ ಒಂದೇ ರೀತಿಯ ರಚನೆಯುಳ್ಳ ಆಚಾರಣೆಗಳನ್ನು ಹೊಂದಿರುವ ಯಾವುದೇ ಒಂದು ಸಾಮಾಜಿಕ ವ್ಯವಸ್ಥೆಯೊಂದು ಅಸ್ತಿತ್ವದಲ್ಲಿ ಬರುವುದು ಅಸಾಧ್ಯ. 

****
    

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x